ಬುಧವಾರ, ಫೆಬ್ರವರಿ 02, 2011

ಗರಿಗರಿ ಪಾಪಡ್ ಮಸಾಲ

ಮೊನ್ನೆ ಮನೆಗೆ ಹೋದಾಗ ನನ್ನ ತಂಗಿ ಏನಾದ್ರೂ ತಿನ್ನೋಕೆ ಮಾಡು ಅಂತ ಹಠ ಮಾಡ್ತಾ ಇದ್ಲು. ಅದು crispy ಆಗಿಯೂ ಇರಬೇಕು,spicy ಆಗಿಯೂ ಇರಬೇಕು ಅನ್ನೋದು ಅವಳ ಕೋರಿಕೆ.ತಟ್ ಅಂತ ಮನಸಿಗೆ ಹೊಳೆದಿದ್ದು "*ಪಾಪಡ್ ಮಸಾಲ". ಮಾಡುವ ವಿಧಾನವನ್ನು ಕೆಳಗೆ ಹೇಳಿದ್ದೇನೆ. ನೀವೂ ಮನೇಲಿ ಮಾಡಿ ನೋಡ್ತಿರಲ್ಲ?? ಹಾಗಾದ್ರೆ ಬನ್ನಿ ..ಮಾಡೋದನ್ನ ಕಲಿಯೋಣ.


ಬೇಕಾಗುವ ಸಾಮಾಗ್ರಿಗಳು:

ಪಾಪಡ್ (ಹಪ್ಪಳ) ಇದು ಎಲ್ಲ ಅಂಗಡಿಗಳಲ್ಲಿ ಸಿಗುತ್ತೆ. ಆದಷ್ಟು ಉದ್ದಿನ ಹಪ್ಪಳ ಬಳಸುವುದು ಒಳಿತು.(ಅಕ್ಕಿ, ಹಲಸಿನ ಹಪ್ಪಳಗಳು ಅಷ್ಟು ರುಚಿ ಆಗಲಾರವು) : ಒಂದು
ಈರುಳ್ಳಿ : ಒಂದು
ಟೊಮೇಟೊ ಹಣ್ಣು : ಒಂದು
ಕೊತ್ತಂಬರಿ ಸೊಪ್ಪು : ನಾಲ್ಕು ಎಸಳು
ಲಿಂಬೆ ಹಣ್ಣು : ಅರ್ಧ ಕಡಿ
ಖಾರ ಪುಡಿ : ಅರ್ಧ ಟೀ ಚಮಚ
ಕಾಳು ಮೆಣಸಿನ ಪುಡಿ(ಪೆಪ್ಪರ್) : ಒಂದು ಚಿಟಕಿ
ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲಿಗೆ ಹಪ್ಪಳವನ್ನು ಒಲೆಯಲ್ಲಿ ಅದು ಗರಿಯಾಗುವಂತೆ ಸುಡಬೇಕು.ನೆನಪಿರಲಿ(ಎಣ್ಣೆಯಲ್ಲಿ ಕರಿಯಬೇಡಿ) .(ಗ್ಯಾಸಿನಲ್ಲಿ ಸುಡಬೇಕಾದರೆ ಇಕ್ಕಳದ ಹಿಂಭಾಗದಲ್ಲಿ ಹಪ್ಪಳವನ್ನು ಹಿಡಿದುಕೊಂಡು ಸಣ್ಣ ಬೆಂಕಿಯಲ್ಲಿ ಸುಡುತ್ತಾ ,ಅದು ಪೂರ್ತಿ ಆದ ಮೇಲೆ ಒಂದು ಪ್ಲೇಟಿನಲ್ಲಿ ಅದನ್ನು ಇರಿಸಿ)


ಈಗ ಟೊಮೇಟೊ ಹಣ್ಣು,ಈರುಳ್ಳಿ,ಕೊತ್ತಂಬರಿ ಸೊಪ್ಪುನ್ನು ಸಣ್ಣಗೆ ಹೆಚ್ಚಿ.(ಸಣ್ಣಗೆ ಹೆಚ್ಚಲು ಬರದವರು ಬೇಕಾದರೆ ಒಮ್ಮೆ ಮಿಕ್ಸರ್ ನಲ್ಲಿ ಒಂದು ಸಾರಿ ತಿರುಗಿಸಿ)

