ಶುಕ್ರವಾರ, ಅಕ್ಟೋಬರ್ 21, 2011

ಬೆಳ್ಳುಳ್ಳಿ ಉಪ್ಪಿನಕಾಯಿ

ಅದೇನೋ ನನಗೆ ಗೊತ್ತಿಲ್ಲ. ಉಪ್ಪಿನಕಾಯಿ ಇಲ್ಲದೆ ಇರುವ ಊಟ ನನಗೆ ಇಷ್ಟವೇ ಆಗುವುದಿಲ್ಲ. ಉಪ್ಪಿನಕಾಯಿ ಇರಲೇ ಬೇಕು ಊಟಕ್ಕೆ. ದಿನವೂ ಊಟವನ್ನು ನಾನು ಜೊತೆಯಲ್ಲೇ ತರುವುದರಿಂದ ಏನಾದರೂ ನಂಚಿಕೊಳ್ಳಲು ಬೇಕೇ ಬೇಕು ಎನಿಸುತ್ತದೆ. ಊಟ ಅಂದರೆ ಊಟವಲ್ಲ. ನಾನು ತರುವುದರಲ್ಲಿ ಪುಳಿಯೋಗರೆ, ಚಿತ್ರಾನ್ನ, ಮೇತಿ ರೈಸ್ ಇವುಗಳಲ್ಲಿ ಯಾವುದಾದರೂ ಇರಬಹುದು. ಅದನ್ನ ಹಾಗೇ ತಿನ್ನಲು ಸಪ್ಪೆ ಎನಿಸಿದಾಗ ಯಾವುದಾದರೂ ಉಪ್ಪಿನಕಾಯಿಯ ಮೊರೆ ಹೋಗುವುದೇ ಉಳಿದ ದಾರಿ. ಹೀಗೆ ಉಪ್ಪಿನಕಾಯಿ ಅರಸುತ್ತ ಅಂಗಡಿಗೆ ಹೋಗಿದ್ದಾಗ ನನ್ನ ಕಣ್ಣಿಗೆ ಉಪ್ಪಿನಕಾಯಿ ಪ್ಯಾಕೆಟುಗಳ ಮಾಲೆಯಲ್ಲಿ ಜೋತು ಬೀಳುತ್ತಿದ್ದ ಬೆಳ್ಳುಳ್ಳಿ ಉಪ್ಪಿನಕಾಯಿ ಕಾಣಿಸಿತು. ನೋಡೋಣ ಎಂದು ಕೊಂಡು ತರುವಾಗ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಅದರ ಮೇಲೆ ಬರೆದಿರುವ "ingredients " ನೋಡಿದೆ. ಅದನ್ನು ಮಾಡಲು ಬಳಸಿದ ಎಲ್ಲಾ ಪದಾರ್ಥಗಳೂ ಸಾಮಾನ್ಯವಾಗಿ ಎಲ್ಲರ ಮನೆಯ ಸಾಂಬಾರ್ ಡಬ್ಬಿಯಲ್ಲಿ ಇರುವಂಥದ್ದೇ! ತಕ್ಷಣ ಇದನ್ನು ಮಾಡಲು ಕಲಿಯೋಣ ಎನಿಸಿ, ಅದು ಮನೆಯಲ್ಲಿ ಹೊಸ ಪ್ರಯೋಗಕ್ಕೆ ಸ್ಪೂರ್ತಿಯಾಗಿ, ಅದು ಯಶಸ್ವಿಯಾಗಿ ನಿಮ್ಮ ಮುಂದೆ ಮಾಡುವ ವಿಧಾನವನ್ನು ಹಂಚಿಕೊಳ್ಳುವ ಆತ್ಮವಿಶ್ವಾಸ ಹುಟ್ಟು ಹಾಕಿದೆ.

ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ ನಿಮ್ಮ ಮುಂದೆಬೇಕಾಗುವ ಸಾಮಾಗ್ರಿಗಳು
ಬೆಳ್ಳುಳ್ಳಿ ಎಸಳುಗಳು - ಹನ್ನೆರಡು ಎಸಳುಗಳು (ಇದು ಎಸಳುಗಳ ಗಾತ್ರದ ಮೇಲೆ ಬದಲಾಗುತ್ತದೆ)
ಧನಿಯ - ಎರಡು ಟೀ ಚಮಚ
ಮೆಂತ್ಯ ಕಾಳು -ಎರಡು ಟೀ ಚಮಚ
ಜೀರಿಗೆ - ಒಂದು ಟೀ ಚಮಚ
ಲಿಂಬೆ ರಸ - ೧/೪ ಲೋಟ
ಅರಿಸಿನ ಪುಡಿ -ಒಂದು ಟೀ ಚಮಚ
ಮೆಣಸಿನ ಪುಡಿ - ಎರಡು ಟೀ ಚಮಚ
ಎಣ್ಣೆ - ಐದು ಟೀ ಚಮಚ
ಉಪ್ಪು- ರುಚಿಗೆ ತಕ್ಕಷ್ಟು

