ಸೋಮವಾರ, ಮಾರ್ಚ್ 28, 2011

ತಪ್ಪ ಮನ್ನಿಸೈ!!

ಪ್ರತೀ ದಿನದಂತೆ
ಈ ದಿನವೂ ನೀನು,
ಸೇವಂತಿಗೆ ಮುಡಿದಿದ್ದರೆ
ನಾನು ಈ ತಪ್ಪನ್ನು ಮಾಡುತ್ತಿರಲಿಲ್ಲ.
ಪ್ರತೀ ದಿನದಂತೆ ನಿನ್ನ ಭೇಟಿ ಮಾಡಿ,
ಕೋಣೆಯಿಂದ ಹೊರಡುತ್ತಿದ್ದ ಹಾಗೇ,
ಇವತ್ತೂ ಹೋಗುತಿದ್ದೆ.

ಸ್ನಾನ ಮುಗಿಸಿ
ಶುಭ್ರ ಬಟ್ಟೆ ತೊಟ್ಟು
ತಿಂಡಿಯನ್ನೂ ತಿನ್ನದೇ
ನಿನ್ನ ಕೋಣೆಗೆ ಬಂದಾಗ,
ನಿನ್ನ ಮುಡಿಯ ಮೇಲೆ ಕುಳಿತು
ನಗುತಿದ್ದ ಅದನ್ನು ಕಂಡು,
ಕೋಣೆಯಲ್ಲಿ ತುಂಬಿದ ಗಾಳಿಯಲ್ಲಿ
ಆವರಿಸಿದ ಘಮಕ್ಕೆ ಮನಸೋತರೂ,
ಬಿಳಿಯಾದ ಅದರ ಎಸಳುಗಳ
ಮೇಲೆ ಬಿದ್ದ ನೀರಿನ ಹನಿಗಳನ್ನು
ಕಂಡು ಪುಳಕಗೊಂಡರೂ
ಹಸಿರು ಗಿಡದ ಮೇಲೆ,
ಮೊಸರು ಚಲ್ಲಿದೆ ಒಗಟು ನೆನಪಾದರೂ,
ನಿನ್ನಲ್ಲಿ ನಾನು ತಲ್ಲೀನಳಾಗಲು ಅದು ಬಿಡದಿದ್ದರೂ
ಅದು ನಿನ್ನದು,ನಿನಗೆ ಸೇರಿದ್ದು
ಎಂದು ಅನ್ನಿಸಿ ಹಾಗೇ ಬಿಟ್ಟಿದ್ದೆ.

ಆದರೆ, ನಿನ್ನ ಕೋಣೆಯಿಂದೀಚೆ
ಬಂದರೂ ನನ್ನ ಸೆಳೆದು,
ಅದು ಬೇಡ ಎಂದು ಗಟ್ಟಿ ನಿರ್ಧಾರ
ಮಾಡಿದರೂ ಆಗದೆ, ಹೋಗಲಿ
ನಿನ್ನದನ್ನು ನಿನಗೆ ಬಿಟ್ಟು
ನಾನು ಬೇರೆ ಕೊಳ್ಳೋಣ ಎಂದರೂ
ಅದು ಸಿಗುವಲ್ಲಿ ಹೋಗಲು
ನನ್ನಲ್ಲಿ ಸಮಯ ಇಲ್ಲದೇ,
ಮತ್ತೆ ನಿನ್ನ ಕೋಣೆಗೇ ಬಂದು
ನಿನ್ನ ಮುಡಿಯಲ್ಲಿರುವುದನ್ನು ತೆಗೆದು,
ನನ್ನ ಮುಡಿಯಲ್ಲಿರಿಸಿಕೊಂಡೇ ಬಿಟ್ಟೆ,
ಮನಸು ಕೇಳದೇ!
ನನ್ನ ಮೇಲೆ ಕೋಪ ಬಂದಿದ್ದರೆ
ನನ್ನ ಮನ್ನಿಸು ದೇವರೇ !!

19 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

lovely lines Divya!!
:-)
malathi S

ಅನಾಮಧೇಯ ಹೇಳಿದರು...

ಕ್ಷಮಿಸಿದ್ದೇನೆ. ಆದರೂ ಮತ್ತೆ ಹೀಗೆ ಮಾಡಬೇಡ ಭಕ್ತೆ..

ಮನಸಿನ ಮಾತುಗಳು ಹೇಳಿದರು...

