ಸೋಮವಾರ, ಫೆಬ್ರವರಿ 14, 2011

ಓಂಕಾರ ಬೆಟ್ಟ - ಒಂದು ದಿನ


ತುಂಬಾ ದಿನಗಳಾಗಿತ್ತು ಎಲ್ಲೂ ಹೊರಗೆ ಹೋಗದೆ. ಈ ಬೆಂಗಳೂರಿನ ಏಕತಾನತೆಯಲ್ಲಿಯೇ ಜೀವನ ಸಾಗುತಿತ್ತು. ತಟ್ಟನೆ ಅನ್ನಿಸಿದ್ದು "we need a refreshment ".ಅದಕ್ಕೆಂದೇ ಎಲ್ಲಾದರೂ ಹೊರಗೆ ಹೋಗೋಣ ಅಂತ ನಾವು ನಿರ್ಧರಿಸಿದ್ದಾಯ್ತು .ಆದರೆ ಎಲ್ಲಿ ಹೋಗುವುದು ? ಎಲ್ಲಿಗೆ ಹೋಗುವುದು ಎಂಬುದು ಒಂದು ಸಮಸ್ಯೆ ಆದಾಗ, ಯಾರೋ ಹಿಂದೆ ಹೇಳಿದ್ದ "ಓಂಕಾರ ಬೆಟ್ಟ" ನೆನಪಿಗೆ ಟಿಂಗ್ ಅಂತ ಬಂತು. ಅದೇ ಜಾಗಕ್ಕೆ ಹೋಗೋದು ಅಂತ ಘಟ್ಟಿ ನಿರ್ಧಾರ ಆದ ಮೇಲೆ ಹೊರಡಲು ಅಣಿಯಾದೆವು.

ಈ ಓಂಕಾರ ಬೆಟ್ಟ ಬೆಂಗಳೂರಿನ ಹೊರ ವಲಯದಲ್ಲಿದೆ. ಮೈಸೂರ್ ರಸ್ತೆಯಿಂದ ಸುಮಾರು ೪-೫ ಕಿಲೋ ಮೀಟರ್ ದೂರದಲ್ಲಿ.ಇದು ಅಷ್ಟೊಂದು ಚಿರಪರಿಚಿತ ಸ್ಥಳವಲ್ಲದರಿಂದ ಜನರ ದಟ್ಟನೆ ಕಡಿಮೆಯೇ. ಬಸ್ಸಿನಲ್ಲಿ ಹೋಗುವುದಾದರೆ ಕೆ .ಆರ್. ಮಾರ್ಕೆಟಿಂದ ಬಸ್ ಸಂಖ್ಯೆ 225 ಅಥವ 222 ಗೆ ಬರಬಹುದು. ಇಲ್ಲದಿದ್ದರೆ ನೀವು ಸ್ಯಾಟಲೈಟ್ ಬಸ್ ನಿಲ್ದಾಣದಿಂದವೂ ಬರಬಹುದು. ಈ ಬೆಟ್ಟವು ಸುಮಾರು 2800 ಅಡಿ ಎತ್ತರ ಇದ್ದು , ದಕ್ಷಿಣ ಬೆಂಗಳೂರನ್ನು ಪಕ್ಷಿ ನೋಟದಲ್ಲಿ ಕಾಣಬಹುದಾಗಿದೆ. ಬುಸ್ಸಿನ್ನಲ್ಲಿ ಹೋದಾಗ ನೀವು JSS ಕಾಲೇಜು ಸ್ಟಾಪ್ ನಲ್ಲಿ ಇಳಿದುಕೊಂದರೆ ನಿಮಗೆ ಬೆಟ್ಟ ಹಾಗೂ ಅದರ ಮೇಲಿರುವ ದೇವಸ್ಥಾನವು ಕಾಣಿಸುತ್ತದೆ. ಹಾಗೆ ಆ ಮಣ್ಣು ರಸ್ತೆಯನ್ನು ಹತ್ತಿ ಮೇಲೆ ಬಂದರೆ ಅದೇ "ಓಂಕಾರ ಬೆಟ್ಟ".

