ಬುಧವಾರ, ಸೆಪ್ಟೆಂಬರ್ 29, 2010

ಹೆಸರಿನ ಹಂಗಿಲ್ಲದ್ದು - ೧

ಲಹರಿಯಲ್ಲಿ ತೇಲುತ್ತಿದ್ದೆ
ಬಸ್ಸಿನಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತು,
ಯಾವುದೋ ಲಹರಿಯಲ್ಲಿ ತೇಲುತ್ತಿದ್ದೆ,
ಸುಮ್ ಸುಮ್ನೆ ನನ್ನಷ್ಟಕ್ಕೆ ನಾನೇ ನಗುತಿದ್ದೆ,
ಆಮೇಲೇ ತಿಳಿದಿದ್ದು,
ಎದುರಿನ ಸೀಟಿನಲ್ಲಿ ಕೂತಿದ್ದ ಹುಡುಗ,
ನನ್ನೇ ಗುರಾಯಿಸುತಿದ್ದ ಎಂದು!

ನೀನು ರೆಡಿಯಾ?
ಜೀವನವೆಂಬ ನಾಟಕದಲ್ಲಿ,
ಸೀತೆಯ ಪಾತ್ರ ಹಾಕಲು ನಾನು ರೆಡಿ..
ಅಧುನಿಕ ಸೀತೆಯಲ್ಲವೋ,
ಪಕ್ಕಾ ರಾಮಾಯಣದ ಸೀತೆ,
ಆದರೆ ರಾಮಾಯಣದ ರಾಮನಾಗಲು ನೀನು ರೆಡಿಯಾ?

ಬುದ್ದಿವಂತಿಕೆ ಏನೋ!
ಎಲ್ಲರೂ ಹೇಳಿದರು,
"ನಾವು ಒಳ್ಳೆಯವರಾದರೆ,
ಜಗತ್ತೇ ಒಳ್ಳೇದು"
ಆದರೆ ಯಾಕೋ ನನಗೆ ಒಂದೊಂದು ಸಾರಿ
ಇದು ಸುಳ್ಳು ಅನಿಸುತ್ತದೆ.
ಏನೇ ಇರಲಿ, ಜಗತ್ತನ್ನು ಒಳ್ಳೇದು ಎಂದು ಅಂದುಕೊಂಡು,
ನಾವು ಒಳ್ಳೆಯವರಾಗೋದೆ ಬುದ್ದಿವಂತಿಕೆ ಏನೋ!

ಸ್ವರ್ಗಕ್ಕೆ ಕಿಚ್ಚು
ಸಂಜೆಯ ವೇಳೆ,
ದಿನವಿಡೀ ಕೆಲಸ ಮಾಡಿದ ಆಯಾಸ,
ನೈಸ್ ರೋಡಿನ ಮೇಲೆ ಪಯಣ,
ಇಕ್ಕೆಲದಲ್ಲಿ ಹಸಿರು ಗುಡ್ಡಗಳು,
ಆಗೊಮ್ಮೆ ಈಗೊಮ್ಮೆ ಕಾಣುವ ಹಕ್ಕಿಗಳು,
ಮುಳುಗುತ್ತಿರುವ ಸೂರ್ಯನನ್ನು ನೋಡುತ್ತಾ,
ಹಾಡುಗಳನ್ನು ಕೇಳುತ್ತಾ ಮನೆಗೆ ಬರುತ್ತಿದ್ದರೆ,
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ!!

ಬಟ್ಟೆಯ ಸೇಲ್
ಬಟ್ಟೆಯ ಸೇಲ್ ಬಂದಲ್ಲಿಗೆ,
ಅಚಾನಕ್ಕಾಗಿ ಆ ದಾರಿಯಲ್ಲಿ ಹೋಗುತ್ತಿದ್ದಾಗ,
ಚೂಡಿದಾರ್ ಬಟ್ಟೆಗಳು, ಚೆನ್ನಾಗಿವೆ ಎಂದು ,
ನಾಲ್ಕು ಜೊತೆ ಕೊಂಡು ತಂದೆ.
ತಂದ ಕೂಡಲೇ,ಪ್ರಶ್ನೆಗಳು,
ರೇಟ್ ಎಷ್ಟು?ಎಲ್ಲಿಂದ ತಂದೆ?
ಸೇಲ್ ಇನ್ನೆಷ್ಟು ದಿನ?
ಸೇಲ್ ಇವತ್ತೇ ಕೊನೆಯ ದಿನ ಎಂದು ಹೇಳಲು,
ಹೊಟ್ಟೆಕಿಚ್ಚೆಲ್ಲ ಮಾತಿನ ರೂಪದಲ್ಲಿ ಹೊರ ಬಂತಲ್ಲ,
"ಬಟ್ಟೆ ಅಷ್ಟು ಚನಾಗಿರಲ್ಲ",
"ಎರಡು ಸಾರಿ ತೊಳೆದರೆ ಹಾಳಾಗತ್ತೆ "
ಅಬ್ಬ!! ಇವರ ಬುದ್ದಿಯೇ ಅಂತ ಅನ್ನಿಸಿ
ಸುಮ್ಮನಾಗದೆ ವಿಧಿ ಇರಲಿಲ್ಲ.

