ಶುಕ್ರವಾರ, ಸೆಪ್ಟೆಂಬರ್ 17, 2010

ಬಿಂದುಗಳು...
**** ಅವನು ಎದೆ ಉರಿ ಅಂತ ಹೇಳಿಕೊಂಡ. ಸ್ನೇಹಿತರೆಲ್ಲ ಭಗ್ನ ಪ್ರೇಮ ಇರಬೇಕು, ಹುಡುಗಿ ಕೈ ಕೊಟ್ಟಿರಬೇಕು ಎಂದು ಹೇಳಿ ನಕ್ಕರು.ಅವನೂ ನಕ್ಕ. ಆದರೂ ಎದೆ ಉರಿ ಕಡಿಮೆ ಆಗಲಿಲ್ಲ. ಡಾಕ್ಟರ್ ಮಾತ್ರ acidity ತೊಂದರೆ ಇದೆ. ಸರಿಯಾಗಿ ಸಮಯ ಸಮಯಕ್ಕೆ ಊಟ ಮಾಡು ಎಂದರು!!


**** ಪದಗಳಿಗೆ ಹಿಂಸೆ ಕೊಟ್ಟು, ಅವನ್ನು ಹಿಂದೂ ಮುಂದಾಗಿಸಿ ಒಂದು ಕ್ಲಿಷ್ಟ ಕವನ ಬರೆಯಬೇಕು , ಓದಿದ ಹಲವರಲ್ಲಿ ಕೆಲವರಿಗಷ್ಟೇ ಅರ್ಥ ಆಗುವ ಹಾಗೆ ಅಂತ ಪ್ರಯತ್ನ ಪಟ್ಟೆ. ಕವನ ಹುಟ್ಟಲಿಲ್ಲ. ಮನಸಿನ ಸತ್ಯ ಗೋಚರಿಸಿತು. ನೀನೇ 'straight forward' ಆಗಿರುವಾಗ ಕ್ಲಿಷ್ಟ ಕವನ ಹೇಗೆ ಸಾದ್ಯ? ಕೈಯಲ್ಲಿ ಆಗದೆ ಇದ್ರೆ ಹೇಳೋದು ಹೀಗಾ ?ಇರಬಹುದು !


**** ಕೆಲಸ ಮುಗಿಯುವವರೆಗೆ ಕೆಲವರಿಗೆ ಕೆಲವರೇ ಇಂದ್ರ-ಚಂದ್ರ.ಕೆಲಸ ಮುಗಿದ ಮೇಲೆ ಯಾರು ಇಂದ್ರ? ಯಾರು ಚಂದ್ರ?...ಬಲ್ಲವರಾರು?

**** ಹತ್ತು ಜನ ತಪ್ಪಿರುವ ಒಂದು ವಿಷಯವನ್ನು ಸರಿ ಎಂದು ವಾದಿಸುತ್ತಿರುವಾಗ , ನ್ಯಾಯದ ಪರವಾಗಿ ಮಾತಾಡಿದ ಒಂದು ದ್ವನಿ ಯಾರಿಗೂ ಕೇಳದೆ ಹೋಯಿತು. ಅದು ಅರಣ್ಯ ರೋಧನ!!


**** ಹೊಸತಾಗಿ ಬಂದ ಎದಿರು ಮನೆ ಹುಡುಗಿ ದಿನವೂ ಆತನನ್ನು ಗುರಾಯಿಸುತಿದ್ದಳು. ಇವನಿಗೋ ಕುತೂಹಲ. ದೈರ್ಯ ಮಾಡಿ ಒಂದು ದಿನ ಕೇಳಿಯೇ ಬಿಟ್ಟ. ಯಾಕೆ ನನ್ನ ಗುರಾಯಿಸುತ್ತಿಯ? ಅವಳಂದಳು.."ನಿನ್ನ ನೋಡಿದರೆ ಸತ್ತು ಹೋದ ನನ್ನ ಅಣ್ಣನ ನೆನಪು ಆಗುತ್ತೆ" ...ಹುಡುಗ ಮಾತಾಡದೆ ವಾಪಸ್ಸಾದ...

