ಭಾನುವಾರ, ಜುಲೈ 22, 2012

ಮಳೆಯೆಂದರೆ....

ಮಳೆಯೆಂದರೆ ಅಲ್ಲಿ, ಅಜ್ಜನ ಮನೆಯಲ್ಲಿ ಸಂಭ್ರಮ, ಸಡಗರ.
ಮನೆಯ ಮತ್ತು ಕೊಟ್ಟಿಗೆಯ ಮಾಡು ಸೇರುವಲ್ಲಿ,
ಆಡಿಕೆ ಮರದ ದಬ್ಬೆಯ ಕಡಿದು ನೀರು ಸೋರದಂತೆ ಅಡ್ಡ ಬಿಗಿದು,
ನೀರಿಗೆ ದಾರಿ ಮಾಡುವುದು.
ಹಂಚಿನ ಮನೆಗೆ ಸೋರುವಲ್ಲೆಲ್ಲಾ, ಹಾಳೆ ಪಾಕ ಸಿಕ್ಕಿಸುವುದು.
ಬಲಿತ ಹಲಸಿನ ಕಾಯಿಯನ್ನು, ಒಂದೊಂದೇ
ಪರಿಶೀಲಿಸಿ, ಕೊಯ್ದು, ಬಿಡಿಸಿ ಸೊಳೆಯ ಬೇಯಿಸಿ, ಬೀಸಿ, ಒಣಗಿಸಿ,
ಡಬ್ಬಿ ತುಂಬಿ, ಮೆತ್ತಿಯ ಮೇಲಿರಿಸಿದ ಹಪ್ಪಳ ಇಳಿದು,
ಎಣ್ಣೆಯನ್ನು ಕೂಡಿ ಸಾಲಾಗಿ ಕುಳಿತ ಮಕ್ಕಳ ಬಾಯಿ ಸೇರುವುದು.
ಮಳೆಯೆಂದರೆ, ಬೇಸಿಗೆಯ ಧೂಳಿಗೆ ಕೆಂಪಾದ ಎಲೆಗಳು, ಹಸಿರಾಗುವುದು.
ಮಳೆಯೆಂದರೆ ಮಾವನಿಗೆ ಕಂಬಳಿಕೊಪ್ಪೆ ಹೊದೆದು,
ಅಡಿಕೆ ತೋಟದಲ್ಲಿ ಮಣ್ಣು ಸಮ ಮಾಡಿ,
ಅವಳೆಗಳಿಗೆ ನೀರು ಹೋಗಲು ದಾರಿ ಮಾಡುವುದು.
ಮಳೆಗಾಲವೆಂದರೆ ಅಜ್ಜಿ ಸುಟ್ಟು ಕೊಡುವ ಗೇರು ಬೀಜದ ಕಂಪು.
ಮಳೆಯೆಂದರೆ ಸೌದೆ ಮನೆಯಲ್ಲಿ ಬಚ್ಚಲ ಒಲೆಗೆಂದು ಬೆಚ್ಚಗಿಟ್ಟ ಕಟ್ಟಿಗೆಗಳು.
ಮಳೆಯೆಂದರೆ ಹಂಡೆಯಲ್ಲಿ ಕಾಯಿಸಿಟ್ಟ ಬಿಸಿನೀರನ್ನು ಪೂರ್ತಿ ಮೀಯುವುದು.
ಮಳೆಯೆಂದರೆ ಅಲ್ಲಿ, ಮನೆಯಿಂದ ಹೊರ ಹೊರಟಾಗ ಕಾಲಿಗಂಟುವ ಉಂಬಳ.