ಈ ಮಿಶ್ರಣಕ್ಕೆ ಖಾರ ಪುಡಿ, ಪೆಪ್ಪರ್ ,ಒಂದೆರಡು ಹನಿ ಲಿಂಬೆ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಬೇಕು.
ಕಲಸಿದ ಮಿಶ್ರಣವನ್ನು ಬಟ್ಟಲಲ್ಲಿ ಇಟ್ಟ ಹಪ್ಪಳದ ಮೇಲೆ ಚೆನ್ನಾಗಿ ಹರಡಿ, ಮೇಲಿಂದ ಒಂದಷ್ಟು ಸೇವ್ (ಅಂಗಡಿಗಳಲ್ಲಿ ಸಿಗುತ್ತೆ) ಉದುರಿಸಿದರೆ ,ರುಚಿ-ರುಚಿಯಾದ,ಗರಿಗರಿಯಾದ "ಪಾಪಡ್ ಮಸಾಲ " ನಿಮ್ಮ ಮುಂದೆ.ಇದನ್ನು ಊಟದ ಜೊತೆಗೆ, ಅಥವಾ starter ತರಾನೂ ಉಪಯೋಗಿಸಬಹುದು.ನನ್ನ ಮತ್ತು ನನ್ನ ತಂಗಿ ತರಹ ಇರುವವರು ಹಸಿವಾದಾಗ ,ತಿನ್ನಬೇಕು ಎನಿಸಿದಾಗಲೂ ಮಾಡಿಕೊಂಡು ತಿನ್ನಬಹುದು...;-)(ಇತ್ತೀಚಿಗೆ ಅಡಿಗೆ ಬಗ್ಗೆ ಆಸಕ್ತಿ ಬರ್ತಾ ಇದೆ. ಇನ್ನು ಮುಂದೆ ನನ್ನ ಪುಟ್ಟ ಪುಟ್ಟ ಲೇಖನಗಳನ್ನು ಬ್ಲಾಗಿನಲ್ಲಿ ಸೇರಿಸುತ್ತಿರುತ್ತೇನೆ.)


(ಚಿತ್ರಕೃಪೆ: ಅಂತರ್ಜಾಲ)

14 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

ದಿವ್ಯಾ,

Tasty ಅನಿಸ್ತಾ ಇದೆ ನೋಡುವಾಗ.. ಮಾಡಿ ನೊಡ್ತಿನಿ :)
Thanks..

ಆದ್ರೆ ಅಜಿನಾ ಮೊಟೋ ಆರೊಗ್ಯಕ್ಕೆ ತುಂಬಾ ಹಾನಿಕರ ಎನ್ನುತ್ತದೆ ಸಂಶೋಧನೆ. ಹಾಗಾಗಿ ಅದನ್ನು ಬಳಸದಿದ್ದರೆ ಉತ್ತಮ. (ಇದು ನನ್ನ ಸಣ್ಣ ಸಲಹೆ ಅಷ್ಟೇ:))

ವನಿತಾ / Vanitha ಹೇಳಿದರು...

Nce recipe Divya..Odta baayalli neeru banthu:)

Between Kalanamak & Ajinomotto are totally different.
First one is sodium chloride, No known bad health effect (I think, not sure!), where as Ajinumotto is MSG (mono sodium glutamate) mainly used as seasoning agent in chinese food, & yes..got some side effects!!

Dileep Hegde ಹೇಳಿದರು...

Nicely written....
ತೇಜಸ್ವಿನಿ ಹೆಗಡೆಯವರು ಹೇಳಿದಂತೆ ಅಜಿನೋ ಮೋಟೋ ಆರೋಗ್ಯಕ್ಕೆ ತುಂಬಾ ಹಾನಿಕರ.. ನಿಮ್ಮ Recipe ನಿಂಬೆಹಣ್ಣನ್ನು ಸೇರಿಸಿಕೊಂಡರೆ taste ಇನ್ನೂ ಚೆನ್ನಾಗಿರುತ್ತೇನೋ ಅಂತ ನನ್ನ ಅಭಿಪ್ರಾಯ..

Manjunath ಹೇಳಿದರು...

ಒಂದುಸಾರಿ try ಮಾಡ್ಬೇಕು ಅನ್ನಸ್ತಾಇದೆ .. ಇ ತರಹದ ಇನ್ನೂ ಹೆಚ್ಚಿನ ವಿಧಾನಗಳನ್ನ ತಿಳಿಸಿ ನಮ್ಮಂತಹ bachelor ಗಳಿಗೆ ಸಹಾಯವಾಗತ್ತೆ :)

nenapina sanchy inda ಹೇಳಿದರು...

Dear Divya
Pls Dont use ajinomota in ur food. Its dangerous.
otherwise crispy papad is favorite 'film noDtaa passtiming tinDi' of both my daughters.
:-)
malathi S

ಮನಸಿನ ಮಾತುಗಳು ಹೇಳಿದರು...

