ಗುರುವಾರ, ಸೆಪ್ಟೆಂಬರ್ 30, 2010

ಅಪ್ಪ,ಬಂದ್ ಮತ್ತು ನಾನು

ಸುಮಾರು ಹತ್ತು ಜನ ಮಲಗಬಹುದಾದ ಕೊಠಡಿ ಅದು. ನಾವು ಮೂರು ಜನ ಒಳ ಹೊಕ್ಕಾಗ ಇದ್ದಿದ್ದು ಆರು ಜನ. ನಾಳೆ ಸಂಭವಿಸಬಹುದಾದ ಅನಾಹುತಕ್ಕಾಗಿ ಇವತ್ತೇ ಮುಂದಾಲೋಚನೆ ಮಾಡಿ, ಆಫೀಸ್ನಲ್ಲೆ ಉಳಿದುಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದ್ದೆವು.ನಾಳೆ ನೀವೆಲ್ಲ half -day ಬರಲೇಬೇಕು ಎಂದು ಮ್ಯಾನೇಜರ್ ಹೇಳಿದಾಗ, ನಮ್ಮೆಲ್ಲರಲ್ಲಿ ಶುರುವಾಯಿತು ಗುಂಪಿನಲ್ಲಿ ಚರ್ಚೆ.ಛೆ! ಏನ್ ಜನಾನಪ್ಪ.ನಾಳೆ ಅಷ್ಟು ದೊಡ್ಡ ಗಲಾಟೆ ಆಗೋದಿದೆ.ಇವರಿಗೆ ಒಂದು ರಜೆ ಕೊಟ್ಟು ಸಾಯೋಕೆ ಏನು? ನಾಳೆ ಬಸ್ ಇಲ್ದೆ ಇದ್ರೆ? ಹಾಗೆ ಹೀಗೆ ಅಂತ ಮಾತಾಡ್ಕೋತಾ ಇದ್ರು .. ಅಂತು ನಾವು ಮೂರು ಗೆಳತಿಯರೆಲ್ಲ ಸೇರಿ ಇವತ್ತು ಇಲ್ಲೇ ಉಳಿದುಕೊಂಡು,ನಾಳೆ ಕೆಲಸ ಮುಗ್ಸಿ ಮೂರು ಘಂಟೆ ಒಳಗೆ ಮನೆ ಸೇರಿ ಕೊಳ್ಳೋಣ ಅಂತ ನಿರ್ಧಾರ ಮಾಡಿದೆವು .ನನಗೇನೋ ಆಫೀಸಿನಲ್ಲಿ ಉಳ್ಕೊಳೋಕೆ ಸ್ವಲ್ಪವೂ ಇಷ್ಟ ಇರಲಿಲ್ಲ. ಅಮ್ಮನು ಹಂಗೆ ಮಾಡು ಮಗಾ ಅಂತ ಹೇಳಿದ್ ಮೇಲೆ ಸರಿ ಅಂತ ಒಪ್ಕೊಂಡೆ. ಅನಿವಾರ್ಯವೂ ಆಗಿತ್ತು.

ಅಲ್ಲಿ ಮಲಗಲು ಹೋಗುವ ಹೊತ್ತಿಗಾಗಲೇ ಎಂಟು ಘಂಟೆಯಾಗಿತ್ತು. ಸುತ್ತಲು ಬರೀ ನಿಶ್ಯಬ್ಧ. ಸೂಜಿ ಬಿದ್ದರೂ ಕೇಳುವಷ್ಟು.ಅಲ್ಲಿದ್ದವರೆಲ್ಲ ಮುಸುಕು ಹಾಕಿಕೊಂಡು ಮಲಗಿದ್ದರು.ನನಗ್ಯಾರೋ ಅಲ್ಲಿ ದೆವ್ವ ಓಡಾಡುತ್ತೆ ಅಂತೆಲ್ಲ ಹೇಳಿದ್ದರು.ಸ್ನೇಹಿತೆಯರು noodles ತೆಗೆದುಕೊಂಡು ಬರುತ್ತೇವೆ.ಸಾಕು .ಇವತ್ತು ಊಟ ಬೇಡ ಅಂದರು,ನನಗೂ ತಗೊಂಡು ಬನ್ನಿ ಅಂತ ಹೇಳಿ ಅಲ್ಲೇ ಕುರ್ಚಿಯಲ್ಲಿ ಕುಳಿತುಕೊಂಡೆ. ದೊಡ್ಡ ನಿಲುವುಗನ್ನೆಡಿ ಇತ್ತು.ಕಣ್ಣು ಮುಚ್ಚಿದೆ.ಗೆಜ್ಜೆ ಸಪ್ಪಳ ಆಯಿತು.ಬೆಚ್ಚಿದೆ.ನೋಡಿದರೆ ನನ್ನ ಗೆಜ್ಜೆ ಶಬ್ದ. ಮತ್ತೆ ಕಣ್ಣು ಮುಚ್ಚಲು ಧೈರ್ಯ ಆಗಲಿಲ್ಲ. ಅವನಿಗೆ ಮೆಸೇಜ್ ಮಾಡುತ್ತಾ ಕುಳಿತೆ.ಆದರೂ ಅಲ್ಲಿ ಮುಸುಕು ಹಾಕಿ ಮಲಗಿಕೊಂಡವರಲ್ಲಿ ಯಾರಾದರು ದೆವ್ವ ಇರಬಹುದೇ??ಹೀಗೆ ಎನೇನೋ ಯೋಚನೆ ಆಗುತ್ತಾ ಇದ್ದು.ಅವನ ಮೆಸೇಜ್ ಬರುತ್ತಿದ್ದಾಗ ಮನಸು ಸ್ವಲ್ಪ ಶಾಂತವಾಗುತಿತ್ತು. ಅಷ್ಟರಲ್ಲೇ ಸ್ನೇಹಿತೆಯರು ಬಂದರು. ಅಬ್ಬ!! ಅಂದುಕೊಂಡು noodles ತಿಂದು, ಸುಮಾರು ಹನ್ನೆರಡು ಘಂಟೆ ಒರೆಗೆ ನಿದ್ದೆ ಬರಲಿಲ್ಲ.ನನಗೇನೋ insecured ಅನ್ನಿಸ್ತಾ ಇತ್ತು. ತಕ್ಷಣ ಹಳೆ ನೆನಪುಗಳೆಲ್ಲ ಕಣ್ಣ ಮುಂದೆ ಬಂದು ನಿಂತವು.

*****

ನಾನು ಆಗ ಐದನೇ ಕ್ಲಾಸಿನಲ್ಲಿ ಓದುತಿದ್ದೆ. ಊಟಕ್ಕೆ ಎಲ್ಲರೂ ಜೊತೆಯಲ್ಲೇ ಕುಳಿತು ಮಾಡುವುದು ನಮ್ಮ ವಾಡಿಕೆ. ನಾನು,ಅಪ್ಪ,ಅಮ್ಮ ಮತ್ತೆ ತಂಗಿ. ಅಪ್ಪ ಹೇಳೋಕೆ ಶುರು ಮಾಡಿದರು -"ಕೃಷ್ಣನಿಗೆ ಹೆಣ್ಣು ಮಗು ಆತಡ.ನಂ ಎದ್ರಿಗೆ ಅವನ್ ಹೆಂಡ್ತಿ ಮನೆಯವರಿಂದ ಫೋನ್ ಬಂತು.ಸರಿಯಾಗಿ ಮಾತೂ ಆಡಲ್ಲೇ .ಹೆಂಡ್ತಿನ ನೋಡಲು ಹೋಗ್ತ್ನಿಲ್ಯದ"ಅಂತ. ಅವಾಗಲೇ ನನಗನ್ನಿಸಿತು. ಅಪ್ಪನಿಗೆ ಯಾವಾಗಲೂ ಗಂಡು ಮಗು ಬೇಕು ಅಂತ ಅನಿಸಿರಲಿಲ್ಲವೇ ಅಂತ?.ತಕ್ಷಣ ಅಪ್ಪನಿಗೆ ಕೇಳಿದ್ದೆ. ಅಪ್ಪ..ನಿಂಗೆ ಮಗಾ ಬೇಕು ಹೇಳಿರ್ಲ್ಯ? ಅಂತ.ಅಪ್ಪ ತಲೆಗೆ ಒಂದು ಹೊಡೆದು ಹೇಳಿದ್ರು."ನೀನ್ ಯಾಕೆ ಹಿಂಗೆಲ್ಲ ಕೇಳ್ತಾ ಇದ್ದೆ.ನಾ ಯಾವತ್ತರು ಹಂಗೆ ಮಾಡಿದ್ನ?ನೀನು ,ಮಧು ನಂಗೆ ಎರಡು ಕಣ್ಣಿದ್ದಂಗೆ .ನೀವೇ ನಂಗೆ ಗಂಡು,ಹೆಣ್ಣು ಎಲ್ಲಾ. ನಂಗೆ ಗಂಡಿಲ್ಲೆ ಹೇಳಿ ಬೇಜಾರ್ ಇಲ್ಲೇ ಅಂತ. "ಆವಾಗಲೇ ಸಮಾಧಾನ ಆಯಿತು ನಂಗೆ.ಆದ್ರೆ ಅಪ್ಪನಿಗೆ ನಾನು ಕೇಳಿದ್ದು ಇಷ್ಟ ಆಗಲಿಲ್ಲ ಅಂತನೂ ತಿಳಿಯಿತು.

