ಶನಿವಾರ, ಡಿಸೆಂಬರ್ 26, 2009

ಪ್ರೇಮ ಪತ್ರಗಳು ತಂದ ಅವಾಂತರ.....


ನಮ್ಮ ಆಫೀಸಿನಲ್ಲಿ ಹೊಸ team leader ಬಂದಿದ್ದಾರೆ. ಅವರು ಸಕತ್ ತಮಾಷೆ ಮಾಡುತ್ತಿರುತ್ತಾರೆ. ಅವರಿಗೆ lovers ಅಂದರೆ ಏನೋ ವಿಶೇಷ ಆಸಕ್ತಿ ತೋರಿಸುತ್ತಾರೆ .ಅದು ಯಾಕೆ ಅಂತ ನನಗೆ ಇನ್ನೂ ಕಂಡು ಹಿಡಿಯೋಕೆ ಆಗಲೇ ಇಲ್ಲ ...:(

ನಮ್ಮ teamನಲ್ಲಿ ಯಾರಿಗಾದರು boyfriend / girlfriend ಇದ್ದರೆ ಅವರ ಹೆಸರನ್ನು team ಗೆ ಹೇಳಬೇಕು. ಹಾಗೇ ಹೇಳಿದಮೇಲೆ ನಾವು ಅವರ ಹೆಸರನ್ನು ಕರೆಯೋ ಹಾಗಿಲ್ಲ. ಬದಲಿಗೆ ಅವರ boyfriend/ girlfriend ಹೆಸರಿನಿಂದ ಅವರನ್ನು ಕರೀಬೇಕು. ನಮ್ಮ teamನಲ್ಲಿ ಸುಮಾರು ಜನರ ಹೆಸರೇ ಮರೆತು ಹೋಗಿದೆ ನನಗೆ ಏಕೆಂದರೆ ಅವರನ್ನು ಬೇರೆ ಹೆಸರಿನಿಂದ ಕರೆಯಲಾಗುತ್ತಿದೆ . ಉದಾ : ನಮ್ಮ teamನಲ್ಲಿ ಒಬ್ಬ ನೀಲಂ ಅಂತ ಇದಾನೆ . ಅವನ ಹುಡುಗಿಯ ಹೆಸರು ಲೀಲಾ. ಅದಕ್ಕೆ ನಾವೆಲ್ಲಾ ಅವನನ್ನು 'ಲೀಲಾ' ಎಂದೇ ಕರೆಯುತ್ತೇವೆ.

ಹೀಗಿದ್ದಾಗ ಮೊನ್ನೆ ನನ್ನ ಮೇಲೆ ಅವರ ವಕ್ರ(!) ದೃಷ್ಟಿ ಬಿತ್ತು. ದಿವ್ಯನಿಗೆ ಮಾತ್ರ ಇನ್ನೂ ದಿವ್ಯಾ ಅಂತಾನೆ ಕರಿತಾ ಇದೀವಿ. ಅವಳ boyfriend ಹೆಸರನ್ನು ಕೇಳಬೇಕು ಎಂದು ಹಿಂದೆ ಬಿದ್ದು ಬಿಟ್ಟರು. ಇದ್ಯಾವುದರ ನಿರೀಕ್ಷೆ ಇಲ್ಲದ ನನಗೆ ಒನ್ ತರಹ shock ಆಗೋಯ್ತು . ಇದೇನಪ್ಪ? ನಾನು ನನ್ನ ಪಾಡಿಗೆ ಆರಾಮಾಗಿ ಆಫೀಸಿನಲ್ಲಿ ಕಾಫಿ, ಟೀ, ಕುಡ್ಕೊಂಡು... ಜೊತೆಗೆ ಕೆಲಸದ ಮಧ್ಯೆ ಆಗೀಗ ಚಾಟಿಂಗ್, ಬ್ಲಾಗಿಂಗ್ ಮಾಡ್ತಿರಬೇಕಾದ್ರೆ ಇದೆಲ್ಲಿಂದ ಬಂತಪ್ಪ ತಲೆನೋವು ಅಂತ ಮನಸಲ್ಲೇ ಎಲ್ಲರನ್ನು ಬೈದು ಕೊಳ್ಳುತ್ತಿದ್ದೆ . ನನಗೆ ಯಾರೂ boyfriend ಇಲ್ಲ. ತುಂಬಾ ನಂಬಿಕಸ್ತ , ಒಳ್ಳೇ ಫ್ರೆಂಡ್ಸ್ ಇದಾರೆ ಅಂದರೆ ನಂಬಲು ತಯಾರೇ ಇಲ್ಲ ಆಸಾಮಿಗಳು. ನಾನು ಯಾರ ಹೆಸರು ಹೇಳುವುದಪ್ಪ, ಅಯ್ಯೋ ಅಂತ ಕೂತ್ಕೊಂಡಾಗ, ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಹಾಗೆ - " ಅಯ್ಯೋ ದಿವ್ಯಂಗೆ boyfriend ಇಲ್ಲ ಅಂದ್ರೆ ನಂಬೋಕೆ ಆಗೋಲ್ಲ. ಬ್ಲಾಗ್ನಲ್ಲಿ ಬರೀ ಪ್ರೇಮ ಪತ್ರಗಳನ್ನೇ ತುಂಬಿಸಿದ್ದಾಳೆ ಅನ್ನೋದೇ...:-(

ನಾನು ಹೇಳಿಬಿಟ್ಟೆ ನೀವು ಆ ತರಹ assume ಮಾಡಿಕೊಂಡರೆ ನಾನೇನು ಮಾಡೋಕಾಗಲ್ಲ ಎಂದೆ . ನನ್ನ ಪರಿಸ್ಥಿತಿ ಯಾರಿಗೂ ಬೇಡ. ಇದೊಳ್ಳೆ ಗೋಳಾಯ್ತಲ್ಲ ..... ಅದೆಲ್ಲ ಬರೀ ಕಲ್ಪನೆ ...ನನಗೆ ಯಾರೂ boyfriend ಇಲ್ಲಾಆಆಆಆ.... plz ನನ್ನ ಬಿಟ್ಟು ಬಿಡಿ. boyfriend ಸಿಕ್ಕಿದ ಕೂಡಲೇ ನಿಮಗೆ ತಿಳಿಸುತ್ತೀನಿ . ಆಗ ಅವನ ಹೆಸರಿನಿಂದ ಕರೀರಿ "ಅಂದೆ.....ನೀನೂ ಈಗ ಹೇಳದೆ ಇದ್ರೆ ನಮಗೆ ಟ್ರೀಟ್ ಕೊಡಿಸಬೇಕು ಅಂದ್ರು... ಅಬ್ಬ!!! ಇವತ್ತು ಬೆಳಗ್ಗೆ ಬೆಳಗ್ಗೆ ಯಾರ್ ಮುಖ ನೋಡಿದ್ನಪ್ಪ ??? ಅಯ್ಯೋ ನನ್ನ ಪರ್ಸ್ಗೆ ಕತ್ತರಿ ಬೀಳುತ್ತಲ್ಲಪ್ಪ ಅನ್ಕೊತಾ ಇದ್ದೆ... ಇದ್ದರೆ ಹೇಳಬಹುದು...ಇಲ್ದೆ ಇದ್ರೆ ಹೇಗೆ ಹೇಳಲಿ? ನಾನು ಸುಮ್ನೆ ಕೂತಿದ್ದೆ.

ಆಮೇಲೆ ಅವರಿಗೆ ನನ್ನ ನೋಡಿ 'ಪಾಪ' ಅನಿಸ್ತು ಅನ್ಸುತ್ತೆ. ಸರಿ ನಿನ್ನ ಹುಡುಗ ಹೇಗಿರಬೇಕು ಅನ್ನೋದಾದರೂ ಹೇಳು ಅಂದ್ರು. ಒಂದಷ್ಟು ಅದು - ಇದು ಹೇಳಿ ಬದುಕಿದೆಯಾ ಬಡಜೀವವೇ ಎಂದು ಹೇಳಿ ಸಮಾಧಾನದ ನಿಟ್ಟುಸಿರು ಬಿಟ್ಟೆ!!! ಆ ಹುಡುಗ ಯಾವಾಗ ಸಿಗುತ್ತಾನೋ ... ನನಗೆ ಯಾವಾಗ ಅವರು ಆ ಹೆಸರಿನಿಂದ ಕರೆಯುತ್ತಾರೋ ???....ಎಂದು ಇಲ್ಲಿವರೆಗೂ ಇರದ ವಿಚಾರ ಮಾತ್ರ ಯಾಕೋ ಮನಸ್ಸಿನಲ್ಲಿ ಹಾದು ಹೋಯ್ತು...

