ಮಂಗಳವಾರ, ಆಗಸ್ಟ್ 31, 2010

ನೆನಪಿನ ಬುತ್ತಿಯಿಂದ ಒಂದು ತುತ್ತು...


ಇವತ್ತು ಬೆಳಗ್ಗೆ- ಬೆಳಗ್ಗೆ ಏಳುತ್ತಲೇ ಇರುವಾಗ ಅತ್ತೆ ನನ್ನ ಬಳಿ ಬಂದು -" ದಿವ್ಯಾ ಬೇಗ ಬೇಗ ಮಿಂದಕ ಬಾ. ದೋಸೆಗೆ ಕುಂಬಳಕಾಯಿ ಪಾಯಸ ಮಾಡಿದ್ದಿ ತಿನ್ನಲಕ್ಕು "- ಅಂತ ಹೇಳಿದಾಗಲೇ ನನಗನ್ನಿಸಿತ್ತು. ಅಬ್ಬ !! ಇವತ್ತಿನ್ ದಿನ ಹಿಂಗೆ ಸಿಹಿ-ಸಿಹಿಯಾಗಿ ಕಳಿಲಿ ಅಂತ!!. ಹಾಗೆ ಸ್ನಾನಕ್ಕೆ ನೀರು ತಗೊಂಡು ಹೋಗುತ್ತಿರುವಾಗಲೇ ಮನಸಿಗೆ ಹೊಳೆದಿದ್ದು.. ಅರೆ!! ಈ ನನ್ನ PG ಗೆ ಬಂದು ಇವತ್ತಿಗಾಗಲೇ ಮೂರು ವರುಷಗಳು. hurray !! happy third year of PG living ಅಂತ ನನಗೆ ನಾನೇ ಒಂದು ಸಾರಿ ಹೇಳಿಕೊಂಡೆ. ಅತ್ತೆ ಸರಿಯಾದ ದಿನಕ್ಕೆ ಸಿಹಿ ಮಾಡಿದ್ದಾಳೆ. ಎಂಥ ಕಾಕತಾಳಿಯ!!

