ಶುಕ್ರವಾರ, ಜನವರಿ 28, 2011

ಕಾರಣವಿಲ್ಲದೆ..

ಇವತ್ತು ಬಸ್ಸಿನಲ್ಲಿ ಬರಬೇಕಾದರೆ ಒಂದು ಘಟನೆ ನಡೆಯಿತು.
ಒಂದು ಚಿಕ್ಕ ಮಗು, ಸುಮಾರು ಒಂದು ಮೂರು ವರುಷ ಇರಬಹುದೇನೋ.ತನ್ನ ಅಮ್ಮನ ಜೊತೆ ಬಂದು ನನ್ನ ಎದುರಿನ ಸೀಟಿನಲ್ಲಿ ಬಂದು ಕುಳಿತರು. ಮಗು ತುಂಬಾ ಮುದ್ದು ಮುದ್ದಾಗಿ ಚುರುಕಾಗಿತ್ತು.ಕೆಂಪು ಸ್ವೆಟರ್ನಲ್ಲಿ ತೀರ ಪ್ರೀತಿ ಉಕ್ಕುವಂತೆ ಕಾಣುತ್ತಾ ಇತ್ತು.ನಿಂತ ಎಲ್ಲರೂ ಆ ಮಗುವನ್ನೇ ನೋಡುತ್ತಾ ಇದ್ದರೆ, ಅಮ್ಮನಿಗೆ ತನ್ನ ಮಗಳ ಬಗ್ಗೆ ಹಿಗ್ಗು!..

ಹಾಗೇ ಮತ್ತೊಂದು ನಿಲ್ದಾಣದಲ್ಲಿ ಮತ್ತೊಂದು ಮಗು ತನ್ನ ತಾಯಿಯೊಂದಿಗೆ ಬಸ್ಸನ್ನು ಹತ್ತಿದರು .ಆ ಮಗು ಅಷ್ಟೇನೂ ಚುರುಕಾಗಿರಲಿಲ್ಲ.ಸುಮ್ಮನಿತ್ತು. ನೋಡಲು ಅಷ್ಟೇನು ಮುದ್ದಾಗಿರಲಿಲ್ಲ.ಮಕ್ಕಳು ಮಕ್ಕಳೇ ಬಿಡಿ..ಅದಕ್ಕಲ್ಲ.ಮೊದಲು ಹತ್ತಿದ ಮಗು ಎರಡನೇ ಮಗುವನ್ನು ಸುಮಾರು ಹೊತ್ತಿನಿಂದ ಮಾತಾಡಿಸಲು ಪ್ರಯತ್ನಿಸುತ್ತಿತ್ತು.ಆದರೆ ಆ ಮಗು ಸುತರಾಂ ಮಾತಾಡಲಿಲ್ಲ. ಬೇಸತ್ತ ಈ ಮಗು ಅಳಲು ಶುರು ಮಾಡಿತು. ಅದರ ಅಮ್ಮನಿಗೋ ಅವಳನ್ನು ಸಮಾಧಾನಿಸುವುದೇ ಆಯಿತು..
"ಹೋಗ್ಲಿ ಬಿಡು ಪುಟ್ಟ..ಅವಳೇನು ನಿನ್ನ ಫ್ರೆಂಡಾ ..ಮಾತಾಡಲು"..ಅಂತ ಹೇಳುತ್ತಿದ್ದರು.

ಇದನ್ನೆಲ್ಲಾ ನೋಡುತಿದ್ದ ನನಗೆ ಇದ್ದಕ್ಕಿದ್ದಂತೆ ನನ್ನ ಬಾಲ್ಯ ನೆನಪಾಗಿ ಬಿಟ್ಟಿತು .ಯಾರನ್ನಾದರೂ ನಾನು ಮಾತಾಡಿಸಿ ಅವರು ನನ್ನನ್ನು ಅಲಕ್ಷಿಸಿದ್ದರೆ((ಚಿಕ್ಕವಳಿದ್ದಾಗ) ನಾನೂ ಅಳುತ್ತಿದ್ದೆ.ಯಾಕೋ ನನ್ನಲ್ಲಿ ಈಗ ಇಂಥ ಗುಣಗಳು ಮಾಯವಾಗಿ ಬಿಟ್ಟಿವೆ!
ನಮ್ಮಲ್ಲಿ ಎಷ್ಟೋ ಜನ ಈ ಮೊದಲ ಗುಂಪಿನಲ್ಲಿ ಇದ್ದಿವಿ ಅಲ್ಲವ?..ನಮ್ಮ ಮ್ಯಾನೇಜರ್ ಗಳಿಗೆ,ನಮ್ಮ ಪ್ರೀತಿಸದವರಿಗೆ ,ನಮ್ಮನ್ನು ಅರ್ಥ ಮಾಡಿಕೊಳ್ಳದವರಿಗೆ,ಮುನಿಸಿಕೊಂಡು ನಮ್ಮ ಕ್ಷಮಿಸದ ಗೆಳೆಯರಿಗೆ...