ಅಮ್ಮನಿಗೆನೋ ಹೇಳೋದಿತ್ತು.ಅವಳ ಮುಖದಿಂದ ತಿಳಿತಿತ್ತು. ಅಪ್ಪ ಎದ್ದು ಹೋದ ಮೇಲೆ ಅಮ್ಮ ಶುರು ಮಾಡಿದರು." ನೀನ್ ಹುಟ್ಟಿದಾಗ ಏನು ಹೇಳಿಲ್ಲ ಯಾರು.ಆದ್ರೆ ಮಧು ಹುಟ್ಟಿದಾಗ ,"ಇದೂ ಹೆಣ್ಣೆಯ?"...ಅಂತ ಎಲ್ಲರೂ ವಿಷಾದ ಪಡ್ತಿದ್ರು.ಆದ್ರೆ ನಿನ್ ಅಪ್ಪ ಮಾತ್ರ ಒಂದು ದಿನಾನು ನಂಗೆ ಬೈಯಲ್ಲೇ.ನಿಂಗ ಪುಣ್ಯ ಮಾಡಿದ್ದಿ ಅಂಥ ಅಪ್ಪನ ಪಡಿಯಕೆ" ಅಂತ. ಹೌದು ಅಂತ ನನಗೆ ಜೀವನದ ಪ್ರತಿ ಘಟ್ಟದಲ್ಲೂ ಅನಿಸುತ್ತಾನೆ ಇದೆ.ಎಲ್ಲರೂ same ಅಪ್ಪನ ಹಂಗೆ ಇದ್ದೆ ನೋಡು ಅಂದಾಗ ಏನೋ ಖುಷಿ ಆಗತ್ತೆ ನಂಗೆ. ಅಪ್ಪನಿಗೆ ನಾಳೆ ವಿಶ್ ಮಾಡಬೇಕು ಅಂತ ಮನಸಿನಲ್ಲಿ ಅಂದುಕೊಳ್ತಾ ಕಣ್ಣು ಮುಚ್ಚಿಕೊಂಡವಳು ಬೆಳಗ್ಗೆ ಆರು ಘಂಟೆಗೆ ಅಲರಾಂ ಆದ ಮೇಲೇ ತೆರೆದಿದ್ದು.


ನನ್ನ ಅಪ್ಪನ 51 ನೆ ವರ್ಷದ ಹುಟ್ಟಿದ ದಿನ ಇಂದು. ಅವರಿಗೆ ನನ್ನ ಶುಭಾಶಯಗಳು...:-)

(ಚಿತ್ರಕೃಪೆ: ಅಂತರ್ಜಾಲ)

16 ಕಾಮೆಂಟ್‌ಗಳು:

ಮನಸು ಹೇಳಿದರು...

namm shubhashayagaLu nimma appajiyavarige

ಪ್ರಗತಿ ಹೆಗಡೆ ಹೇಳಿದರು...

ದಿವ್ಯಾ, ನಿಮ್ಮ ತಂದೆಗೆ ನನ್ನ ಶುಭಾಶಯಗಳನ್ನು ತಿಳಿಸಿ...

Unknown ಹೇಳಿದರು...

nan kade indanu ondu wish :)

jithendra hindumane ಹೇಳಿದರು...

ದಿವ್ಯಾ ನಿಮ್ಮ ಅನಿಸಿಕೆ/ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದ. ನನಗೂ ಒಂದೇ ಹೆಣ್ಣು ಮಗು. ಮತ್ತೊಂದರ ಯೋಚನೆ ಮಾಡಿಲ್ಲಾ....!

sunaath ಹೇಳಿದರು...

ನಿಮ್ಮ ತಂದೆಯವರಿಗೆ ನನ್ನದೂ ಶುಭಾಶಯಗಳು. ನೂರು ಕಾಲ ಬಾಳಲಿ ಅವರು.

ಸುಮ ಹೇಳಿದರು...

ದಿವ್ಯ ನಿನ್ನ ಅಪ್ಪನ ಬಗ್ಗೆ ಕೇಳಿ ನಂಗೆ ನನ್ನ ಅಪ್ಪನ ನೆನಪಾತು . ನಮ್ಮ ಮನೆಯಲ್ಲಿ ಅಪ್ಪಂಗೆ ಮತ್ತು ನನ್ನ ಚಿಕ್ಕಪ್ಪನಿಗೆ ಇಬ್ಬರಿಗೂ ಎರಡು ಹೆಣ್ಣುಮಕ್ಕಳು . ಅಜ್ಜ ಅಜ್ಜಿಯಿಂದ ಹಿಡಿದು ಯಾರೂ ಕೂಡ ಒಂದು ದಿನವೂ ನಮ್ಮನ್ನು ಕೇವಲ ಹೆಣ್ಣುಮಕ್ಕಳು ಎಂಬಂತೆ ನೋಡಲಿಲ್ಲ . ಅಪ್ಪಂಗೆ ನಂದೂ ವಿಶ್ ತಿಳಿಸು.