ಮುಂದೇನು ಅಂತ ಸ್ವಲ್ಪನೂ ಚಿಂತೆ ಮಾಡದಿದ್ದ ನನಗೆ ಅದೃಷ್ಟವೋ , ನನ್ನ ಅಮ್ಮ-ಅಪ್ಪ ಮಾಡಿದ ಪುಣ್ಯದ ಪಲವೋ ಏನೋ ಗೊತ್ತಿಲ್ಲ. ಕಾಲೇಜ್ ಮುಗಿಯುತ್ತಿದ್ದ ಹಾಗೆ ಕರೆದು ಕೆಲಸ ಕೊಟ್ಟಂಗೆ ಕೆಲಸ ಸಿಕ್ಕಿಬಿಟ್ಟಿತು. ಆಮೇಲೆ ಅಪ್ಪ ಮೈಸೂರ್ ನಲ್ಲಿ ನನ್ನ trainingಗೆ ಬಿಟ್ಟು, ಅಲ್ಲಿ ಇರುವ ಸೆಕ್ಯೂರಿಟಿ ಅವರ ಹತ್ತಿರ ನನ್ನ ಮಗಳು,ನಾವು ಯಾವತ್ತೂ ಹೀಗೆ ಹೊರಗೆ ಬಿಟ್ಟಿರಲಿಲ್ಲ. ಸ್ವಲ್ಪ ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದ ಅಪ್ಪನ ಕಾಳಜಿಗೆ ನಾನು ಮೂಕ ವಿಸ್ಮಿತನಾಗಿದ್ದೆ . ಇನ್ನೇನು ಹೊರಡುವ ಹೊತ್ತಿಗಾಗಲೇ ಅಳುವ ಅಪ್ಪನನ್ನು ಸಮಾಧಾನಿಸಿ , ಟಾಟ ಎಂದು ಬೀಳ್ಕೊಟ್ಟಗಲೇ, ನನಗೆ ಮದುವೆ ಮಾಡಿ ಕಳಿಸಿ ಕೊಟ್ಟ ಅನುಭವನೇ ಆಗಿತ್ತಲ್ಲ!! ಎಷ್ಟಾದರೂ ಮೊದಲ ಸಾರಿ ಮನೆ ಬಿಟ್ಟಿದ್ದು. ಅಪ್ಪ, ಅಮ್ಮ ,ತಂಗಿ! ಇನ್ಯಾರು ನನ್ನ ಜೊತೇಲಿ ಇರೋಲ್ಲ. ಬದುಕನ್ನು ನೀನೇ ಸ್ವಂತವಾಗಿ ನಿಭಾಯಿಸಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸವಾಲುಗಳನ್ನು ಎದುರಿಸಬೇಕು. ಎಲ್ಲಕ್ಕಿಂತ ಮುಕ್ಯವಾಗಿ ಕೆಟ್ಟತನದಿಂದ ಆದಷ್ಟು ದೂರವಿದ್ದು, "ಒಳ್ಳೆ ಹೆಸರು" ಇಟ್ಟುಕೊಳ್ಳಬೇಕು. ಇದು ಎಲ್ಲಕ್ಕಿಂತ ದೊಡ್ಡ ಕಷ್ಟದ ವಿಷಯ. ಅಮ್ಮ ಅಂತೂ ಪದೇ ಪದೇ , ತಂಗಿ ದುಡ್ಡು ಕರ್ಚು ಆಗ್ತು ಹೇಳಿ ನೋಡದ. ನಿಂಗೆ ಎಂತ ಬೇಕೋ ಅದ್ನ ತಗಂಡ್ ತಿನ್ನು. ಹಾಳು ಮೂಳು ತಿನ್ನಡ . ಗೋಲ್ ಗಪ್ಪ ತಿನ್ನಡ. ಹಣ್ಣು ತಿನ್ನು ಆದಷ್ಟು ಅಂತ ಹೇಳಿದ್ದು, ನನ್ನ ತಂಗಿ- ಅಕ್ಕ ನಂಗೆ ನೀ ಇಲ್ದೆ ಇದ್ರೆ ಸಕತ್ ಬೋರ್ ಹೊಡಿತು, ಎಂತ ಮಾಡಕೆನ ಅಂತ ಅಸಹಾಯಕಳಾಗಿ ಕಣ್ಣಲ್ಲಿ ನೀರು ಬರಿಸಿಕೊಂಡಿದ್ದು, ಎಲ್ಲವೂ ನೆನಪಾಯಿತು. ಹೊರಡುವ ಹೊತ್ತಿಗಾಗಲೇ ಅವರೆಲ್ಲ ಫೋಟೋಗಳನ್ನು ಎತ್ತಿಕೊಂಡು, ಬಂದಿದ್ದೆ. ಅದೀಗ ನನ್ನ ರೂಮಿನ ಗೋಡೆಯ ಮೇಲೆ ಸುಶೋಭಿತ.