ಭಾನುವಾರ, ಡಿಸೆಂಬರ್ 20, 2009

ಚಿಂತ್ಯಾಕೆ ಮಾಡತಿದ್ದಿ...


ನೀವು ಕೆಲವರನ್ನು ಗಮನಿಸಿದ್ದೀರಾ? ಅವರನ್ನು ನೋಡಿದರೆ ಯಾವಾಗಲು ಏನೋ ಯೋಚಿಸುತ್ತಿರುವಂತೆ ಕಾಣುತ್ತದೆ. ಮುಖ ನೋಡಿ ನಕ್ಕರೂ ತಿರುಗಿ ನಗುವಷ್ಟು ಸಮಾಧಾನ ಇರುವುದಿಲ್ಲ... ಜಗತ್ತಿನ ಎಲ್ಲಾ ಸಮಸ್ಯೆಯು ತಮಗೇ ಬಂದಿರುವ ಹಾಗೇ ಆಡುತ್ತಿರುತ್ತಾರೆ...ಎಲ್ಲರ ಮೇಲೆ ಸಿಡುಕುವುದು, ತಾವೇ

ಜೀವನದಲ್ಲಿ ಚಿಂತೆ ಎಂಬುದು ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಚಿಂತೆ ಇದ್ದೇ ಇರುತ್ತದೆ. ಒಬ್ಬರಿಗೆ ಒಂದೊಂದು ಚಿಂತೆ. ಅವರವರಿಗೆ ಇರುವ ತೊಂದರೆಯ ಬಗ್ಗೆ, ಅನಾನುಕೂಲಗಳ ಬಗ್ಗೆ ಪ್ರತಿಯೊಬ್ಬನಿಗೂ ಚಿಂತೆ ಇರುತ್ತದೆ. ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ .....ಅವರ ಮದುವೆ ಮಾಡಬೇಕು ಎನ್ನುವುದು ಪಾಲಕರ ಚಿಂತೆಯಾದರೆ, ಮಕ್ಕಳಿಗೆ ತಮ್ಮ ಮದುವೆಯಾಗೋ ಹುಡುಗ\ಹುಡುಗಿ ಹೇಗಿರಬಹುದು ಎನ್ನುವ ಚಿಂತೆ... ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗೆ ಮುಂದಿನ ಫೀಸ್ ಹೇಗೆ ಕೊಡುವುದು ಎನ್ನುವ ಚಿಂತೆ... ಮನೆ ಬಿಟ್ಟು ಹೋದ ಗಂಡ ಇನ್ನೂ ಹಿಂದಿರುಗಲಿಲ್ಲ ಎನ್ನುವುದು ಅವನಿಗಾಗಿ ಕಾದು ಕುಳಿತ ಹೆಂಡತಿಯ ಚಿಂತೆ.... ಹೀಗೆ ಒಂದಿಲ್ಲೊಂದು ಚಿಂತೆಯಲ್ಲಿಯೇ ನಮ್ಮ ಜೀವನವನ್ನು ಕಳೆದುಬಿಡುತ್ತೆವಲ್ಲವೇ? ಎಷ್ಟೋ ಇಷ್ಟ ಪಟ್ಟು ಪ್ರೀತಿಸಿದ ವ್ಯಕ್ತಿ ಒಂದು ದಿನ ಬಿಟ್ಟು ಹೋಗಿರುತ್ತಾರೆ.... ತುಂಬಾ ನಂಬಿಕೆ ಇತ್ತ ಗೆಳತಿ ಮೋಸ ಮಾಡಿರುತ್ತಾಳೆ... ಸಾಲ ಮಾಡಿ ಶುರು ಮಾಡಿದ ಕಸುಬು ಕೈಗೆ ಹತ್ತಿರುವುದಿಲ್ಲ ........ ಎಷ್ಟೇ ಕೆಲಸ ಮಾಡಿದರೂ ಬಡ್ತಿ ಸಿಕ್ಕಿರುವುದಿಲ್ಲ..... ಒಂದೇ ,ಎರಡೇ ಚಿಂತೆ ಮಾಡುತ್ತೀನಿ ಎಂದರೆ ಸಿಗುತ್ತದೆ ಸಾವಿರಾರು ವಿಷಯಗಳು.. ಬೇಸರಿಸಿಕೊಳ್ಳುವುದು,ಅವರಿಗೆ ಅವರ ಮೇಲೆ ಕೋಪವಾ? ಬೇಸರವ?ಗೊತ್ತಿಲ್ಲ...


" ಹೊಟ್ಟೆ ತುಂಬಿದವನಿಗೆ ಹೊಟ್ಟೆ ಹೊರುವ ಚಿಂತೆ,
ಹೊಟ್ಟೆ ಹಸಿದವನಿಗೆ ಹೊಟ್ಟೆ ಹೊರೆವ ಚಿಂತೆ"

ಆದರೆ ಒಂದಂತೂ ನಿಜ ಹೀಗೆ ಯೋಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ....ನಮ್ಮನ್ನು ನಾವು ಇನ್ನಷ್ಟು ಶಿಕ್ಷಿಸಿಕೊಳ್ಳುತ್ತೇವೆ ...

ಒಂದು ಗಾದೆ ಮಾತಿದೆಯಲ್ಲ "ಚಿತೆ ಹೆಣವನ್ನು ಸುಟ್ಟರೆ, ಚಿಂತೆ ಬದುಕಿರುವವನನ್ನು ಸುಡುತ್ತದೆ " ಎಂದು.


ಅದಕ್ಕೆ ನಾನು ಹೇಳುವುದೆಂದರೆ , ಚಿಂತೆ ಮಾಡಿ ಯಾವುದೇ ಉಪಯೋಗವಿಲ್ಲ. ಅದರ ಬದಲು ಬಂದಿರುವ ಸಮಸ್ಯೆಗೆ ಪರಿಹಾರ ಹುಡುಕುವುದರಲ್ಲೇ ಇರುವುದು ಜಾಣತನ.. ಜೀವನದಲ್ಲಿ ಎಷ್ಟೋ ಸಿಹಿ-ಕಹಿ ಘಟನೆಗಳಾಗಿರುತ್ತವೆ. ಕಹಿ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಚಿಂತೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ .... ಏನು ನಡಿಬೇಕೋ ಅದು ಆಗೇ ಆಗುತ್ತದೆ. ನಾವು ಚಿಂತೆ ಮಾಡಿದರೂ ಅಷ್ಟೇ ಬಿಟ್ಟರು.. ಇರುವಷ್ಟು ದಿನ ನಗುನಗುತ ಜೀವನ ಸಾಗಿಸುವುದನ್ನು ಕಲಿಯೋಣ.. ನನ್ನ ಕೆಲವು ಸ್ನೇಹಿತರಿಗೆ ಹೇಳಿದ್ದೀನಿ ಯೋಚನೆ ಮಾಡಬೇಡಿ ಎಲ್ಲಾ ಸರಿ ಹೋಗುತ್ತದೆ ಎಂದು..ಒಂದು ವೇಳೆ ಹಾಗಾದರೆ??ಹೀಗಾದರೆ?... ಎಂದು ಅನಾವಶ್ಯಕವಾಗಿ ಯೋಚಿಸುತ್ತಾರೆ. ಕೊನೆಗೆ ನೋಡಿದರೆ ಎಲ್ಲವು ಒಳ್ಳೇದೆ ಆಗಿರುತ್ತದೆ. ಯೋಚಿಸಿ ಮನಸು ಹಾಳುಮಾಡಿಕೊಂಡಿದ್ದೆ ಬಂತು !!!!.....

"ಬಂದದ್ದು ಬರಲಿ, ಗೋವಿಂದನ ದಯೆ ಇರಲಿ" ಎಂಬ ಮಾತಿನಂತೆ ಬದುಕಿನಲ್ಲಿ ಮುಂದೆ ಸಾಗೋಣ. ಅನಾವಶ್ಯಕವಾಗಿ ಯೋಚಿಸಿ ಮನಸ್ಸನ್ನು ಹಾಳುಮಾಡಿ ಕೊಳ್ಳುವುದು ಬೇಡ.ಜೀವನವನ್ನು ಸಂತೋಷದಿಂದ ಸಾಗಿಸೋಣ. "Hope for the best, prepare for the worst". ಮನುಷ್ಯನ ಇಂಥ ಚಿಂತೆ ಮಾಡುವಂಥ ಬುದ್ದಿಯನ್ನು ಕಂಡೇ ಹಿರಿಯರು ಬಹುಷಃ ಹಾಡಿದ್ದೇನೋ... "ಚಿಂತ್ಯಾಕೆ ಮಾಡತಿದ್ದಿ ಚಿನ್ಮಯನಿದ್ದಾನೆ
"ಎಂದು....

