ಬುಧವಾರ, ಮಾರ್ಚ್ 11, 2009

ಅಪ್ಪನ ನೆನಪಾದಾಗ .....

"The greatest gift I ever had.
Came from God; I call him Dad!"

ಮೊನ್ನೆ ಸಂಜೆ ಸುಮಾರು ೬ ಘಂಟೆ ಇರಬಹುದು ...ನಾನು ನನ್ನ ಕೆಲಸ ಮುಗಿಸಿ ಕೊಂಡು ನಮ್ಮ ಇನ್ಫೋಸಿಸ್ ಬಸ್ನಲ್ಲಿ ಬರುತ್ತಿದ್ದೆ.ಆ ದಿನ ವಾತವರಣವೂ ತುಂಬಾ ಚೆನ್ನಾಗಿತ್ತು ....ಹಾಗೆ ಸ್ವಲ್ಪ ಮೋಡ ,ಸೂರ್ಯ ಮುಳುಗುವ ಕ್ಷಣ ,ಹಕ್ಕಿ ಗಳು ಗೂಡು ಸೇರಲು ಅಣಿಯಾಗುತ್ತಿದ್ದವು ....ಬಸ್ ನಲ್ಲಿ ಪ್ರಯಾಣ ಮಾಡಲು ಮನಸ್ಸು ಉಲ್ಲಸಿತವೆ ಆಗಿತ್ತು ....
ಬಸ್ಸಿನಲ್ಲಿ ಯಲ್ಲರೂ ಕುಳಿತಿದ್ದರು ...ಎಲ್ಲರು ತಮ್ಮ ತಮ್ಮ ಲೋಖದಲ್ಲೇ ಮುಳುಗಿ ಹೋಗಿದ್ದರು. ನನಗೂ ಯಾಕೋ ಯಾರೊಡನೆಯೂ ಮಾತಾಡುವ ಮನಸ್ಸು ಬಾರಲಿಲ್ಲ...
ಹಾಗೆ ಸುಮ್ಮನೆ ಮನಸ್ಸನ್ನು ಹರಿದು ಬಿಟ್ಟಾಗ ಬರುವುದೆಲ್ಲ ಬರಿ ನೆನೆಪುಗಳು ಕಾಡುತ್ತವೆ ನನ್ನನ್ನು ,ಬಿಟ್ಟರೆ ಮತ್ತೇನು ಅಲ್ಲ ......ಹಾಗೆ ಬಸ್ಸು ಚಲಿಸುತ್ತಿತ್ತು ....ಯಲ್ಲರೂ ಇಳಿಯುವ ಸಮಯ ಬಂದೇ ಬಿಟ್ಟಿತು ......
ಆಗ ನಾನೊಂದು ದೃಶ್ಯ ಕಂಡೆ ....ಒಂದು ತಾಯಿ ಹಾಗು ಅವಳ ಮಗಳು ನಮ್ಮ ಬಸ್ಸಿನಲ್ಲಿ ಬರುವ ತನ್ನ ಅಪ್ಪನಿಗಾಗಿ ಕಾಯುತ್ತಿದ್ದರು ...ಬಸ್ಸಿಂದ ಇಳಿದ ಈ ಯುವಕ ,ಹಾಗೆ ಸುಮ್ಮನೆ ಮಗಳು, ಅಪ್ಪ ನನ್ನಎತ್ತುಕೋ ಎಂದು ಸನ್ನೆ ಮಾಡಿದರೂ ಎತ್ತುಕೊಳ್ಳಲ್ಲಿಲ್ಲ....ಸುಮ್ಮನೆ ಕೀಟಲೆಗೆ ಇರಬೇಕು... ಪಾಪ ಆ ಕೂಸಿಗೇನು ತಿಳಿದೀತು ?ಅದು ಅಳಲಾರಂಭಿಸಿತು ....ಅವಳ ಅಪ್ಪ ಎತ್ತುಕೊಂಡ ಮೇಲೆ ಸುಮ್ಮನಾಯಿತು ......
ಈ ಘಟನೆ ನೋಡಿ ನನಗೆ ನನ್ನ ಬಾಲ್ಯ ನೆನಪಾಯಿತು ......
ಈ ಜೀವನ ಒಂದು ನಿರಂತರ ಪಯಣ.......
ಹೀಗೆ ಜೀವನದಲ್ಲಿ ಪ್ರತಿಯೊಂದು ಘಟನೆಯೂ ತಮ್ಮದೇ ಆದಂತಹ ಒಂದಿಲ್ಲೊಂದು ನೆನಪಿನ ಕುರುಹನ್ನು ಬಿಟ್ಟು ಹೋಗುತ್ತವೆ ..