ಆಮೇಲೆ ಶುರುವಾಗಿದ್ದು ಮಣ್ಣು ಹೊರುವುದು.training ಮುಗಿಸಿ ಬೆಂಗಳೂರಿಗೆ ಬಂದ ಮೇಲೆ PG ಗಾಗಿ ಹುಡುಕಾಟ. ಜೊತೇಲಿ ಇದ್ದಿದ್ದು ಒಂದೇ ಊರಿನವರಾದ ,ಇಬ್ಬರು ಸ್ನೇಹಿತೆಯರು. ಕೈಯಲ್ಲಿ ಸರಿಯಾಗಿ 5000 ರೂಪಾಯಿ ಹಣ.ಅಂತೂ ಇಂತೂ PG ಸಿಕ್ಕಿ , ಸದ್ಯಕ್ಕೆ ಇದ್ದು ಬಿಡೋಣ. ಆಮೇಲೆ ಸರಿಯಾಗಲಿಲ್ಲ ಎಂದರೆ ಮತ್ತೆ ಹುಡುಕೋಣ ಎಂದು ತೀರ್ಮಾನಿಸಿ ಉಳಿದುಕೊಂಡು ಬಿಟ್ಟೆವಲ್ಲ. ಅಲ್ಲಿನ ಅಡಿಗೆ ಊಟ ಜೀವನ ಪೂರ್ತಿ ಮರೆಯಲಾಗದ ದಿನಗಳು.ಸಾಂಬಾರು ,ಚಟ್ನಿ,ಪಲ್ಯ ಎಲ್ಲದಕ್ಕೂ ಒಂದೇ ರುಚಿ. ಮೆಣಸಿನ ಕಾಯಿಯ ತರಹವೇ. ನಾನಂತೂ ಊಟಕ್ಕಿಂತ ಹೆಚ್ಚು ನೀರು ಕುಡಿದೇ ಹೊಟ್ಟೆ ತುಂಬಿಸಿಕೊಂಡ ದಿನಗಳೇ !! ಅಂಥ ಖಾರ .ನನಗಂತೂ ಆ PG ಬಿಟ್ಟು ಓಡಿ ಹೋಗುವ ಕೋಪ. ಅದೇ ಸಮಯಕ್ಕೆ ದೇವರ ಹಾಗೆ ಸಿಕ್ಕ ನೆಂಟರೊಬ್ಬರು ನಾನೀಗೆ ಇರುವ PG ಯ ವಿಳಾಸ ತಿಳಿಸಿ, ಅಲ್ಲಿಗೆ ಹೋಗಿ ನೋಡು ಎಂದರು. ನಾನಂತೂ ಹೇಗಾದರೂ ಇರಲಿ. ನಮ್ಮ ಜಾತಿಯದೆ ಅಂತ ಗೊತ್ತಾದ ಮೇಲೆ ಹೇಗಿದ್ದರೂ adjust ಮಾಡಿಕೊಳ್ಳೋಣ ಅಂತ ಹೊರಟೇ ಬಿಟ್ಟೆ. ಸ್ನೇಹಿತೆಯರು ಯಾರೂ ಬರಲು ಒಪ್ಪಲಿಲ್ಲ. ಬೊಮ್ಮನಹಳ್ಳಿಯಿಂದ ಬನಶಂಕರಿ ಒರೆಗೆ ಹೊರಟು ಬಂದೆ ಆಟೋದಲ್ಲಿ. ಮೊದಲಿದ್ದ PG ಯಿಂದ ಆಫೀಸು ಕೇವಲ 10 ನಿಮಿಷದ ದಾರಿ,ಈಗ ಒಂದು ವರೆ ಘಂಟೆಯ ದಾರಿ . ಆದರೂ ಸೈ ಎಂದಿದ್ದೆ. ಡೈರಿಯಲ್ಲಿ ಬರೆದ ತಾರೀಕು ತೆಗೆದು ನೋಡಿದೆ. ಆಗಸ್ಟ್ 31 , ಭಾನುವಾರ, 2007 ,ಬೆಳಗ್ಗೆ 11 .30

