
ಅದು ಹೇಗೆ ತೀರಿಸಲಿ ನಿಮ್ಮ ಋಣವನ್ನು????
ಹುಟ್ಟಿದ ದಿನದಿಂದ ಇದುವರೆಗೂ ನನಗೆ ಯಾವುದೇ ಬೇಸರ ಮಾಡಲಿಲ್ಲ,
ಸ್ನೇಹಿತರ ಕೊರತೆ ನೀಗಿಸಿದಿರಿ,
ಕೈ ಹಿಡಿದು ನಡೆಸಿ ನಡೆಯುವುದನ್ನ ಕಲಿಸಿದಿರಿ,
ನಿಮ್ಮ ಎಲ್ಲ ಅಕ್ಕರೆ,ಪ್ರೀತಿ,ಮಮತೆ ನೀಡಿದಿರಿ,
ಯಾವುದರಲ್ಲೂ ಒಂದು ಕೊಂಕಿಲ್ಲ, ಹುಳುಕಿಲ್ಲ ಅದು ಹೇಗೆ ತೀರಿಸಲಿ ನಿಮ್ಮ ಋಣವನ್ನು????
ಅತ್ತಾಗ ಮೊದಲು ಕಣ್ಣೀರು ಒರೆಸಿದ್ದು ನೀವು,
ಒಂಟಿ ಆಗಿದ್ದಾಗ ಜೊತೆ ನೀಡಿದ್ದು ನೀವು,
ಒಂದೇ ಒಂದು ಮಾತು ನಾ ಹೇಳದಿದ್ದರೂ ನನ್ನ ಭಾವನೆ ಅರ್ಥ ಮಾಡಿಕೊಂಡಿರಿ,
ಬಿದ್ದಾಗ ಮೊದಲು ಬಂದು ಎತ್ತಿದಿರಿ,
ತಪ್ಪು ಮಾಡಿದಾಗ ಮೊದಲು ತಿದ್ದಿದಿರಿ….
ಅದು ಹೇಗೆ ತೀರಿಸಲಿ ನಿಮ್ಮ ಋಣವನ್ನು????
ನೀವು ಒಂದು ಹೊಡೆತ ನಂಗೆ ಹೊಡೆದಾಗ ನೋವ್ವು ನನಗಾಗುತಿತ್ತು
ಆದರೆ ವೇದನೆ ಪಡುತ್ತಿದ್ದಿದ್ದು ನೀವು
ನನ್ನ ಶಾಲೆಯ ಫೀಸ್ ಗೆ ಅಮ್ಮ ರೇಶಿಮೆ ಸೀರೆ ತ್ಯಾಗ ಮಾಡಿದ್ದನ್ನು ಮರೆಯಲು ಆಗುತ್ತೆಯಾ….
ಅಪ್ಪ ಪಡುತ್ತಿದ್ದ ಕಸ್ಟಕ್ಕೆ ಸಾಟಿ ಬೇರೆ ಇದೆಯಾ…
ನಮಗಾಗಿ ನಿಮ್ಮ ಎಲ್ಲ ಆಸೆಯನ್ನು ಬಲಿ ಕೊಟ್ಟು ಮಾಡಿದ ,
ಕೊಟ್ಟ ಪ್ರೀತಿಗೆ ಸಾಟಿ ಇದೆಯಾ….
ಅದು ಹೇಗೆ ತೀರಿಸಲಿ ನಿಮ್ಮ ಋಣವನ್ನು ????
ಸಾವಿರ ಅಲ್ಲ ಹತ್ತು ಸಾವಿರ ಜನ್ಮ ಎತ್ತಿದರೂ ನಿಮ್ಮ ಋಣ ತೀರಿಸಲು ಆಗುವುದಿಲ್ಲ..
ಇಷ್ಟು ಪ್ರೀತಿ ನನ್ನ ಯಾರು ಮಾಡಿಯಾರು?
ನೀವೇ ನನಗೆ ಜೀವನದಲ್ಲಿ ಬಾಳು ದೊಡ್ಡ ಶಕ್ತಿ,ಎಲ್ಲವೂ…
ನಿಮ್ಮಂಥ ಅಪ್ಪ ಅಮ್ಮನ ಪಡೆದ ನಾನು ಧನ್ಯ ಇಂದು..
ಅದು ಹೇಗೆ ತೀರಿಸಲಿ ನಿಮ್ಮ ಋಣವನ್ನು????
ಪದಗಳಿಗೆ ನಿಲುಕುವುದಿಲ್ಲ,
ಭಾವನೆಗಳಿಗೆ ಸಿಲುಕುವುದಿಲ್ಲ,
ಎಸ್ಟು ಬಣ್ಣಿಸಿದರು ಸಾಲದು ನಿಮ್ಮ ಹಿರಿಮೆಯನ್ನ,
ನನ್ನ ಪಾಲಿನ ದೇವತೆಗಳು ನೀವು!!!!
ಅದು ಹೇಗೆ ತೀರಿಸಲಿ ನಿಮ್ಮ ಋಣವನ್ನು????
ಅದು ಹೇಗೆ ತೀರಿಸಲಿ ನಿಮ್ಮ ಋಣವನ್ನು????