ಶುಕ್ರವಾರ, ಡಿಸೆಂಬರ್ 11, 2009

ಭರವಸೆ ಇದೆ ನನಗಿಂದು.....
ಭರವಸೆ ಇದೆ ನನಗಿಂದು ,ಸೂರ್ಯಸ್ಥಮಾನವಾದರೆ ,
ನಾಳೆ ಸೂರ್ಯೋದಯ ಆಗುವುದೆಂದು .
ಭರವಸೆ ಇದೆ ನನಗಿಂದು , ಇವತ್ತು ನಾ ದುಃಖವನ್ನು ಉಂಡರೆ,
ನನ್ನ ಪಾಲಿಗೆ ನಾಳೆ ನಗುವಿದೆ ಎಂದು .

ಭರವಸೆ ಇದೆ ನನಗಿಂದು ,ಕಂಡ ಕನಸುಗಳೆಲ್ಲ
ನಾಳೆ ನನಸಾಗುವುದೆಂದು .
ಭರವಸೆ ಇದೆ ನನಗಿಂದು ,ನಾನು ಬಯಸಿದ್ದೆಲ್ಲ ,
ನನಗೆ ಸಿಗುವುದೆಂದು .

ಭರವಸೆ ಇದೆ ನನಗಿಂದು ,ಕಳೆದುಕೊಂಡಿದ್ದಕ್ಕಿಂತ
ಉತ್ತಮವಾದುದನ್ನು ನಾಳೆ ಪಡೆದುಕೊಳ್ಳುತ್ತೆನೆಂದು .
ಭರವಸೆ ಇದೆ ನನಗಿಂದು ,ಘಾಸಿಗೊಂಡ ಹೃದಯ ,
ತಾನೇ ಸುಧಾರಿಸಿಕೊಳ್ಳುತ್ತದೆಂದು .

ಭರವಸೆ ಇದೆ ನನಗಿಂದು , ಜೀವನದ ಸಮುದ್ರವನ್ನು
ಈಸುತ್ತೆನೆಂದು ,ಈಸಿ ಜಯಿಸುತ್ತೇನೆಂದು .
ಭರವಸೆ ಇದೆ ನನಗಿಂದು , ನನ್ನ ಮೇಲೆ ,
ನನ್ನ ಮನಸ್ಸಿನ ಮೇಲೆ , ನನ್ನ ನಾಳೆಗಳ ಮೇಲೆ .ಶುಕ್ರವಾರ, ಡಿಸೆಂಬರ್ 04, 2009

ಅವಳು ಬಂದಾಗಿನಿಂದ ನನ್ನ.......

ನಾನೂ ನೋಡ್ತಾನೆ ಇದೀನಿ .....
ಅವಳು ಬಂದಾಗಿನಿಂದ ನನ್ನ ಯಜಮಾನ ನನ್ನೆಡೆಗೆ ನೋಡುತ್ತಲೂ ಇಲ್ಲ .ಬರೀ ಅವಳನ್ನು ಮಾತ್ರ ಜೊತೆಯಲ್ಲಿಟ್ಟುಕೊಂಡು ತಿರುಗುತ್ತಾನೆ .ಅವಳೊಡನೆ ಅಷ್ಟೆ ಮಾತಾಡುತ್ತಾನೆ . ಮೊದಲೆಲ್ಲ ಅವನು ಹೀಗಿರಲಿಲ್ಲ. ಯಾರೊಡನೆ ಮಾತಾಡಬೇಕಿದ್ದರೂ ನಾನೇ ಬೇಕು ಎನ್ನುತ್ತಿದ್ದ . ಆದರೆ ಈಗ ನನಗೆ ಹೊಟ್ಟೆಗೂ ಸರಿಯಾಗಿ ಹಾಕುತ್ತಿಲ್ಲ . ಸುಮಾರು ಮೂರು ವರ್ಷಗಳ ಕಾಲ ನಾನೂ ಅವನ ಜೊತೆಗೇ ಇದ್ದೆ ..ಅವನು ನನ್ನನ್ನು ತನಗೆ ಬೇಕಾದ ಹಾಗೆಲ್ಲ ಬಳಸಿಕೊಂಡ . ಈಗ ನಾನು ಅವನಿಗೆ ಬೇಡ . ಕಾರಣ ಇನ್ನೊಂದು ಸುಂದರಿ ಅವನ ಮೋಡಿ ಮಾಡಿರುವಳಲ್ಲ !!! ಅವನು ಅವಳ ಜೊತೆಗೆ ತಿರುಗಾಡುವುದನ್ನು ನೋಡಿದರೆ ಯಾಕೋ ಏನೋ ಒನ್ ತರಹದ ಸಂಕಟವಾಗುತ್ತಿದೆ .
ಯಾರಿಗೆ ಹೇಳಲಿ ನಾನು ಈ ದುಃಖವನ್ನು ?ಹೇಳಿಕೊಳ್ಳಲು ಅಪ್ಪ- ಅಮ್ಮ ಯಾರೂ ಇಲ್ಲ ನನಗೆ . ಇವನೊಬ್ಬನೇ ನನಗೆ ದಿಕ್ಕಾಗಿದ್ದ . ಆದರೆ ಈಗ ಅವನೂ ನನ್ನ ಆಲೈಸುತ್ತಿಲ್ಲ .ನನ್ನೆಡೆಗೆ ನೋಡುತ್ತಲೂ ಇಲ್ಲ .ಬಹುಷಃ ಅವನಿಗೆ ನನ್ನಲ್ಲಿ ಆಸಕ್ತಿ ಹೊರಟು ಹೋಗಿರಬೇಕು . ಇವಳು ಬರುವ ಮುಂಚೆ ಇವನು ಯಾವತ್ತೂ ನನ್ನ ಒಂಟಿ ಮಾಡಿರಲಿಲ್ಲ . ನನ್ನ ಅಸ್ತಿತ್ವವೇ ಹೊರಟು ಹೋಗಿದೆ ಇವಳು ಬಂದಾಗಿನಿಂದ . ನಾನು ಒಪ್ಪಿಕೊಳ್ಳುತ್ತೇನೆ ,ಅವಳಲ್ಲಿರುವ ರಂಗುರಂಗಿನ ಬಿನ್ನಾಣವಾಗಲಿ ,ಹೊಳಪಾಗಲಿ , ಅಥವಾ ನನ್ನ ಯಜಮಾನನನ್ನು ಸಂತೋಷಿಸುವ ಯಾವುದೇ ಗುಣವಾಗಲಿ ನನ್ನಲ್ಲಿಲ್ಲ ..ಅವಳು ನನಗಿಂತ ಸಣ್ಣಗಿದ್ದಾಳೆ ..ನಾನು ಸ್ವಲ್ಪ ದಪ್ಪ ……ಆದರೂ ನಾನು ಅವನವಳಾಗಿದ್ದೆ ಅಲ್ಲವ ?ಅದಕ್ಕಾದರೂ ನನ್ನ ಮಾತಾಡಿಸಬಾರದೆ ?ನನ್ನನ್ನು ಅವಳ ಹಾಗೆ ಇರಿಸಿಕೊಳ್ಳಬಾರದೆ ??
ಎಷ್ಟೊಂದು ಸಾರಿ ಹೊಟ್ಟೆ ಹಸಿದು ಸಾಯುತ್ತಿರುವಾಗ ಬಂದು ಹೊಟ್ಟೆಗೆ ಹಾಕುತ್ತಾನೆ ಪುಣ್ಯಾತ್ಮ . ಎಷ್ಟು ನೋವಾಗುತ್ತೆ ಅವನಿಗೇನು ಗೊತ್ತು ? ಅವನಾಗಲೇ ಅವಳ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಿರುವನು . ಅವಳನ್ನು ಬೆಚ್ಚನೆಯ ಗೂಡಿನಲ್ಲಿ ಕೂಡಿಟ್ಟಿರುವನು . ಅವಳನ್ನು ಕಾಪಾಡಲು ಒಂದೊಳ್ಳೆ ರೇಶಿಮೆಯ ಅಂಗಿಯನ್ನು ತಂದಿರುವನು .ಆದರೆ ನನಗೆ ಏನನ್ನು ಕೊಡಿಸಲಿಲ್ಲ . ನಾನು ಅವನಿಗೆ ತುಂಬ ಸಹಾಯ ಮಾಡಿದ್ದೀನಿ . ಅವನ ಅಪ್ಪ ಅಮ್ಮನೊಡನೆ , ಸ್ನೇಹಿತರೊಡನೆ ಒಂದು ನಂಟನ್ನು ಕಾದಿರಿಕೊಳ್ಳಲು ನಾನು ಸಹಾಯವಾಗಿದ್ದೀನಿ . ಸಿಟ್ಟಿನಿಂದ ಒಂದೊಂದು ಸಾರಿ ನನ್ನನ್ನು ತಳ್ಳಿದ್ದಾನೆ ಆದರೂ ಸಹಿಸಿಕೊಂಡಿದ್ದೆ . ಆದರೆ ಈಗ ಬಂದಿರುವ ಹೊಸಬಳನ್ನು ತಪ್ಪಿಯೂ ಕೈ ಜಾರಲು ಬಿಡುವುದಿಲ್ಲ .ಕಾರಣ ಅವಳು ಬಲು ನಾಜೂಕಂತೆ .
ನನ್ನ ಕಣ್ಣೀರು ನನ್ನೆಜಮಾನನಿಗೆ ಕಾಣುತ್ತಿಲ್ಲ . ಅವಳ ನಗುವಷ್ಟೇ ಕಾಣುತ್ತಿದೆ .ನಾನು ಸಹಾಯ ಮಾಡಿದ್ದೆಲ್ಲ , ನನ್ನ ನೆನಪುಗಳೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿ ಹೋಯಿತು . ತುಂಬಾ ನೋವಾಗುತ್ತಿದೆ . ಪ್ರೀತಿ ಇಂದ ಮನೆಗೆ ಕರೆತಂದ ನನ್ನ ಯಜಮಾನನಿಗೆ ನಾನು ಬೇಡ ಎಂದರೆ ನಾನಿನ್ನು ಯಾರಿಗೆ ಬೇಕು ಹೇಳಿ ? ಯಜಮಾನ ಇನ್ನು ನನ್ನ ಇಟ್ಟುಕೊಳ್ಳುವುದಿಲ್ಲ .ತಪ್ಪು ನನ್ನದೇನು ಇಲ್ಲ .ತಪ್ಪು ಯಾರದ್ದು ಎಂದು ಹೇಳಲಾಗುತ್ತಿಲ್ಲ . ನನ್ನೆದುರೇ ನನ್ನ ಜಾಗವನ್ನು ಆವರಿಸಿದ ಅವಳು ಅದೃಷ್ಟವಂತೆಯೋ , ಅಥವಾ ನನ್ನ ಸ್ಥಾನವನ್ನು ಅವಳಿಗೆ ಬಿಟ್ಟುಕೊಟ್ಟ ನಾನು ಬುದ್ದಿಗೇಡಿಯೋ ನಿರ್ಧರಿಸಲು ಆಗುತ್ತಿಲ್ಲ . ಕಸದ ತೊಟ್ಟಿಯ ಪಾಲಾಗುವ ಭಯದಿಂದ ಬದುಕುತ್ತಿರುವ , ಯಜಮಾನನ ಹಳೆಯ ಮೊಬೈಲ್ .