ನನಗೆ ಕೊಟ್ಟ ಜಾಗ ಒಂದು bunker , ಹಾಗೇ ಗೋದ್ರೆಜ್ ನಲ್ಲಿ ಸರಿಯಾಗಿ ಅರ್ಧ ಪಾಲು. ನನಗಂತೂ ಅಳುವೇ ಬಂದ ಹಾಗಾಗಿತ್ತು.ಮೊದಲೇ ನನಗೆ ಬಟ್ಟೆ crazu !! ಎಲ್ಲಿ ಇಡ್ಲಿ ನನ್ನ ಬಟ್ಟೆಗಳನ್ನು?ನಾನು ತಂದ ಬಟ್ಟೆಗೆ ಜಾಗ ಸಾಲೊಲ್ಲ. ಇನ್ನು ಮುಂದೆ ನಾನು ತೆಗೆದುಕೊಳ್ಳೋ ಬಟ್ಟೆಗೆ ಜಾಗ ಎಲ್ಲಿ ಅಂತ ಒಂದು ಸಾರಿ ಚಿಂತೆ ಆದರೂ,ಅಮ್ಮ adjust ಮಾಡ್ಕಳಕಪ. ಹಂಗೆಲ್ಲ ಬೇಜಾರ್ ಮಾಡ್ಕಳ್ಳಾಗ ಅಂದಿದ್ದಕೆ ಸಮಾಧಾನಗೊಂಡಿದ್ದು. ಹಾಗೇ ಇನ್ನೊಂದು ಸಲ, ಗೆಳತಿ ನನ್ನ ರೂಮಿಂದ ನನ್ನ ಪುಸ್ತಕ ನನ್ನ ಕೇಳದೆ ತೆಗೆದುಕೊಂಡು ಹೋಗಿ,ಅದನ್ನು ತಾರಸಿಯ ಮೇಲೆ ಬಿಟ್ಟು ಮಳೆಗೆ ಪುಸ್ತಕ ಎಲ್ಲ ಹಾಳಾಗಿ ನಾನು ಬಿಕ್ಕಿ ಬಿಕ್ಕಿ ಅತ್ತಿದ್ದು. ಅವಾಗ ಅತ್ತೇನೆ ಹೇಳಿದ್ದು. ಇದೆಲ್ಲ ಎಂತು ಅಲ್ಲ,ನೀ ಇದಕ್ಕೆ ಅತ್ತರೆ ಮುಂದೆ ಎಂತ ಎಂತ ಕಾಣಕ ಅಂದಿದ್ದು !... ನನ್ನ ಏಕಾಂತ,ನನ್ನ ಸಿಟ್ಟು,ನನ್ನ ದುಃಖ, ನನ್ನ ಸಂತೋಷ, ನನ್ನ ನೋವು ಎಲ್ಲವನ್ನು ಸಮಾಧಾನವಾಗಿ ಕೇಳಿಸಿಕೊಳ್ಳೋ ಗಂಡನ ಹಾಗೇ ನನ್ನ teddy bear. ಅಲ್ಲೇ ಮಂಚಕ್ಕೆ ಒರಗಿ ಕೂತು ಯಾವಾಗಲು ನನ್ನೇ ನೋಡುವುದು!! ಎಷ್ಟೆಲ್ಲಾ ಇದೆ ಗಮನಿಸಿದರೆ.

ಅಷ್ಟೇ. ಯಾವ PG ಯಲ್ಲೂ waw factor !! ಇರೋಲ್ಲ ಅನ್ನದು ನನ್ನ ಅನಿಸಿಕೆ. managable ಆಗಿದ್ದರೆ ಸಾಕು. ಊಟ ರುಚಿಯಾಗೆ ಇರಬೇಕು,ಹಾಗೆ ಇರಬೇಕು,ಹೀಗೆ ಇರಬೇಕು ಅಂತೇನೂ ಇಲ್ಲ. ಹೊಟ್ಟೆ ತುಂಬಿದರೆ ಆಯಿತು ನನಗೆ. ಆದ್ರೆ ತೀರ ಮೆಣಸಿನಕಾಯಿ ತರ ತಿನ್ನಕ್ಕಾಗಲ್ಲ. ಎಲ್ಲವೂ ಹಿಡಿಸಿತು.ದಿನಗಳು ಹೋದಂತೆ PG ಪ್ರಿಯವಾಗತೊಡಗಿತು.ಅದನ್ನು ಬಿಟ್ಟು ಬೇರೆ ಕಡೆ ಹೋಗುವುದೇ ಬೇಡ ಅನ್ನುವ ಮಟ್ಟಿಗೆ. ಹಾಗೇ PG ನೋಡಿಕೊಳ್ಳುತ್ತಿರುವ (ನಾವೆಲ್ಲಾ ಅತ್ತೆ ) ಎಂದೇ ಕರೆಯುವ ಒಳ್ಳೆ ಸಂಭಂದ ಸಿಕ್ಕಿತು. ಸ್ವಂತ ಮಕ್ಕಳಲ್ಲದಿದ್ದರು ಸಮಯಕ್ಕೆ ಊಟ ಮಾಡಿ ಎಂದು ಹೇಳುವ ಅತ್ತೆಯ ಪ್ರೀತಿ ,ಎಲ್ಲ ಸಿಕ್ಕಿದೆ PG ಯಿಂದ. ಬೆಂಗಳೂರಿನ ನನ್ನ ಆಶ್ರಯ ತಾಣ ಎಂದರೂ ತಪ್ಪಾಗಲಾರದು.ಈ ಕಳೆದ ಮೂರು ವರುಷಗಳಲ್ಲಿ ಕಲಿತಿದ್ದು ಬಹಳಿದೆ.ದಿವ್ಯಾ ಈಗ ಮೂರು ವರುಷ ದೊಡ್ಡವಳಾಗಿದ್ದಾಳೆ. ಅತ್ತೆ ಹೇಳುತ್ತಾಳೆ, ಮದುವೆ ಆಗಿಯೇ ನೀನು ಈ PG ಬಿಟ್ಟು ಹೋಗು.ಅಲ್ಲಿವರೆಗೆ ಬಿಡಬೇಡ ಅಂತ.ಅವರ ಮಾತಿಗೆ ನನ್ನ ಸಹಮತವೂ ಇದೆ... :-)

