ಗುರುವಾರ, ಏಪ್ರಿಲ್ 26, 2012

ನಮ್ಮ ಮದುವೆಗೆ ಬನ್ನಿ!!


ಅಂತೂ ಇಂತೂ ಹಿಂಗೆಲ್ಲಾ ಆಗಿ ಸುಂದರ ಮನಸಿನ ಹುಡುಗನ ಜೊತೆ ನನ್ನ ಮದುವೆ ನಿಕ್ಕಿಯಾಗಿದೆ. ಸ್ನೇಹಿತರಾಗಿ, ಪ್ರೇಮಿಗಳಾಗಿ ದಿನಗಳ ಕಳೆದು ಇನ್ನು ಮುಂದೆ ದಂಪತಿಗಳಾಗಿ ಭಡ್ತಿ ಪಡೆದು ಬಾಳುವ ಕನಸನ್ನು ಜಂಟಿಯಾಗಿ ಕಾಣುತ್ತಿದ್ದೇವೆ.

ಕಲ್ಪನೆಯ ಖುಷಿಗಳಿಗೆ ಹೂಮುತ್ತ ವಿದಾಯ ಹೇಳುತ್ತಾ, ವಾಸ್ತವ ಬದುಕಿಗೆ ಹೂಗುಚ್ಛ ಹಿಡಿದು ಸ್ವಾಗತ ಬಯಸುತ್ತಾ, ಮುನ್ನಡೆಯುವಾಸೆ. ಪ್ರತೀ ಬಾರಿಯೂ ಮನೆಯಿಂದ ಬರುವಾಗ ಬರುವ ಅಪ್ಪ-ಅಮ್ಮನ ಕಾಳಜಿಯ ಮಾತುಗಳನ್ನು ತಪ್ಪಿಸಲೊಬ್ಬರು ಬಂದಾಗಿದೆ. ಇನ್ನೆಲ್ಲಾ ನನ್ನ ಪಕ್ಕದ ಸೀಟುಗಳು ತುಂಬಿಕೊಂಡೇ ಇರುತ್ತವೆ.ಹೌದು!! ಸುಶ್ರುತನ ಎದೆಯಾಳದ ಮೌನಗಾಳದಲ್ಲಿ ಸಿಕ್ಕ ಮೀನು ನಾನು. ಮೌನಗಾಳದಲಿ ಮಾತುಗಳು, ಮಾತಾಡದೇ ಸಿಕ್ಕಿಬಿದ್ದವು. ಮೌನದ ಜೊತೆ ಮಾತು ಸೇರಿದರೆ ಎಷ್ಟು ಚೆನ್ನ! ಇದೀಗ ಗಾಳದಲ್ಲಿ ಸಿಲುಕಿರುವ ಮಾತಿಗೂ, ಹೊರಗಿರುವ ಮೌನಕ್ಕೂ ಮದುವೆಯಂತೆ! ಮೌನಗಾಳದ ಜೊತೆಗೆ ಮನಸಿನ ಮಾತುಗಳು.

ಸುದಿನದಲಿ ಅವನ ಜೊತೆ ಏಳು ಹೆಜ್ಜೆ ಇಡಲು, ಬಾಳ
ಶ್ರುತಿಗಳ ಜೊತೆ, ಸ್ವರ, ರಾಗ, ತಾಳಗಳ ಬೆರೆಸಲು, ಅಗಣಿ
, ತಾರಾಗಣದಲ್ಲಿ ನಾನು ಆಯ್ದುಕೊಂಡವನೇ ಸುಶ್ರುತ.
ದಿನಗಳ, ವರುಷಗಳ, ಜೊತೆಯಾಗಿ ಅವನೊಡನೆ ಕಳೆಯುವಾಸೆ, ಕನಸ
ವ್ವಸಾಯ ದಿನವೂ ನನಗೀಗ, ಹರಸಿ ಎಲ್ಲರೂ ನಮ್ಮ ಬಾಳು ಆಗಲೆಂದು ದಿವ್ಯ.

