ಸೋಮವಾರ, ಜುಲೈ 09, 2012

ಡೋಕಲ

ಬೇಕಾಗುವ ಸಾಮಾಗ್ರಿಗಳು
ಡೋಕಲ ಹಿಟ್ಟಿಗೆ ಕಡಲೆ ಹಿಟ್ಟು - 2 ಕಪ್
ಹುಳಿ ಮೊಸರು/ಮಜ್ಜಿಗೆ - 1/2 ಕಪ್
ಅಡಿಗೆ ಸೋಡಾ - 1/2 ಟೀ ಚಮಚ
ಹಸಿರು ಮೆಣಸಿನಕಾಯಿ ಪೇಸ್ಟ್ -4 ಟೀ ಚಮಚ
ಲಿಂಬೆ ರಸ - 5 ಟೀ ಚಮಚ
ಜೀರಿಗೆ - 1/2 ಟೀ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 5 ಟೀ ಚಮಚ
ಸಾಸಿವೆ ಕಾಳು - ೧ ಟೀ ಚಮಚ
ಅರಿಸಿನ - 1/2 ಟೀ ಚಮಚ
ಕೊತ್ತಂಬರಿ ಸೊಪ್ಪು - 2 ಟೀ ಚಮಚ
ತೆಂಗಿನ ಕಾಯಿ ತುರಿ - 3 ಟೀ ಚಮಚ
ಪುದಿನ ಸೊಪ್ಪಿನ ಚಟ್ನಿಗೆ
ಪುದಿನ ಸೊಪ್ಪು - 7 ರಿಂದ 8 ಎಲೆಗಳು
ಮೆಣಸಿನ ಕಾಯಿ – 4
ಲಿಂಬೆ ರಸ - 5 ಟೀ ಚಮಚ
ಉಪ್ಪು- ರುಚಿಗೆ ತಕ್ಕಷ್ಟು

ವಿಧಾನ
1.ಮೊದಲಿಗೆ ಕಡಲೆ ಹಿಟ್ಟು, ಮೊಸರು, ಮೆಣಸಿನ ಪೇಸ್ಟ್, ಜೀರಿಗೆ, ಅರಿಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಲಿಂಬೆ ರಸ, ಅಡಿಗೆ ಸೋಡಾ, ಎಲ್ಲವನ್ನು ಹಾಕಿ ಕಲಸಿ. ಕಲಸಿದ ಹಿಟ್ಟು, ಇಡ್ಲಿ ಹಿಟ್ಟಿನ ಹದಕ್ಕೆ ಇರಬೇಕು.(ತುಂಬಾ ತೆಳ್ಳಗಿರಬಾರದು). ಈ ಮಿಶ್ರಣವನ್ನ ಸುಮಾರು ನಾಲ್ಕು ಘಂಟೆಗಳ ಕಾಲ ಮುಚ್ಚಿಡಿ.
2. ನಾಲ್ಕು ಘಂಟೆಗಳ ನಂತರ ಉಬ್ಬಿದ ಮೇಲಿನ ಮಿಶ್ರಣವನ್ನ ಕುಕ್ಕರ್ ಪಾತ್ರೆಯ ತಳಕ್ಕೆ ಸ್ವಲ್ಪ ಎಣ್ಣೆ ಒರೆಸಿ ಮಿಶ್ರಣವನ್ನು ಹದವಾಗಿ ಸುರಿಯಿರಿ.
3. ಕುಕ್ಕರ್ನಲ್ಲಿ ಮೂರು ಸೀಟಿ ಹೊಡೆಸಿ
4. ಕುಕ್ಕರ್ ತಣಿದ ಬಳಿಕ, ಬೆಂದ ಮಿಶ್ರಣವನ್ನು, ಬೇಕಾದ ಆಕಾರಕ್ಕೆ ಕತ್ತರಿಸಿ.
5. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಹಾಕಿ, ಸಾಸಿವೆ ಚಿಟ ಗುಟ್ಟಿದ ಮೇಲೆ , ಸ್ವಲ್ಪ ಜೀರಿಗೆ ಹಾಕಿ.
6. ಈ ಒಗ್ಗರಣೆಯನ್ನು ಕತ್ತರಿಸಿಟ್ಟ ಮಿಶ್ರಣಕ್ಕೆ, ಹುಯ್ಯಿರಿ.
7. ಕತ್ತರಿಸಿದ ಕೊತ್ತಂಬರಿ ಸೊಪ್ಪು, ತುರಿದ ತೆಂಗಿನ ಕಾಯನ್ನು ಹಾಕಿ ಅಲಂಕರಿಸಿ.