ಆಫೀಸ್ ಗೆ ಬಸ್ನಲ್ಲಿ ಬರುವಾಗಾಗಲೆಲ್ಲ ಇವತ್ತು ನನಗನ್ನಿಸಿದ್ದು ಇಷ್ಟು, ಇಷ್ಟೇ , ಮಾಮರವೆಲ್ಲೋ , ಕೋಗಿಲೆಯೆಲ್ಲೋ.. ಏನೀ ಸ್ನೇಹಾ ಸಂಬಂಧ ...ಎಲ್ಲಿಯದೋ ಈ ಅನುಬಂಧ !!

(ಚಿತ್ರಕೃಪೆ: ಅಂತರ್ಜಾಲ)

23 ಕಾಮೆಂಟ್‌ಗಳು:

Praveen ಹೇಳಿದರು...

What is waw factor?

Badarinath Palavalli ಹೇಳಿದರು...

"ದೋಸೆಗೆ ಕುಂಬಳಕಾಯಿ ಪಾಯಸ "

ಆಹಾ ದಿವ್ಯಾ ಅವರೇ ಓಪನ್ನಿಂಗೇ ಸೂಪರ್ರು...

ನನಗನಿಸಿದ್ದು: ನಾನು ಫ್ರೀ ಹಾಸ್ಟೆಲ್ನಲ್ಲಿ ಬೆಳೆದವನು. ಪಿ.ಜಿ.ಗಳ ತಾಪತ್ರಯವನ್ನೂ ಹತ್ತಿರದಿಂದ ಕಂಡಿದ್ದೇನೆ. ಆದರೂ ದುಡಿವ ಮಹಿಳೆಗಳಿಗೆ ಒಳ್ಳೆ ಆಶ್ರಯ ತಾಣ ಈ ಪಿ.ಜಿ ಅಲ್ವ?

ನನ್ನ ಬ್ಲಾಗಿಗೆ ಒಮ್ಮೆ ಬಂದು ಹೋಗಿ...

Naveen ಹಳ್ಳಿ ಹುಡುಗ ಹೇಳಿದರು...

Congrats Divya.. :)

shridhar ಹೇಳಿದರು...

nice one .. naanu 1995 iMda hostelnalle iddu kalita bandawnu .. so ella taapatrayagaLu naanu balle ..
Olleya baraha .. Happy third year :)

shivu.k ಹೇಳಿದರು...

ಅಭಿನಂದನೆಗಳು ದಿವ್ಯ,

ನಿನ್ನ ಪಿಜಿ ಕತೆ ತುಂಬಾ ಇಡಿಸಿತು. ನಿನ್ನ ನಿರ್ಧಾರ ಸರಿಯಿದೆ. "ಮತ್ತೆ ಗೋಲ್ ಗಪ್ಪ ತಿನ್ನಡ. ಹಣ್ಣು ತಿನ್ನು"

ತಿಳೀತಾ....all the best.

ಸೀತಾರಾಮ. ಕೆ. / SITARAM.K ಹೇಳಿದರು...

ಚೆಂದದ ಮೆಲುಕು. ನನ್ನ ವಿದ್ಯಾರ್ಥಿ ನಿಲಯದ ನೆನಪಾಯಿತು.

sunaath ಹೇಳಿದರು...

PGಯ ಕಟುಮಧುರ ಯಾತ್ರೆ! ಹಳೆಯದನ್ನು ನೆನದಾಗೆಲ್ಲ ಸುಖವೇ ಅನಿಸುವದು, ಅಲ್ಲವೆ?

ಸುಮ ಹೇಳಿದರು...

nice.. Divya . ಹೊಂದಾಣಿಕೆಯೇ ಬದುಕು ಅಲ್ಲವೇ.

jithendra hindumane ಹೇಳಿದರು...