ತೇಜಕ್ಕ,ವನಿತಕ್ಕ,ದಿಲೀಪ್,ಮಂಜುನಾಥ್,ಮಾಲತಕ್ಕ

ನಿಮ್ಮೆಲ್ಲರ ಇಷ್ಟದಂತೆ (ಆರೋಗ್ಯದ ದೃಷ್ಟಿಯಿಂದ ) ನಾನು ಅಜಿನಾ ಮೋಟೋವನ್ನು ತೆಗೆದು ,ಅಲ್ಲಿ ದಿಲೀಪ್ ಅವರು ಹೇಳಿದಂತೆ ಲಿಂಬೆ ಹಣ್ಣನ್ನು ಬಳಸಿ, ಮಾಡುವ ವಿಧಾನವನ್ನು ಸ್ವಲ್ಪ ಬದಲಾಯಿಸಿದ್ದೇನೆ.

ನಿಮ್ಮೆಲ್ಲರ ಸಲಹೆ ಸಹಕಾರಕ್ಕೆ ಧನ್ಯವಾದಗಳು.

shivu.k ಹೇಳಿದರು...

ದಿವ್ಯ,

ನಿನ್ನೆ ರಾತ್ರಿ ಇದನ್ನು ಹೇಮಾ ಮಾಡಿದಳು. ಊಟದ ಜೊತೆಗೆ ತಿಂದಾಗ ಸೂಪರ್ ಅನ್ನಿಸಿತು. ಇಂಥ ಸರಳ ಮತ್ತು ಸುಲಭವಾದ ರೆಸಿಪಿಗಳನ್ನು ಆಗಾಗ ಕೊಡುತ್ತಿರು. ನಾನು ಮಾಡಲು ಪ್ರಯತ್ನಿಸಬಹುದು. ಹೇಮಾಳನ್ನು ಮೆಚ್ಚಿಸಬಹುದು. ಜೊತೆಗೆ ನಿನ್ನನ್ನು ನೆನೆಸಿಕೊಂಡು ಇಬ್ಬರು ತಿನ್ನಬಹುದು..

ಅನಾಮಧೇಯ ಹೇಳಿದರು...

Sorry, i do not know how to write in Kannada. (it will be of great help if some one can guide me)

MSG is been used by Chinease, Vietnamees, Camobodians, and other ASEAN countries from long ago, and people have been lived more than 80 years.

It doesn't mean it is not harmful, but it is not bad also, people come up with some prof. of some university with some findings, they are being paid for this, but we should know what we can have or not.

people say coconut oil is bad for health ??!!!

in my native we still use coconut oil in all dishes and for every work but we are living healthy no one had died because of excessive fat or cardiological dieases. Moreover we use heafty amount of ghee too.

anyways i just wanted to say because we should not stop eating anything (i am a vegetarian so i commenting only on veg items) just because few facts got published in few magazines who somehow want to fill their pages.

Regards
Akshara Kumar
+261-337538118

Ranjita ಹೇಳಿದರು...

ನೋಡಲೇ ಸಕ್ಕತ್ತಾಗಿ ಕಾಂತಾ ಇದ್ದೆ ದಿವ್ಯ ಟ್ರೈ ಮಾಡ್ತಿ :)

ಜಲನಯನ ಹೇಳಿದರು...

ದಿವ್ಯಾ...ಅಜ್ಜಿಯ ಮೋಟೋ..ಯಾಕೆ ಹಾನಿಕರ ನನಗೆ ಗೊತ್ತಾಗ್ತಿಲ್ಲ,,,ಆಜ್ಜಿಯ ಮೋಟೋ ಯಾವಾಗಲೂ ಮೊಮ್ಮ್ಗಳು ಚನ್ನಾಗಿರಲಿ ಅನ್ನೋದೇ ಅಲ್ವಾ..? ರುಚಿ ಚನ್ನಾಗಿದೆ...ಹಹಹ ಗುಡ್ ಲಕ್ ...ಇನ್ನಷ್ಟು ಮೋಟೋ ಬರಲಿ...

lakshmibhat ಹೇಳಿದರು...

hal

ಸುಧೇಶ್ ಶೆಟ್ಟಿ ಹೇಳಿದರು...

naanu hotel nalli thumba sala thindiddene :) neevu haakida photo swalpa bhinna anisitu... :)

ವೇದಾಂತ ದೇಶಿಕ ಹೇಳಿದರು...

ಪಾಪಡ್ ಮಸಾಲ... ನಾಲಿಗೇಲಿ ನೀರು ಬರ್ತಿದೆ.... ನಿಮಗೆ ಬೆಳ್ಳುಳ್ಳಿ ಪಾಯ್ಸಾ ಮಾಡಕ್ಬರತ್ತಾ???

ವೇದಾಂತ ದೇಶಿಕ ಹೇಳಿದರು...

ಪಾಪಡ್ ಮಸಾಲ... ನಾಲಿಗೇಲಿ ನೀರು ಬರ್ತಿದೆ.... ನಿಮಗೆ ಬೆಳ್ಳುಳ್ಳಿ ಪಾಯ್ಸಾ ಮಾಡಕ್ಬರತ್ತಾ