ಶುಕ್ರವಾರ, ಅಕ್ಟೋಬರ್ 14, 2011

ಹೆಸರಿನ ಹಂಗಿಲ್ಲದ್ದು - ೨

<1>

ಬೆಟ್ಟದ ತುದಿಯಲ್ಲಿ,
ಝುಳು-ಝುಳು ನೀರಿನ
ಸದ್ದಿನ ನಡುವೆ,
ಹಸಿರು ಹುಲ್ಲಿನ
ಹಾಸಿಗೆಯ ಮೇಲೆ,
ಎಂದಿನಂತೆ
ನನ್ನ ಕನಸಿನಲ್ಲಿ,
ನಿನ್ನೆ ,ನಾನೊಬ್ಬಳೇ
ಇರಲಿಲ್ಲ,
ಜೊತೆಯಲ್ಲಿ ಇದ್ದಿದ್ದು
ಯಾರೆಂಬ ಕುತೂಹಲವೂ
ಇಲ್ಲ ನನಗೀಗ,
ಹಾಗೆ ನನ್ನ ಕನಸಿನಲ್ಲಿ
ಬರುವ ಹಕ್ಕನ್ನು,
"ನಿನಗೆ" ಖುದ್ದಾಗಿ
ನಾನೇ ಕೊಟ್ಟಿರುವಾಗ
ಇನ್ನೆಲ್ಲಿಯ ಕುತೂಹಲ!


<2>

ಇವನು ಹೇಳುತ್ತಾನೆ
ಆತ ಬಹಳ
ಒಳ್ಳೆಯವನು ಎಂದು.
ನನಗೂ,
ಅತ್ತೆಗೂ ತಿಳಿದಿದೆ
ಅವ ಏನು ಎಂದು?
ಜಗತ್ತೇ ಒಳ್ಳೆಯದು
ಎಂದು ಹೇಳುವ
ಇವನಿಗೆ,
ಹೇಗೆ ತಿಳಿಸುವುದು?
ಬೆಳ್ಳಗಿರುವುದೆಲ್ಲ
ಯಾವಾಗಲೂ ಹಾಲೇ
ಆಗಬೇಕೆಂದಿಲ್ಲ ಎಂದು!

<3>

ನೆನಪಾಗುತ್ತಿದೆಯೇ
ಆ ದಿನಗಳು?
ಆ ಮಧುರ
ಮಾತುಗಳು?
ಆ ಪ್ರೀತಿಯ
ಕರೆಯೋಲೆಗಳು?
ಅವಳ ಕಣ್ಣೀರ
ಹನಿಗಳು?
ಅವಳು ನಿನಗಾಗಿ
ಕಾದು ನಶಿಸಿದ
ಘಳಿಗೆಗಳು?
ಎಷ್ಟೇ ನೆನಪಾದರೂ
ನೆನಪಿರಲಿ,
ಅವಳಿಂದು ಬೇರೆಯವರ
ಸೊತ್ತು,
ನಿನಗಿದು ಪಶ್ಚಾತಾಪದ
ಹೊತ್ತು!!

<4>

ಬುದ್ದಿವಂತ ಹೆಂಡತಿ
ಹೇಳಿದಂತೆ ಕೇಳಿಕೊಂಡು
ಸಂಸಾರ ಮಾಡುತ್ತಿದ್ದ
ಗಂಡನನ್ನು ಕಂಡು,
ಪಕ್ಕದ ಮನೆಯವನಿಗೆ ,
ತನ್ನ ಕಳ್ಳ ವ್ಯವಹಾರ
ಎನೂ ಅರಿಯದ,
ತನ್ನ ಪೆದ್ದು
ಹೆಂಡತಿಯ ಮೇಲೆ
ಅನುಕಂಪ ಹೆಚ್ಚಾಗಿ,
ಮುದ್ದು ಉಕ್ಕಿತಂತೆ!!

<5>

ಸುಮ್ಮನೆ ಹೋಗುತ್ತಿದ್ದೆ,
ನನ್ನಷ್ಟಕ್ಕೆ ನಾನು,
ಜೊತೆಯಲ್ಲಿ ಬಂದನೊಬ್ಬ
ಆಸಾಮಿ.
ಕನಸು ಹಂಚಿಕೋ ಎಂದ,
ಉತ್ಸಾಹಿತಳಾದ
ನಾನು ಹಂಚಿಕೊಂಡೆ,
ಹಂಚಿಕೊಂಡ
ನನ್ನ ಕನಸನ್ನು
ಅವ ಬಾಚಿಕೊಂಡು
ತನ್ನದಾಗಿಸಿಕೊಳ್ಳುವ
ಆತುರದಲ್ಲಿ
ಹೊರಟೇ ಹೋದ,
ತಿರುಗಿಯೂ ನೋಡದೆ