ಎಲ್ಲರನ್ನೂ ಹಚ್ಚಿಕೊಂಡು,ಎಲ್ಲರನ್ನೂ ಮಾತಾಡಿಸುವ ಗುಣ ನನ್ನಲ್ಲಿ ಇಲ್ಲ ಈಗ. ಆ ಅತಿಯಾದ ಭಾವುಕತೆ, ನಮ್ಮವರ ಮೇಲಿನ ಅತಿಯಾದ ಮೋಹ , ಆ ಮುಗ್ಧತೆ ಎಲ್ಲ ಮಾಯವಾಗಿ, ಯಾರಾದರು "ನೀನು" ಅಂದರೆ ನಿನ್ನಪ್ಪ ಎಂದು ಹೇಳುವವರೆಗೆ ತಯಾರಗಿದ್ದೀನಿ ನಾನು ಎಂಬುದು ನನಗೆ ನಂಬಲಾಗದ "ಕಹಿ ಸತ್ಯ". ಹೌದು...ನಾನು ಬದಲಾಗಿದ್ದೇನೆ!.ಬದಲಾವಣೆ ಜಗದ ನಿಯಮ ಅಲ್ಲವೇ?

11 ಕಾಮೆಂಟ್‌ಗಳು:

ಚುಕ್ಕಿಚಿತ್ತಾರ ಹೇಳಿದರು...

ಹ್ನೂ ಕಣೆ ದಿವ್ಯಾ..
ನೀನೀಗ ಹಾಗಿದ್ದೀಯ ಅ೦ದರೆ ತಿಳುವಳಿಕೆ ಬ೦ದಿದೆ ಅ೦ತ ಅರ್ಥ.. ಇಲ್ಲಾ ಹಾಗೆನೆ ಇದ್ರೆ ನೋಡು ಚಿಕ್ ಮಗೂ ತರಾ ಮಾಡ್ತಾಳೆ ಅನ್ನೊಲ್ವೆ.. ಜಾಣೆಯಾಗಿದ್ದೀಯ..:):)

ಕಾಂತೇಶ ಹೇಳಿದರು...

ya.. as we grow our attitude changes rather grows.. some times in right way some times wrong..:) Its life..:)

ದಿನಕರ ಮೊಗೇರ ಹೇಳಿದರು...

ದಿವ್ಯಾ....
ಹೌದು... ಬದಲಾವಣೆ ಜಗದ ನಿಯಮ..... ಒಳ್ಳೆಯದಕ್ಕಾದರೆ ಎಲ್ಲಾ ಒಳ್ಳೆಯದು...... ಬದಲಾಗಲೇ ಬೇಕು, ಒಳ್ಳೆಯದಕ್ಕೆ..... ಬೆಸ್ಟ್ ಒಫ್ ಲಕ್....

sunaath ಹೇಳಿದರು...

ದಿವ್ಯಾ,
We learn self protection.

ಸುಧೇಶ್ ಶೆಟ್ಟಿ ಹೇಳಿದರು...

nannallu badalaavane aagidhe :) aadre naanu second category ge serida magu....

saNNa saNNa sangathigaLannoo yeshtu gamanisutteera neevu :)

Unknown ಹೇಳಿದರು...

very true :)

Soumya. Bhagwat ಹೇಳಿದರು...

ನೇರವಾದ ಮನಸ್ಸಿಗೆ ನಾಟುವ ಬರಹ. ನಾನೂ ಮೊದಲನೇ ಮಗುವಿನ ಗುಂಪಿಗೇ ಸೇರಿದವಳು. ಆದರೆ ಇನ್ನೂ ಬದಲಾಗಬೇಕಷ್ಟೆ :)

ಮನಸಿನ ಮಾತುಗಳು ಹೇಳಿದರು...

ವಿಜಯಕ್ಕ ,ಥ್ಯಾಂಕ್ಯು ...ಹೌದೆ..:-)

kantesh ,ಎಸ್ ಟ್ರೂ..:-)

ದಿನಕರ್ ಸರ್, ಥ್ಯಾಂಕ್ಯು ..:-)

ಸುನಾಥ್ ಅಂಕಲ್, I agree with ಯೌ.

ಸುಧೇಶ್, ಹಾಗೇ ಗಮನಿಸೋದೇ ನನ್ನ ಬರವಣಿಗೆಯ

ಸರಕುಗಳು ಕಣ್ರೀ..:-) ಥ್ಯಾಂಕ್ಯು :-)

ವಿಜಯ್ ,ಹೌದು..:-)

ಸೌಮಿ ..ಥ್ಯಾಂಕ್ಸ್ ಕಣೆ..:-)
--

ಅನಿಲ್ ಬೇಡಗೆ ಹೇಳಿದರು...

ಬದಲಾವಣೆ ಬೇಕು ಬದುಕಲ್ಲಿ.
ಆದರೇ,
ಕೆಲವು ಸಾರಿ ಮನುಷ್ಯರು ಬದಲಾದರೆ, ಕೆಲವು ಸಾರಿ ಮನಸ್ಸು ಬದಲಾಗ್ತವೆ..!
ನಾವು ಹೇಗೆ ಎಷ್ಟು ಬದಲಾಗಬೇಕು ಎನ್ನುವುದು ಮುಖ್ಯ.
ಅಲ್ವಾ..?
ನಿಮ್ಮ ಬದಲಾವಣೆ ಚೆನ್ನಾಗಿದೆ.. :)

ಡಾ. ಚಂದ್ರಿಕಾ ಹೆಗಡೆ ಹೇಳಿದರು...

neevu heluvadu ondarthadalli satya... adre innodu mukhadalli allavenoo... kaala badalaagatte... kaalakke takka haage naavu badalaagabeku.. nijane! aadre badalaagu anda jana namma hinde oy... nodu avlige... avnige band bittide kobbu annoru iddare jagattinalli...
adke kavi helirodu..
malegaala bandaaga esthu male embaru
bantalla besige ketta bisilembaru...
nanage anisiddu isthuu...
haagadare heegirabeku? namaganisida haage? athvaa... avarellarige anisida haage?

shan ಹೇಳಿದರು...

he its 100% true