(ಮನೆಯಜಮಾನ ಹೊಸ ಮೊಬೈಲ್ ಕೊಂಡು ತಂದಿರುವಾಗ ಹಳೇ ಮೊಬೈಲ್ ಏನು ಯೋಚಿಸಿತು ಎನ್ನುವ ಬಗ್ಗೆ ಒಂದು ಕಲ್ಪನೆ ಹೊಟ್ಟೆ ಹಸಿವು = ಚಾರ್ಜ್ ಕಡಿಮೆ ಇರುವುದು..
ರೇಶಿಮೆ ಅಂಗಿ=ಮೊಬೈಲ್ ಕವರ್
ಅವಳು = ಹೊಸ ಸ್ಲಿಮ್ ಮೊಬೈಲ್ )

ಶನಿವಾರ, ನವೆಂಬರ್ 28, 2009

ಆ ಪುಟ್ಟ ಕಿಟಿಕಿಯಾಚೆ.....

ಪುಟ್ಟ ಕಿಟಕಿಯಲ್ಲಿ , ಕೀಬೋರ್ಡ್ನಿಂದ ಅಕ್ಷರಗಳನ್ನು ಕಟ್ಟುವಾಗ ಕಣ್ಣ ಪರದೆಗೆ ಕಾಣದೆ ಆಚೆಯಿಂದ ಬರುತ್ತಿದ್ದ ಪ್ರತಿಯೊಂದು ಪ್ರಶ್ನೆಗಳಿಗೂ ಪ್ರತಿಕ್ರಿಯಿಸುತ್ತಿರುವಾಗ , ನಿನ್ನ ಎಲ್ಲ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಾಗ ., ನಿನ್ನ ಬಗೆಗೆ ಸಾವಿರ ಕನಸಿನ ಮಹಲುಗಳನ್ನು ಕಟ್ಟುವಾಗ , ನಿನ್ನ ಮೋಹ ಪಾಶದಲ್ಲಿ ಬೀಳುವಾಗ ,ನಿನ್ನ ಆಕೃತಿಯನ್ನು ಮನದಲ್ಲೇ ಚಿತ್ರಿಸುತ್ತಿರುವಾಗ , ಒಂಟಿಯಾಗಿದ್ದಾಗ ನಿನ್ನ ಬಗ್ಗೆಯೇ ಯೋಚಿಸುವಾಗ , ಗೆಳತಿಯಾರಾದರು ಗಂಡನ ಬಗೆಗೆ ಮಾತನಾಡುವಾಗ ನಿನ್ನ ನೆನೆಸಿಕೊಂಡು ನಾಚಿಕೊಳ್ಳುವಾಗ ,ಇಂಟರ್ನೆಟ್ ಗೆ ಹೋಗಿ ಘಂಟೆಗಟ್ಟಲೆ ಕುಳಿತು ಹಣ ಕೊಡುವಾಗ ,ಕನಸುಗಳಲ್ಲಿ ಬರೀ ನಿನ್ನನ್ನೇ ಕಾಣುವಾಗ , ಒಂದೊಮ್ಮೆ ಊಟ ತಿಂಡಿ ಬಿಟ್ಟು ನಿನ್ನೊಂದಿಗೆ ಚಾಟ್ ಗೆ ಇಳಿಯುವಾಗ , ಎಲ್ಲ ಹುಡುಗರಲ್ಲೂ ನಿನ್ನ ಬಿಂಬವನ್ನೇ ಕಾಣುತ್ತಿದ್ದಾಗ , ನಿನ್ನನ್ನು ನೋಡಿದಾಗ ಯಾವುದೋ ನಿಧಿ ಸಿಕ್ಕಂತೆ ಭಾಸವಾದಾಗ ,ಜೀವನದ ಅತೀ ದೊಡ್ಡ ಸಂತೋಷದ ಕ್ಷಣ ಇದುವೇ ಎಂದು ತಿಳಿದುಕೊಳ್ಳುವಾಗ , ಎಲ್ಲರೆದುರು ನನಗೂ ಒಬ್ಬ ಗೆಳೆಯ ಇದ್ದಾನೆ ಎಂದು ಹೆಮ್ಮೆ ಇಂದ ಬೀಗುವಾಗ , ಮನಸಿನ ಮಾತುಗಳನ್ನು ನಿನ್ನ ಹತ್ತಿರ ಹಂಚಿಕೊಳ್ಳುವಾಗ ,ಒಂಟಿಯಾಗಿ ದೇವಸ್ಥಾನಕ್ಕೆ ಹೋಗುವಾಗ ಮುಂದಿನ ಸಾರಿ ನನ್ನ ಜೊತೆ ನೀನಿರುತ್ತೀಯ ಎಂದು ಕಲ್ಪಿಸಿಕೊಳ್ಳುವಾಗ ,ಹೀಗೆ break ಇಲ್ಲದೆ ಏನೇನೋ ತಿಳಿದುಕೊಳ್ಳುವಾಗ , ಎಲ್ಲೂ ಒಂದು ಕ್ಷಣವೂ ನಾನು ಸೋಲಲು ದಾರಿ ಮಾಡಿಕೊಳ್ಳುತ್ತಿದ್ದೇನೆ ಎಂದು ಗೊತ್ತೇ ಆಗಲಿಲ್ಲವಲ್ಲ!!! ನನಗೆ ನಾನೇ ಗುಂಡಿ ತೋಡಿಕೊಳ್ಳುತ್ತಿದ್ದೇನೆ ಎನಿಸಲಿಲ್ಲ .