<6>

ಎಂದಿನಂತೆ ಅವರು,
ಇಂದೂ ತರಲೆ
ಮಾತಾಡಿದರು.
ಎಂದಿನಂತೆ ನಾನು
ಸಿಡುಕಲಿಲ್ಲ.
ಬದಲಿಗೆ ಅವನಿಗೆ
ಕಿಟಕಿಯಲ್ಲೇ ಕರೆದು
ವರದಿ ಒಪ್ಪಿಸುತ್ತೇನೆ.
ತಲೆಯಲ್ಲಿರುವ ಕೊಳೆಯಲ್ಲ
ಅಕ್ಷರಕ್ಕೆ ಇಳಿದು
ಮನಸು ಬೆತ್ತಲಾದಂತೆ,
ತುಟಿಯಲ್ಲಿ ನಗು,
ಸಮಾಧಾನದಿಂದ
ಆಲಿಸಿದ
ಅವನ ಬಗೆಗೆ
ಮನದಲ್ಲಿ
ಮೆಚ್ಚುಗೆಯ ಬುಗ್ಗೆ!
ಇದಕೆಲ್ಲ ಕಾರಣ
ಅವನಲ್ಲ,
ಎಂದರೆ ತಪ್ಪು
ನನ್ನದೇ ಅಲ್ಲವೆ?


10 ಕಾಮೆಂಟ್‌ಗಳು:

Badarinath Palavalli ಹೇಳಿದರು...

1. ಸರಳತೆ ಮತ್ತು ಸುಲಲಿತ ಶೈಲಿಯಲ್ಲೇ ಮನಗೆದ್ದಿತು. ಕನಸಿನ ರಾಜ ವಾಸ್ತವಕ್ಕೂ ಸಲ್ಲಲಿ.

2. ಮುಖವಾಡಗಳ ನೀರಿಳಿಸೋ ಕವನ. ಆತನ ನೈಜ ಚಿತ್ರಣ ಹೊರ ಜಗತ್ತಿಗೆ ಅಪರಿಚಿತ.

3. ಕಳಕೊಂಡ ಒಲುಮೆ, ಪಶ್ಚಾತ್ತಾಪಕ್ಕೆ ಮರಳುವುದೇ? ನಿಜ.

4. ಆಹಾ!

5. ಕನಸ್ಸು ಹಂಚಿಕೊಳ್ಳುವ ಪ್ರತಿಮೆ ಕವನದ ಅಂತಃಸತ್ವವನ್ನು ಸಮರ್ಥವಾಗಿ ಚಿತ್ರಿಸಿದೆ.

6. ನಿರ್ಮಲ ಮನಸ್ಸಿನ ಬಗ್ಗೆ ಸುಂದರ ಕವನ.

ನನ್ನ ಬ್ಲಾಗಿಗೂ ಬನ್ನಿ ದಿವ್ಯ ಮೇಡಂ.

Unknown ಹೇಳಿದರು...

so nice...the feelings expressed in your writing is heart touching.. :)

Soumya. Bhagwat ಹೇಳಿದರು...

first one is too good :) uLidaddu chennagiddu :)) divya :)

ಸೀತಾರಾಮ. ಕೆ. / SITARAM.K ಹೇಳಿದರು...

ವೈವಿಧ್ಯ ಭಾವನೆಗಳನ್ನೂ ಹಿಡಿದಿಟ್ಟಿರುವ ಈ ಆರು ಚುಟುಕುಗಳು ಚೆನ್ನಾಗಿವೆ.

ಮನಸಿನ ಮಾತುಗಳು ಹೇಳಿದರು...

@ all friends,
Thanku..:)

prashasti ಹೇಳಿದರು...

ಚೆನ್ನಾಗಿದ್ದು :-)

Shubhashree Bhat ಹೇಳಿದರು...

ಸರಳವಾದ ಶೈಲಿಯಲ್ಲಿ ಮನದ ಭಾವನೆಗಳು ಮಧುರವಾಗಿ ಮೂಡಿಬಂದಿದೆ ದಿವ್ಯಾ ....

Shubhashree Bhat ಹೇಳಿದರು...

ಸರಳವಾದ ಶೈಲಿಯಲ್ಲಿ ಮನದ ಭಾವನೆಗಳು ಮಧುರವಾಗಿ ಮೂಡಿಬಂದಿದೆ ದಿವ್ಯಾ ...

Shubhashree Bhat ಹೇಳಿದರು...

ಸರಳವಾದ ಶೈಲಿಯಲ್ಲಿ ಮನದ ಭಾವನೆಗಳು ಮಧುರವಾಗಿ ಮೂಡಿಬಂದಿದೆ ದಿವ್ಯಾ

Shubhashree Bhat ಹೇಳಿದರು...

ಸರಳವಾದ ಶೈಲಿಯಲ್ಲಿ ಮನದ ಭಾವನೆಗಳು ಮಧುರವಾಗಿ ಮೂಡಿಬಂದಿದೆ ದಿವ್ಯಾ ...