*****

ಮಳೆಯೆಂದರೆ ಇಲ್ಲಿ, ಓಡಾಡಲಾಗದ ಕೆಸರು,
ಬಟ್ಟೆ ಕೊಳೆಯಾದೀತೆಂಬ ಭಯ.
ಮಳೆಯೆಂದರೆ ಇಲ್ಲಿ ಜಕಮ್ಮಾಗುವ ಟ್ರಾಫಿಕ್ಕು,
ಮಳೆಯೆಂದರೆ ಇಲ್ಲಿ ಎಲ್ಲೆಂದರಲ್ಲಿ, ಹರಿಯುವ ಚರಂಡಿಯ ನೀರು.
ತೋಯದೇ ಮನೆ ಸೇರಿದರೆ ಅದೇ ನಿಟ್ಟುಸಿರು!!
ಭಾನುವಾರ ಸಂಜೆ, ಜಿಟಿ ಮಳೆ, ಬಿಸಿ ತಿಂಡಿ ಬೇಡುವ ನಾಲಿಗೆ.
ಇಲ್ಲಿ ಸುಟ್ಟ ಗೇರು ಬೇಜವೂ ಇಲ್ಲ!
ಕರಿಯಲು ಹಲಸಿನ ಕಾಯಿ ಹಪ್ಪಳವೂ ಇಲ್ಲ!
ಕೊನೆಗೆ, ಸುಟ್ಟ ಗೇರು ಬೀಜ ಇಲ್ಲದಿದ್ದರೇನು?
ಸುಂದರವಾಗಿ ಬಜ್ಜಿ ಮಾಡಬಹುದಲ್ಲ?
ಅನ್ನಿಸಿದ್ದೇ, ಖುರ್ಚಿಯಿಂದ ಜಿಗಿದು,
ಕಡಲೆ ಹಿಟ್ಟಿನ ಡಬ್ಬಿಯ ಕೆಳಗಿಳಿಸುವೆ.
ಈರುಳ್ಳೀ, ಮೆಣಸನ್ನು ಕತ್ತರಿಸಿ,ಕಲಸಿ
ಒಂದೊಂದೇ ಕಡಾಯಿಗಿಳಿಸುವೆ,
ಅಜ್ಜಿ ಪಕ್ಕಕ್ಕೇ ನಿಂತಂತೆ ಭಾಸವಾಗುತ್ತದೆ,
ಮಳೆಯನ್ನು ಮತ್ತೊಮ್ಮೆ ನೋಡುತ್ತೇನೆ, ಕುತೂಹಲದಿಂದ!!

10 ಕಾಮೆಂಟ್‌ಗಳು:

Unknown ಹೇಳಿದರು...

ಚೆನ್ನಾಗಿದೆ ....ಮಲೆನಾಡಲ್ಲಿ ಮಳೆಗಾಲದ ದಿನಗಳು ಎಷ್ಟು ಚೆನ್ನಾಗಿರ್ತ ಇದ್ದವು...

Soumya. Bhagwat ಹೇಳಿದರು...

ಅತ್ತ ಪದ್ಯೂ ಅಲ್ಲದ ಇತ್ತ ಗದ್ಯವೂ ಅಲ್ಲದ ಸಾಲುಗಳ ಹೆಣಿಕೆ ಸರಳ, ಸುಂದರ. ಮದುಮಗಳ ಉಡುಪಿನಲ್ಲಿ ನೀನು ಕಾಣುತ್ತಿದ್ದ ಹಾಗೆ :) very nice :))

Soumya. Bhagwat ಹೇಳಿದರು...

ಅತ್ತ ಪದ್ಯೂ ಅಲ್ಲದ ಇತ್ತ ಗದ್ಯವೂ ಅಲ್ಲದ ಸಾಲುಗಳ ಹೆಣಿಕೆ ಸರಳ, ಸುಂದರ. ಮದುಮಗಳ ಉಡುಪಿನಲ್ಲಿ ನೀನು ಕಾಣುತ್ತಿದ್ದ ಹಾಗೆ :) very nice :))

sunaath ಹೇಳಿದರು...

ಅಹಾ! ಮಳೆಯು ಅದೇ; ಪ್ರತಿಕ್ರಿಯೆ ವಿಭಿನ್ನ!

sunaath ಹೇಳಿದರು...

ಅಹಾ! ಮಳೆಯು ಅದೇ, ಪ್ರತಿಕ್ರಿಯೆಗಳು ವಿಭಿನ್ನ!

Anuradha ಹೇಳಿದರು...

ಮಳೆಗಾಲದಲ್ಲಿ ಊರಿಗೆ ಹೋಗಿ ಬಂದ ಹಾಗಾಯ್ತು ..ತುಂಬಾ ಚೆನ್ನಾಗಿದೆ .ಅಭಿನಂದನೆಗಳು .

maanasa saarovra ಹೇಳಿದರು...

ham.. malenaadina maleyendare haage.... hasihasi kansugala bisibisi bayakegala sambramada dinagalu...baraha ashtee sarala sundaravagide... ishta aaytu..

Badarinath Palavalli ಹೇಳಿದರು...

ಮಳೆಯ ಒನಪೇ ಹಾಗೇ ಅದು ನೂರು ಕವನಗಳ ಸ್ಪೂರ್ತಿ.

ಸುಧೇಶ್ ಶೆಟ್ಟಿ ಹೇಳಿದರು...

Allina maLegoo illina maLegoo adeshtu vyathyaasa!

ಮನಸಿನ ಮಾತುಗಳು ಹೇಳಿದರು...

ಎಲ್ಲರಿಗೂ ಥ್ಯಾಂಕ್ಸುಗಳು ..: