ಬುಧವಾರ, ಜನವರಿ 12, 2011

ಒಂದು ಹಾಡು

ಮೊನ್ನೆ ಮನೆಗೆ ಹೋದಾಗ ಹಳೆ ಕ್ಯಾಸೆಟ್ ಗಳನ್ನು ಸರಿಯಾಗಿ ಜೋಡಿಸುತ್ತಿದ್ದಾಗ ಈ ಕ್ಯಾಸೆಟ್ ಕಣ್ಣಿಗೆ ಬಿತ್ತು. ಇದೊಂದು ಜನಪದ ಗೀತೆ. ಚಿಕ್ಕಂದಿನಲ್ಲಿ ಕೇಳುತ್ತಿದ್ದ ಹಾಡು. ನನ್ನನ್ನು ತುಂಬಾ ಹೊತ್ತು ಕಾಡಿಸಿದ ಹಾಡು ಇದು.ಕ್ಯಾಸೆಟ್ ಮಾತ್ರ ಇದ್ದು ಹೊದಿಕೆ ಇಲ್ಲದ್ದರಿಂದ ಹಾಡಿದವರು ಯಾರು? ಸಾಹಿತ್ಯ ಯಾರಿದ್ದು ಅಂತ ಗೊತ್ತಾಗಲಿಲ್ಲ ನನಗೆ.ನಿಮಗೆ ಗೊತ್ತಿದ್ದರೆ ನನಗೆ ತಿಳಿಸತಕ್ಕದ್ದು.(ಇರಬೇಕು ,ಇರಬಹುದೇನೋ ಅಂತ ಹೇಳೋದಾದ್ರೆ ಬೇಡ.ನಿಖರವಾಗಿ ಗೊತ್ತಿದ್ದರಷ್ಟೇ ಹೇಳಿ !..:-)).

ಹಳ್ಳಿ ಜೀವನಕ್ಕೆ ಮೂಗು ಮುರಿದು ಪೇಟೆಯ ಜೀವನದ ಸೆಳೆತಕ್ಕೆ ಒಳಗಾಗುವ ಜನರ ಕುರಿತು ವ್ಯಂಗ್ಯ ಮಾಡಿದ್ದಾರೆ. ಹೆತ್ತ ಅಪ್ಪ ಅಮ್ಮನ ಕಡೆಗಣಿಸುವ ಮಕ್ಕಳ ಕುರಿತಾಗಿಯೂ ಇದೆ ಈ ಹಾಡು. ಕೆಲವರಿಗೆ ಪೇಟೆ ಜೀವನ "ಇಷ್ಟ" ಆದರೆ ಇನ್ನು ಕೆಲವರಿಗೆ "ಅನಿವಾರ್ಯ" .ಏನೇ ಇರಲಿ.ಅದರ ಚರ್ಚೆ ಇಲ್ಲಿ ಬೇಡ.

ಹಾಡು ನಿಮಗಾಗಿ.ಓದಿ ಆನಂದಿಸಿ...:-)

=========

ಜನ ಹಳ್ಳಿ ಹಳ್ಳಿ ಎಂದು ಮೂಗ ಮುರಿಯುತಾರ
ಪ್ಯಾಟಿಗೇಳಿ ಮೆರಿತಾರ,
ತನ್ನ ಹುಟ್ಟಿದೂರ ಮರಿತಾರ
ತಂದೆ ತಾಯಿ ಬಿಟ್ಟು ಮೆರಿತಾರ (ಪ)

ಕಲಿತವರೆಲ್ಲ ಜಾಣ್ಯಾರಲ್ಲ
ಸೀಳಿದರಕ್ಷರ ಇಲ್ಲ
ಎದಿ ಸೀಳಿದರಕ್ಷರ ಇಲ್ಲ
ಕಿಸೆದಾಗ ಐದರ ಪೈಸೆ ಇಲ್ಲ
ಕೈವಡ್ಡಿ ಬೇಡ್ಯಾರಲ್ಲ
ಲಂಚ ತಿಂದು ಬದುಕುತಾರಲ್ಲ
ಲಂಚ ತಿಂದು ಬದುಕುತಾರಲ್ಲ (೧)