ಈ ಓಂಕಾರ ಬೆಟ್ಟದ ಮೇಲೆ ಹತ್ತುತ್ತಿದ್ದಂತೆ ನನ್ನನ್ನು ಆಕರ್ಷಿಸಿದ್ದು ಒಂದು ಬೃಹದಾಕಾರದ ಗಡಿಯಾರ. ಎಚ್.ಎಂ.ಟಿ ಕಂಪನಿ ಯವರು ಇದನ್ನು ನಿರ್ಮಿಸಿದ್ದಾರೆ. ಇದು ಜಗತ್ತಿನ ಎರಡನೇ ಅತಿ ದೊಡ್ಡ ಗಡಿಯಾರ ಎಂದು ಪರಿಗಣಿಸಲಾಗಿದೆ. ಗಡಿಯಾರದ ಮುಖಬಿಲ್ಲೆಯ ಅಡ್ಡಳತೆ ಸುಮಾರು 24 ಅಡಿ ಉದ್ದವಿದೆ.UK ಯಲ್ಲಿ "ಬಿಗ್ ಬೆನ್" ಎಂಬ ಜಗದ್ವಿಖ್ಯಾತ ಗಡಿಯಾರಕ್ಕಿಂತ ದೊಡ್ಡದಾಗಿದೆ ಈ ಗಡಿಯಾರ. ಈ ಗಡಿಯಾರದ ವಿಶೇಷತೆ ಏನು ಎಂದರೆ ಇದು ಘಂಟೆಗೊಂದು ಸಾರಿ "ಓಂ " ಎಂಬ ನಾದದಲ್ಲಿ ಐದು ನಿಮಿಷ ಬದಿದುಕೊಳ್ಳುತ್ತದೆ.ಇದನ್ನು "ಶಂಖನಾದ "ಎಂದು ಕರೆಯಲಾಗುತ್ತದೆ.


ಬೆಟ್ಟ ಹತ್ತುತ್ತಿದ್ದಂತೆ ಬೆಂಗಳೂರು ಇನ್ನಿಲ್ಲದಂತೆ ಚಂದ ಕಾಣಲು ಶುರುವಾಗುತ್ತದೆ. ಮನೆಗಳು,ಮರಗಳು ಎಲ್ಲವೂ ಸಾಲಾಗಿ ಬರುವ ಚಿಕ್ಕ- ಚಿಕ್ಕ ಇರುವೆಗಳಂತೆ ಕಾಣುತ್ತವೆ.ನನಗಂತೂ ಸಿಕ್ಕಾಪಟ್ಟೆ ಸಂತೋಷ ಆಗಿದ್ದು ಅದೇ ಕ್ಷಣದಲ್ಲಿ!ಬೀಸುತ್ತಿರುವ ಚಳಿ ಗಾಳಿಯಲ್ಲಿ ಒಮ್ಮೆ ನನ್ನನ್ನೇ ನಾನು ಮೈಮರೆತೆ .ಆಹಾ! ಎಂಥಹ ಎಕಾಂತವಲ್ಲಿ !!

ಹಾಗೇ ಮುಂದುವರಿದಾಗ ಅಲ್ಲೊಂದು ದೊಡ್ಡ ಆಲದ ಮರ ನಮ್ಮ ಕಣ್ಣಿಗೆ ಕಾಣ ಸಿಗುತ್ತದೆ.ಇದನ್ನು "ಸರ್ವಧರ್ಮ ಸಮನ್ವಯ ಪೀಠ " ಎಂದು ಹೆಸರಿಸಿದ್ದಾರೆ. ಅರ್ಥಾತ್ ಸಕಲ ಧರ್ಮದ ಸಮಾನ ಪೀಠ ಎಂದು . ಈ ಮರದಡಿಯಲ್ಲಿ ಸುಮಾರು ಎಂಟು ಚಿಕ್ಕ- ಚಿಕ್ಕ ಬೇರೆ -ಬೇರೆ ಮಂದಿರಗಳನ್ನು ನಿರ್ಮಿಸಿದ್ದಾರೆ .(ಏಸು ಕ್ರಿಸ್ತ,ಬುದ್ದ, ಮಹಾವೀರ,ಮಾಧವಾಚಾರ್ಯ,ಇತ್ಯಾದಿ).






ಮುಂದೆ ಹೋಗುತ್ತಿದ್ದಂತೆ ,ಒಳಗೆ ದೇವರ ಮಂದಿರವಿದೆ. ಅಲ್ಲಿ ನಾವು ತೀರ್ಥ ಪ್ರಸಾದ ತೆಗೆದುಕೊಂಡು ಹೊರ ಬಂದ್ವಿ.ಆಮೇಲೆ ಫೋಟೋ ತೆಗೆಯುವುದರಲ್ಲಿ ಕಳೆದು ಹೋದೆವು.



ವಾರಾಂತ್ಯದಲ್ಲಿ ತಕ್ಷಣಕ್ಕೆ ಹೋಗಿ ಬರಲು , ಮನಸ್ಸನ್ನು ಆಹ್ಲಾದ ಗೊಳಿಸಲು ಇದೊಂದು ಸುಂದರ ಜಾಗ. ಇಲ್ಲಿ ತುಂಬಾ ಹೊತ್ತು ಇರುವ ಯೋಚನೆ ಇದ್ದಲ್ಲಿ ಉಪಹಾರ ತಂದುಕೊಳ್ಳುವುದು ಒಳ್ಳೆಯದು, ಏಕೆಂದರೆ ಹತ್ತಿರದಲ್ಲಿ ಏನೂ ಸಿಗುವುದಿಲ್ಲ.ಹಾಗೇ ಈ ಜಾಗ ನೋಡಲು ಬಂದವರು, ಸಮಯ ಮಿಕ್ಕಿದ್ದರೆ ಹತ್ತಿರದಲ್ಲೇ ಇರುವ "ಶ್ರೀಧರ ಬೆಟ್ಟ ", "ದೊಡ್ಡಾಲದ ಮರ" ಮತ್ತು "ಮುಕ್ತಿನಾಗ " ದೇವಸ್ಥಾನಕ್ಕೂ ಹೋಗಬಹುದು.


