
ಎಲ್ಲರಿಗೂ ಯುಗಾದಿ ಹಬ್ಬಕ್ಕೆ ರಜೆ. ನನಗೊಂದೇ ಆಫೀಸ್ ಅಲ. ರಜೆ ಇದ್ರೆ ಎಷ್ಟು ಚೆನ್ನಾಗಿತ್ತು ಅಂತ ಮನಸಲ್ಲಿ ಅಂದುಕೊಳ್ಳುತ್ತ ಬಸ್ ಹತ್ತಿದೆ. ಬಸ್ನಲ್ಲಿ ಕುಳಿತು ಕಿಟಿಕಿ ಆಚೆ ನೋಡುವುದು ನಂಗೆ ಪಂಚಪ್ರಾಣ. ಅಲ್ಲಿ ಸಿಗುವ "ಏಕಾಂತ "ನನಗೆ ತುಂಬಾ ತುಂಬಾ ಇಷ್ಟ.ಗಾಳಿಗೆ ಮುಖಒಡ್ಡಿ ಕೂರುತ್ತೇನೆ. ಅಬ್ಬ! ಎಂಥ ಸುಖವಿದೆ !!! ಹಾಗೇ ಹೋಗುತ್ತಿರಬೇಕಾದರೆ ಒಂದು ಮನೆಯಾಚೆ ಒಂದು ಹೆಂಗಸು, ಸುಮಾರು ನನ್ನ ಅಮ್ಮನ ವಯಸ್ಸಿರಬಹುದು . ಮನೆ ಅಂಗಳವನ್ನು ಸಗಣಿ ಹಾಕಿ ಸಾರಿಸಿ ರಂಗೋಲಿ ಹಾಕುತ್ತಿದ್ದರು. ನೋಡಿ ಬಹಳ ಸಂತೋಷ ಆಯಿತು. ಅಬ್ಬ! ದಿನೇ ದಿನೇ ಯಾಂತ್ರಿಕವಾಗುತ್ತಿರುವ ಬದುಕಿನ ಮದ್ಯದಲ್ಲೂ ಈ ಮಹಿಳೆ ರಂಗೋಲಿ ಹಾಕುವಂತ ತಾಳ್ಮೆ ಹೊಂದಿದಾಳಲ್ಲ ಅಂತ ಖುಷಿ ಆಯಿತು.
ನಿಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಯುಗಾದಿಯು ನಿಮ್ಮ ಬದುಕಿನಲ್ಲಿ ಸಿಹಿ ತರಲಿ ಅಂತ ನಿಮ್ಮ ಈ ಗೆಳತಿಯ ಹಾರೈಕೆ.... :-)
ನನಗಿನ್ನೂ ನೆನೆಪಿದೆ. ಯಾವುದಾದರು ಹಬ್ಬ ಬಂದರೆ ಅಮ್ಮನ ಬಳಿ " ಅಮ್ಮ ನನಗೆ ಸಗಣಿ ಮುಟ್ಟಲು ಒನ್ ತರ. ನೀನೆ ಸಗಣಿ ಹಾಕಿ ಸಾರಿಸಿ ಕೊಡು ನಾನು ರಂಗೋಲಿ ಹಾಕುತ್ತೀನಿ ಅಂತ ಹೇಳುತ್ತಿದ್ದುದ್ದು . ನಾನು , ನನ್ನ ತಂಗಿ ನಾನು ರಂಗೋಲಿ ಹಾಕುತ್ತೀನಿ, ನಾನು ಹಾಕುತ್ತೀನಿ ಅಂತ ಕಿತ್ತಾಡುವಾಗ, ಅಮ್ಮ ಬಂದು ಸರಿ ಇಬ್ಬರು ಒಂದೊಂದು ಹಾಕಿ ಹೇಳಿದಾಗ, ನಾನು ,ತಂಗಿ compromise ಮಾಡಿ ಕೊಂಡು ಒಂದೇ ದೊಡ್ಡ ರಂಗೋಲಿ ಹಾಕೋಣ, 15 ರಿಂದ 8 ಹಾಕೋಣ? ಅಥವ 17 ರಿಂದ 9 ಹಾಕೋಣ ?ಬಾತುಕೋಳಿಗೆ ಯಾವ ಬಣ್ಣ? ಶಂಖಕ್ಕೆ ಯಾವ ಬಣ್ಣ ಅಂತ ಮಾತಾಡಿಕೊಂಡು ರಂಗೋಲಿ ಹಾಕುತ್ತಿದ್ವಿ. ಯಾಕೋ ನೆನಪಾಗಿ ಬೇಸರವಾಯಿತು. ಕಿರು ನಗೆ ಬಂತು ನನಗೆ.
