ಮಂಗಳವಾರ, ಮೇ 18, 2010

ನೆರೆಗೂದಲಿನ ಬಗ್ಗೆ ಒಂದಿಷ್ಟು....

ಸುಂದರ ಕೇಶರಾಶಿ ಪಡೆಯಬೇಕು ಎಂದು ಎಲ್ಲರಿಗೂ ಇರುವ ಆಸೆ. ಆದರೆ ಈ ಸುಂದರ , ನೀಳ ಕೇಶರಾಶಿ ಎಲ್ಲರಿಗೂ ಇರುವುದಿಲ್ಲ. ಆದರೆ ಇರುವ ತಲೆಗೂದಲುಗಳು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಸ್ವಲ್ಪ ಮಟ್ಟಿಗಾದರೂ ನಮ್ಮ ಕೈಯಲ್ಲಿದೆ.ಈಗಿರುವ ಕುಲುಷಿತ ವಾತಾವರಣ, ನೀರಿನಿಂದ ಕೂದಲನ್ನು ಕಾಪಿಟ್ಟುಕೊಳ್ಳುವುದು ಕಷ್ಟದ ಮಾತೇ ಸರಿ.

ಕೂದಲಿಗೆ ಸಂಭಂಧಿಸಿದ ಹಲವಾರು ಸಮಸ್ಯೆಗಳಲ್ಲಿ ಕೂದಲು ಉದುರುವುದು, ಸೀಳು ತುದಿ, ಹೊಟ್ಟು, ಇತ್ಯಾದಿಗಳು ಬರುತ್ತವೆ . ಜೀವನದ ಒಂದಿಲ್ಲೊಂದು ಹಂತದಲ್ಲಿ ಪ್ರತಿಯೊಬ್ಬರಿಗೂ ಈ "ನೆರೆ ಗೂದಲಿನ "ತೊಂದರೆ ಬಂದೇ ಬರುತ್ತದೆ. ಮುಂಚೆ ಎಲ್ಲಾ ,ಇದು ವಯಸ್ಸಾದವರಿಗೆ ಮಾತ್ರ ಬರುತಿತ್ತು. ಆದರೆ ಈಗ ಇದು ಚಿಕ್ಕ ವಯಸ್ಸಿನ ಮಕ್ಕಳಿಗೂ ಬರುತ್ತಿದೆ. ಇದನ್ನು "ಬಾಲ ನೆರೆ" ಎಂದು ಕರೆಯಲಾಗುತ್ತದೆ. ಕೂದಲಲ್ಲಿನ "ಮೆಲನಿನ್" ಪದಾರ್ಥ ಕಡಿಮೆಯಾಗುವುದೇ ಇದಕ್ಕೆ ಮೂಲ ಕಾರಣ.

ಈ ಬಾಲ ನೆರೆಗೆ ಕಾರಣಗಳೇನು ಅಂತ ಈಗ ಒಂದೊಂದಾಗಿ ತಿಳಿದುಕೊಳ್ಳೋಣ.

 • ಇದು ಒಂದು ಅನುವಂಷಿಕವಾಗಿ ಬರುವ ಕಾಯಿಲೆ. ಅಂದರೆ ನಮ್ಮ ತಂದೆಗೆ, ಅಥವ ತಾತನಿಗೆ ಈ ಸಮಸ್ಯೆ ಇದ್ದಲ್ಲಿ ನಮಗೂ ಕಂಡು ಬರುವ ಸಾಧ್ಯತೆ ಇದೆ.
 • ಅತಿಯಾದ ಮಾನಸಿಕ ಒತ್ತಡ, ಚಿಂತೆ.
 • typhoid ಕಾಯಿಲೆಯಿಂದ ಬಳಲುತಿದ್ದರೆ .
 • ಅತಿಯಾದ ಚಹಾ , ಕಾಫಿ ಸೇವನೆ.
 • ಅತಿಯಾದ ಮಸ್ಸಾಲೆ ಪದಾರ್ಥ ಮತ್ತು ಎಣ್ಣೆಯಲ್ಲಿ ಕರಿದ ತಿಂಡಿಗಳ ಸೇವನೆ.
 • ಸತ್ವಯುತ ಆಹಾರ ಸೇವನೆಯ ಕೊರತೆಯೂ "ಮೆಲನಿನ್" ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ.