ಅದೇನು ಮೋಡಿ ಇದೆಯೋ ನಿನ್ನ ಕೈ ಬೆರಳುಗಳಲ್ಲಿ , ನೀ ಮೂಡಿಸುವ ಅಕ್ಷರಗಳಲ್ಲಿ , ನೀ ಕೊಡುವ ಪ್ರತಿಕ್ರಿಯೆಗಳ ರೀತಿಯಲ್ಲಿ ಪುಟ್ಟ ಕಿಟಿಕಿಯಾಚೆ ಅದೇನು ಅಂಥ ಸೆಳತವಿತ್ತೋ ನಾಕಾಣೆ ಮೋಡಿಗೆ ಬೆರಗಾದವರಲ್ಲಿ ನಾನೂ ಒಬ್ಬಳ ? ಅಥವಾ ನಾನೇ ಒಬ್ಬಳ ?
ಅನಿರೀಕ್ಷಿತವಾಗೆ ಬರುವುದು ಪ್ರೀತಿ

ದಡ್ಡಿ ,ದಡ್ಡಿ , idiot ಎಂದು ನೀನು ಬೈಯ್ಯುವಾಗ ಸುಮ್ಮನೆ ತಮಾಷೆಗೆಂದು ತಿಳಿದುಕೊಂಡಿದ್ದು ನನ್ನ ತಪ್ಪೆಂದು ಅರಿವಾಗಿದೆ
ಪುಟ್ಟ ಕಿಟಕಿಯಲ್ಲಿ ನೀ ಮೂಡಿಸುತ್ತಿದ್ದ ಒಂದೊಂದು ಅಕ್ಷರಗಳಿಗೆ ಗಂಟೆಗಟ್ಟಲೆ ಕಾದು ಸುಸ್ತಾಗಿ , ನಿನ್ನಿಂದ ಕಡೆ ಪಕ್ಷ ಒಂದು bye ಕೂಡ ಕೇಳದೆ ಬೇಸರಿಸಿದ ದಿನಗಳು ಅದೆಷ್ಟೋ ?ನೀ ಮೂಡಿಸಿದ ಪ್ರತಿಯೊಂದು ಅಕ್ಷರಗಳನ್ನು ಜೋಪಾನವಾಗಿಟ್ಟುಕೊಂಡು ಪದೇ ಪದೇ ಅದನ್ನ ನೋಡಿ ಸಂತೋಷ ಪಟ್ಟಿದ್ದು , ಒಬ್ಬಳೇ ಇದ್ದಾಗ ನಿನ್ನ ನೆನೆಸಿಕೊಂಡ ದಿನಗಳು ಅದೆಷ್ಟೋ ? ಹುಟ್ಟಿದ ದಿನದಂದು ನಿನ್ನ ಒಂದು ಶುಭಾಶಯವೂ ಸಿಗದೇ ಅತ್ತ ಕಣ್ಣೀರು ಅದೆಷ್ಟೋ ?ಆದರೂ ನಿನ್ನ ನಗುವನ್ನು ಬಯಸಿದೆ. ನಿನ್ನೊಂದಿಗೆ ಮಾತಾಡಲು ,ನಿನ್ನ ಧ್ವನಿ ಕೇಳಲು ಗೆಳತಿಯರನ್ನು, ಗೆಳೆಯರನ್ನು ದೂರಮಾಡಿಕೊಂಡ ,ದೂರವಿಟ್ಟ ದಿನಗಳು ಅದೆಷ್ಟೋ ?ನೀನು ಬರಲಿಲ್ಲ ಎಂದು ನನ್ನಷ್ಟಕ್ಕೆ ನಾನೇ ,ಯಾರಿಗೂ ಹೇಳೋಕಾಗದೆ , ಬಿಡುವುದ್ದಕ್ಕೂ ಆಗದೆ ಕಣ್ಣೀರಾದ ದಿನಗಳು ಅದೆಷ್ಟೋ ….

ಇಷ್ಟಾದರೂ ಏನೂ ಆಗದಿರುವ ಹಾಗೆ ಸಂತೋಷದಿಂದಿರುವ ನೀನೇ ಬುದ್ದಿವಂತ ಕಣೋ..
ನಾನು ದಡ್ಡಿ ಅಲ್ಲದೆ ಇನ್ನೇನು ? ನೀನೇ ಬುದ್ದಿವಂತ ಗೆಳೆಯ ತಕರಾರಿಲ್ಲದೆ ಒಪ್ಪಿಕೊಳ್ಳುತ್ತೇನೆ …....
ಕಿಟಕಿಯಾಚೆ ಇದ್ದ ಬೆರಳುಗಳಿಂದ ಮೂಡಿದ ಅಕ್ಷರಗಳನ್ನಷ್ಟೇ ನನ್ನ ಪಾಲಿಗೆ ಬಿಟ್ಟು , ಹೊರಟು ಹೋದೆಯಲ್ಲ ಗೆಳೆಯ ? ನಿನ್ನ ಹಿಂದೆ ಹಿಂದೆ ನಾ ಬರಬೇಕು ಎಂದಿದ್ದರೆ ನೀ ಹೇಳಬಹುದಿತ್ತು ನಾನೂ ಸಂತಸದಿಂದ ಬರುತ್ತಿದ್ದೆ ....ಆದರೆ ನೀನೇಕೆ ಹಾಗೆ ಮಾಡಲಿಲ್ಲ ??. ತೆರೆದ ಪುಸ್ತಕದ ಹಾಗೆ ನನ್ನ ಬದುಕಿನ ಪ್ರತಿಯೊಂದು ಪುಟಗಳನ್ನು ನಿನ್ನ ಮುಂದೆ ಬಿಚ್ಚಿಡಬೇಕು ಎಂಬ ಆಸೆಗೆ ಕೊಳ್ಳಿ ಇಟ್ಟು ಏಕೆ ಹೋದೆ ?ನಿನಗೆ ಏನೆಂದು ಹೇಳಬೇಕೋ ತಿಳಿಯುತ್ತಿಲ್ಲಏನೂ ಹೇಳದೆ ಇರುವುದೇ ಒಳ್ಳೆಯದ ??? ಗೊತ್ತಿಲ್ಲ ...


[’ಸಖಿ’ ಮ್ಯಾಗಜೀನ್ ನಲ್ಲಿ ಪ್ರಕಟಿತ]

ಸೋಮವಾರ, ನವೆಂಬರ್ 09, 2009

ಒಂದು ಖುಷಿ ವಿಚಾರ....


ಹೌದು , ನಿಮಗೆಲ್ಲರಿಗೂ ಒಂದು ಧನ್ಯವಾದ ಹೇಳುವ ಕಾಲ ಬಂದಿದೆ....

ಒಂದು ಖುಷಿ ವಿಚಾರ ಹಂಚಿಕೊಳ್ಳುವುದಿತ್ತು ....

ಇವತ್ತು ತುಂಬಾ ಸಂತೋಷವಾಗುತ್ತಿದೆ...
ಹ್ಮಂ,,, ನನ್ನ ಬ್ಲಾಗನ್ನು ಶುರು ಮಾಡಿ ಇವತ್ತಿಗೆ ಒಂದು ವರುಷವಾಯಿತು....
ಎರಡನೇ ವರ್ಷದ ಕನಸಿನೊಂದಿಗೆ ಮುನ್ನಡೆಯುತ್ತಿದೆ .....

ನಿಜ ಹೇಳಬೇಕೆಂದರೆ ನನಗೆ ತುಂಬಾ ಚೆನ್ನಾಗಿ ಬರೆಯಲು ಬರುವುದಿಲ್ಲ. ಸುಮ್ನೆ ಹಾಗೇ ನಂದೂ ಅಂತ ಒಂದು ಬ್ಲಾಗ್ ಇರಲಿ ಅಂತ ಶುರು ಮಾಡಿದೆ. ಆದರೆ ಅದರಿಂದ ನನಗೆ ಇಷ್ಟು ಸಂತೋಷ , ತೃಪ್ತಿ, ಪ್ರೋತ್ಸಾಹ ಇವೆಲ್ಲ ಸಿಗುತ್ತದೆ ಎಂದು ಎಂದೂ ನಿರೀಕ್ಷಿಸಿರಲಿಲ್ಲ ......

ಈ ಬ್ಲಾಗನ್ನು ಶುರು ಮಾಡಿದಾಗ , ಸುಮಾರು 4-5 ತಿಂಗಳ ಕಾಲದವರೆಗೆ ನನಗಿದ್ದುದ್ದು 3 ರೇ ಹಿಂಬಾಲಕರು...
ಬ್ಲಾಗ್ ಪ್ರಪಂಚದ ಬಗ್ಗೆ ಏನೂ ತಿಳಿದಿರಲಿಲ್ಲ .... ನಾನು ಎಷ್ಟೇ ಬರೆದರೂ ಒಂದೂ ಕಾಮೆಂಟ್ ಕೂಡ ಬರುತ್ತಿರಲಿಲ್ಲ...
ಆಮೇಲೆ ಇದರ ಬಗ್ಗೆ ತಿಳಿದುಕೊಂಡು ಸ್ವಲ್ಪ ಜಾಸ್ತಿ ಗಮನ ಹರಿಸತೊಡಗಿದೆ ......