ಮನೆಗೆ ಬರುವಾಗ ಮನಸೆಲ್ಲ ಖುಷಿ ಖುಷಿ!!.ಒಮ್ಮೆ ಭೇಟಿ ಕೊಟ್ಟು ನೋಡಿ . ಒಂದು ದಿನದ ವಿಹಾರದ ಸಂತೋಷಕ್ಕೇನೂ ಮೋಸ ಇಲ್ಲ!! ಹೋಗ್ತಿರಲ್ಲ?

ಹೆಚ್ಚಿನ ಮಾಹಿತಿಗಾಗಿ ಈ ತಾಣಕ್ಕೆ ಭೇಟಿ ಕೊಡಿ..http://omkarhills.org/

10 ಕಾಮೆಂಟ್‌ಗಳು:

jithendra hindumane ಹೇಳಿದರು...

ದಿವ್ಯಾ ಸುಂದರ ಸ್ಥಳ... ಫೋಟೋಗಳೂ ಸುಂದರವಾಗಿ ಮೂಡಿಬಂದಿವೆ..

ಮನದಾಳದಿಂದ............ ಹೇಳಿದರು...

ದಿವ್ಯಾ ಮೇಡಮ್,
ಅಪರೊಚಿತ ಪ್ರೇಕ್ಷಣೀಯ ಸ್ಥಳವೊಂದರ ಪರಿಚಯ ಚನ್ನಾಗಿ ಮಾಡಿದ್ದೀರಾ. ಫೋಟೋಗಳೂ ಸೂಪರ್

Vidya ಹೇಳಿದರು...

omkara betta iruvudendu tiLidiralilla... intaha sunadara taaNada bagge tiLisi kotta nimage dhanyavaadagaLU....

Ravi Hegde ಹೇಳಿದರು...

ಬಹಳ ವರ್ಷದ ಹಿಂದೆ ಒಮ್ಮೆ ಹೋಗಿದ್ದೆ .ಚೆನ್ನಾಗಿದೆ .
ರಾಜರಾಜೇಶ್ವರಿ ನಗರದ ಹತ್ತಿರ ಇರುವುದು ತಾನೆ?

ravi

ದಿವ್ಯಾ ಹೇಳಿದರು...

ಜಿತೇಂದ್ರ ಣ್ಣ ಧನ್ಯವಾದಗಳು...:-)

ಪ್ರವೀಣ್,ಥ್ಯಾಂ....ಕ್ಯೂ ..:)

ವಿದ್ಯಾ, ತುಂಬಾ ಧನ್ಯವಾದಗಳು.ಹೋಗಿ ಬನ್ನಿ ಒಮ್ಮೆ ನೀವೂ ..:)

ರವಿಯವರೇ, ಹೌದು ಅದೇಯ.ಈಗ ತುಂಬಾ ಚೊಲೋ ಕಟ್ಟಿದ್ದ. ನೀವು ತುಂಬಾ ಹಿಂದೆ ಹೋಗಿದ್ದಿ ಅಂತಾದ್ರೆ, ಈಗ ಹೋದ್ರೆ ತುಂಬಾ differance ಕಾಣಲಕ್ಕು :)

ಮನಸು ಹೇಳಿದರು...

tumba chennagide divya, photo's mattu vivaraNe.... naavu noDabekeniside...

ಸುಧೇಶ್ ಶೆಟ್ಟಿ ಹೇಳಿದರು...

ತು೦ಬಾ ಚೆನ್ನಾಗಿದೆ ದಿವ್ಯಾ.... ಹೋದಬಾರಿ ನಾನು ಬೆ೦ಗಳೂರಿನಲ್ಲಿ ಇದ್ದಾಗ ಗೋಪಾಲ ಸ್ವಾಮಿ ಬೆಟ್ಟಕ್ಕೆ ಹೋಗಿದ್ವಿ... ಅದೂ ಕೂಡ ಮೈಸೂರಿಗೆ ಹತ್ತಿರದಲ್ಲೇ ಇರುವುದು. ತು೦ಬಾ ಚೆನ್ನಾಗಿತ್ತು ಅದು.

'A-NIL' ಹೇಳಿದರು...

ಚೆಂದದ ಮಾಹಿತಿಗಾಗಿ ಧನ್ಯವಾದಗಳು.
ಬೇಗ ಹೋಗಿ ಬರುವ ಇರಾದೆ ಇದೆ :)

ಶಿವಪ್ರಕಾಶ್ ಹೇಳಿದರು...

Thanks for sharing this info with good photos...
will try to visit. :)

ದಿವ್ಯಾ ಹೇಳಿದರು...

@All..ಧನ್ಯವಾದಗಳು...:-)