ಇದ್ದು ಬಿಡಬೇಕು ಸುಮ್ಮನೆ
ಕೆಲವೊಮ್ಮೆ, ಕಣ್ಣಿದ್ದೂ ಕುರುಡರಂತೆ,
ಬಾಯಿದ್ದೂ ಮೂಗರಂತೆ, ಕಿವಿ
ಇದ್ದೂ ಕಿವುಡರಂತೆ!
ಕೆಲವೊಮ್ಮೆ, ಕಣ್ಣಿದ್ದೂ ಕುರುಡರಂತೆ,
ಬಾಯಿದ್ದೂ ಮೂಗರಂತೆ, ಕಿವಿ
ಇದ್ದೂ ಕಿವುಡರಂತೆ!
ಒಪ್ಪಿಸಿಬಿಡಬೇಕು ಎಲ್ಲಾ
ನಿರ್ಣಯಗಳನ್ನು ಕಾಲನ
ಕೈಗೆ!
ಕುಡುಗಿ ಎಲ್ಲ ವ್ಯಂಗ್ಯ, ಕುಹಕ,
ಸುಮ್ಮನೆದ್ದು ಹೊರಟುಬಿಡಬೇಕು.
ನದಿಯ ದಡದಲ್ಲಿರುವ
ನೆರಳ ಕೊಡುವ ಮರಕ್ಕೆ,
ಕೊಡಲಿ ಪೆಟ್ಟು ಕೊಟ್ಟುರುಳಿಸಿ,
ಮನೆಕಟ್ಟಿ, ದುಡ್ಡು ಮಾಡುವ
ವ್ಯಾಪಾರಿ ನೀನು.
ನದಿಯಲ್ಲಿ ಉದುರಿಬಿದ್ದ,
ಚಿಗುರೆಲೆ ನಾನು.
ನನಗೆ ಗಮ್ಯದ ಚಿಂತೆಯಿಲ್ಲ,
ಪಯಣದ ಸವಿಯ
ಸವಿಯುವುದಷ್ಟೇ ಗೊತ್ತು,
ಅದು ನನಗಿಷ್ಟ ಕೂಡ.
ಬಿಡು, ನಿನ್ನ ಜೊತೆ
ನನಗೇನು ಮಾತು!
ಕಾಲನ ಕೈಗೆ
ನಿರ್ಣಯಗಳನ್ನು ಒಪ್ಪಿಸಿಯಾಗಿದೆ.
ಇದ್ದು ಬಿಡಬೇಕು ಸುಮ್ಮನೆ
ಕೆಲವೊಮ್ಮೆ, ಕಣ್ಣಿದ್ದೂ ಕುರುಡರಂತೆ,
ಬಾಯಿದ್ದೂ ಮೂಗರಂತೆ, ಕಿವಿ
ಇದ್ದೂ ಕಿವುಡರಂತೆ!
ನಿರ್ಣಯಗಳನ್ನು ಕಾಲನ
ಕೈಗೆ!
ಕುಡುಗಿ ಎಲ್ಲ ವ್ಯಂಗ್ಯ, ಕುಹಕ,
ಸುಮ್ಮನೆದ್ದು ಹೊರಟುಬಿಡಬೇಕು.
ನದಿಯ ದಡದಲ್ಲಿರುವ
ನೆರಳ ಕೊಡುವ ಮರಕ್ಕೆ,
ಕೊಡಲಿ ಪೆಟ್ಟು ಕೊಟ್ಟುರುಳಿಸಿ,
ಮನೆಕಟ್ಟಿ, ದುಡ್ಡು ಮಾಡುವ
ವ್ಯಾಪಾರಿ ನೀನು.
ನದಿಯಲ್ಲಿ ಉದುರಿಬಿದ್ದ,
ಚಿಗುರೆಲೆ ನಾನು.
ನನಗೆ ಗಮ್ಯದ ಚಿಂತೆಯಿಲ್ಲ,
ಪಯಣದ ಸವಿಯ
ಸವಿಯುವುದಷ್ಟೇ ಗೊತ್ತು,
ಅದು ನನಗಿಷ್ಟ ಕೂಡ.
ಬಿಡು, ನಿನ್ನ ಜೊತೆ
ನನಗೇನು ಮಾತು!
ಕಾಲನ ಕೈಗೆ
ನಿರ್ಣಯಗಳನ್ನು ಒಪ್ಪಿಸಿಯಾಗಿದೆ.
ಇದ್ದು ಬಿಡಬೇಕು ಸುಮ್ಮನೆ
ಕೆಲವೊಮ್ಮೆ, ಕಣ್ಣಿದ್ದೂ ಕುರುಡರಂತೆ,
ಬಾಯಿದ್ದೂ ಮೂಗರಂತೆ, ಕಿವಿ
ಇದ್ದೂ ಕಿವುಡರಂತೆ!
2 ಕಾಮೆಂಟ್ಗಳು:
ಕೇಳೋ ಕಿವಿಗಳು ದನಿಯ ಕೇಳುವುದನ್ನು ನಿಲ್ಲಿಸಿದ ಸಮಯದಲ್ಲಿ ಸುಮ್ಮನಿದ್ದುಬಿಡುವುದೇ ಲೇಸನಿಸುತ್ತೆ..
ಅರೆ ಎಂಥಾ ಚಂದದ ಸಾಲುಗಳು . ಎಫ್.ಬಿ. ಲಿ ಕ್ಯಾಂಡಿ ಕ್ರಶ್ ಓದ್ತಾ ಇಲ್ಲಿಗೆ ಬಂದ್ರೆ ಇದು ಸಿಕ್ತು. ಚಿಗುರೆಲೆಗೆ ಗಮ್ಯದ ಚಿಂತೆ ಇಲ್ಲ ..ದಡದವರಿಗೆ ಗಮ್ಯವೇ ಎಲ್ಲಾ ..
ಕಾಮೆಂಟ್ ಪೋಸ್ಟ್ ಮಾಡಿ