ಭಾನುವಾರ, ಅಕ್ಟೋಬರ್ 11, 2009

ಅವನೇ ಇವನ ? ಇವನೇ ಅವನ?

ಆಗ ನಾನು 1st PUC ನಲ್ಲಿದ್ದೆ. Mobile ಇರದಿದ್ದ ಕಾಲ. class ಗೆ ತುಂಬ ಜನ ಹೊಸ ಹುಡುಗರ ಸೇರ್ಪಡೆಯಾಗಿತ್ತು .ಅದರಲ್ಲಿ ಒಬ್ಬ ಹುಡುಗ ನನ್ನ ಮನಸೆಳೆದಿದ್ದ. ಅವನ ನೋಡಿದರೆ ಅದೇನೋ ಸಂತಸವಾಗುತಿತ್ತು. ಎಷ್ಟೋ ಹುಡುಗರ ಪೈಕಿಯಲ್ಲಿ ಅವನು ಸ್ವಲ್ಪ different ಅನಿಸಿತ್ತು.ಆದರೆ ಅದು ಪ್ರೇಮ ಏನೂ ಆಗಿರಲಿಲ್ಲ ಎಂದು ಮಾತ್ರ ಹೇಳಬಲ್ಲೆ.
ನಮ್ಮ class ನ Lecturer, attendence ತೆಗೆದುಕೊಳ್ಳುವಾಗ ಹೇಗೋ ಅವನ ಹೆಸರನ್ನು ತಿಳಿದುಕೊಂಡಿದ್ದೆ.
ಹಾಗೆ ದಿನವೂ ಅವ ಬಂದಿರುವನೋ ಇಲ್ಲವೋ ಎಂದು ತಿಳಿದುಕೊಳ್ಳುತ್ತಿದ್ದೆ .ಅವ ಬರದಿದ್ದಾಗ ಅದೇನೋ ಒನ್ ತರಹ ತಳಮಳವಾಗುತಿತ್ತು.
ಅವನು ನನ್ನ ನೋಡಿ smile ಮಾಡಿದ್ದ ನಾನು ತಿರುಗಿ smile ಮಾಡುತಿದ್ದೆ. ದಿನವೂ ಹೀಗೆ smile ಕೊಡುವುದು ತೆಗೆದುಕೊಳ್ಳುವುದು ನಡೆಯುತ್ತಲೇ ಇತ್ತು . ಆದರೂ ಎಂದೂ ಒಬ್ಬರಿಗೊಬ್ಬರು ಮಾತಾಡಿಕೊಳ್ಳಲಿಲ್ಲ ...
ಹೀಗೆ 1st PUC ಕಳೆದು ಹೋಯಿತು. ಮತ್ತೆ ಪುನಃ 2nd PUC ಶುರು .ಮೊದಲ ದಿನ ನನ್ನ ಕಣ್ಣುಗಳಿಗೆ ಬಿಡುವಿಲ್ಲದ ಕೆಲಸ ,ಅದೇನೆಂದರೆ ಅವನ ಹುಡುಕುವುದು.ಕಡೆಗೂ ಅವನ ಕಂಡಾಗ ಏನೋ ಸ್ವಲ್ಪ rest ಸಿಕ್ಕಿತ್ತು ನನ್ನ ಕಣ್ಣುಗಳಿಗೆ.
ಹೀಗೆ ಮತ್ತೆ ಅವ smile ಮಾಡಿದ. ನಾನು smile ಮಾಡಿದೆ .ಆಗಲೂ ನಾವು ಮಾತಾಡಲಿಲ್ಲ.
ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ 2nd PUC ಮುಗಿದಿತ್ತು. ಅವನು ಬೇರೆಲ್ಲೋ ಇಂಜಿನಿಯರಿಂಗ್ ಮಾಡಲು ಹೋಗಿರಬೇಕು ಗೊತ್ತಿಲ್ಲ. ನಾನೂ ನನ್ನ ಓದಿನ ಕಡೆ ಗಮನ ಹರಿಸಿದೆ.ಅವನ ನೆನಪು ಒಮ್ಮೆಯೂ ಬರಲಿಲ್ಲ.ಅವನಿಗೆ ಬಂದಿತ್ತಾ ??? I have no idea.
ಆದರೆ ಮೊನ್ನೆ gandhi bazaar ಹೋಗಬೇಕಾದರೆ ಬಸ್ಸಿನಲ್ಲಿ ಒಬ್ಬ ಹುಡುಗ ಕೂತಿದ್ದ. ಅದೇ ಮುಖ, ಅದೇ ಆಳ್ತನ...ಎಲ್ಲವೂ ಅವನದೇ ಅಚ್ಚು. ಎಷ್ಟೋ ದಿನಗಳ ನಂತರ ಮನಸಿನ ಪುಟಗಳ ಮೇಲೆ ಅವನ ಮುಖ ಕಾಣಿಸಿಕೊಂಡಿತು . ಇವನು ಅವನೆನ?ಅವನೇ ಇವನ? Is he he?ಏನೋ ಗೊತ್ತಾಗಲಿಲ್ಲ.
ಈ ಬಾರಿ ಅವನ ಮುಖದಲ್ಲಿ smile ಇಲ್ಲ. ನನಗೂ smile ಮಾಡುವ ಧೈರ್ಯ ಬರಲಿಲ್ಲ. ಮುಂದಿನ stop ನಲ್ಲಿ ಅವ ಬಸ್ಸಿಳಿದು ಹೋಗಿದ್ದ. ಆದರೆ ನನಗೆ ಮಾತ್ರ ಅವನೇ ಇವನ ? ಇವನೇ ಅವನ? ಎಂಬ ಪ್ರಶ್ನೆಗೆ ಉತ್ತರವೇ ಸಿಗಲಿಲ್ಲ!!!