ಹಾಗಾದರೆ ಈ ನೆರೆಗೂದಲ ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ ?
ಇದಕ್ಕೊಂದಿಷ್ಟು ಪರಿಹಾರಗಳು ಇಂತಿವೆ.
 • ಸತ್ವಯುತವಾದ ಆಹಾರ ಸೇವನೆ ಅಂದ್ರೆ ಮೊಳಕೆ ಕಟ್ಟಿದ ಕಾಳುಗಳು, ಹಸಿರು ತರಕಾರಿ, ಹಣ್ಣುಗಳು.
 • vitamin A ,vitamin B , ಮತ್ತು ಕಬ್ಬಿನಂಶ ಹೆಚ್ಚು ಇರುವ ಆಹಾರ ಸೇವನೆ.( vitamin A - ಹಸಿರು ತರಕಾರಿ ಮತ್ತು ಹಳದಿ ಹಣ್ಣುಗಳು, vitamin B -ಟೊಮೇಟೊ, ಕಾಳುಗಳು, ಬಾಳೆಹಣ್ಣು ಇತ್ಯಾದಿ,ಕೊಬ್ಬಿನಂಶ- ಗೋಧಿ ಆಹಾರ , ಇತ್ಯಾದಿ )
 • ದಿನಕ್ಕೆರಡು ಲೋಟದಷ್ಟು ಮಜ್ಜಿಗೆಯನ್ನು ಉಪ್ಪಿನೊಡನೆ ಕುಡಿಯುವುದರಿಂದ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು.
 • ನೆಲ್ಲಿಕಾಯಿಯನ್ನು ತೆಂಗಿನೆಣ್ಣೆಯಲ್ಲಿ ಬೇಯಿಸಿ , ಅದನ್ನು ಸೋಸಿ ಆ ಎಣ್ಣೆಯನ್ನು ತಲೆಗೆ ಚೆನ್ನಾಗಿ ಮಸಾಜ್ ಮಾಡುವುದು ನಮಗೆ ಒಳ್ಳೆ ಫಲಿತಾಂಶವನ್ನು ಕೊಡುತ್ತದೆ.
 • ಶುಂಟಿಯನ್ನು ಜಜ್ಜಿ, ಜೇನು ತುಪ್ಪದೊಂದಿಗೆ ಕಲಸಿ ಒಂದು ಜಾರಿಯಲ್ಲಿಟ್ಟು ದಿನವೂ ಒಂದು ಚಮಚದಷ್ಟು ತಿನ್ನಬೇಕು.
 • ಕೂದಲನ್ನು ತೆಂಗಿನೆಣ್ಣೆ ಮತ್ತು ಲಿಂಬೆ ಹಣ್ಣಿನ ರಸ ಮಿಶ್ರಿತ ಎಣ್ಣೆಯಿಂದ ದಿನವೂ ಮಸಾಜ್ ಮಾಡಿ.
 • ಹಾಗಲ ಕಾಯಿಯನ್ನು ತೆಂಗಿನೆಣ್ಣೆಯೊಂದಿಗೆ ಅದು ಕಪ್ಪಗುವವರೆಗೂ ಕುಡಿಸಿ , ಈ ಎಣ್ಣೆಯನ್ನು ಸೋಸಿ ತಲೆಗೆ ಹಚ್ಚುವುದರಿಂದ ನೆರೆಗೂದಲನ್ನು ತಡೆಗಟ್ಟಬಹುದು.
 • ಬೇವಿನ ಎಲೆ ( ಒಗ್ಗರಣೆ ಎಲೆ) ಇದನ್ನು ಕೂಡ ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡಿ ಹಚ್ಚಿಕೊಳ್ಳಬಹುದು
 • ಎರಡು ಚಮಚ ಮೆಹೆಂದಿ ಪುಡಿ , ಒಂದು ಚಮದಷ್ಟು ಮೆಂತ್ಯ ಪುಡಿ, ಒಂದು ಚಮಚ ನೆಲ್ಲಿಕಾಯಿ ಪುಡಿ (ಇದು ಅಂಗಡಿಗಳಲ್ಲಿ ಅಮ್ಲ ಪುಡಿ ಎಂದರೆ ಸಿಗುತ್ತದೆ) ಮತ್ತು ಚಹಾ ಡಿಕಾಕ್ಶನ್ ನೊಂದಿಗೆ ಕಲಸಿ ತಲೆಗೆ ಹಚ್ಚಿಕೊಂಡು ಮೂರು ಘಂಟೆಯ ನಂತರ ಸ್ನಾನ ಮಾಡಬೇಕು.
ಈಗಿನ ಈ ವೇಗದ ಜಂಜಾಟದ ಜೀವನದಲ್ಲಿ ಯಾರಿಗೂ ಮನೆಯಲ್ಲಿಯೇ ಮೆಹೆಂದಿಯನ್ನು ತಯಾರಿಸಿ ಅದನ್ನು ತಲೆಗೆ ಹಚ್ಚಿಕೊಳ್ಳುವಷ್ಟು ತಾಳ್ಮೆ ಸ್ವಲ್ಪ ಕಡಿಮೆಯೇ." beauty parlour" ಗಳಿಗೆ ಹೋಗಿ ಬಣ್ಣ ಹಚ್ಚಿಸಿಕೊಂಡು ಅವರು ಕೇಳಿದಷ್ಟು ದುಡ್ಡು ಕೊಟ್ಟು ಬರುವವರೇ ಜಾಸ್ತಿ. ಆದರೂ ಮನೆಯಲ್ಲಿಯೇ ನಾವು ಹೇಗೆ ನಮ್ಮ ಕೇಶಕ್ಕೆ ಬಣ್ಣ ಹಚ್ಚಿಕೊಳ್ಳಬಹುದು ಅಂತ ಒಂದಷ್ಟುtips ಹೇಳುತ್ತೇನೆ.

