
ನಮ್ಮ ಆಫೀಸಿನಲ್ಲಿ ಹೊಸ team leader ಬಂದಿದ್ದಾರೆ. ಅವರು ಸಕತ್ ತಮಾಷೆ ಮಾಡುತ್ತಿರುತ್ತಾರೆ.
ಅವರಿಗೆ lovers ಅಂದರೆ ಏನೋ ವಿಶೇಷ ಆಸಕ್ತಿ ತೋರಿಸುತ್ತಾರೆ .ಅದು ಯಾಕೆ ಅಂತ ನನಗೆ ಇನ್ನೂ ಕಂಡು ಹಿಡಿಯೋಕೆ ಆಗಲೇ ಇಲ್ಲ ...:( ನಮ್ಮ teamನಲ್ಲಿ ಯಾರಿಗಾದರು boyfriend / girlfriend ಇದ್ದರೆ ಅವರ ಹೆಸರನ್ನು team ಗೆ ಹೇಳಬೇಕು. ಹಾಗೇ ಹೇಳಿದಮೇಲೆ ನಾವು ಅವರ ಹೆಸರನ್ನು ಕರೆಯೋ ಹಾಗಿಲ್ಲ. ಬದಲಿಗೆ ಅವರ boyfriend/ girlfriend ಹೆಸರಿನಿಂದ ಅವರನ್ನು ಕರೀಬೇಕು. ನಮ್ಮ teamನಲ್ಲಿ ಸುಮಾರು ಜನರ ಹೆಸರೇ ಮರೆತು ಹೋಗಿದೆ ನನಗೆ ಏಕೆಂದರೆ ಅವರನ್ನು ಬೇರೆ ಹೆಸರಿನಿಂದ ಕರೆಯಲಾಗುತ್ತಿದೆ .
ಉದಾ : ನಮ್ಮ teamನಲ್ಲಿ ಒಬ್ಬ ನೀಲಂ ಅಂತ ಇದಾನೆ . ಅವನ ಹುಡುಗಿಯ ಹೆಸರು ಲೀಲಾ. ಅದಕ್ಕೆ ನಾವೆಲ್ಲಾ ಅವನನ್ನು 'ಲೀಲಾ' ಎಂದೇ ಕರೆಯುತ್ತೇವೆ.
ಹೀಗಿದ್ದಾಗ ಮೊನ್ನೆ ನನ್ನ ಮೇಲೆ ಅವರ ವಕ್ರ(!) ದೃಷ್ಟಿ ಬಿತ್ತು. ದಿವ್ಯನಿಗೆ ಮಾತ್ರ ಇನ್ನೂ ದಿವ್ಯಾ ಅಂತಾನೆ ಕರಿತಾ ಇದೀವಿ. ಅವಳ boyfriend ಹೆಸರನ್ನು ಕೇಳಬೇಕು ಎಂದು ಹಿಂದೆ ಬಿದ್ದು ಬಿಟ್ಟರು. ಇದ್ಯಾವುದರ ನಿರೀಕ್ಷೆ ಇಲ್ಲದ ನನಗೆ ಒನ್ ತರಹ shock ಆಗೋಯ್ತು . ಇದೇನಪ್ಪ? ನಾನು ನನ್ನ ಪಾಡಿಗೆ ಆರಾಮಾಗಿ ಆಫೀಸಿನಲ್ಲಿ ಕಾಫಿ, ಟೀ, ಕುಡ್ಕೊಂಡು... ಜೊತೆಗೆ ಕೆಲಸದ ಮಧ್ಯೆ ಆಗೀಗ ಚಾಟಿಂಗ್, ಬ್ಲಾಗಿಂಗ್ ಮಾಡ್ತಿರಬೇಕಾದ್ರೆ ಇದೆಲ್ಲಿಂದ ಬಂತಪ್ಪ ತಲೆನೋವು ಅಂತ ಮನಸಲ್ಲೇ ಎಲ್ಲರನ್ನು ಬೈದು ಕೊಳ್ಳುತ್ತಿದ್ದೆ . ನನಗೆ ಯಾರೂ boyfriend ಇಲ್ಲ. ತುಂಬಾ ನಂಬಿಕಸ್ತ , ಒಳ್ಳೇ ಫ್ರೆಂಡ್ಸ್ ಇದಾರೆ ಅಂದರೆ ನಂಬಲು ತಯಾರೇ ಇಲ್ಲ ಆಸಾಮಿಗಳು. ನಾನು ಯಾರ ಹೆಸರು ಹೇಳುವುದಪ್ಪ, ಅಯ್ಯೋ ಅಂತ ಕೂತ್ಕೊಂಡಾಗ, ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಹಾಗೆ - " ಅಯ್ಯೋ ದಿವ್ಯಂಗೆ boyfriend ಇಲ್ಲ ಅಂದ್ರೆ ನಂಬೋಕೆ ಆಗೋಲ್ಲ. ಬ್ಲಾಗ್ನಲ್ಲಿ ಬರೀ ಪ್ರೇಮ ಪತ್ರಗಳನ್ನೇ ತುಂಬಿಸಿದ್ದಾಳೆ ಅನ್ನೋದೇ...:-(
ನಾನು ಹೇಳಿಬಿಟ್ಟೆ ನೀವು ಆ ತರಹ assume ಮಾಡಿಕೊಂಡರೆ ನಾನೇನು ಮಾಡೋಕಾಗಲ್ಲ ಎಂದೆ . ನನ್ನ ಪರಿಸ್ಥಿತಿ ಯಾರಿಗೂ ಬೇಡ. ಇದೊಳ್ಳೆ ಗೋಳಾಯ್ತಲ್ಲ ..... ಅದೆಲ್ಲ ಬರೀ ಕಲ್ಪನೆ ...ನನಗೆ ಯಾರೂ boyfriend ಇಲ್ಲಾಆಆಆಆ.... plz ನನ್ನ ಬಿಟ್ಟು ಬಿಡಿ. boyfriend ಸಿಕ್ಕಿದ ಕೂಡಲೇ ನಿಮಗೆ ತಿಳಿಸುತ್ತೀನಿ . ಆಗ ಅವನ ಹೆಸರಿನಿಂದ ಕರೀರಿ "ಅಂದೆ.....ನೀನೂ ಈಗ ಹೇಳದೆ ಇದ್ರೆ ನಮಗೆ ಟ್ರೀಟ್ ಕೊಡಿಸಬೇಕು ಅಂದ್ರು... ಅಬ್ಬ!!! ಇವತ್ತು ಬೆಳಗ್ಗೆ ಬೆಳಗ್ಗೆ ಯಾರ್ ಮುಖ ನೋಡಿದ್ನಪ್ಪ ??? ಅಯ್ಯೋ ನನ್ನ ಪರ್ಸ್ಗೆ ಕತ್ತರಿ ಬೀಳುತ್ತಲ್ಲಪ್ಪ ಅನ್ಕೊತಾ ಇದ್ದೆ...
ಇದ್ದರೆ ಹೇಳಬಹುದು...ಇಲ್ದೆ ಇದ್ರೆ ಹೇಗೆ ಹೇಳಲಿ? ನಾನು ಸುಮ್ನೆ ಕೂತಿದ್ದೆ. ಆಮೇಲೆ ಅವರಿಗೆ ನನ್ನ ನೋಡಿ 'ಪಾಪ' ಅನಿಸ್ತು ಅನ್ಸುತ್ತೆ. ಸರಿ ನಿನ್ನ ಹುಡುಗ ಹೇಗಿರಬೇಕು ಅನ್ನೋದಾದರೂ ಹೇಳು ಅಂದ್ರು. ಒಂದಷ್ಟು ಅದು - ಇದು ಹೇಳಿ ಬದುಕಿದೆಯಾ ಬಡಜೀವವೇ ಎಂದು ಹೇಳಿ ಸಮಾಧಾನದ ನಿಟ್ಟುಸಿರು ಬಿಟ್ಟೆ!!! ಆ ಹುಡುಗ ಯಾವಾಗ ಸಿಗುತ್ತಾನೋ ... ನನಗೆ ಯಾವಾಗ ಅವರು ಆ ಹೆಸರಿನಿಂದ ಕರೆಯುತ್ತಾರೋ ???....ಎಂದು ಇಲ್ಲಿವರೆಗೂ ಇರದ ವಿಚಾರ ಮಾತ್ರ ಯಾಕೋ ಮನಸ್ಸಿನಲ್ಲಿ ಹಾದು ಹೋಯ್ತು...




