
ಬಸ್ಸೆಲ್ಲ full ಖಾಲಿ...ಅದು ಯಾವ ಬಸ್ಸು, ಏನೂ ಗೊತ್ತಿಲ್ಲ ... ತುಂಬಾ ದಿನಗಳಿಂದ ನೋಡಬೇಕು ಎಂದುಕೊಂಡ ಆದರೆ (ಇದುವರೆಗೂ ನೋಡದ ) ಗಗನಚುಕ್ಕಿ- ಭರಚುಕ್ಕಿ ಫಾಲ್ಸ್ ನೋಡಲು ಹೊರಟಿದ್ದೆ ...ಒಬ್ಬಳೇ!!!! ಒಂದು ticket ಕೊಡಿ shivanasamudram ಗೆ ಎಂದು conductor ಹತ್ತಿರ ಹೇಳಿದ್ದು ಮಾತ್ರ ಗೊತ್ತು... ಬಸ್ಸಿನಲ್ಲಿ ಕಿಟಕಿಯಾಚೆ ನೋಡುತ್ತ ಕುಳಿತಿದ್ದವಳಿಗೆ ಏನೇನೋ ಯೋಚನೆಗಳು ....ನನ್ನ ಜೊತೆಗೆ ನನ್ನ ಜೀವದ ಗೆಳೆಯ (ಅಸಲಿಗೆ ಇರುತ್ತಾನೋ ಇಲ್ಲವೊ ಅದು ಬೇರೆ ವಿಷಯ) ಇದ್ದರೆ ಎಷ್ಟು ಸೋಗಸಾಗಿರುತಿತ್ತು.. "ಮೊಗ್ಗಿನ ಮನಸು " hero-heroine ತರಹ" duet "ಹಾಡಿಕೊಂಡು ಬರಬಹುದಿತ್ತು ಹೀಗೆ ... ಅಂತು- ಇಂತೂ ಶಿವನಸಮುದ್ರ ಬಂದೇ ಬಿಟ್ಟಿತು.. ಬಸ್ಸಿಂದ ಕೆಳಗಿಳಿದು ನೋಡಿದರೆ ಯಾರೂ ಇಲ್ಲ ಅಲ್ಲಿ... ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಯಬ್ಧ ...ಯಾರೂ ಇಲ್ಲ..
ಪ್ರವಾಸಿ ತಾಣವಾದ ಅದು ಜನವಿಲ್ಲದೆ ,ಒಂದು ತರಹದ ಏಕಾಂತವೋ ,ಒಂಟಿತನವೋ ಅನುಭವಿಸುತ್ತಿದ್ದಂತೆ ತೋರಿತು.. ಒಂದೆರಡು ಹಕ್ಕಿಗಳ ಕೂಗು ಅಲ್ಲಲ್ಲಿ ..... ಧೋ ಎಂದು ಬೀಳುವ ನೀರಿನ ಶಬ್ದ.. ಗಾಳಿಗೆ ಅಲ್ಲಾಡುತ್ತಾ ಮಾತಾಡುತ್ತಿರುವ ಮರದೆಲೆಗಳು.. ತುಂತುರು ನೀರಿನ ಹನಿಗಳು ಬಿದ್ದು ಹಾಗೇ ಸುಮ್ಮನೆ ಮಲಗಿರುವ ಹುಲ್ಲಿನ ರಾಶಿ...
ಅಬ್ಬ! ಎಷ್ಟು ಸೊಗಸು ಪ್ರಕೃತಿ.....
ಹಾಗೆ ನೋಡುತ್ತಾ ನೋಡುತ್ತಾ ಮುಂದೆ ನಡೆದೆ..... ಹಾಲಿನ ಹಾಗೆ ನೊರೆ ನೊರೆಯಾಗಿ ಹರಿಯುವ ನೀರು, ಜಗತ್ತಿನ ಯಾವುದೇ ನೋವು, ಜಂಜಾಟ ತನಗೆ ಸಂಭಂಧಿಸಿಲ್ಲ ಎನ್ನುವ ಹಾಗೆ ಬೀಳುವುದನ್ನು ಕಂಡು ಒಮ್ಮೆ ಮುಟ್ಟುವ ಮನಸ್ಸಾಯಿತು.. ಮುಂದೆ ಹೋಗುತ್ತಾನೆ ಇದ್ದೀನಿ..ಹೋದೆ ಹೋದೆ ಹೋದೆ...ಅದೆಲ್ಲಿ ಒಂದು ಕಂದಕ ಇತ್ತೋ ಗೊತ್ತಿಲ್ಲ.. ನೀರಿಗೆ ಬಿದ್ದಿದೀನಿ.. ಇನ್ನೇನು ಸಾಯುತ್ತೀನಿ ಎಂದು ಖಾತ್ರಿಯಾಗಿ ಬಿಟ್ಟಿದೆ.. ನೀರಿನಲ್ಲಿ ಸಂಪೂರ್ಣ ಮುಳುಗಿದ್ದೀನಿ... ಇನ್ನು ಈ ಲೋಕದ ಋಣ ಮುಗಿಯಿತು ಎಂದುಕೊಳ್ಳುತ್ತಿರುವಾಗಲೇ ಯಾರೋ ಕೂಗಿದಂತಾಗಿ ಎಚ್ಚೆತ್ತುಗೊಂಡೆ...ನೋಡಿದರೆ ನಾನು office ಇಂದ ಹಿಂತಿರುಗಿ ಬರುತ್ತಿರುವ ಬಸ್ಸು ಇನ್ನೂ silk board ನಲ್ಲೆ ನಿಂತಿತ್ತು.ಸರಿ ಸುಮಾರು 45 ನಿಮಿಷ ಬಸ್ಸು ನಿಂತಲ್ಲೇ ನಿಂತಿತ್ತು.... ಅತಿಯಾದ ಮಳೆಯಿಂದ full traffic-jam ಆಗಿತ್ತು ... ಹಾಗೆ ಕಣ್ಣು ಮುಚ್ಚಿದವಳಿಗೆ ಈ ಕನಸು ಬಿದ್ದಿತ್ತು...
ಬರೀ ಕನಸೇ ಅಲ್ಲವ ಎಂದುಕೊಂಡು ನಿಟ್ಟುಸಿರು ಬಿಟ್ಟೆ.. ಬಸ್ಸು ಮುಂದಕ್ಕೆ ಚಲಿಸಿತು ನನ್ನ ಯೋಚನೆಗಳ ಜೊತೆಗೆ...