
ಕಾಲ ಮುಂದುವರೆದಿದೆ ...ಎಲ್ಲರಿಗೂ ಅವರವರ ಬಾಳಸಂಗಾತಿಯ ಆರಿಸಿಕೊಳ್ಳುವ ಎಲ್ಲಾ ಹಕ್ಕೂ ಇದೆ ಎಂದು ಹೇಳುವುದನ್ನು ನಾನು ಅಲ್ಲಲ್ಲಿ ಕೇಳಿದ್ದೇನೆ .ಅದು ಒಂದು ಲೆಕ್ಕ ದಲ್ಲಿ ಸರಿ ಕೂಡ .
ಏಕೆಂದರೆ ಮುಂದೆ ಅನುಸರಿಸಿಕೊಂಡು ಬಾಳ ಬೇಕಾದವರು ನಾವೇ .ಇಷ್ಟ ಇಲ್ಲದಿರುವ ಸಂಗಾತಿಯೊಂದಿಗೆ ಜೀವನ ಮಾಡುವುದು ಕಷ್ಟದ ಕೆಲಸವೇ ಸರಿ.
ಆದರೆ ಕಾಲ ಇಷ್ಟು ಮುಂದುವರೆದರೂ ಕೆಲವರ ಮನೆಗಳಲ್ಲಿ ಇನ್ನೂ ಗೊಡ್ಡು ಸಂಪ್ರದಾಯಗಳು ಇರುವುದು ಕಂಡು ಬರುತ್ತದೆ .
ಅದಕ್ಕೆ ನನ್ನ ಗೆಳತಿಯೇ ಸಾಕ್ಷಿ.
ಮಗಳು ಮದುವೆಯ ವಯಸ್ಸಿಗೆ ಬಂದಿದ್ದಾಳೆ.ಸರಿ ಯಾವುದೋ ಬ್ರೋಕರ್ ಹತ್ತಿರ ಹೇಳಿ ಯಾವುದೋ ಸಂಭಂಧ ತರಿಸಿಯೇ ಬಿಟ್ಟರು.
ನನ್ನ ಗೆಳತಿಗೆ ಹುಡುಗನ ಫೋಟೋ ತೋರಿಸಿದರಂತೆ . ಫೋಟೋ ನೋಡಿದ ಕೂಡಲೇ ನನ್ನ ಗೆಳತಿಗೆ ಇಷ್ಟ ಆಗಲಿಲ್ಲ. ಸರಿ ನನಗಿಷ್ಟ ಇಲ್ಲ ಎಂದು ಹೇಳಿಯೇ ಬಿಟ್ಟಳು .ಆದರೆ ಮನೆಯವರು ಕೇಳಬೇಕಲ್ಲ ??ಯಾಕೆ ಬೇಡ?ಏನಾಗಿದೆ ಅವನಿಗೆ ?ಮನೆಯಲ್ಲಿ ಚೆನ್ನಾಗಿ ಆಸ್ತಿ ಇದೆ,ಕಾರ್ ಇದೆ....
ನಿನ್ನ ರಾಣಿ ಹಾಗೆ ಇರಿಸುತ್ತಾನೆ ...ಇನ್ನೇನು ಬೇಕು ನಿನಗೆ ಎಂದೆಲ್ಲ ಹೇಳಿದರು .ಅಪ್ಪನಿಗೆ ,ಅಮ್ಮನಿಗೆ ,ತಮ್ಮನಿಗೆ,ಮನೆಯ ಕೆಲಸದವಳಿಗೆ ಎಲ್ಲರಿಗು ಇಷ್ಟ ಆಗಿದ್ದಾನೆ .ನಿನ್ನದೇನು ? ಹೀಗಂದರೆ ಏನು ಮಾತಿನ ಅರ್ಥ ?ಅವರೆಲ್ಲರಿಗೂ ಇಷ್ಟ ಆದರೆ ಇವಳಿಗೂ ಇಷ್ಟ ಆಗಬೇಕೆ?
ಆದರೆ ನನ್ನ ಗೆಳತಿಗೆ ಸುತರಾಂ ಇಷ್ಟ ಇಲ್ಲ.ಹಾಗೆಂದು ಅವಳು ಯಾರನ್ನೋ ಇಷ್ಟ ಪಡುತ್ತಿದ್ದಾಳೆ ಎಂದೇನು ಅಲ್ಲ.ಅವಳಿಗೆ ಆ ವರ ಇಷ್ಟ ಆಗಿರಲಿಲ್ಲ ವಂತೆ .ಅದು ಸಹಜ ತಾನೆ? ನೋಡಿದ ಕೂಡಲೇ ಎಲ್ಲರೂ ಇಷ್ಟ ವಾಗಲೇ ಬೇಕೆಂದೇನು 'ರೂಲ್ಸ್' ಇಲ್ಲವಲ್ಲ .
ನಿಜ ಹೇಳಬೇಕೆಂದರೆ ನನ್ನ ಗೆಳತಿ ತುಂಬ ಒಳ್ಳೆಯವಳು .ಆಕೆ ಇದುವರೆಗೂ ಯಾರಿಗೂ ನೋವು ಮಾಡಿದ ಹುಡುಗಿಯಲ್ಲ .
"ಏನು ಮಾಡ್ಲಿ ಕಣೆ ಆ ಹುಡುಗನಿಗೆ ತಲೆಯಲ್ಲಿ ಕೂದಲೇ ಇಲ್ಲ ನಾನು ಹೇಗೆ ಅವನನ್ನ ಇಷ್ಟಪಡಲಿ ಎಂದು ?ಮದುವೆ ಆಗಿ ಒಂದು ವರ್ಷದ ನಂತರ ನಾನು ಅವನು ಹೋಗುತ್ತಿದ್ದರೆ ಅಪ್ಪ ಮಗಳ ಹಾಗೆ ಕಾಣುತ್ತದೆ "
ಅವಳ ಮಾತು ಕೇಳಿ ಅಯ್ಯೋ ಎನಿಸಿತು.
ನನ್ನದು ಒಂದು ಮಾತು- ಈಗ ಪ್ರೀತಿ ಮಾಡಿದ್ದರೆ ಎಲ್ಲವು ಹೊಂದಿ ಕೊಂಡು ಹೋಗುತ್ತದೆ . ಅದೇ ನನ್ನ ಗೆಳತಿ ಅವನನ್ನು ಪ್ರೀತಿಸಿದ್ದರೆ ಅವನಿಗೆ ಕೂದಲು ಇಲ್ಲದಿದ್ದರೂ ಒಪ್ಪಿ ಕೊಳ್ಳುತ್ತಿದ್ದಳು.ಅವ ಕುರುಡನೋ ,ಕುಂಟನೋ ಹೇಗಿದ್ದರು ಇಷ್ಟವಾಗಿರುತಿತ್ತು. ಆದರೆ ಇದು ಹಾಗೇನೂ ಅಲ್ಲವಲ್ಲ .ತನಗೆ ಬೇಕಾದ ತರಹದ ಹುಡುಗನನ್ನು ಆರಿಸಿ ಕೊಳ್ಳುವ ಸ್ವಾತಂತ್ರ್ಯವಿದೆ .ಇದು arrange-marriage ಆದ ಕಾರಣ ..
ಹಾಂ... ಇಲ್ಲಿ ನಾನು ಅಂದ -ಚೆಂದದ ಬಗ್ಗೆ ಮಾತಾಡುತ್ತಿಲ್ಲ .
ತುಂಬಾ ಒಳ್ಳೆ ಹುಡುಗಿ ಎಷ್ಟೊಂದು ಲವಲವಿಕೆ ಇಂದ ಇರುತ್ತಿದ್ದಳು .ಆದರೆ ಕಳೆದ ೧೫ ದಿನಗಳಿಂದ ಅವಳನ್ನು ನೋಡಲು ಆಗುತ್ತಿಲ್ಲ .ಖಂಡಿತ ಅವನನ್ನು ಮಾಡುವೆ ಆಗಲು ಸಾಧ್ಯ ಇಲ್ಲ ಎನ್ನುವ ಇವಳೊಂದು ಕಡೆ..ಮದುವೆ ಗೆ ಒಪ್ಪು ಎಂದು ಪ್ರಾಣ ತಿನ್ನುವ ಪಾಲಕರು ಇನ್ನೊಂದು ಕಡೆ ..ನಾನು ಸಾಯುವುದು ಒಂದೇ ಇದಕ್ಕೆ ಪರಿಹಾರ ಎನ್ನುತ್ತಾಳೆ ಗೆಳತಿ .
ಎಷ್ಟೇ ಸಮಾಧಾನ ಮಾಡಿದರೂ ಕೇಳುತ್ತಿಲ್ಲ .ಒಂದು ವೇಳೆ ಅವಳು ಹಾಗೇನಾದ್ರೂ ಅನಾಹುತ ಮಾಡಿಕೊಂಡರೆ ನನಗೆ ಯಾರು ಅಂಥ ಸ್ನೇಹಿತೆಯನ್ನು ವಾಪಸ್ಸು ತಂದು ಕೊಡುತ್ತಾರೆ .ಚಿನ್ನದಂಥ ಮಗಳನ್ನು ಕಳೆದುಕೊಂಡ ದುಃಖ ಅವಳ ಪಾಲಕರನ್ನು ಕಾಡದೇ ಇರುತ್ತದೆಯೇ?
ಯಾಕೆ ಹೀಗೆ ಮಾಡುತ್ತಾರೆ ??ಒಮ್ಮೆ ಅವಳ ಮನಸ್ಸಿನ ಮಾತುಗಳನ್ನು ಕೇಳಬಾರದೆ ??ಜೀವನ ಪೂರ್ತಿ ಬದುಕನ್ನು ಹಂಚಿಕೊಂಡು ಬಾಳ ಬೇಕಾದವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಕೊಡಬಾರದೇ ??ಅವಳ ಬದುಕನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವಳಿಗೆ ಕೊಡಬಾರದೇ??