ಒಬ್ಬರ ಮೈಬಣ್ಣ ಒಂದೊಂದು ತರಹ. ಒಬ್ಬರ ಕೂದಲಿಗೆ ಚಂದ ಕಾಣುವ ಬಣ್ಣ ಇನ್ನೊಬ್ಬರಿಗೆ ಕಾಣದಿರಬಹುದು. ಹಾಗಾಗಿ "ಸರಿಯಾದ ಬಣ್ಣದ ಆಯ್ಕೆ" ಮೊದಲ ಹೆಜ್ಜೆ. ಒಮ್ಮೆ ಬಣ್ಣ ಆರಿಸಿ ತಂದಾಯಿತೆಂದರೆ ಹಚ್ಚಿಕೊಳ್ಳುವುದು ಹೇಗೆ? ಇದನ್ನು ಓದಿ.

 • ತೀರ ಅಗ್ಗದ ಬೆಲೆಯ ಬಣ್ಣಗಳನ್ನು ಕೊಂಡುಕೊಳ್ಳುವುದು ಅಷ್ಟು ಒಳ್ಳೆಯದಲ್ಲ. ಆದಷ್ಟು ಒಳ್ಳೆ brand ಬಳಸುವುದು ಉತ್ತಮ.( ಯಾವ brand ಬಳಸಿದ್ದೀರಿ, ಅದರ color tone, shades, ಯಾವುದು ನೆನಪಿಟ್ಟುಕೊಳ್ಳುವುದುಅವಶ್ಯ),
 • ಕೂದಲಿಗೆ ಬಣ್ಣ ಹಚ್ಚುವ ಮೊದಲು , ಸ್ವಲ್ಪೇ ಕೂದಲಿಗೆ ಬಣ್ಣವನ್ನು ಹಚ್ಚಿ ಮರುದಿನ ಅದು ಚೆನ್ನಾಗಿ ಕಂಡುಬಂದರೆ ಪೂರ್ತಿ ಹಚ್ಚಿಕೊಳ್ಳಿ.
 • ಒಳ್ಳೆ ಫಲಿತಾಂಶಕ್ಕಾಗಿ , ಮೊದಲು ಕುತ್ತಿಗೆಯಿಂದ ಶುರು ಮಾಡಿ ಅಲ್ಲಿಂದ ಮೇಲೆ ಬಣ್ಣ ಹಚ್ಚುತ್ತಾ ಬನ್ನಿ. ಕೂದಲನ್ನು ಬಿಡಿಬಿಡಿಯಾಗಿ ವಿಂಗಡಿಸಿ ಬೇರಿಗೆ ಚೆನ್ನಾಗಿ ಹಚ್ಚಿ. ಬಣ್ಣ ಹಚ್ಚಿದ ಕೊದಲನ್ನು ಒಮ್ಮೆಬಾಚಬೇಕು.
 • ಅರ್ಧ ಘಂಟೆ ,ತಪ್ಪಿದರೆ ಒಂದು ಘಂಟೆ ಬಿಟ್ಟು ಆಮೇಲೆ shampoo , conditioner ಬಳಸಿ ತಲೆಯನ್ನು ತೊಳೆದುಕೊಂದರೆ ಒಳ್ಳೆ ಬಣ್ಣ ಹಚ್ಚಿದ ಕೇಶ ನಿಮ್ಮದಾಗುವುದು.
ಮನೆಯಲ್ಲಿದ್ದಾಗ ನನ್ನ ಅಪ್ಪ ಯಾವಗಲೂ " ತಂಗಿ ನಂಗೆ ತಲೆಗೆ ಬಣ್ಣ ಹಚ್ಚಿಕೊಡೆ "ಎಂದು ಪೀಡಿಸುತ್ತಿದ್ದರಿಂದ ಅವರಿಗಾಗಿ ಕೆಲವೊಂದಷ್ಟು ಮಾಹಿತಿಗಳನ್ನು ಕೆಲೆಹಾಕಿಕೊಂಡಿದ್ದೆ. ಈಗ ಅದು ಬ್ಲಾಗ್ನಲ್ಲಿ ಒಂದು ಪೋಸ್ಟಾಯ್ತು. ಅಂದಹಾಗೆ ನನ್ನ ಅಪ್ಪನಿಗೇನು ಬಾಲ ನೆರೆ ಇರಲಿಲ್ವಂತೆ!!..;)