ನೋಡ ನೋಡುತ್ತಿದ್ದಂತೆ ನಿಧಾನಕ್ಕೆ ಸುಧಾರಿಸುತ್ತಾ ಮುಂದುವರೆದು ಇಲ್ಲಿವರೆಗೂ ಬಂದು ತಲುಪಿದೆ ..

ನನ್ನ ಕೆಲಸದಿಂದ ಬಿಡುವು ಸಿಕ್ಕಾಗ, ಮನಸಿನ ಮಾತುಗಳನ್ನು ಹೊರಹಾಕಬೇಕು ಎನಿಸಿದಾಗ ಕಣ್ಣಿಗೆ ಕಾಣುವುದು ಈ ಬ್ಲೋಗೆ ....
ಆದರೆ ಇದೆಲ್ಲ ನಿಮ್ಮೆಲ್ಲರ ಪ್ರೋತ್ಸಾಹ ಇಲ್ಲದಿದ್ದರೆ ಖಂಡಿತ ಆಗುತ್ತಿರಲಿಲ್ಲ...
ಚಿಕ್ಕಂದಿನಿಂದಲೂ ಚಿಕ್ಕ -ಚಿಕ್ಕ ಕಥೆ ಕವನಗಳು ಬರೆಯುವುದು ನನ್ನ ಅಭ್ಯಾಸ ...
ಹೀಗೆ ಬರೆಯುತ್ತೇನೆ ಎಂದು ತಿಳಿದಿದಿದ್ದು ನನ್ನ ಅಮ್ಮ ಅಪ್ಪ ,ತಂಗಿಗೆ ಅಷ್ಟೆ ...

ಆದರೆ ಈ ಬ್ಲಾಗಿಂದ ಅದು ಎಲ್ಲರಿಗೂ ತಿಳಿಯುವ ಹಾಗಾಯಿತು...ಹಾಗೇ ನನ್ನ ಬರವಣಿಗೆಯನ್ನು ಇನ್ನೂ ಚೆನ್ನಾಗಿ ಮಾಡಿಕೊಳ್ಳಲು ಅವಕಾಶವಾಯಿತು ...
ನನ್ನ ಬರಹಗಳು ಹೇಗೇ ಇದ್ದರೂ ಅದನ್ನು ಸಹಿಸಿಕೊಂಡು ಓದಿ ಕಡೆಗೊಂದು ಕಾಮೆಂಟ್ ಕೊಡುವ ಓದುಗರಿಗೆ ನನ್ನ ಅನಂತ ಧನ್ಯವಾದಗಳು..... ನನ್ನ ಬ್ಲಾಗನ್ನು ಫಾಲೋ ಮಾಡುತ್ತಿರುವವರಿಗೆ , ಇದುವರೆಗೆ ಕಾಮೆಂಟ್ ಹಾಕಿ ಪ್ರೋತ್ಸಾಹಿಸಿದೆ ಎಲ್ಲರಿಗೂ ನನ್ನ ಹೃದಯ ಪೂರ್ವಕ ಧನ್ಯವಾಗಳು ......

ಸಾಹಿತ್ಯ ಪ್ರಪಂಚದಲ್ಲಿ ನಾನಿನ್ನೂ ಅಂಬೆ ಗಾಲಿಡುತ್ತಿರುವ ಚಿಕ್ಕ ಮಗು...
ಯಾರಿಗೂ ನೋವಾಗದಂತೆ , ನನ್ನ ಭಾವನೆಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳಬೇಕು ಎನ್ನುವುದಷ್ಟೇ ನನ್ನ ಆಸೆ , ಅಭಿಲಾಷೆ ..

ಹಾಗೆ ಇನ್ನೊಂದು ಮಾತು,
ನನ್ನಿಂದ ನಿಮಗೆ ಎಲ್ಲಾದರೂ, ಯಾವುದಾದರು ಕಾರಣಕ್ಕೆ ನೋವಾಗಿದ್ದರೆ , ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ ಬಿಡಿ ...
ಒಂದು ವೇಳೆ ನಾನು ನಿಮ್ಮ ಬ್ಲಾಗಿಗೆ ರೆಗ್ಯುಲರ್ ಆಗಿ ಕಾಮೆಂಟ್ ಹಾಕುತ್ತಿಲ್ಲ ಎಂದರೆ ದಯವಿಟ್ಟು ನನ್ನ ಬೈದುಕೊಳ್ಳಬೇಡಿ.. ...
ನಿಮ್ಮ ಬರಹಗಳನ್ನು ನಾನು ಓದುತ್ತಿರುತ್ತೇನೆ, ಆದರೆ ಒಂದು ವೇಳೆ ಕಾಮೆಂಟ್ ಹಾಕುವುದನ್ನು ಮರೆತರೆ ಕ್ಷಮಿಸಿ ಬಿಡಿ......
ನಿಮ್ಮ ಪ್ರೋತ್ಸಾಹ , ಪ್ರೀತಿ, ಎಂದೂ ಹೀಗೆ ಇರಲಿ ಎಂದು ಆಶಿಸುತ್ತಾ,

ದಿವ್ಯಾ ...

ಭಾನುವಾರ, ನವೆಂಬರ್ 08, 2009

ಕನಸು ಈಡೇರಿದಂತೆಯೇ....