ಒಂದೊಂದು ಸಿಹಿ ಮತ್ತಿನ್ನು ಕೆಲವು ಕಹಿ ......ಕಹಿ ಘಟನೆಗಳನ್ನು ನೆನೆಸಿ ಕೊಂಡಾಗ ಮನ ಹಿಂಡಿಹಿಪ್ಪೆ ಮಾಡಿ ಹಾಕುತ್ತವೆ .
ಹಾಗೆ ಸಿಹಿ ಘಟನೆಗಳು ಮುಖದ ಮೇಲೆ ಹಾಗೆ ಒಂದು ಮಂದಹಾಸ ತಂದು ಹೋಗುತ್ತವೆ ....
ನನಗೆ ಇನ್ನೂ ನೆನೆಪಿದೆ ....ಚಿಕ್ಕವಳಿದ್ದಾಗ ನನ್ನ ಅಪ್ಪ ನಾನು ಬೆಳಗ್ಗೆ ಮಲಗಿದ್ದಾಗ ಎತ್ತುಕೊಂಡು ಹೋಗಿ ನನ್ನ ಪ್ರೀತಿ ಇಂದ ಹಲ್ಲು ತಿಕ್ಕಿಸುತ್ತಿದ್ದರು .ತಾವೇ ನನಗೆ ತಿಂಡಿ ತಿನ್ನಿಸುತ್ತಿದ್ದರು ........ ಪೌಡರ್ ಹಚ್ಚಿ ಹಣೆಗೆ ಒಂದು ಮುತ್ತು ಕೊಟ್ಟು ...ಆಹಾ ಅದೆಂಥ ಸುಖ ಅದು . ಹಾಗೆ ಅಮ್ಮ ನನಗೆ ಹೇಗೆ ತಲೆ ಬಾಚಿದರು ಸರಿಯಾಗುತ್ತಿರಲಿಲ್ಲ ....ಅಲ್ಲ ನನ್ನದು ಬಾಬ್ ಕಟ್ ಆಗ ....ಸೊ ಅಪ್ಪನೆ ಬಾಚಿ ಕೊಡುತ್ತಿದ್ದರು ......ಗಡಿಬಿಡಿಯಲ್ಲಿ ಸ್ಕೂಟರ್ ನಲ್ಲಿ ನನ್ನ ಕೂರಿಸಿಕೊಂಡು ಶಾಲೆ ಗೆ ಬಿಡಲು ಬಂದಾಗ ನನ್ನ ಅಳುವು ಪ್ರಾರಂಭ ...ಶಾಲೆ ಗೆ ಹೋಗುವುದಿಲ್ಲ ಎಂದು ....ಅಪ್ಪ ನಿನ್ನ ಜೊತೇನೆ ಇರುತ್ತೀನಿ ಎಂದು...
ಆಗ ನನ್ನ ಅಪ್ಪ ಹೇಳುತ್ತಿದ್ದರು "ಮಗ ನೀನು ಕಲಿ ,ಕಲಿತು ಬುದ್ದಿವಂತೆ ಆಗು" ಎಂದು ...
ಇದೆಲ್ಲ ಒಂದು ತರಹ ಎಂದೂ ಮರೆಯಲಾರದ ಸಿಹಿ ನೆನಪುಗಳು...
ಈಗ ನನ್ನ ಅಪ್ಪ ಮನೆಲಿದ್ದಾರೆ ....ಅಪ್ಪನ ಮಾತುಗಳು ಬರೀ ಫೋನಲ್ಲಿ .....
ಹೀಗೆ ಅದೆಷ್ಟೋ ನೆನಪುಗಳು ನಮ್ಮ ಮನಸ್ಸಿನ ಪುಟಗಳಲ್ಲಿ ಅಡಗಿ ಕುಳಿತಿವೆಯೋ ಬಲ್ಲವರಾರು ???
ಕನಸುಗಾರ ಚಿತ್ರದ ಹಾಡಿನಂತೆ
"ನೆನಪೇ ನನ್ನ ಮೈ ಪುಳಕ
ನೆನಪೇ ನನ್ನ ಮೈ ಜಳಕ ,
ನೆನಪೇ ನನ್ನ ಧನ ಕನಕ,
ನೆನಪು ಒಂದೇ ಕೊನೆ ತನಕ ".

ಈ ಸಾಹಿತ್ಯ ಅದೆಷ್ಟು ಸತ್ಯ ......
"LOVE you appa"
....