ಚಟ್ನಿ
ಪುದಿನ ಸೊಪ್ಪು, ಮೆಣಸಿನ ಕಾಯಿ, ಉಪ್ಪು, ಮತ್ತು ಲಿಂಬೆ ರಸ ಹಾಕಿ ನುಣ್ಣಗೆ ಬೀಸಿ. ಡೋಕಲದೊಂದಿಗೆ ಸವಿಯಲು ಕೊಡಿ.

7 ಕಾಮೆಂಟ್‌ಗಳು:

Unknown ಹೇಳಿದರು...

ಯಾರಾದ್ರೂ ಮಾಡಿ ಹಾಕಿದ್ರೆ ತಿನ್ಲಾಗಿತ್ತು....

ಚುಕ್ಕಿಚಿತ್ತಾರ ಹೇಳಿದರು...

ದಿವ್ಯಾ..

ಇನ್ನೂ ಸುಲಭದಲ್ಲಿ ಡೋಕ್ಲ ಮಾಡುವ ಬಗೆ ನಾನು ಹೇಳ್ತಿ.
ಒ೦ದು ಕಪ್ ಚಿರೋಟಿ ರವೆ,
ಒ೦ದೂವರೆ ಕಪ್ ಮೊಸರು + ೨ ಚಮಚ ಶು೦ಟಿ ಪೇಸ್ಟ್ + ಮೆಣಸಿನ ಕಾಯಿ ಪೇಶ್ಟ್. ಚನ್ನಾಗಿ ಮಿಕ್ಸ್ ಮಾಡಿ ದೋಸೆ ಹಿಟ್ಟಿನ ಹದಕ್ಕೆ ಬರಲಿ. ಅದಕ್ಕೆ ಈನೋ ಅ೦ತ ಪುಡಿ ಮೆಡಿಕಲ್ ಶಾಪ್ ನಲ್ಲಿ ಸಿಗ್ತು. ಎರಡು ಚಮಚ ಹಾಕಿ ಗರ ಗರ ತಿರುಗಿಸು.ಮೇಲೆ ಬುರು ಬುರು ಉಬ್ಬಿ ಬತ್ತು. ತಕ್ಶಣ ಓವನ್ ಅಥವಾ ಹಬೆಲಿ ಬೇಯಿಸು. ಒಗ್ಗರಣೆ ಕೊಡು. ಮೃದುವಾದ ಡೋಕ್ಲಾ ರೆಡಿ. ಟ್ರೈ ಮಾಡಿ ನ೦ತರ ನನ್ಗೆ ಹೇಳು.
ಮು೦ದುವರೆಯಲಿ ಅಡುಗೆ ಹೊಸರುಚಿಗಳು...:)

Unknown ಹೇಳಿದರು...

Wah Wah..Now I must go to Mayyas and eat it :):)

Badarinath Palavalli ಹೇಳಿದರು...

ನನಗೆ ತುಂಬಾ ಇಷ್ಟವಾದ ಖಾದ್ಯವಿದು. ಆದಷ್ಟು ಬೇಗ ನೀವು ಹೇಳಿದಂತೆಯೇ ಮಾಡಿಸುತ್ತೇನೆ.

ನನ್ನ ಬ್ಲಾಗಿಗೂ ಸ್ವಾಗತ.

sunaath ಹೇಳಿದರು...

ಓದಿಯೇ ಬಾಯಲ್ಲಿ ನೀರು ಬಂದಿತು. ಇನ್ನು ತಿಂದರೆ...!

ಮನಸಿನ ಮಾತುಗಳು ಹೇಳಿದರು...

Krishna, Vijayakka, Sankalpa, Badarinath Sir and Sunaath Uncle..thanku!!

ಸುಧೇಶ್ ಶೆಟ್ಟಿ ಹೇಳಿದರು...

naanu mumbai nalli thinda dokla sihi aagittu! neevu maadida dokla sihi idda aagilla!