**** ಹುಡುಗ ಕೇಳಿದ ಹುಡುಗಿಗೆ..ನೀನ್ ಯಾಕೆ ಯಾವಾಗಲೂ ಕೈಗೊಂದು ಬಣ್ಣದ nailpolish ,ಕಾಲುಗಳಿಗೊಂದು ಬಣ್ಣದ nailpolish ಹಚ್ಚುತ್ತಿಯ ?..ಅಂತ. ಹುಡುಗಿ ನಕ್ಕು ಸುಮ್ಮನಾದಳು. ಅವನಿಗೇನು ಗೊತ್ತು? ಅವನು ಕೇಳಲಿ ಎಂದೇ ಅವಳು ಹಾಗೆ ಮಾಡುತ್ತಾಳೆ ಎಂದು..

**** ಸಾವಿರ ರೂಪಾಯಿ ಕೊಟ್ಟು fast track watch ಕೊಂಡು ಎಲ್ಲರೆದುರೂ ತೋರಿಸಿಕೊಂಡು ಮೆರೆದವನಿಗೇ ಸಮಯ ಪಾಲನೆ ಗೊತ್ತಿಲ್ಲ. watch ಯಾವುದಾದರೇನು ತೋರಿಸುವ ಸಮಯ ಒಂದೇ!

**** ನನಗೂ ಎಲ್ಲ ಬರುತ್ತೆ. ಬರುತ್ತೆ ಅಂತ ತೋರಿಸಿಕೊಳ್ಳಲು ಬರುವುದಿಲ್ಲ ಅಷ್ಟೇ . ಇನ್ನು ಮುಂದೆ ಬರುತ್ತೆ ನನಗೂ ಅಂತ ತೋರಿಸಿಕೊಳ್ಳಬೇಕು ಅಂತ ಆತ ನಿರ್ಧರಿಸುವಾಗಲೇ ಆತನಿಗೆ ವರುಷ ಅರವತ್ತು!

**** ಕೇಜಿಗಟ್ಟಲೆ ಬಂಗಾರ ಸುರಿದುಕೊಂಡು ಹೋದವಳಿಗೆ ಜನರ ಹೊಗಳಿಕೆಗೆ ಖುಷಿ ಆದರೂ ,ಒಳಗೊಳಗೇ ಅಯ್ಯೋ ಇವೆಲ್ಲ ನಿಜವಾಗಲು ಬಂಗಾರವೇ ಆಗಿದ್ದರೆ ಎಂಬ ಗುಟ್ಟು ಆಸೆ!

**** ಬೇಕರಿ ಎದಿರು ನಿಂತ ಹುಡುಗನ್ನ ಅಂಗಡಿಯಾತ ಕೇಳಿದ.. ಏನಪ್ಪಾ ಬೇಕು? ನನಗೆ ಆ ರಸ ಒಡೆಯುತ್ತಿರುವ ಹನಿ ಕೇಕ್ ಇಷ್ಟ, ಘಂ ಅನ್ನುತ್ತಿರುವ ಪಪ್ಸ್ ಇಷ್ಟ, ಆಲೂಗಡ್ಡೆ ಚಿಪ್ಸ್ ಇಷ್ಟ, ಡೈರಿ ಮಿಲ್ಕ್ ಚಾಕಲೇಟ್ ಇಷ್ಟ.. ಆಮೇಲೆ ಒಂದು ನಿಟ್ಟುಸಿರು ಬಿಟ್ಟು.. ಸದ್ಯಕ್ಕೆ ನನಗೆ ಈ ಅಡ್ರೆಸ್ ಎಲ್ಲಿ ಬರುತ್ತೆ ಹೇಳಿ... ಅಂದ..

**** ಚಂದ ಚಂದ ಎಂದು ಹುಡುಕುವುದು ಯಾಕೆ?ಕಪ್ಪಗಿದ್ದರೂ ನೇರಳೆ ಬಲು ಸಿಹಿ.ಕೆಂಪಗಿದ್ದರೂ ಅತ್ತಿ ಹಣ್ಣು ಹೊರಗೆ, ಒಳಗೆ ಮಾತ್ರ ಹುಳ-ಹುಳ .

**** ಅವಳು ಹಾಗೇ... ಅವಳಿಗೆ ಹೀಗಿರಬೇಡ ಕಣೆ.. atleast ಎಲ್ಲರನ್ನ ನೋಡಿಯಾದರೂ ಅವರ ಹಾಗೇ ಇರು ಎಂದು ಹೇಳಿ ತಿದ್ದಲು ಹೊರಟ ಅವನು ಕಡೆಗೆ ಅವಳ ಹಾಗೇ ಆಗಿಬಿಟ್ಟ..

**** ಅವನು ಶ್ರೀಮಂತ. ಹುಲ್ಲು ತಿಂದ. ಜನ "ಔಷಧಿಗಾಗಿ ಹುಲ್ಲು ತಿನ್ನುತ್ತಿರಬೇಕು" ಅಂದರು.ಇವನು ಬಡವ.ಹುಲ್ಲು ತಿಂದ. ಜನರು "ಪಾಪ,ಹೊಟ್ಟೆಗೆ ಇಲ್ವೇನೋ ಅದ್ಕೆ ಹುಲ್ಲು ತಿಂತಾ ಇದಾನೆ" ಅಂದರು.

****ಯಾಕೋ ಒಂಟಿ ಅನಿಸುತ್ತಿದೆಯಲ್ಲ ಅಂತ ಯೋಚಿಸುತ್ತ ತಾರಸಿಯ ಮೆಟ್ಟಿಲು ಹತ್ತಿದರೆ..ಅಲ್ಲಿ ಆಗಸದಲ್ಲಿ ಚಂದ್ರಮ ನಗುತ್ತಾ ನಿಂತಿದ್ದ..(ಚಿತ್ರಕೃಪೆ: ಅಂತರ್ಜಾಲ)

18 ಕಾಮೆಂಟ್‌ಗಳು:

V.R.BHAT ಹೇಳಿದರು...

ಹಾಡು ಹಳೆಯದಾದರೇನು ಭಾವ ನವನವೀನ! ನಿಮ್ಮ ’ನವೀನ ’ ಇನ್ನೂ ಬರಲಿಲ್ಲ ಅದಕ್ಕೆ ುಡುಕುತ್ತಿದ್ದೇನೆ ಕಾರಣ ??.....Nice, ಧನ್ಯವಾದ

ಸುಧೇಶ್ ಶೆಟ್ಟಿ ಹೇಳಿದರು...

ಈ ಬಿ೦ದುಗಳು ಮನಸ್ಸಿನಲ್ಲಿ ಹನಿ ಹನಿ ಮಳೆಯನ್ನೇ ಸುರಿಸಿತು ದಿವ್ಯಾ...! ತು೦ಬಾ ಚೆನ್ನಾಗಿದೆ. ಇ೦ತಹ ಆಲೋಚನೆಗಳು ನಿಮಗೆ ಹೇಗೆ ಹೊಳೆಯುತ್ತವೆ! ಸ್ವಲ್ಪ ಹೇಳಿ!

ಮನಸು ಹೇಳಿದರು...

divya chennagide... heege barita iru... chinna

ಚೆಂದುಳ್ಳಿ ಹೇಳಿದರು...

**** ಅವನು ಶ್ರೀಮಂತ. ಹುಲ್ಲು ತಿಂದ. ಜನ "ಔಷಧಿಗಾಗಿ ಹುಲ್ಲು ತಿನ್ನುತ್ತಿರಬೇಕು" ಅಂದರು.ಇವನು ಬಡವ.ಹುಲ್ಲು ತಿಂದ. ಜನರು "ಪಾಪ,ಹೊಟ್ಟೆಗೆ ಇಲ್ವೇನೋ ಅದ್ಕೆ ಹುಲ್ಲು ತಿಂತಾ ಇದಾನೆ" ಅಂದರು.

satyakke hidida kannadi..

ellanoo chennagiddu..

