ಗುರುವಾರ, ಆಗಸ್ಟ್ 09, 2012

ಕೋರಿಕೆ

ತೀರ ನಿನ್ನೆ ಮೊನ್ನೆಯೇ ನಡೆದಂತೆ ಇದೆ ಎಲ್ಲವೂ
ಅವನ ಕಂಡು, ಮಾತಾಡಿ, ಮುಂದಿನ ಬದುಕಿನ
ಕನಸುಗಳನ್ನು ಕಟ್ಟಿದ್ದು, ಮುಸ್ಸಂಜೆ ವೇಳೆ.
ವಾರದ ಕೊನೆ ಬರುತ್ತಲೇ ಅವನ ಭೇಟಿಯಾಗಲು
ಕಾದ ನಿರೀಕ್ಷೆ, ಮಸ್ಸಾಲ್ ಪೂರಿಯೊಂದಿಗೆ ಕೊನೆಗೊಂಡಿದ್ದು.
ಕೂಡಿ ನಕ್ಕು, ಅತ್ತು , ತಿಂದು , ರಸ್ತೆ ತಿರುಗಿದ ಲೆಕ್ಕ ಎಷ್ಟೋ ?
ಹಿರಯರೆಲ್ಲ ಸೇರಿ , ಆಯ್ದುಕೊಂಡ ಒಂದು ದಿನ,
ಬರಿದಾದ ನನ್ನ ಕೈಗಳಲ್ಲಿ ಮದರಂಗಿಯ ರಂಗು.
ಕರೆಯೋಲೆಗಾಗಿ ತಿರುಗಿದ್ದೆಷ್ಟೋ ? ಮನೆಗಾಗಿ ಹುಡುಕಿದ್ದೆಷ್ಟೋ ?
ತೀರ ನಿನ್ನೆ ಮೊನ್ನೆಯೇ ನಡೆದಂತೆ ಇದೆ ಎಲ್ಲವೂ
ರೇಶಿಮೆ ಸೀರೆ ಉಟ್ಟು ಮಂಟಪಕ್ಕೆ ನಾ ನಡೆದುಬಂದ ಘಳಿಗೆ.
ಆಮೇಲೆಲ್ಲಾ ದಿನಗಳು ಹೇಗೆ ಕಳೆಯಿತೋ ?
ಕ್ಷಣಗಳು ,ದಿನಗಳು ,ವಾರಗಳು ಕಳೆದಿದ್ದೆ ತಿಳಿಯಲಿಲ್ಲ.
ಮದುವೆಯಾಗಿ ಕಳೆದ ಮೂರು ಮಾಸಕ್ಕೆ ಇಷ್ಟೇ ಕೋರಿಕೆ,
ಇದೇ ತರದಲ್ಲಿ ಯುಗಗಳೆಲ್ಲ ಕ್ಷಣದಂತೆ ಉರುಳಿ,
ಬದುಕು ಹಸನಾಗಿ ನಲಿಯಲಿ ಎಂದಷ್ಟೇ!

5 ಕಾಮೆಂಟ್‌ಗಳು:

Unknown ಹೇಳಿದರು...

mast akko :)

Badarinath Palavalli ಹೇಳಿದರು...

ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಮೇಡಂ.

ಸವಿಯಾದ ಸಂಸಾರ ಕ್ರಮಿಸುವ ಹಾದಿಯೇ ಹಾಗೆ, ಅದು ಗೊತ್ತೇ ಆಗುವುದಿಲ್ಲ!

www.badari-poems.blogspot.com

sunaath ಹೇಳಿದರು...

ದಿವ್ಯಾ,
ನಿಮ್ಮ ಬಾಳೆಲ್ಲ ಹೀಗೇ ಸಂಭ್ರಮಮಯವಾಗಿರಲಿ ಎಂದು ಹಾರೈಸುತ್ತೇನೆ.

Unknown ಹೇಳಿದರು...

nice Divya:)

ಸೀತಾರಾಮ. ಕೆ. / SITARAM.K ಹೇಳಿದರು...

ನಿಮ್ಮ ಬಾಳೆಲ್ಲ ಹೀಗೇ ಸಂಭ್ರಮಮಯವಾಗಿರಲಿ ಎಂದು ಹಾರೈಸುತ್ತೇನೆ