ನನಗೆ ಚಿಕ್ಕಂದಿನಿಂದಲೂ ಒಂದು ಕನಸಿತ್ತು ... ಅದೇನೆಂದರೆ ನಾನು software engineer ಆಗ ಬೇಕೆಂದು ...
ಯಾಕೋ ಗೊತ್ತಿಲ್ಲ ...ಯಾವಾಗಲೂ ಹಾಗೆ ಅನಿಸುತಿತ್ತು...
software engineer ಆದರೆ ಚೆನ್ನಾಗಿ ಸಂಪಾದನೆ ಮಾಡಬಹುದು, ಕಾರು, ಮನೆ ಎಲ್ಲಾ ಕೊಂಡುಕೊಳ್ಳಬಹುದು...
ಎಲ್ಲದಕ್ಕಿಂತ ಹೆಚ್ಚಾಗಿ ಬೇಕಾದಷ್ಟು chats ತಿನ್ನಬಹುದು...ಇದು ಯಾಕೆಂದರೆ ನನ್ನ ಅಮ್ಮ ನನಗೆ chats ಜಾಸ್ತಿ ತಿನ್ನಲು ಬಿಡುತ್ತಿರಲಿಲ್ಲ.
ತುಂಬಾ ತಿಂದರೆ ಆರೋಗ್ಯ ಕೆಡುತ್ತದೆ ಎಂದು ಅದನ್ನು ಆದಷ್ಟು ನನ್ನಿಂದ ದೂರವೇ ಇಡುತ್ತಿದ್ದರು ....ಅದು ನನ್ನ ಅಮ್ಮನ ಕಾಳಜಿ ...
ಆದರೆ ನನಗಾಗ ಅದು ಕಾಳಜಿ ಎಂದು ತಿಳಿದುಕೊಳ್ಳುವಷ್ಟು ಬುದ್ದಿ ಇರಲಿಲ್ಲ...
ನಾನು ಯಾವಾಗಲೂ ಒಳ್ಳೇ ಅಂಖಗಳನ್ನು ತೆಗೆದು ಪಾಸ್ ಆಗುತ್ತಿದ್ದೆ ...
ಹೀಗಿರುವಾಗ ನನ್ನ engineer ಆಗುವ ಕನಸು ದಿನೇ ದಿನೇ ಹೆಚ್ಚಾಗುತ್ತಲೇ ಹೋಯಿತು..
ದ್ವಿತೀಯ PUC ನಲ್ಲೂ ಒಳ್ಳೆ ಅಂಖಗಳೇ ಬಂದಿದ್ದವು...ಆದರೆ ನನ್ನ ಕನಸಿನಂತೆ ನನಗೆ ಎಂಜಿನಿಯರಿಂಗ್ ಮಾಡಲು ಆಗಲಿಲ್ಲ ...
ಎನೋ ಅಡಚಣೆಗಳು ಬಂದು ನನ್ನ ಕನಸುಗಳಿಗೆ ಕಲ್ಲು ಬಿದ್ದಿತ್ತು (ಇದು ಆ ಸಮಯ ಅನಿಸಿದ್ದು) ..
ನಾನು B.Sc ಗೆ ಸೇರಿಕೊಂಡೆ..ಮನೆ ಇಂದ ತುಂಬಾ ಹತ್ತಿರದಲ್ಲಿತ್ತು ಕಾಲೇಜ್ ... ಮೊದಲು ನಾನು ಮುಂದೆ ಓದುವುದಿಲ್ಲ ಎಂದು ತುಂಬಾ ಹಠ ಮಾಡಿದೆ..ಆಮೇಲೆ ಅಮ್ಮ ಹೇಳಿದ ಮೇಲೆ ಒಪ್ಪಿ ಕೊಂಡು ಸೇರಿಕೊಂಡೆ
ನಾನು PU ಇರುವಾಗ ಒಂದು trend ಇತ್ತು ..ಅದೇನೆಂದರೆ ಬುದ್ದಿವಂತರು ಎಂಜಿನಿಯರಿಂಗ್ , ಮೆಡಿಕಲ್ಗೆ ಹೋಗುತ್ತಾರೆ ...
ಎಲ್ಲೂ ಸೀಟ್ ಸಿಗಲಿಲ್ಲ ಎಂದವರು ಮಾತ್ರ ಡಿಗ್ರಿ ಮಾಡುತ್ತಾರೆ ಎಂದು..(ಈಗ trend change ಆಗಿರಬಹುದು)
ನನ್ನ ಕಣ್ಣ ಮುಂದೆ, ನನಗಿಂತ ಕಡಿಮೆ ಅಂಖ ತೆಗೆದವರು ಎಂಜಿನಿಯರಿಂಗ್ ಗೆ ಹೋಗುತ್ತಿದ್ದರೆ ನನಗೆ ಒಳಗೊಳಗೇ ಬೇಸರವಾಗುತ್ತಿತ್ತು...
B.Sc ಕ್ಲಾಸ್ ನಲ್ಲೂ ಯಾಕೋ ಮುಜುಗರ..ಏಕೆಂದರೆ ಅಲ್ಲಿ ನನ್ನ class mates ಎಲ್ಲಾ ನನಗಿಂತ ಕಡಿಮ ಅಂಖ ತೆಗೆದವರು..
just pass ಆದವರು ... ನನಗೇಕೋ ನಾನು ಇಲ್ಲಿ ಸಲ್ಲುವುದಿಲ್ಲ ಎಂದು ತುಂಬಾ ಅನಿಸುತಿತ್ತು...ಆದರೂ ಹೇಗೋ ಹೊಂದಿಕೊಂಡು ಹೋದೆ..
'ಹಾಳೂರಲ್ಲಿ ಇದ್ದವನೇ ಗೌಡ' ಎನ್ನುವ ತರಹ ನನಗೆ ಎಲ್ಲಾ ಪರೀಕ್ಷೆಗಳಲ್ಲಿ ಒಳ್ಳೆ ಅಂಖ ಬರುತಿತ್ತು ..ಏಕೆಂದರೆ ಪ್ರತಿಸ್ಪರ್ಧಿ ಇರಲಿಲ್ಲ ನೋಡಿ..
(ಹಾಗೆಂದು ನಾನು ಇಲ್ಲಿ ಡಿಗ್ರಿ ಬಗ್ಗೆ ಕೀಳಾಗಿ ಹೇಳುತ್ತಿಲ್ಲ.. ನಾನು pure science ಮಾಡಿದ್ದರ ಬಗ್ಗೆ ಹೆಮ್ಮೆ ಇದೆ...ನನಗೆ ಆಗ ಅನಿಸುತಿದ್ದನ್ನು ಹೇಳುತ್ತಿದ್ದೀನಿ ಅಷ್ಟೆ ).. ಡಿಗ್ರಿ ಮುಗಿಯಲು ಇನ್ನೇನು 3 ತಿಂಗಳುಗಳಿದ್ದವು....
ಆಗಲೇ ನನಗೆ 3 ಕಂಪೆನಿಗಳ offer letter ಕೈಯಲ್ಲಿತ್ತು...ಕೆಲಸ ಸಿಕ್ಕಾಗಿತ್ತು ಆಯಾಸವಿಲ್ಲದೆ...
ಅದೇ ನಾನು ಎಂಜಿನಿಯರಿಂಗ್ ಮಾಡಿದ್ದರೂ ಸಿಗುತ್ತಿತ್ತೇ?? ಗೊತ್ತಿಲ್ಲ...
ಅದೇ ನನ್ನ PU ಗೆಳೆಯರು ಎಂಜಿನಿಯರಿಂಗ್ ಮಾಡಿ ಈಗ jobless....
ಎಲ್ಲಿ ನೋಡಿದರು openings ಇಲ್ಲ ..recession..ಕೆಲಸ ಸಿಕ್ಕಿದವರಿಗೆ ಕೈಗೆ offer letter ಬರಿತ್ತಿಲ್ಲ ...
2-3 ವರ್ಷ ಬಾಂಡ್ ಕೊಡಬೇಕೆಂದು ಕೇಳುವ ಕಂಪನಿಗಳು..ಇಷ್ಟೆಲ್ಲದರ ಮದ್ಯೆ ಕೆಲಸ ಸಿಕ್ಕಿದರೂ work satisfaction ಅನ್ನುವುದು ದೂರದ ಮಾತು...
ಇನ್ನು BPO sector ಟ್ರೈ ಮಾಡೋಣ ಎಂದರೆ over qualified ಎಂಬ ಪಟ್ಟ ಕಟ್ಟಿ resume ನೋಡಿದ ಕ್ಷಣವೇ ಮನೆಗೆ ಕಳಿಸುತ್ತಾರೆ... ಒಂದು ವೇಳೆ ಸಿಕ್ಕರೂ ಇವರ ego ಬಿಡಬೇಕಲ್ಲ ಇವರಿಗೆ ಹೋಗಲು..
ಎಂಜಿನಿಯರಿಂಗ್ ಮಾಡಿ BPO ಹೋಗಬೇಕ ಎನ್ನೋ ಧೋರಣೆ ಕೆಲವರದು..
(ನಾನು ಹೇಳುತ್ತಿರುವುದು ನಾನು ಡಿಗ್ರಿ ಓದುವಾಗ ಎಂಜಿನಿಯರಿಂಗ್ ಓದಿದವರಿಗೆ ಮಾತ್ರ)
ಇದನ್ನೆಲ್ಲಾ ನೋಡಿದಾಗ ಅನಿಸುತ್ತದೆ ..ಆಗುವುದೆಲ್ಲ ಒಳ್ಳೇದಕ್ಕೆ ಎಂಬ ಮಾತು ಎಷ್ಟು ಸತ್ಯ ಎಂದು..
ಒಂದು ವೇಳೆ ನಾನು ಎಂಜಿನಿಯರಿಂಗ್ ಮಾಡಿದ್ದರೆ ಏನಾಗುತ್ತಿತ್ತೋ ಅದು ಗೊತ್ತಿಲ್ಲ ..ಆದರೆ ಎಂಜಿನಿಯರಿಂಗ್ ಮಾಡಿದವರಿಗಿಂತ ಯಾವ ರೀತಿಯಲ್ಲೂ ನಾನು ಕಡಿಮೆ ಇಲ್ಲವಲ್ಲ ಎಂಬ ಸಮಾಧಾನ ಎಲ್ಲೋ ಒಂದು ಕಡೆ ಇದ್ದೇ ಇದೆ. only difference is I dont have that certificate ಅಷ್ಟೆ....
ಕನಸು ನನಸಾಗಲಿಲ್ಲವಲ್ಲ ಎಂದು ಅನಿಸುತ್ತಿದ್ದರೂ ವಾಸ್ತವವೇ ಹಿತವಾಗಿದೆ ಎಂದು ಅನಿಸ ತೊಡಗಿದೆ ...
ಹಾಗೆ ನನ್ನ chats ತಿನ್ನುವ ಕಾರ್ಯ ಬರವಿಲ್ಲದೆ ಸಾಗುತ್ತಲೇ ಇದೆ... ನನ್ನ ಕನಸು ಈಡೇರಿದಂತೆಯೇ ಅಲ್ಲವ??

ಮಂಗಳವಾರ, ನವೆಂಬರ್ 03, 2009

ಕಾಲ್ಪನಿಕ ಗೆಳೆಯನಿಗೆ ಕಾಲ್ಪನಿಕ ಪತ್ರ....