ಸುಮ ಹೇಳಿದರು...

ಒಳ್ಳೆಯ ಜೀವನಾನುಭವ ತುಂಬಿರುವ ಸಾಲುಗಳು ...ದಿವ್ಯ . ಚೆನ್ನಾಗಿವೆ.

sunaath ಹೇಳಿದರು...

ದಿವ್ಯಾ,
ನಿಮ್ಮ honeyಗಳನ್ನು ಬಾಯಿ ಚಪ್ಪರಿಸಿ ಸವಿದೆ.

ಮನದಾಳದಿಂದ............ ಹೇಳಿದರು...

ದಿವ್ಯಾ ಅವರೇ,
ಒಳ್ಳೆಯ 'ಬಿಂದುಗಳು'. ವಾಸ್ತವ, ಜೀವನದ ಕನ್ನಡಿ.................
ಹೀಗೆ ಬರ್ತಾ ಇರಲಿ.........

ದಿನಕರ ಮೊಗೇರ ಹೇಳಿದರು...

ದಿವ್ಯಾ...
ಚುಕ್ಕಿಗಳು ತುಂಬಾ ಯೋಚನೆಗೆ ಹಚ್ಚಿದವು...... ಕೊನೆಯದು ಸೂಪ್ಪರ್....

ಶ್ವೇತ ಹೇಳಿದರು...

ನನ್ನ ಬ್ಲಾಗಿನ ಫಾಲೋವೆರ್ಸ್ ಲಿಸ್ಟಿನಿಂದ ನಿನ್ನ ಬ್ಲಾಗ್ ಸಿಕ್ಕಿತು ನನ್ನ ಬ್ಲಾಗ್ ಫಾಲ್ಲೌ ಮಾಡುತ್ತಿರುವುದಕ್ಕೆ ಧನ್ಯವಾದ. ತುಂಬಾ ಚೆನ್ನಾಗಿ ಬರೆಯುತ್ತಿಯ. ತುಂಬಾ ಪೋಸ್ಟ್ಗಲಿದೆ ಕೆಲವನ್ನಷ್ಟೇ ಓದಿದೆ. ನಿನ್ನ ಹಾಸ್ಟೆಲ್ ಅನ್ನಿವೆರ್ಸರಿ ಪೋಸ್ಟ್ ಓದಿ ನನ್ನ ಹಾಸ್ಟೆಲ್ ದಿನಗಳ ನೆನಪಾಯಿತು. ಮೊದಲ ಬಾರಿ ೧೧ ನೆ ತರಗತಿದೆ ನನ್ನ ಅಮ್ಮ ನನ್ನನ್ನು ಹಾಸ್ಟೆಲ್ ನಲ್ಲಿ ಬಿಟ್ಟು ಹೊರಟಾಗ ಇಬ್ಬರಿಗೂ ಕಣ್ಣು ತುಂಬಿ ಬಂದದ್ದು ನಾನು ವಾಪಾಸ್ ಹಾಸ್ಟೆಲ್ ಗೆ ಅಳುತ್ತಲೇ ಓಡಿ ಬಂದದ್ದೆಲ್ಲ ನೆನಪಾಯಿತು. ದಿನಗಳು ಬಹಳ ಬೇಗ ಕಳೆದು ಹೋಗುತ್ತೆ. ಹ್ಯಾಂಗ್ ಇನ್ ದೇರ್.