ವಸಂತ ಋತುವಿನಾಗಮನದ ಜೊತೆಜೊತೆಯಲ್ಲಿ, ದೊಡ್ಡೇರಿ ಊರಿನ "ಸುಶ್ರುತ" ಜೊತೆ, ಮಂಗಳ ವಾದ್ಯಗಳ ನಡುವೆ, ಅಪ್ಪ-ಅಮ್ಮ, ಗುರುಹಿರಿಯರು, ಬಂಧು ಮಿತ್ರರ ಸಮ್ಮುಖದಲ್ಲಿ ನಾನು "ದಿವ್ಯಾ" ಅವನ ಕೈ ಹಿಡಿದು ಸಪ್ತಪದಿ ತುಳಿದು, ತವರ ಮನೆಯಿಂದವರ ಮನೆ ಸೇರಲಿದ್ದೇನೆ. ಬುಧವಾರ, ಮೇ 9 , 2012 ನೇ ತಾರೀಖು. ನಿಮ್ಮೆಲ್ಲರ ಆಶೀರ್ವಾದ, ಶುಭ ಹಾರೈಕೆಗಳು ನಮಗೆ ಅವಶ್ಯ! ಎಲ್ಲರು ಖಂಡಿತಾ ಬರಬೇಕು ನಮ್ಮ ಮದುವೆಗೆ.

ನಿಮ್ಮ ನಿರೀಕ್ಷೆಯಲ್ಲಿ,

ನಿಮ್ಮ ಪ್ರೀತಿಯ,


20 ಕಾಮೆಂಟ್‌ಗಳು:

ವನಿತಾ / Vanitha ಹೇಳಿದರು...

Best Wisehs Hudugi :)
- Vanitha.

sunaath ಹೇಳಿದರು...

ಮೌನಗಾಳ ಬೀಸಿದ ಸುಶ್ರುತ ಘಾಟಿ ಹುಡುಗ ಅಂತ ಗೊತ್ತಾಯ್ತು!
ನಿಮ್ಮಿಬ್ಬರಿಗೂ ಹೃತ್ಪೂರ್ವಕ ಶುಭಾಶಯಗಳು.

Uma Bhat ಹೇಳಿದರು...

ಶುಭಾಶಯಗಳು ದಿವ್ಯಾ.

ಶ್ರೀವತ್ಸ ಕಂಚೀಮನೆ. ಹೇಳಿದರು...

ಬದುಕಿಗೆ ಹೊಸ ಬಣ್ಣದ ಮೆರಗು ಮೂಡುವ ಕಾಲ...

'ನನ್ನ'ದೆಂದಿರುವುದೆಲ್ಲವನ್ನೂ 'ನಮ್ಮ'ದೆಂದಾಗಿಸಿಕೊಂಡು ಹೊಸ ಕನಸುಗಳನ್ನು ಜಂಟಿಯಾಗಿ ನೇಯುವ ಮತ್ತು ಜಂಟಿಯಾಗಿಯೇ ನನಸಾಗಿಸಿಕೊಳ್ಳುವ ಹಂಬಲದಿಂದ...

ಉಳಿದ ಬಾಳ ದಾರಿಯ ತಗ್ಗು ದಿಣ್ಣೆಗಳಲೆಲ್ಲ ಜೊತೆಯಾಗಿ ಹೆಗಲು ತಬ್ಬಿ ನಡೆವ ಒಲವ ಬಯಕೆಯಿಂದ...
ಮದುವೆಯೆಂಬ ಮಧುರ ಬಂಧದಿಂದ ಬಾಂಧವ್ಯ ಬೆಸೆದುಕೊಂಡು ಜಗದ ಖುಷಿಗಳನೆಲ್ಲ ಸೂರೆಗೊಳ್ಳ ಹೊರಟ ನಿಮಗೂ ಮತ್ತು ಸುಶ್ರುತರಿಗೂ ಹಾರ್ದಿಕ ಶುಭಾಶಯಗಳು...

ಬದುಕು ಹಸನಾಗಲಿ - ಒಲವು, ನಲಿವುಗಳಿಂದ...