ಎಷ್ಟೇ ಆದ್ರೂ ಪಿಜಿ..ಪಿಜಿನೇ...ಆದ್ರೂ ನೀವು ಅಲ್ಲಿ ಹೊದಿಕೊಡಿರುವದು ಸಾಹಸವೇ, ಮತ್ತು ಬದುಕಿನ ಅನಿವಾರ್ಯ ಕೂಡ. ಆದಸ್ಟು ಬೇಗ ಮನೆ , ಮನೆಊಟ ದೊರೆಯಲಿ ಎಂಬ ಹಾರೈಕೆ ನನ್ನ ಕಡೆಯಿಂದ....!

ದಿನಕರ ಮೊಗೇರ ಹೇಳಿದರು...

ದಿವ್ಯಾ,
ಪಿ ಜಿ ಯಲ್ಲಿ ಮೂರು ವರ್ಷ ಕಳೆದದ್ದಕ್ಕೆ ಶುಭಾಶಯ.....ಹಳೆ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ...... ನಿಮ್ಮ ಅತ್ತೆ ಹೇಳಿದ ಹಾಗೆ ಮದುವೆ ಮಾಡಿಕೊಂಡೇ ಪಿ ಜಿ ಬಿಟ್ಟು ಹೋಗಿ......

ಚೆಂದುಳ್ಳಿ ಹೇಳಿದರು...

ಚೆನ್ನಾಗಿದ್ದು ನಿನ್ನ ೩ ವರ್ಷದ ಸಿಹಿನೆನಪು. ಮನಸಿನಾಳದ ಮಾತು, ಮನ ಮುಟ್ಟುವ writing !!!

ದಿವ್ಯಾ ಈಗ ಮೂರು ವರುಷ ದೊಡ್ಡವಳಾಗಿದ್ದಾಳೆ. .. ಹಹಹ..

ಸಾಗರದಾಚೆಯ ಇಂಚರ ಹೇಳಿದರು...

ದಿವ್ಯ

ಮಸ್ತ ಇದ್ದು ನಿನ್ ಕಥೆ

ಎಂತ ದೋಸೆ , ಕುಂಬಳಕಾಯಿ ಪಾಯಸ ಹೇಳಿ ಹೊಟ್ಟೆ ಉರಸ್ತ್ಯೆ?

Greeshma ಹೇಳಿದರು...

ಊಟದ್ದೇ ತಾಪತ್ರಯ ಹಾಸ್ಟೆಲ್/pg ಗಳಲ್ಲಿ.
Lucky! ನಮ್ಮವರದ್ದೆ PG ಸಿಕ್ಕಿದ್ ಚಲೋ ಆತು :)

ಕ್ಷಣ... ಚಿಂತನೆ... ಹೇಳಿದರು...

ಅಭಿನಂದನೆಗಳು.

ದಿವ್ಯಾ ಮಲ್ಯ ಕಾಮತ್ ಹೇಳಿದರು...

"ಯಾವ PG ಯಲ್ಲೂ waw factor !! ಇರೋಲ್ಲ" -- 100% correct Divya :-) ಸುನಾಥ್ ಅವರು ಹೇಳಿದಂತೆ ಹಳೆಯದನ್ನು ನೆನದಾಗೆಲ್ಲ ಸುಖವೇ ಅನಿಸುವದು ಎಂಬ ಮಾತು ನಿಜ..

ಮನಮುಕ್ತಾ ಹೇಳಿದರು...

ವಾವ್..! ಕು೦ಬಳಕಾಯಿ ಪಾಯ್ಸ..ಯ೦ಗ೦ತೂ ಪಾಯ್ಸ ಅ೦ದ್ಕುಡ್ಲೆ ಬಾಯಲ್ಲೆಲ್ಲಾ ನೀರು ಬ೦ತು.
ಜೀವನದಲ್ಲಿ ಯಾವುದೇ ಸಮಯದಲ್ಲು ಹೊ೦ದಾಣಿಕೆ ಮಾಡ್ಕ್ಯ೦ಡು ಇಪ್ಲಾಗ್ತು ಹೇಳದು ಒ೦ದು ತರ ಖುಶಿ ಕೊಡ ವಿಚಾರವೇ ಸೈ.ಶುಭವಾಗಲಿ.
ಅಮ್ಮ ಅಪ್ಪನ ಸಿಹಿಮಾತುಗಳನ್ನ ನೆನಪಿಸಿಕೊಳ್ಳುತ್ತಾ ಬರೆದ ನಿಮ್ಮ ಮನಸಿನಾಳದ ಮಾತುಗಳು ಹಿಡಿಸಿದವು.

umesh desai ಹೇಳಿದರು...