ಈ ಚುಟುಕಗಲಂತೂ ಬಹಳ ಚೆನ್ನಾಗಿದೆ. ಕಾಮೆಡಿ ಚುಟುಕಗಳನ್ನು ಇನ್ನು ಬಹಳ ಬರಿ, ಬರೆದು ಒಂದು ಪುಸ್ತಕ ಮಾಡಿ. ಚುಟುಕಗಳದ್ದೆ ಒಂದು ಕಾರ್ಯಕ್ರಮ ಕೊಡಿ ಸುಧಾ ಬರಗೂರ್ ಮುಂತಾದವರ ತರಹ.
ಬೇಕರಿ ಚುಟುಕ ಮತ್ತು nailpolish ಚುಟುಕ ನನಗೆ ಬಹಳ ಇಷ್ಟವಾಯಿತು. ನನ್ನ ಗಂಡನಿಗೆ nailpolish ಚುಟುಕ ಓದಿ ಹೇಳಿದೆ. ಅದಕ್ಕೆ ಅವರು ಒಂದು ಪ್ರಶ್ನೆ ಕೇಳಿದರು. ನೀವೆಲ್ಲ ಹುಡುಗಿಯರು, ಹುಡುಗರು ಮಾತನಾಡಿಸಲಿ ಎಂದು ಹಾಗೆಲ್ಲ ಮಾಡುತ್ತಿರ ಅಂದರೆ, ನಾವು ಹುಡುಗರು ಮಾತನಾಡಿಸಲಿಕ್ಕೆ ಬಂದಾಗ ಯಾಕೆ ಸ್ಟೈಲ್ ಮಾಡುತ್ತಿರ ಸರಿಯಾಗಿ ನೋಡದೆ ಮಾತನಾಡಲು ನಾಚಿಕೆ ತೋರಿಸುತ್ತಿರ ಅಂತ :-) ಅದಕ್ಕೆ ನಾವು ಹುಡುಗಿಯರು ಎನಿಸಿಕೊಳ್ಳುವುದು ಅಂದೇ ನಾನು :-)

$!D ಹೇಳಿದರು...

I liked 5th, 6th, 13th and 14th.
All you other blogs are also good.
Keep Rocking..

ಅನಿಲ್ ಬೇಡಗೆ ಹೇಳಿದರು...

ಚೆಂದ ಚೆಂದ.. ಒದಕ್ಕಿಂತ ಮತ್ತೊಂದು ಚೆಂದ.. !!

Subrahmanya ಹೇಳಿದರು...

ಎಲ್ಲವೂ ಚೆನ್ನಾಗಿತ್ತು. :-).

ಮನಸಿನ ಮಾತುಗಳು ಹೇಳಿದರು...

ವಿ.ಆರ್.ಭಟ್ ಸರ್,ಧನ್ಯವಾದಗಳು.. :)

ಸುಧೇಶ್,ತುಂಬಾ ತುಂಬಾ thanks .ಮೆಚ್ಚಿಕೊಂಡಿದಕ್ಕೆ ಖುಷಿ ಆಯ್ತು.. :-)

ಸುಗುಣಕ್ಕ,ತುಂಬಾ ಥ್ಯಾಂಕ್ಸ್.. :-)

ಪ್ರಕಾಶ್,ಥ್ಯಾಂಕ್ಸ್ ಕಣೋ.. :-)

ಸುಮಕ್ಕ..thanksu .. :-)

ಸುನಾಥ್ ಸರ್,ಮನದಾಳದಿಂದ (ಪ್ರವೀಣ್),ದಿನಕರ್ ಸರ್...ಧನ್ಯವಾದಗಳು.. :-)

ಶ್ವೇತ ಅವರೇ,ತುಂಬಾ ಧನ್ಯವಾದಗಳು.ನನ್ನ ಬ್ಲಾಗಿಗೆ ಬಂದು ನಿಮ್ಮ ಅನಿಸಿಕೆಗಳನ್ನು ತಿಳಿಸಿದಕ್ಕೆ. ನಿಮ್ಮ ಬ್ಲಾಗನ್ನು ನಾ ಓದುತ್ತ ಇರುತ್ತೇನೆ. ನೀವು ಹೇಳಿದ ಹಾಗೆ ಬರೆಯಲು ಪ್ರಯತ್ನ ಮಾಡುತ್ತೇನೆ. ಅಂದ ಹಾಗೆ ನಿಮ್ಮ ಯಜಮಾನರಿಗೆ ಸರಿಯಾಗೇ ಹೇಳಿದ್ರಿ ಬಿಡಿ.. :-) ಬರುತ್ತಿರಿ.. :)

$!D ...ಥ್ಯಾಂಕ್ಸ್..:-)

ಅನಿಲ್,ಸುಬ್ರಹ್ಮಣ್ಯ...thanku ..

shivu.k ಹೇಳಿದರು...