(ಮದುವೆಯ ಕರೆಯೋಲೆ ಬರೆದ ರೀತಿ ತುಂಬಾ ಇಷ್ಟವಾಯಿತು...)

Eat Right ಹೇಳಿದರು...

Dear Divya,

We wish you a happy married life. Enjoy
~ Nivedita

Sudarshan ಹೇಳಿದರು...

ಭವ್ಯವಾದ ಆಮಂತ್ರಣ ದಿವ್ಯಾ.. ನಿಮ್ಮಿಬ್ಬರ ಬಾಳು ಸುಂದರವಾಗಿ ನಡೆಯಲಿ ಎಂದು ಹಾರೈಸುತ್ತೇನೆ..

Sudarshan ಹೇಳಿದರು...

ಭವ್ಯವಾದ ಆಮಂತ್ರಣ ದಿವ್ಯಾ.. ನಿಮ್ಮಿಬ್ಬರ ಬಾಳು ಸುಂದರವಾಗಿ ನಡೆಯಲಿ ಎಂದು ಹಾರೈಸುತ್ತೇನೆ..

Sudarshan ಹೇಳಿದರು...

ಭವ್ಯವಾದ ಆಮಂತ್ರಣ ದಿವ್ಯಾ.. ನಿಮ್ಮಿಬ್ಬರ ಬಾಳು ಸುಂದರವಾಗಿ ನಡೆಯಲಿ ಎಂದು ಹಾರೈಸುತ್ತೇನೆ..

Santy ಹೇಳಿದರು...

Congratulations Divya.

shridhar ಹೇಳಿದರು...

Congrats .... arishana enneli sergu hididu ogatu keladrolage Hesrina Ogatu ready iddu .. very good ... :)

Badarinath Palavalli ಹೇಳಿದರು...

ಈ ಜೋಡಿಗೆ ಭಗವಂತನು ಆಯುರೈಶ್ವರ್ಯ ಕೊಟ್ಟು ಹರೆಸಲಿ.

ಖುಷಿ ಒಂದೇ ಇವರ ಸಹಿಯಾಗಿರಲಿ...

jithendra hindumane ಹೇಳಿದರು...

ಶುಭಾಶಯಗಳು ದಿವ್ಯಾ....

Keshav.Kulkarni ಹೇಳಿದರು...

ಮಾತಿನ (ಮನಸಿನ ಮಾತು) ಜೊತೆ ಮೌನದ (ಮೌನಗಾಳ) ಮದುವೆ!

ಅಹಾ!! ಎಂಥ ಸುಂದರ ಕಲ್ಪನೆ! ಎಂಥ ಸುಂದರ ಭಾವನೆ!!

ಶುಭವಾಗಲಿ.

ನಿಮ್ಮಿಬ್ಬರ ಬ್ಲಾಗಿನ ಮದುವೆಯೂ ಆಗಲಿ!!

- ಕೇಶವ ಕುಲಕರ್ಣಿ

Subrahmanya ಹೇಳಿದರು...

ಒಳ್ಳೇದಾಗ್ಲಿ. :)

prashasti ಹೇಳಿದರು...

Abinandanegalu :-) nimma vaivahika jeevana shubhapradavAgali eMdu haaraike :-)

Ravi Hegde ಹೇಳಿದರು...

ನಿಮ್ಮಿಬ್ಬರಿಗೂ ಶುಭ ಹಾರೈಕೆಗಳು

Guruprasad ಹೇಳಿದರು...

ತುಂಬಾ ಚೆನ್ನಾಗಿ ಇದೆ ನಿಮ್ಮ ಮದುವೆಯ ಕರೆಯೋಲೆ.... ಹೊಸ ದಂಪತಿಗಳಿಗೆ ನಮ್ಮ ಶುಭ ಕಾಮನೆಗಳು ,
Guru

ಸುಧೇಶ್ ಶೆಟ್ಟಿ ಹೇಳಿದರು...

congrats Sush and Divya :)

NilGiri ಹೇಳಿದರು...

Congratulations Divya!!!!!

NilGiri ಹೇಳಿದರು...

Congratulations Divya!