ವಿಧಾನ
  1. ಮೊದಲಿಗೆ ಧನಿಯ, ಮೆಂತ್ಯ ಕಾಳು, ಜೀರಿಗೆಯನ್ನು ಒಂದು ಬಾಣಲೆಯಲ್ಲಿ ಸ್ವಲ್ಪ ಕಪ್ಪಗಾಗುವವರೆಗೆ ಹುರಿಯಿರಿ. ಇದನ್ನು ಮಿಕ್ಸರ್ನಲ್ಲಿ ನೀರು ಹಾಕದೆ ಪುಡಿಯಾಗುವಂತೆ ರುಬ್ಬಿ ಒಂದೆಡೆ ಇರಿಸಿ.
  2. ಇನ್ನೊಂದು ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಸಿಪ್ಪೆ ಬಿಡಿಸಿದ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಅದು ಕಂದು ಬಣ್ಣಕ್ಕೆ ತಿರುಗುವ ತನಕ ಹುರಿಯಿರಿ.
  3. ಈಗ ಇದೇ ಬಾಣಲಿಗೆ ಬೀಸಿಟ್ಟ ಮಸಾಲೆ ಪುಡಿ, ಉಪ್ಪು, ಮೆಣಸಿನ ಪುಡಿ, ಅರಿಸಿನ ಪುಡಿ ಮತ್ತು ಲಿಂಬೆ ರಸ ಹಾಕಿ ಒಮ್ಮೆ ಕೈಯ್ಯಾಡಿಸಿ.
  4. ಚನ್ನಾಗಿ ಕೈಯ್ಯಾಡಿಸುತ್ತ, ಸ್ವಲ್ಪ ಮಂದ(ದಪ್ಪ) ಅಗುವಂತಾಗಿಸಿ.
  5. ಚೂರು ಚೂರು ಎಣ್ಣೆ ಸೇರಿಸುತ್ತಾ ಸ್ವಲ್ಪ ಹೊತ್ತು ಕುದಿಸಿ ಕೆಳಗಿಸಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬಿಯಲ್ಲಿ ಹಾಕಿಡಿ.
ಇದನ್ನು ದೋಸೆ, ಚಪಾತಿ, ರೊಟ್ಟಿ ಎಲ್ಲದರ ಜೊತೆಗೆ ಬಳಸಬಹುದು. ಮೊಸರನ್ನಕ್ಕೆ ಹೇಳಿ ಮಾಡಿಸಿದ ಜೊತೆಗಾರ!

***

ದೀಪದ ಹಬ್ಬ ನಿಮ್ಮೆಲ್ಲರ ಬಾಳಲ್ಲಿ ಹರುಷ ಉಲ್ಲಾಸ ತರಲಿ. ನನ್ನ ಎಲ್ಲ ಸ್ನೇಹಿತರಿಗೂ ದೀಪಾವಳಿಯ ಶುಭಾಶಯಗಳು..
ದಿವ್ಯಾ :-)

(ಚಿತ್ರ ಕೃಪೆ: istockphotos )

8 ಕಾಮೆಂಟ್‌ಗಳು:

shivu.k ಹೇಳಿದರು...

ದಿವ್ಯ,
ನಿನ್ನ ಬೆಳ್ಳುಳ್ಳಿ ಉಪ್ಪಿನ ಕಾಯಿ ರೆಸಿಪಿ ಬಾಯಲ್ಲಿ ನೀರೂರುವಂತೆ ಮಾಡಿತು...

Ittigecement ಹೇಳಿದರು...

ಬೆಳ್ಳುಳ್ಳಿ ಉಪ್ಪಿನಕಾಯಿ(ಪ್ರಿಯ) ಕಂಪನಿಯ ಬಾಟಲ್ ತರ್ತಿದ್ದೆ..
ನಮ್ಮನೆಯವರಿಗೆ ನಿಮ್ಮ ಬ್ಲಾಗ್ ತೋರಿಸಿ ಮಾಡಿಸಬೇಕಾಯ್ತು...

ಈರುಳ್ಳಿ ಉಪ್ಪಿನ ಕಾಯಿ (ಪ್ರಿಯ ಕಂಪನಿ) ಅದೂ ಕೂಡ ಚೆನ್ನಾಗಿರುತ್ತದೆ..

ಓದುವಾಗ ಬಾಯಲ್ಲಿ ನೀರು ತರಿಸಿದ್ದಕ್ಕೆ ಜೈ ಹೋ !!

ವನಿತಾ / Vanitha ಹೇಳಿದರು...

Never tried garlic pickle at home :)..Always used priya garlic pickle.its good, and my favourite:)

ಓ ಮನಸೇ, ನೀನೇಕೆ ಹೀಗೆ...? ಹೇಳಿದರು...

nice recipe Divya....will try osmetime..:)

ಓ ಮನಸೇ, ನೀನೇಕೆ ಹೀಗೆ...? ಹೇಳಿದರು...

nice recipe Divya....will try osmetime..:)

mastreder ಹೇಳಿದರು...

ಉಪ್ಪಿನಕಾಯಿ ಮಾಡಿ ಸುಸ್ಥಾಯ್ತ.. ಮತ್ತೆ ಯಾವಾಗ ಬ್ಲಾಗ್ ಮಾಡ್ತಿರ ?

chandrakantha k y ಹೇಳಿದರು...

ಧನ್ಯವಾದ....

chandrakantha k y ಹೇಳಿದರು...

ಧನ್ಯವಾದ....