ಸೋಮವಾರ, ಆಗಸ್ಟ್ 24, 2009

ಇರುವುದೆಲ್ಲವ ಬಿಟ್ಟು...ಆಗೆಲ್ಲ ನಾನು ಕಾಲೇಜ್ ಗೆ ಹೋಗುತ್ತಿದ್ದ ದಿನಗಳು.ನನ್ನ ಗೆಳೆಯ ಗೆಳತಿಯರೆಲ್ಲ ಚೆನ್ನಾಗಿ ದುಡ್ಡು ಉಡಾಯಿಸಿ ಮಜಾ ಮಾಡುತಿದ್ದರು.ನನಗು ಅಪ್ಪ ಸಾಕಸ್ಟು ದುಡ್ಡು ಕೊಡುತ್ತಿದ್ದರು ಆದರೆ ನನಗೇನೋ ಹಠ ; ಅಪ್ಪನ ದುಡ್ಡನ್ನು ಒಂದು ಪೈಸೆಯನ್ನು ಮಜಾ ಮಾಡಬಾರದು.ನಾನು ದುಡಿಯಬೇಕು ಆಮೇಲೆ ಮಜಾ ಎಲ್ಲ ಎಂದು.

ನಾನು ಡಿಗ್ರಿ ಯಲ್ಲಿ ಇರಬೇಕಾದ್ರೆ ಪ್ರೈಮರಿ ಶಾಲೆ ಮಕ್ಕಳಿಗೆ tution ಹೇಳುತ್ತಿದ್ದೆ. ಆದರೆ ಅದರಲ್ಲಿ ಬರುವ ದುಡ್ಡನ್ನೆಲ್ಲ ಬಡ ವಿಧ್ಯಾರ್ಥಿ ಟ್ರಸ್ಟ್ ಗೆ ಕೊಟ್ಟು ಬಿಡುತ್ತಿದ್ದೆ .ಹಾಗಾಗಿ ನನ್ನ ಕೈಯಲ್ಲಿ ಅಪ್ಪ ಕೊಟ್ಟ ದುಡ್ಡು ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ.

ನನಗೂ ಹಾಗೆಲ್ಲ ಆಸೆ ಇರಲಿಲ್ಲ ,ಗೆಳೆಯರ ಜೊತೆ ತಿರುಗ ಬೇಕು,ಹೋಟೆಲ್ಗೆ ಹೋಗಬೇಕು ಇದೆಲ್ಲ.ಸೊ ನನ್ನ ದುಡ್ಡು ಹಾಗೆ ಉಳಿದುಬಿಡುತಿತ್ತು.

ಹೀಗಿದ್ದಾಗ ನಾನು ನನ್ನ ಕೊನೆಯ ವರ್ಷದ ಡಿಗ್ರಿ ಬರುವ ಸಮಯಕ್ಕೆ ,ಮುಂದೆ ಜಾಬ್ ಮಾಡಿದಾಗೆ ಏನೆಲ್ಲಾ ಬೇಕು ಎನ್ನುವುದನ್ನು ಲಿಸ್ಟ್ ಮಾಡತೊಡಗಿದೆ.

ಡ್ರೆಸ್,shoes,ಜೀನ್ಸ್,shirts,ಪೆರ್ಫುಮೆಸ್ ಹೀಗೆ ಎನೇನೊ.ಅದರಲ್ಲಿ "ಕ್ಯಾಮರ ಮೊಬೈಲ್ "ಕೂಡ ಇತ್ತು. ಸರಿ ಡಿಗ್ರಿ ಏನೋ ಮುಗೀತು ಒಳ್ಳೆ ಕಂಪನಿಯಲ್ಲೇ ಆಯಾಸವಿಲ್ಲದೆ ಕೆಲಸ ಸಿಕ್ಕಿತು. ಮೊದಲನೆ ಸಂಬಳ ಬಂದಾಗ ಏನೋ ಸಂತೋಷ .

ನಾನು ದುಡಿದ ಮೊದಲ ಸಂಬಳ ಏನು ಅದಾಗಿರಲಿಲ್ಲ.ಆದರೂ ಅಷ್ಟೂ ದುಡ್ಡು ನಾನೇ ದುಡಿದದ್ದು ಎನ್ನುವ ಸಮಾಧಾನ,ಹೆಮ್ಮೆ.

ಆದರೆ ಆ ದುಡ್ಡು ಕ್ಯಾಮರ ಮೊಬೈಲ್ ಗೆ ಸಾಲಲಿಲ್ಲ.ಏಕೆಂದರೆ ಮೊದಲ ಸಂಬಳದಲ್ಲಿ ಅಪ್ಪನಿಗೆ ,ಅಮ್ಮನಿಗೆ,ತಂಗಿಗೆ ಎಲ್ಲ ಗಿಫ್ತ್ಸ್ ತಗೊಂಡೆ.ಸ್ನೇಹಿತರೆಲ್ಲ ಪಾರ್ಟಿ ಕೊಡುವ ವರೆಗೆ ಬಿಡಲಿಲ್ಲ.ಸೊ ಮೊದಲ ಸಂಬಳ ಹೀಗೆ ಖಾಲಿ ಆಗಿ ಹೋಯಿತು.

ನನಗೆ ನನ್ನ ಮೇಲೆ ಆಶ್ಚರ್ಯ .ಎಂದೂ ದುಡ್ಡನ್ನು ಖರ್ಚು ಮಾಡದವಳು ಈಗ ಹೇಗೆ ಇಷ್ಟು ಖರ್ಚು ಮಾಡತೊದಗಿದ್ದೇನೆ ಎಂದು?ಆದರು ಅದೇನೋ ನಾನು ದುಡಿದಿದ್ದು ಎನ್ನುವ ಹೆಮ್ಮೆ.ಸರಿ ಅಂತು ಇಂತೂ ದುಡ್ಡು ಉಳಿಸಿ ಒಂದು ಕ್ಯಾಮರ ಮೊಬೈಲ್ ತೆಗೆದು ಕೊಂಡೆ. ತುಂಬಾ ಫೋಟೋಸ್ ಗಳನ್ನೂ ತೆಗೆದೆ. ಈಗ ಕ್ಯಾಮರ ಮೊಬೈಲ್ ಗೆ ಇದ್ದ ಹುಚ್ಚು ದಿನೇ ದಿನೇ ಕಡಿಮೆ ಆಗುತ್ತಿದೆ.

ಮನಸ್ಸು ಒಂದು "digicam" ಗೆ ಸ್ಕೆಚ್ ಹಾಕುತ್ತಿದೆ.

ಸುಮಾರಗಿರುವ ಮೊಬೈಲ್ ಇದ್ದಾಗ ಕ್ಯಾಮರ ಮೊಬೈಲ್ ಬೇಕು ಅನಿಸಿತು,ಕ್ಯಾಮರ ಮೊಬೈಲ್ ಬಂದ ಕೂಡಲೇ digicam ಬೇಕು ಅನಿಸುತ್ತಿದ್ದೆ .

ಒಂದೊಮ್ಮೆ ನಗು ಬಂತು.ಮನುಷ್ಯ ಜೀವನವೇ ಹೀಗೆ ಅಲ್ಲವ.ಯಾವುದು ಇದೆಯೋ ಅದು ಬೇಡ,ಯಾವುದು ಇಲ್ಲವೊ ಅದರ ಬಗ್ಗೆ ಹೆಚ್ಚು ಆಸಕ್ತಿ.

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂದರೆ ಇದೇ ಇರಬೇಕು -ಯಾಕೋ ನೆನಪಾಯ್ತು.