ಜನ ಹಳ್ಳಿ ಹಳ್ಳಿ ಎಂದು ಮೂಗ ಮುರಿಯುತಾರ
ಪ್ಯಾಟಿಗೇಳಿ ಮೆರಿತಾರ,
ತನ್ನ ಹುಟ್ಟಿದೂರ ಮರಿತಾರ
ತಂದೆ ತಾಯಿ ಬಿಟ್ಟು ಮೆರಿತಾರ (ಪ)

ಸಾಹೇಬ ಸುಬೇದಾರ ಆಗಿ ಪ್ಯಾಟೆಯ ಹೆಣ್ಣ ಮದುವಿ ಆಗತಾರ
ಹೆತ್ತವರನು ತುಳಿತಾರ
ಹಡೆದಪ್ಪ ಮಗನ ನೋಡಾಕ ಬಂದರ
ಮನಿ ಆಳ್ ಅಂತ ಹೇಳತಾರ
ಮಂದ್ಯಾಗ ಮಾನ ಕಳಿತಾರ
ಸಂಧ್ಯಾಗ ಕಾಲ ಹಿಡಿತಾರ (೨)

ಜನ ಹಳ್ಳಿ ಹಳ್ಳಿ ಎಂದು ಮೂಗ ಮುರಿಯುತಾರ
ಪ್ಯಾಟಿಗೇಳಿ ಮೆರಿತಾರ,
ತನ್ನ ಹುಟ್ಟಿದೂರ ಮರಿತಾರ
ತಂದೆ ತಾಯಿ ಬಿಟ್ಟು ಮೆರಿತಾರ (ಪ)
===========

6 ಕಾಮೆಂಟ್‌ಗಳು:

ಪ್ರವೀಣ್ ಭಟ್ ಹೇಳಿದರು...

Hadid yaru gottille.. hadu matra mast iddu. janapada geethe kelale sakath chanda.. share madidke thanks :)

ಮನಸು ಹೇಳಿದರು...

vidya tumba chennagide... haLLi haaDu andre haaDe.. ee haadu svlpa gottitu poorti gottiralilla... thank you

balasubramanya ಹೇಳಿದರು...

- ದಿವ್ಯಾ , ನಿಮ್ಮ ಈ ಹಾಡು ವಿಶಿಷ್ಟ ವಾಗಿದೆ , ಹಳ್ಳಿ ಮರೆತು ಜೀವನದಲ್ಲಿ ಮೌಲ್ಯ ಮರೆತು ಬದುಕುತ್ತಿರುವವರಿಗೆ ಚಾಟಿ ಏಟು ಕೊಟ್ಟಿದೆ . ಚೆನ್ನಾಗಿ ಮೂಡಿಬಂದಿದೆ. ನಿಮಗೆ ಥ್ಯಾಂಕ್ಸ್

shivu.k ಹೇಳಿದರು...

ದಿವ್ಯ,

ಹಾಡಿನ ಭಾವ ತುಂಬಾ ಚೆನ್ನಾಗಿದೆ. ಆದ್ರೆ ಈ ಹಾಡು ತುಂಬಾ ಹಿಂದೆ ಕೇಳಿದ್ದರಿಂದ ಯಾರು ಹಾಡಿದ್ದು ಅಂತ ಗೊತ್ತಾಗುತ್ತಿಲ್ಲ. ನೋಡೋಣ ಯಾರಾದ್ರು ನಮ್ಮ ಬ್ಲಾಗಿಗರು ಹೇಳಬಹುದೇನೋ..ಹಳ್ಳಿಹಾಡು ಪರಿಚಯಿಸಿದ್ದಕ್ಕೆ ಥ್ಯಾಂಕ್ಸ್.

ದಿನಕರ ಮೊಗೇರ ಹೇಳಿದರು...

nivu keLida parashnege uttara gottilla...

oLLe haaDu odisiddakke dhanyavaada....

ಶಿವಪ್ರಕಾಶ್ ಹೇಳಿದರು...

olle haadu.. :)