ನಾನು ನಿರುತ್ತರಿ
ಗೆಳತಿ ಹೇಳಿದಳು,
ನಡಿ ಆ ಕಡೆ ಹೋಗಿ ಹುಡುಗರನ್ನು,
ನೋಡಿಕೊಂಡು ಬರುವ.ನಾನಂದೆ,
ನೋಡಿ ಏನು ಮಾಡುವುದಿದೆ??
ಒಬ್ಬರು ಸಾಕು,ಹಾಗೆಲ್ಲ ನನಗಿಷ್ಟ ಆಗಲ್ಲ ಅಂತ.
ಅದಕ್ಕೆ ಅವಳು ಹೇಳಿದ್ದು,
ಅದೆಲ್ಲ ಮದುವೆ ಆದ ಮೇಲೆ ,
ಈಗ ನಾವ್ ಎಂಜಾಯ್ ಮಾಡಬೇಕು ಅಂತ.
ಅವಳ ಮಾತುಗಳಿಗೆ "ನಾನು ನಿರುತ್ತರಿ"

10 ಕಾಮೆಂಟ್‌ಗಳು:

ಸವಿಗನಸು ಹೇಳಿದರು...

ನೈಜ ಬರಹ...
ಚೆನ್ನಾಗಿದೆ....

ಕ್ಷಣ... ಚಿಂತನೆ... ಹೇಳಿದರು...

ಮೇಡಂ,

ಒಂದೊಂದೂ ಒಂದೊಂದು ವಿಧದಲ್ಲಿ ವಾಸ್ತವಿಕತೆಗೆ ಹತ್ತಿರವಾಗಿದೆ. ಹೈಕುಗಳಂತೆ ಚೆನ್ನಾಗಿವೆ.

Unknown ಹೇಳಿದರು...

ದಿವ್ಯಾ,
ಚೆನ್ನಾಗಿದೆ ನಿಮ್ಮ ಬ್ಲಾಗ್. ಓದಿ ತುಂಬ ಖುಶಿಯಾಯ್ತು. ಹೀಗೇ ಬರೀತಿರಿ. ಶುಭವಾಗಲಿ :-)

jithendra hindumane ಹೇಳಿದರು...

ತುಂಬಾ ನೈಜ ಬರಹ....!

ಪ್ರಗತಿ ಹೆಗಡೆ ಹೇಳಿದರು...

nice...

sunaath ಹೇಳಿದರು...

ವಾಸ್ತವ ಕವನ-ಹನಿಗಳು.

kalsakri ಹೇಳಿದರು...

ಮೇಡಂ
ನಿಮ್ಮ ಕವನ ಓದಿ ನನ್ನ ಅನುಭವ ನೆನಪಾಯ್ತು .

ಕಚೇರಿಯಲ್ಲಿ ಕಂಪ್ಯೂಟರ್ ಪುಸ್ತಕ ಓದುತ್ತಿದ್ದೆ ತನ್ಮಯನಾಗಿ.
ಗಡಚು ವಿಷಯ ಅರ್ಥವಾಗಿ ಹೀಗೋ ಎಂದು ನಸುನಕ್ಕು
ಏಕೋ ತಲೆ ಎತ್ತಿದೆ
ಎದುರಿಗಿದ್ದವಳು ನನ್ನನ್ನೇ ತಿನ್ನುವ ಹಾಗೆ ನೋಡುತ್ತಿದ್ದವಳು
ನಾಚಿ ಬೇರೆಡೆ ನೋಡಿದಳು!

ಮನಸಿನ ಮಾತುಗಳು ಹೇಳಿದರು...

ಸುಗುಣಕ್ಕ,ಚಂದ್ರು ಸರ್, ಜಿತೇಂದ್ರ ಅಣ್ಣ, ಪ್ರಗತಿ,ಸುನಾಥ್ ಅಂಕಲ್,kalsakri ಎಲ್ಲರಿಗೂ ಧನ್ಯವಾದಗಳು... :-)

ಶುಭದಾ , ನನ್ನ ಬ್ಲಾಗಿಗೆ ಸ್ವಾಗತ.. ನಿಮ್ಮ ಪ್ರೀತಿಯ ಮಾತುಗಳಿಗೆ ನನ್ನದೂ ಪ್ರೀತಿಯ ಧನ್ಯವಾದಗಳು. ಬರುತ್ತಿರಿ... :-)

ಸೀತಾರಾಮ. ಕೆ. / SITARAM.K ಹೇಳಿದರು...

ಸೊಗಸಾದ ಚುಟುಕುಗಳು. ನವಿರು ಹಾಸ್ಯ. ಜೊತೆಗೆ ಬದುಕಿಂದ ಬಂದವುಗಳು. ಚೆನ್ನಾಗಿದೆ.

Ashok.V.Shetty, Kodlady ಹೇಳಿದರು...

ella chutukugalu chennagive, Nice...Thanks...