ದಿವ್ಯ ಆಪ್ತವಾದ ಬರಹ ಛಲೋ ಅದ

ವನಿತಾ / Vanitha ಹೇಳಿದರು...

ದಿವ್ಯ, ಒಳ್ಳೆ aunty ಸಿಕ್ಕುಲೆ ಒಳ್ಳೆ ಪುಣ್ಯ ಮಾಡಿದ್ದೆ ನೋಡು!!ಮಸ್ತ್ ಬರದ್ದೆ..:-)

ಪ್ರವೀಣ್ ಭಟ್ ಹೇಳಿದರು...

nenapina buttyinda olle tuttanne tegadu kottidde.. nangu nan odid free hostel nenapatu.. bariti adru bagge inyavagadru..

baraha super..

Pravi

Prasad Shetty ಹೇಳಿದರು...

bega maduve madkondu, PG ge good bye heli.. :)

Ashok.V.Shetty, Kodlady ಹೇಳಿದರು...

Divya,

Tumbaa chennagide baraha, aleya nenapugalu yaavagalu Sundara...

http://ashokkodlady.blogspot.com/

ಮನಸಿನ ಮಾತುಗಳು ಹೇಳಿದರು...

@ALL friends,
thanku so much .... :-)

ಸುಧೇಶ್ ಶೆಟ್ಟಿ ಹೇಳಿದರು...

ಎಷ್ಟು ತಡವಾಗಿ ಓದಿದೆ... ಬೆ೦ಗಳೂರಿನ ನನ್ನ ಪಿ.ಜಿ.ಯ ದಿನಗಳಿಗೆ ಕರೆದೊಯ್ಯಿತು...! ನಾನು ಬೆ೦ಗಳೂರಿಗೆ ಬ೦ದಾಗ ಕೈಯಲ್ಲಿ ಇದ್ದಿದ್ದು ೫೦೦೦. ಜೆ.ಪಿ. ನಗರದಲ್ಲಿ ಮೊದಲು ನೋಡಲು ಹೋದ ಪಿ.ಜಿ. ಮತ್ತು ಅಲ್ಲಿನ ಪ್ರಶಾ೦ತವಾದ ಏರಿಯಾ ನೋಡಿ ಅಲ್ಲಿಯೇ ಅಡ್ವಾನ್ಸ್ ಕೊಟ್ಟು ಸೇರಿ ಬಿಟ್ಟಿದ್ದೆ. ಊಟ ಚೆನ್ನಾಗಿ ಇಲ್ಲದಿದ್ದುದರಿ೦ದ ಬೇರೆ ಪಿ.ಜಿ.ಗೆ ಹೋಗಬೇಕು ಅ೦ತ ಹೇಳುತ್ತಲೇ ಆ ಪಿ.ಜಿ.ಯಲ್ಲಿ ೪ ವರುಷ ಕಳೆದು ಬಿಟ್ಟಿದ್ದೆ. ಮೊನ್ನೆ ಬೆ೦ಗಳೂರು ಬಿಟ್ಟು ಮು೦ಬಯಿಗೆ ಬರೋವಾಗ ಅಡುಗೆಯವರು ಕಣ್ಣಲ್ಲಿ ನೀರು ತು೦ಬಿಕೊ೦ಡು ನನ್ನ ಕಣ್ಣಲ್ಲೂ ನೀರು ಬರುವ ಹಾಗೆ ಮಾಡಿದ್ದರು!

ತು೦ಬಾ ಚೆನ್ನಾಗಿ ಬರೆದಿದ್ದೀರಾ ದಿವ್ಯಾ... ಇ೦ತಹ ಬರಹಗಳು ತು೦ಬಾ ಹತ್ತಿರವಾಗುತ್ತದೆ ಮನಸಿಗೆ :)