ಸೋಮವಾರ, ಮಾರ್ಚ್ 21, 2011

ಯಯಾತಿ ಓದಿದೆ

ಶ್ರೀ ವಿ.ಎಸ್. ಖಾಂಡೇಕರ್ ಅವರು ಮರಾಠಿಯಲ್ಲಿ ಬರೆದ ಈ ಕಾದಂಬರಿಯನ್ನ ವಿ.ಎಂ.ಇನಾಂದಾರ್ ಕನ್ನಡದಲ್ಲಿ ಅನುವಾದ ಮಾಡಿದ್ದಾರೆ.

ಈ ಪುಸ್ತಕ ಓದುತ್ತಿದ್ದಂತೆ ಯಾವುದೋ ಲೋಕದಲ್ಲಿ ನಾವಿದ್ದಂತೆ ಭಾಸವಾಗುತ್ತದೆ. ಕಾದಂಬರಿಯಲ್ಲಿ ಬರುವ ದೇವಯಾನಿ, ಶರ್ಮಿಷ್ಠೆ, ಯಯಾತಿ ಮತ್ತು ಕಚ ಮುಖ್ಯ ಪಾತ್ರಧಾರಿಯಾಗಿದ್ದಾರೆ. ಒಬ್ಬೊಬ್ಬರ ಗುಣಗಳು ಒಂದೊಂದು ತರಹ. ಎಲ್ಲರೂ ಒಂದಿಲ್ಲೊಂದು ಕಾರಣಕ್ಕೆ ಇಷ್ಟವಾಗುತ್ತಾರೆ ಹಾಗೂ ಇಷ್ಟ ಆಗುವುದಿಲ್ಲ. ಒಂದೊಂದು ಪುಟವನ್ನು ಓದುವಾಗ, ಹೂವಿನ ಪಕಳೆಯ ಮೇಲೆ ಕುಳಿತು, ಯಾವುದೋ ಪುಷ್ಪವನಕ್ಕೆ ಹೋದ ಭಾಸ ನನಗಾಗುತ್ತಿತ್ತು.

ಇದೊಂದು ಕೇವಲ ಕಾದಂಬರಿ ಅಷ್ಟೇ ಆಗಿರದೆ ಕಾವ್ಯದ ರೀತಿಯಲ್ಲಿಯೂ ನನಗೆ ಗೋಚರಿಸಿತು. ತುಂಬಾ ಒಳ್ಳೆ ಒಳ್ಳೆ ಸಾಲುಗಳು ಸಿಕ್ಕುತ್ತವೆ ಪುಸ್ತಕದಲ್ಲಿ. ಮನಸಿಗೆ ಹತ್ತಿರವಾಗುವ ಸಾಲುಗಳನ್ನು ಹೆಕ್ಕಿ ಬರೆದುಕೊಂಡು ಕಡೆಗೊಮ್ಮೆ ಹೆಕ್ಕಿಟ್ಟ ಸಾಲುಗಳನ್ನು ಓದಿದಾಗ ಎಲ್ಲೋ ಒಂದು ಕಡೆ ನಮ್ಮ ಪ್ರತಿಬಿಂಬ ಕಾಣಸಿಗುತ್ತದೆ. ದೇವಯಾನಿಯ ಅಹಂಕಾರ, ಶರ್ಮಿಷ್ಠಳ ಪ್ರೀತಿ-ತ್ಯಾಗ , ಕಚನ ಭಕ್ತಿ- ಸದ್ಗುಣಗಳು, ಯಯಾತಿಯ ಲಂಪಟತನ ಹಾಗು ಅಂತರಂಗದಲ್ಲಿ ಪ್ರೀತಿಗೆ ಹಸಿದವನಾಗಿಯೇ ಉಳಿಯುವ ಯಯಾತಿ. ಒಂದೊಂದು ಅಧ್ಯಾಯ ಓದುತ್ತಿದ್ದ ಹಾಗೆ ಪಾತ್ರಗಳೇ ನಾವೇನೋ ಅನ್ನಿಸುವಷ್ಟು ಮುದ್ದಾಗಿದೆ ಬರೆದ ಶೈಲಿ. ಪ್ರತಿಯೊಂದು ಭಾವದ ಅಭಿವ್ಯಕ್ತಿ ಗೆ ಅಳವಡಿಸಿಕೊಂಡ ಅಲಂಕಾರಗಳು, ಲೇಖಕರ ಕಲ್ಪನೆಗಳು wonderful !!. ನಾನಂತೂ ಇದುವರೆಗೂ ಇಂಥಹ ಒಂದು ಕಾದಂಬರಿಯನ್ನು ಓದಿರಲಿಲ್ಲ. ಕಥೆ ಇಷ್ಟ ಆಯ್ತು, ಇಲ್ಲವೋ ಅನ್ನುವುದಕ್ಕಿಂತ ಅದನ್ನು ಜನರಿಗೆ ಉಣ ಬಡಿಸಿದ ಶೈಲಿಗೆ hats off !!