ತೇಜಸ್ವಿನಿ ಹೆಗಡೆ ಹೇಳಿದರು...

ನನ್ನ ಕಡೆಯಿಂದಲೂ ಶುಭಾಶಯ. ಅಪ್ಪ ಮಗಳ ಸಂಬಂಧನೇ ತುಂಬಾ ಸುಂದರ ಅಲ್ದಾ? ನಂಗೆ ನನ್ನ ಅಪ್ಪನ ನೆನ್ಪಾತು :)

ಸೀತಾರಾಮ. ಕೆ. / SITARAM.K ಹೇಳಿದರು...

ನಿಮ್ಮ ತಂದೆಯವರಿಗೆ ಶುಭಾಶಯಗಳು.

ದಿನಕರ ಮೊಗೇರ ಹೇಳಿದರು...

ದಿವ್ಯಾ,
ನಿಮ್ಮ ತಂದೆಯವರಿಗೆ ನಮ್ಮ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯ...

ಸವಿಗನಸು ಹೇಳಿದರು...

ದಿವ್ಯಾ,
ನಿಮ್ಮ ತಂದೆಯವರಿಗೆ ನನ್ನದೂ ಶುಭಾಶಯಗಳು....

ವಾಣಿಶ್ರೀ ಭಟ್ ಹೇಳಿದರು...

ತುಂಬಾ ಸುಂದರ ಬರಹ.. ನನ್ನ ಅಪ್ಪನ ನೆನಪಾತು ನಂಗೆ..ನಾವೂ ಕೂಡ ಹೆಣ್ಣು ಮಕ್ಕಳು..ಆದರೆ ನಮ್ಮಪ್ಪ ಯಾವತ್ತು ಬೇಸರ ಮಾಡಿ ಕೊಂಡಿದ್ದಿಲ್ಲ..ಬದಲಾಗಿ ಹೆಮ್ಮೆ ಇಂದ ಹೇಳ್ತಾರೆ..

amita.ravikiran ಹೇಳಿದರು...

nimma matu nimmadashte alla...nannadu kuda..navibbaru hennukoosugalu nam appaammmange .....nim pappanige nan shubhashaya...

PrashanthKannadaBlog ಹೇಳಿದರು...

ಪ್ರೀತಿಯನ್ನು ತೋರಿಸಲಾಗದೆ ಮನಸ್ಸಲ್ಲೇ ಇಟ್ಟುಕೊಂಡು ಕುಟುಂಬದ ಏಳಿಗೆಗೆ ಶ್ರಮಿಸುವ ಅಪರೂಪದ ವ್ಯಕ್ತಿತ್ವ ಅಪ್ಪನದ್ದು. ಒಳ್ಳೆಯ ಬರಹ.

ಚಿನ್ಮಯ ಭಟ್ ಹೇಳಿದರು...

ಮಸ್ತ್ ಆಗ ಇದ್ದು.......
ಒಟ್ಟಿಗೆ ಕೂತು ಊಟ ಮಾಡಿದನ್ನು ಓದಿದ ಕೂಡ್ಲೇ ,ತಂಗಿ ನೆನಪಾಗ್ ಮನೆಗ ಫೋನ್ ಮಾಡ್ದೆ!!!!!!

ಮನಸಿನ ಮಾತುಗಳು ಹೇಳಿದರು...

ಎಲ್ಲರಿಗೂ ಧನ್ಯವಾದಗಳು.ನಿಮ್ಮೆಲ್ಲರ ಶುಭಾಶಯವನ್ನು ಅಪ್ಪನಿಗೆ ತಲುಪಿಸಿದ್ದೇನೆ. ನನ್ ಅಪ್ಪ ಫುಲ್ ಕುಶ್. ಅವರ ಪರವಾಗಿ ಮತ್ತೊಮ್ಮೆ ಧನ್ಯವಾದಗಳು.. :-)

Ashok.V.Shetty, Kodlady ಹೇಳಿದರು...

Divya avre,

Late aagi pratikriye haagu Subhashyaa heluttiruvudakke kshame irali...nimma blog na follow maado kondi nange sikke illa...so, neevu baredaddu nange update aagolla....