ದಿವ್ಯಾ,.

ನಿಮ್ಮ ಹನಿಗಳು ಸಕ್ಕತ್ ಸಿಹಿಯಾಗಿವೆ...ಪುಟ್ಟದಾಗಿ ಹೀಗೆ ಇರಬೇಕು ಚೆನ್ನಾಗಿರುತ್ತದೆ...

Ashok.V.Shetty, Kodlady ಹೇಳಿದರು...

ದಿವ್ಯ ಅವ್ರೆ,

ತುಂಬಾ ಚೆನ್ನಾಗಿವೆ, ಅವುಗಳಲ್ಲೂ ಈ ಎರಡು ಬಿಂದುಗಳು ತುಂಬಾ ಹಿಡಿಸಿದವು, ತುಂಬಾ ಅರ್ಥಪೂರ್ಣವಾಗಿವೆ.

ಹತ್ತು ಜನ ತಪ್ಪಿರುವ ಒಂದು ವಿಷಯವನ್ನು ಸರಿ ಎಂದು ವಾದಿಸುತ್ತಿರುವಾಗ , ನ್ಯಾಯದ ಪರವಾಗಿ ಮಾತಾಡಿದ ಒಂದು ದ್ವನಿ ಯಾರಿಗೂ ಕೇಳದೆ ಹೋಯಿತು. ಅದು ಅರಣ್ಯ ರೋಧನ!

ಸಾವಿರ ರೂಪಾಯಿ ಕೊಟ್ಟು fast track watch ಕೊಂಡು ಎಲ್ಲರೆದುರೂ ತೋರಿಸಿಕೊಂಡು ಮೆರೆದವನಿಗೇ ಸಮಯ ಪಾಲನೆ ಗೊತ್ತಿಲ್ಲ. watch ಯಾವುದಾದರೇನು ತೋರಿಸುವ ಸಮಯ ಒಂದೇ!

ಪ್ರವೀಣ ಹೇಳಿದರು...

ಸಾವಿರ ರೂಪಾಯಿ ಕೊಟ್ಟು fast track watch ಕೊಂಡು ಎಲ್ಲರೆದುರೂ ತೋರಿಸಿಕೊಂಡು ಮೆರೆದವನಿಗೇ ಸಮಯ ಪಾಲನೆ ಗೊತ್ತಿಲ್ಲ. watch ಯಾವುದಾದರೇನು ತೋರಿಸುವ ಸಮಯ ಒಂದೇ!

ಅವನು ಶ್ರೀಮಂತ. ಹುಲ್ಲು ತಿಂದ. ಜನ "ಔಷಧಿಗಾಗಿ ಹುಲ್ಲು ತಿನ್ನುತ್ತಿರಬೇಕು" ಅಂದರು.ಇವನು ಬಡವ.ಹುಲ್ಲು ತಿಂದ. ಜನರು "ಪಾಪ,ಹೊಟ್ಟೆಗೆ ಇಲ್ವೇನೋ ಅದ್ಕೆ ಹುಲ್ಲು ತಿಂತಾ ಇದಾನೆ" ಅಂದರು.


ಎಲ್ಲ ಚೆನ್ನಾಗಿವೆ. ಇವರಡೂ ಬಹಳ ಇಷ್ಟವಾದವು. spelling ಬಗ್ಗೆ ಸ್ವಲ್ಪ ಗಮನ ಕೊಡಿ. ಸುಮಾರು ತಪ್ಪುಗಳಿವೆ.

Soumya. Bhagwat ಹೇಳಿದರು...

nice lines divya..... i just liked.....:)

ಸೀತಾರಾಮ. ಕೆ. / SITARAM.K ಹೇಳಿದರು...

ಮರಂದದ ಹನಿಗಳು ಸಿಹಿ ಸಿಹಿಯಾಗಿವೆ. ಓದಿ ಖುಷಿಯಾಯಿತು. ಇನ್ನು ಬರಲಿ.