Malatakka....thankuu..:-)

****
ಅನಾಮಧೇಯ..

ತಪ್ಪನ್ನು ಮನ್ನಿಸಲು ನೀವೇನು ದೇವರೋ? ಹಾಗಿದ್ದಲ್ಲಿ ದೇವರುಗಳು ನನ್ನ ಬ್ಲಾಗಿಗೆ ಬರುತ್ತಾರೆ ಅಂತ ಖುಷಿನೇ ಪಡುತ್ತೇನೆ...:-)

ಹಾಗೇ, ದೇವರ ಮುಡಿಯಲ್ಲಿರುವ ಹೂವನ್ನು ತೆಗೆದು ಮುಡಿದರೆ ಅದು "ತಪ್ಪು" ಆಗಲಾರದು. ನಿಮಗೆ ಬಹುಶ "ಪ್ರಸಾದ" ಎಂಬ ಪದದ ಅರಿವು ಇರಲಿಕ್ಕಿಲ್ಲ. ಆಸಕ್ತಿ ಇದ್ದರೆ ತಿಳಿದುಕೊಳ್ಳಿ. ನಾನು "ತಪ್ಪಲ್ಲ" ಅಂತ ಗೊತ್ತಿದ್ದೇ ಅದಕ್ಕೆ ಆಶಿರೋನಾಮೆ ಕೊಟ್ಟಿದ್ದೇನೆ. ಬರುತ್ತಿರಿ

ವಾಣಿಶ್ರೀ ಭಟ್ ಹೇಳಿದರು...

antu prasada sikkitali.... nice one divya.. The way u wrote is really nice...

Sushrutha Dodderi ಹೇಳಿದರು...

hehe.. maja ide. :-)

shan ಹೇಳಿದರು...

HE ITS SUPER
DEVRU TAANAGE KOTTIDRE PRSAAD AAGTITTU BT NEEVAAGI KAI HAAKI TEGEYODU TAPPALLAVE ????

shan ಹೇಳಿದರು...

DEVRU TAANAAGE KOTTIDDARE PRASAAD AAGTITTU BT NEEVAAGIYE TEGADDU TAPPU AADRUU TAPPA MANNISAI ANTA SHIRSHIKEGE SARIYAAGIDE
VERY 9C

ತೇಜಸ್ವಿನಿ ಹೆಗಡೆ ಹೇಳಿದರು...

Good one Divya... intha Tappu nannindanU aaju.. :) Mannista dEvru bidu...

Unknown ಹೇಳಿದರು...

Devarige kushi agutte:) avana eradu sundara srushtigalu ottadaaga.. avanu huvannu srusti madirode hennigae...

shivu.k ಹೇಳಿದರು...

ದಿವ್ಯ,

ಇದೊಂತರ ಹೊಸ ಪ್ರಯೋಗನಾ? ಕೊನೆಯವರೆಗೂ ಪ್ರೇಮಿಯ ತಲೆಯಲ್ಲಿರುವ ಹೂವಿಗೆ ಹೇಳುತ್ತಿರುವೆ ಅಂದುಕೊಂಡೆ. ಆದ್ರೆ ಅಂತ್ಯ ದೇವರೆಂದು ತಿಳಿದಾಗ ಈ ರೀತಿಯ ಟ್ವಿಷ್ಟ್ ಇಷ್ಟವಾಯಿತು..

Unknown ಹೇಳಿದರು...

ಪೂರ್ತಿ ಓದಲು ಸ್ಫೂರ್ತಿ ಕೊಟ್ಟ ಆ ದೇವರು (ಇತ್ತೀಚಿಗೆ ಓದುವುದು ಕಡಿಮೆಯಾಗಿದೆ, ಯಾಕೋ!). ಚೆನ್ನಾಗಿದೆ.

ಸುಧೇಶ್ ಶೆಟ್ಟಿ ಹೇಳಿದರು...

ವಿಭಿನ್ನವಾಗಿದೆ.... :) ಚೆನ್ನಾಗಿದೆ...

ಯಾವತ್ತೋ ಓದಿದ್ದೆ... ಆದರೆ ಕಮೆ೦ಟು ಮಾಡಲಾಗಿರಲಿಲ್ಲ....

Vidya ಹೇಳಿದರು...

chennagide lines:)
naanu ashte ide reeti madodu:P heNmakklige huvu andre ishta nodi adakke hige:P

Ashok.V.Shetty, Kodlady ಹೇಳಿದರು...

Divya avre,

Nice one..Chennagide..

[nimma blog follow maadoke kondine ellu sikkilla]

ಗುಬ್ಬಚ್ಚಿ ಸತೀಶ್ ಹೇಳಿದರು...

ಚೆನ್ನಾಗಿ ಬರೆದಿದ್ದೀರಿ ಮೇಡಂ.

ಜಲನಯನ ಹೇಳಿದರು...

ಹೂವಿಡುವುದು ಅಡಿಗೆ ಮುಡಿಗೆ, ಕಿವಿಗೆ,,,,ಹಹಹ ಮೂರನೇದು ಬೇಡ ನಿನಗೆ..ಮೊದಲನೇದು ಚಾಚೂ ತಪ್ಪೊಲ್ಲ ಗೊತ್ತು ..ಎರಡನೇದನ್ನು ಮಾಡು..ಮೂರನೇದು ತಂತಾನೇ ಆಗುತ್ತೆ..ಏನಂತೀಯಾ ದಿವ್ಯಾ..

Soumya. Bhagwat ಹೇಳಿದರು...

He he he very nice divya :)) godd creativity :)) loved it :)

ಸೀತಾರಾಮ. ಕೆ. / SITARAM.K ಹೇಳಿದರು...

nice

ಮನಸಿನ ಮಾತುಗಳು ಹೇಳಿದರು...

@All,

Thanku..:-)