
ನೀವು ಕೆಲವರನ್ನು ಗಮನಿಸಿದ್ದೀರಾ? ಅವರನ್ನು ನೋಡಿದರೆ ಯಾವಾಗಲು ಏನೋ ಯೋಚಿಸುತ್ತಿರುವಂತೆ ಕಾಣುತ್ತದೆ. ಮುಖ ನೋಡಿ ನಕ್ಕರೂ ತಿರುಗಿ ನಗುವಷ್ಟು ಸಮಾಧಾನ ಇರುವುದಿಲ್ಲ... ಜಗತ್ತಿನ ಎಲ್ಲಾ ಸಮಸ್ಯೆಯು ತಮಗೇ ಬಂದಿರುವ ಹಾಗೇ ಆಡುತ್ತಿರುತ್ತಾರೆ...ಎಲ್ಲರ ಮೇಲೆ ಸಿಡುಕುವುದು, ತಾವೇ
ಜೀವನದಲ್ಲಿ ಚಿಂತೆ ಎಂಬುದು ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಚಿಂತೆ ಇದ್ದೇ ಇರುತ್ತದೆ. ಒಬ್ಬರಿಗೆ ಒಂದೊಂದು ಚಿಂತೆ. ಅವರವರಿಗೆ ಇರುವ ತೊಂದರೆಯ ಬಗ್ಗೆ, ಅನಾನುಕೂಲಗಳ ಬಗ್ಗೆ ಪ್ರತಿಯೊಬ್ಬನಿಗೂ ಚಿಂತೆ ಇರುತ್ತದೆ. ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ .....ಅವರ ಮದುವೆ ಮಾಡಬೇಕು ಎನ್ನುವುದು ಪಾಲಕರ ಚಿಂತೆಯಾದರೆ, ಮಕ್ಕಳಿಗೆ ತಮ್ಮ ಮದುವೆಯಾಗೋ ಹುಡುಗ\ಹುಡುಗಿ ಹೇಗಿರಬಹುದು ಎನ್ನುವ ಚಿಂತೆ... ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗೆ ಮುಂದಿನ ಫೀಸ್ ಹೇಗೆ ಕೊಡುವುದು ಎನ್ನುವ ಚಿಂತೆ... ಮನೆ ಬಿಟ್ಟು ಹೋದ ಗಂಡ ಇನ್ನೂ ಹಿಂದಿರುಗಲಿಲ್ಲ ಎನ್ನುವುದು ಅವನಿಗಾಗಿ ಕಾದು ಕುಳಿತ ಹೆಂಡತಿಯ ಚಿಂತೆ.... ಹೀಗೆ ಒಂದಿಲ್ಲೊಂದು ಚಿಂತೆಯಲ್ಲಿಯೇ ನಮ್ಮ ಜೀವನವನ್ನು ಕಳೆದುಬಿಡುತ್ತೆವಲ್ಲವೇ? ಎಷ್ಟೋ ಇಷ್ಟ ಪಟ್ಟು ಪ್ರೀತಿಸಿದ ವ್ಯಕ್ತಿ ಒಂದು ದಿನ ಬಿಟ್ಟು ಹೋಗಿರುತ್ತಾರೆ.... ತುಂಬಾ ನಂಬಿಕೆ ಇತ್ತ ಗೆಳತಿ ಮೋಸ ಮಾಡಿರುತ್ತಾಳೆ... ಸಾಲ ಮಾಡಿ ಶುರು ಮಾಡಿದ ಕಸುಬು ಕೈಗೆ ಹತ್ತಿರುವುದಿಲ್ಲ ........ ಎಷ್ಟೇ ಕೆಲಸ ಮಾಡಿದರೂ ಬಡ್ತಿ ಸಿಕ್ಕಿರುವುದಿಲ್ಲ..... ಒಂದೇ ,ಎರಡೇ ಚಿಂತೆ ಮಾಡುತ್ತೀನಿ ಎಂದರೆ ಸಿಗುತ್ತದೆ ಸಾವಿರಾರು ವಿಷಯಗಳು.. ಬೇಸರಿಸಿಕೊಳ್ಳುವುದು,ಅವರಿಗೆ ಅವರ ಮೇಲೆ ಕೋಪವಾ? ಬೇಸರವ?ಗೊತ್ತಿಲ್ಲ...