"ನೆನಪಲ್ಲೇ ನಾ ಉಸಿರಾಡಿದೆ ,
ನೆನಪಲ್ಲೇ ನಾ ಜೀವಿಸಿದೆ "
ಈ ನೆನಪುಗಳೇ ಹೀಗೆ ಅಲ್ಲವ? ನೆನಪಿನ ದೋಣಿಯಲ್ಲಿ ತೇಲಾಡಲು ಏನೋ ಸಂತೋಷ!!!
ಅಪ್ಪನ ಹತ್ತಿರ ಹಠ ಮಾಡಿ 200 ಪುಟಗಳ 2 small size notebook ತರಿಸಿಕೊಂಡು , ಚುಕ್ಕಿ ರಂಗೋಲಿ ಗೆ ಒಂದು, ಬಳ್ಳಿ ರಂಗೋಲಿ ಗೆ ಒಂದು ಅಂತ ಎರಡು ಪುಸ್ತಕವನ್ನು ಮಾಡಿಟ್ಟುಕೊಂಡು, ಯಾರ ಮನೆ ಎದುರಿಗೆ ರಂಗೋಲಿ ಹಾಕಿದರು ಅದನ್ನು ನೋಡಿಕೊಂಡು ತಕ್ಷಣ ಮನೆಗೆ ಬಂದು ಅದನ್ನು ಪುಸ್ತಕದಲ್ಲಿ ಸೇರಿಸುತಿದ್ದೆ. ಹಿಂಗೆ ಮಾಡಿ ನನ್ನ ಹತ್ತಿರ ಕಡಿಮೆ ಅಂದರೂ 500 ರಂಗೋಲಿಗಳು ಶೇಖರವಾಗಿದ್ದವು . ಆದರೆ free hand ರಂಗೋಲಿ ಮಾತ್ರ ನನಗೆ ಕಡೇ ಓರೆಗೂ ಬಿಡಿಸಲು ಬರಲೇ ಇಲ್ಲ. ಎಷ್ಟೋ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಕೂಡ ಗೆದ್ದಿದ್ದೆ. ಆದ್ರೆ ಈಗ ರಂಗೋಲಿ ಹಾಕದೆ ಹತ್ತಿರ 2.5 ವರುಷಗಳು ಕಳೆದೇ ಬಿಟ್ಟಿದೆ. ಯಾಕೋ ಹಬ್ಬದಂದು ಇದನೆಲ್ಲ ಮಿಸ್ ಮಾಡಿಕೊಲ್ಳುತ್ತಿದ್ದೆನಲ್ಲ ಅಂತ ಮನಸಲ್ಲೇ ಅಂದುಕೊಂಡು , ರಜೆ ಕೊಡದ tl ನಾ ಮನಸಲ್ಲೇ ಧಾರಾಳವಾಗಿ ಬೈದುಕೊಂಡು ಆಫೀಸ್ ನೆಡೆಗೆ ಹೊರಟೆ.
=====****====****======
ಸ್ನೇಹಿತರೇ ,
ನಿಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಯುಗಾದಿಯು ನಿಮ್ಮ ಬದುಕಿನಲ್ಲಿ ಸಿಹಿ ತರಲಿ ಅಂತ ನಿಮ್ಮ ಈ ಗೆಳತಿಯ ಹಾರೈಕೆ.... :-)