ನನ್ನ ಮುದ್ದು ಕೋತಿ ,

ನಾನು ನಿನಗೆ ಧನ್ಯವಾದ ಹೇಳಬೇಕಿತ್ತು . ನಿನಗೆ ಗೊತ್ತಿಲ್ಲ ಕಣೋ ನೀನು ನನಗೆ ಅದೆಷ್ಟು ಸ್ಫೂರ್ತಿ ತುಂಬುತ್ತೀಯ ಎಂದು...
ನನಗೆ ನಿನ್ನ ಬಗ್ಗೆ ಹೆಮ್ಮೆ ಎನಿಸುತ್ತಿದೆ . ನನಗೆ ಗೊತ್ತು ನೀನೂ ಎಷ್ಟೋ ಕಷ್ಟಗಳನ್ನು ಅನುಭವಿಸಿದ್ದೀಯ ಎಂದು ..ಆದರೂ
ನನಗಾಗಿ ನಗುತ್ತಾ ನೀನು ಮಾಡುತ್ತಿರುವ ಕೆಲಸ ತುಂಬ ಖುಷಿ ಕೊಡುವಂತದ್ದು ..
ನಿಜ ಹೇಳಬೇಕೆಂದರೆ ನಿನ್ನ ಮೀಟ್ ಮಾಡಿದ ಮೊದಲ ದಿನವೇ ನನಗೆ ತಿಳಿದಿತ್ತು "
that you are a different person" ಅಂತ .
ಅದೆಷ್ಟು
ಪ್ರೌಡಿಮೆ ಇದೆ ನಿನ್ನ ಮಾತುಗಳಲ್ಲಿ , ನನ್ನ childish nature ತಿಳಿದುಕೊಂಡು ಸಣ್ಣ ಮಗುವನ್ನು treat ಮಾಡಿದ ಹಾಗೆ ಮಾಡುತ್ತೀಯ .....
ನಿನ್ನ ಹತ್ತಿರ ಸದಾ ಕಾಲ ಮಾತಾಡುತ್ತಿರುವ ಎಂದು ಅನಿಸುತ್ತದೆ ಗೆಳೆಯಏಕೆಂದರೆ ನಿನ್ನ ಹತ್ತಿರ ಮಾತಾಡುವುದೇ ಒಂದು ಹಿತ
ನನಗೆ
ನೀನು ನನ್ನ ಬಾಳ ಬೆಳಕಾಗಿದ್ದಿಯ ಗೆಳೆಯ ..
"U have helped me to see things in a better and brighter way"ಏಕೆಂದರೆ ಒಂದು ಕಾಲದಲ್ಲಿ ನಾನು ನನ್ನ ಹಲವಾರು ಭಯಗಳಿಂದ ಮುಳುಗಿ ಹೋಗಿದ್ದೆ ..
"
Completely insecured about love and hope". ನನಗನ್ನಿಸುತಿತ್ತು ಯಾರೂ ನನ್ನ ಅರ್ಥ ಮಾಡಿಕೊಳ್ಳುವುದಿಲ್ಲ ….ಅದು ಯಾರಿಗೂ ಬೇಡ ಕೂಡ ಎಂದು
ಆಗ ಬಂದಿದ್ದು ನೀನು
ಅದೇನೋ ನಿನ್ನ meet ಮಾಡುವ ಮೊದಲೇ ನನ್ನ ಮನದಲ್ಲಿ ಒಂದು
ಚಿತ್ರ , ಕಲ್ಪನೆ ಮೂಡಿತ್ತು
ನನ್ನ ಹುಡುಗ ಹೀಗೇ ಇರಬೇಕೆಂದು ..ಅದೆಲ್ಲ ಸಾಧ್ಯವಿಲ್ಲ ಎಂದೂ ತಿಳಿದಿತ್ತು ಆದರೆ ನಿನ್ನ ನೋಡಿದಾಗ ಸಾಧ್ಯವಿದೆ ಎಂಬ ನಂಬಿಕೆ
ಮೂಡಿದ್ದುಅದೇ ಕ್ಷಣ ನನಗೆ ತಿಳಿಯದಂತೆ ನಾನು ನಿನ್ನ ಪ್ರೀತಿಸತೊಡಗಿದ್ದೆ
ಅದು ನನಗಷ್ಟೇ ತಿಳಿದಿತ್ತುನನ್ನಷ್ಟಕ್ಕೇ ಸಂತಸ ಪಟ್ಟೆ
ಏನೋ
secured feeling ಇತ್ತು ಆಗ
ನಿನ್ನ ಕಂಡ ಕ್ಷಣದಿಂದ ನಾನೇನೋ ಒಂಟಿಯಲ್ಲ ಎಂಬ ಭಾವನೆ ನನಗೆ ಬಂದಿದೆ .

ಒಂದು ಕ್ಷಣ ಜೀವನದಲ್ಲಿ "
I felt so unloved and alone" don’t know why..ಸಂತೋಷವನ್ನು ಹುಡುಕುವ ಅವಿರತ ಪ್ರಯತ್ನ ಮಾಡುತ್ತಿದ್ದೆ ..
ನೋವನ್ನು ಹಂಚಿಕೊಳ್ಳುವಂಥ ನಂಬಿಕಸ್ತ ಗೆಳೆಯರೂ ಇರಲಿಲ್ಲ ..ಜೀವನ ಶೂನ್ಯ ಎನಿಸಿಬಿಟ್ಟಿತ್ತು
You made me laugh..
ನನ್ನ ದುಃಖಕ್ಕೆ ಪಲಾಯನವಾದವನ್ನು ಕಲಿಸಿದ್ದೆ ನೀನುನೀನಿಲ್ಲದಿದ್ದರೆ ಅದು ಸಾದ್ಯವೇ ಇರಲಿಲ್ಲ ಎಂದು ನಿನಗೂ ತಿಳಿದಿದೆ ಅಲ್ಲವ
ಗೆಳೆಯ ?...
ನಾನು ನಿನಗೆ ನನ್ನ ಜೊತೆ ಕಳೆದ ಸುಮಧುರ ಕ್ಷಣಗಳಿಗಾಗಿ ಧನ್ಯವಾದ ಹೇಳುತ್ತೇನೆ
ನನ್ನ ಮಾತನ್ನು ಆಲಿಸಿದಕ್ಕೆ , ನನ್ನ
problems ಗೆ (if not solution) suggestion ಕೊಟ್ಟಿದ್ದಕ್ಕೆನನಗೀಗ ಅನಿಸುತ್ತಿದೆ ದೇವರು ನನಗಾಗಿ ಕಳಿಸಿಕೊಟ್ಟ ದೇವತೆ ಏನೋ ನೀನು ಎಂದು ಏಕೆಂದರೆ ನನ್ನ ಮನಸಿನಲ್ಲಿರುವುದನ್ನು ಹೇಳದೆಯೇ ತಿಳಿದುಕೊಳ್ಳುತ್ತಿದ್ದೆ ನೀನು ….ಬರೀ ಬೇಸರ ತುಂಬಿಕೊಂಡಿದ್ದ ನನ್ನ ಜೀವನದಲ್ಲಿ ನೀನು ಬಂದು ನನ್ನ ಮುಖದಲ್ಲಿ ಒಂದು ನಗುವನ್ನು ಬರಿಸಿದ್ದಿಯ
ಬರೀ ನಿನ್ನ ಇರುವಿಕೆ ಇಂದಲೇ ನನಗೆ ಸಂತಸವಾಗುತಿತ್ತು
ನೀನೇನೂ ಹೇಳಬೇಡ ಗೆಳೆಯ ..ಬರೀ ನನ್ನ ಜೊತೆಯಲ್ಲಿ ಇರು ನೀನು ನನಗಷ್ಟೇ ಸಾಕು
ದಿನಾ ನಾನು ದೇವರಿಗೆ
thanks ಹೇಳುತ್ತೇನೆಒಳ್ಳೆ ಜನರನ್ನು ನನ್ನ ಜೀವನದಲ್ಲಿ ಕಳಿಸಿ ಕೊಟ್ಟಿದ್ದಕ್ಕೆಎಲ್ಲರೂ ನನಗೆ ಒಂದಿಲ್ಲೊಂದು ರೀತಿಯಲ್ಲಿ ಪ್ರಭಾವ ಬೀರಿದ್ದಾರೆ

ನನಗೆ ಗೊತ್ತು ಎಲ್ಲರೂ ಜೀವನದಲ್ಲಿ ಒಂದಿಲ್ಲೊಂದು ಕಾರಣಗಳಿಗೆ ಬರುತ್ತಾರೆ …..
ಕೆಲವರು ಕೊನೆಯವರೆಗೂ ಜೊತೆಯಲ್ಲಿದ್ದರೆ ಇನ್ನು ಕೆಲವರು ಮಧ್ಯದಲ್ಲೇ ಬಿಟ್ಟು ಹೋಗುತ್ತಾರೆ ..
ಅಂಥ ಒಳ್ಳೆಯವರನ್ನು ನಾನು ದೇವತೆಗಳೆಂದು ಕರೆಯಲಿಚ್ಚಿಸುತ್ತೇನೆ ......
ಅದರಲ್ಲಿ ನೀನೂ ಒಬ್ಬ ಗೆಳೆಯ …..ನಿನಗೂ ನನ್ನ
thanks..
ನೀನೂ ಯಾವಾಗಲು ನನ್ನ ಮನಸ್ಸಿನಲ್ಲಿ ಇರುತ್ತೀಯ ಗೆಳೆಯ ..

Love you always.