" ಹೊಟ್ಟೆ ತುಂಬಿದವನಿಗೆ ಹೊಟ್ಟೆ ಹೊರುವ ಚಿಂತೆ,
ಹೊಟ್ಟೆ ಹಸಿದವನಿಗೆ ಹೊಟ್ಟೆ ಹೊರೆವ ಚಿಂತೆ"
ಆದರೆ ಒಂದಂತೂ ನಿಜ ಹೀಗೆ ಯೋಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ....ನಮ್ಮನ್ನು ನಾವು ಇನ್ನಷ್ಟು ಶಿಕ್ಷಿಸಿಕೊಳ್ಳುತ್ತೇವೆ ...

ಒಂದು ಗಾದೆ ಮಾತಿದೆಯಲ್ಲ "ಚಿತೆ ಹೆಣವನ್ನು ಸುಟ್ಟರೆ, ಚಿಂತೆ ಬದುಕಿರುವವನನ್ನು ಸುಡುತ್ತದೆ " ಎಂದು.
ಅದಕ್ಕೆ ನಾನು ಹೇಳುವುದೆಂದರೆ , ಚಿಂತೆ ಮಾಡಿ ಯಾವುದೇ ಉಪಯೋಗವಿಲ್ಲ. ಅದರ ಬದಲು ಬಂದಿರುವ ಸಮಸ್ಯೆಗೆ ಪರಿಹಾರ ಹುಡುಕುವುದರಲ್ಲೇ ಇರುವುದು ಜಾಣತನ.. ಜೀವನದಲ್ಲಿ ಎಷ್ಟೋ ಸಿಹಿ-ಕಹಿ ಘಟನೆಗಳಾಗಿರುತ್ತವೆ. ಕಹಿ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಚಿಂತೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ .... ಏನು ನಡಿಬೇಕೋ ಅದು ಆಗೇ ಆಗುತ್ತದೆ. ನಾವು ಚಿಂತೆ ಮಾಡಿದರೂ ಅಷ್ಟೇ ಬಿಟ್ಟರು.. ಇರುವಷ್ಟು ದಿನ ನಗುನಗುತ ಜೀವನ ಸಾಗಿಸುವುದನ್ನು ಕಲಿಯೋಣ.. ನನ್ನ ಕೆಲವು ಸ್ನೇಹಿತರಿಗೆ ಹೇಳಿದ್ದೀನಿ ಯೋಚನೆ ಮಾಡಬೇಡಿ ಎಲ್ಲಾ ಸರಿ ಹೋಗುತ್ತದೆ ಎಂದು..ಒಂದು ವೇಳೆ ಹಾಗಾದರೆ??ಹೀಗಾದರೆ?... ಎಂದು ಅನಾವಶ್ಯಕವಾಗಿ ಯೋಚಿಸುತ್ತಾರೆ. ಕೊನೆಗೆ ನೋಡಿದರೆ ಎಲ್ಲವು ಒಳ್ಳೇದೆ ಆಗಿರುತ್ತದೆ. ಯೋಚಿಸಿ ಮನಸು ಹಾಳುಮಾಡಿಕೊಂಡಿದ್ದೆ ಬಂತು !!!!.....
"ಬಂದದ್ದು ಬರಲಿ, ಗೋವಿಂದನ ದಯೆ ಇರಲಿ" ಎಂಬ ಮಾತಿನಂತೆ ಬದುಕಿನಲ್ಲಿ ಮುಂದೆ ಸಾಗೋಣ. ಅನಾವಶ್ಯಕವಾಗಿ ಯೋಚಿಸಿ ಮನಸ್ಸನ್ನು ಹಾಳುಮಾಡಿ ಕೊಳ್ಳುವುದು ಬೇಡ.ಜೀವನವನ್ನು ಸಂತೋಷದಿಂದ ಸಾಗಿಸೋಣ. "Hope for the best, prepare for the worst". ಮನುಷ್ಯನ ಇಂಥ ಚಿಂತೆ ಮಾಡುವಂಥ ಬುದ್ದಿಯನ್ನು ಕಂಡೇ ಹಿರಿಯರು ಬಹುಷಃ ಹಾಡಿದ್ದೇನೋ... "ಚಿಂತ್ಯಾಕೆ ಮಾಡತಿದ್ದಿ ಚಿನ್ಮಯನಿದ್ದಾನೆ "ಎಂದು....