****

ಇದೊಂದು ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ. ಹತ್ತು ದಿನಗಳಲ್ಲಿ ಕುಳಿತು ಈ ಪುಸ್ತಕವನ್ನು ಓದಿದ ಖುಷಿ ಹಾಗೂ ಅದನ್ನು ಓದುವಾಗಲಿನ ನನ್ನ ಖುಷಿಯ ಕ್ಷಣಗಳು ಎರಡೂ ನನ್ನದಾಗಿದೆ.


(ಚಿತ್ರಕೃಪೆ: ಅಂತರ್ಜಾಲ)

10 ಕಾಮೆಂಟ್‌ಗಳು:

Ittigecement ಹೇಳಿದರು...

ದಿವ್ಯಾ

ಇದನ್ನು ನಾನು ಎಷ್ಟು ಬಾರಿ ಓದಿರುವೆ ಅಂತ ನನ್ನ ಬಳಿ ಲೆಕ್ಕವಿಲ್ಲ...
ನಾನು ಇಷ್ಟಪಡುವ ಹತ್ತು ಕಾದಂಬರಿಗಳಲ್ಲಿ ಇದೂ ಒಂದು...
ನೀವು ಬರೆದುದನ್ನು ಓದಿದ ಮೇಲೆ ಮತ್ತೊಮ್ಮೆ ಓದುವ ಮನಸ್ಸಾಗುತ್ತಿದೆ...

ಸೊಗಸಾದ ಕಾದಂಬರಿ...

ನಾನು ಹೊರದೇಶದಲ್ಲಿದ್ದಾಗ..
ಒಂಟಿತನದ ಏಕಾಂತದಲ್ಲಿ ಈ ಕಾದಂಬರಿ ಓದುವ ಅನುಭವವೇ ಬೇರೆ..!

ಈ ಕಾದಂಬರಿ ಬಹಳ ರುಚಿಯಾಗಿದೆ...

ಧನ್ಯವಾದಗಳು..

ಚುಕ್ಕಿಚಿತ್ತಾರ ಹೇಳಿದರು...

ದಿವ್ಯ..
ನನಗೂ ತು೦ಬಾ ಇಷ್ಟದ ಕಾದ೦ಬರಿ ಇದು..
ಮನುಶ್ಯನ ಹುಟ್ಟು, ಸಾವು, ಪ್ರೇಮ, ಕಾಮ, ವಿರಹ, ಆಲಾಪ ಪ್ರಲಾಪ ಎಲ್ಲವನ್ನು ವಿಶ್ಲೇಶಿಸಿದ ಸು೦ದರ ಕಾವ್ಯ ಇದು.. ಪ್ರತಿ ಸಲ ಓದಿದ೦ತೆ ಹೊಸ ರೀತಿಯಲ್ಲಿ ಅರ್ಥವಾಗುತ್ತಾ ಹೋಗುತ್ತದೆ. ನಮ್ಮ ಆಲೋಚನೆಗಳನ್ನು ವಿಸ್ತರಿಸುತ್ತಾ ಹೋಗುತ್ತದೆ..
ಖಾ೦ಡೇಕರರ ”ಮಲ್ಲಿಗೆ ಅರಳಿತು” ಅನ್ನುವ ಕಾದ೦ಬರಿಯನ್ನೂ ಸಾಧ್ಯವಾದರೆ ಓದಿನೋಡು.ನುಡಿಮುತ್ತುಗಳ ರಾಶಿಯೇ ಸಿಗುತ್ತದೆ.

ತೇಜಸ್ವಿನಿ ಹೆಗಡೆ ಹೇಳಿದರು...

ಇದೊಂದು ಅತ್ಯುತ್ತಮ ಕಾದಂಬರಿ. ವಾಸ್ತವಿಕತೆಗೆ ಭೂತಕಾಲದ ಕೊಂಡಿಯನ್ನು ಹುಡುಕಿಕೊಡುವಂಥದ್ದು. ಅಂದು ನಡೆದ ಅದೆಷ್ಟೋ ಘಟನೆಗಳು ಇಂದಿಗೂ ಬಹು ಪ್ರಸ್ತುತವಾಗಿವೆ. ಕಾರಣ... ನಮ್ಮೊಳಗಿನ ದೇವಯಾನಿ, ಶರ್ಮಿಷ್ಠೆ, ಯಯಾತಿ, ಕಚ - ಎಲ್ಲರೂ ಇದ್ದಲ್ಲೇ ಇದ್ದಾರೆ.... ಇನ್ನೂ ಬದುಕಿದ್ದಾರೆ. ನನಗೂ ಈ ಕಾದಂಬರಿ ಬಹು ಇಷ್ಟ. ಮತ್ತೆ ಓದಬೇಕಾಗಿದೆ ಈಗ... :)

tumkur s.prasd ಹೇಳಿದರು...

ಯಾಯಾತಿ ಮತ್ತೆ ಮತ್ತೆ ಓದುತ್ತಿದರೆ ಪ್ರತಿ ಬಾರಿ ಹೊಸ ಲೋಕ ಅನಾವರಣ ಗೋಳ್ಳುತದೆ .

sunaath ಹೇಳಿದರು...

ದಿವ್ಯಾ,
ಇದು ನನಗೂ ತುಂಬ ಇಷ್ಟವಾದ ಕಾದಂಬರಿ.

ಸುಮ ಹೇಳಿದರು...

ನಿಜ ಒಳ್ಳೆಯ ಕಾದಂಬರಿ. ನಾನು ಓದಿ ತುಂಬಾ ವರ್ಷಗಳಾದವು. ನೀನು ನೆನಪಿಸಿದ್ದಕ್ಕೆ ಥ್ಯಾಂಕ್ಸ್ ದಿವ್ಯ.

shan ಹೇಳಿದರು...

hai if divya nimma blog tumba chennagide nimage imagegalu bekaadare naanu koduttene

shivu.k ಹೇಳಿದರು...

ದಿವ್ಯಾ,

ನಾನು ಇದನ್ನು ಓದುವುದನ್ನು ಮರೆತುಬಿಟ್ಟಿದ್ದೆ...ಈವತ್ತೆ ನಮ್ಮ ಗ್ರಂಥಾಲಯದಿಂದ ತಂದು ಓದಲು ಶುರು ಮಾಡುತ್ತೇನೆ..

ಮನಸಿನ ಮಾತುಗಳು ಹೇಳಿದರು...

ಪ್ರಕಾಶಣ್ಣ, ವಿಜಯಕ್ಕಾ, ತೇಜಕ್ಕ, ಪ್ರಸಾದ್, ಸುನಾಥ್ ಅಂಕಲ್, ಸುಮಕ್ಕ, ಶಾನ್,ಶಿವಣ್ಣ ಎಲ್ಲರಿಗೂ ಧನ್ಯವಾದಗಳು..:-)

ಸುಧೇಶ್ ಶೆಟ್ಟಿ ಹೇಳಿದರು...

ಮೊನ್ನೆ ತಾನೇ ಮರಾಠಿ ಗೆಳೆಯನೊಬ್ಬ ಈ ಕಾದ೦ಬರಿ ಬಗ್ಗೆ ಹೇಳಿದ್ದ. ಅದು ಕನ್ನಡಕ್ಕೆ ಅನುವಾದವಾಗಿದೆ ಎ೦ದು ಗೊತ್ತಿರಲಿಲ್ಲ. ಖ೦ಡಿತಾ ಓದಲೇ ಬೇಕು.

ನನಗೆ ಗಿರೀಶ್ ಕಾರ್ನಾಡ್ ಅವರ ಯಾಯಾತಿ ಕೂಡ ತು೦ಬಾ ಇಷ್ಟ.... :)