ಮಂಗಳವಾರ, ಜನವರಿ 04, 2011

ರಾಜೀ ಸಂತೋಷ

ಅವನು ತಮಾಷೆಗೆಂದು ಕಳಿಸಿದ
ಯಾವುದೋ ಸಂದೇಶಕ್ಕೆ ತಲೆ ಕೆಡಿಸಿಕೊಂಡು
ಅತ್ತು,ಕಣ್ಣು ಮೂಗು ಕೆಂಪಾಗಿಸಿಕೊಂಡು
ಊಟ ಮಾಡದೆ ಸಿಟ್ಟಿನಿಂದ ಊದಿದ
ಮುಖದಲ್ಲೇ ,ನಾನೂ ಕಳಿಸಿದೆ ಒಂದು ಸಂದೇಶ

ಕೋಪ ಬಂದಿದೆ ನನಗೆ ,ಖಾತ್ರಿಯಾದ
ಅವನು,"ಇವತ್ತು ಸಿಗುವೆಯಾ"? ಎಂದಾಗ
ಮುಲಾಜಿಲ್ಲದೆ "ಇಲ್ಲ" ಎಂದೆ.
ಸರಿಯಾಗಿ ಒಂದು ಘಂಟೆಗಳ ನಂತರ
"ಎಲ್ಲಿ"? ಎಂದಾಗ ಅವನು "ಯಾವಾಗಲೂ ಸಿಗುವಲ್ಲಿ"
ಎಂದು ಮೊನಚಾಗಿ ಬಂದಿತ್ತು ಉತ್ತರ!

ಬಂದಾಗ ನನ್ನ ಹುಡುಗನ ಮುಖ
ಎಲ್ಲ ದಿನಗಳ ಹಾಗೆ ಹಸನ್ಮುಖವಾಗಿರಲಿಲ್ಲ.
ಬಂದು ಕುಳಿತ ಎರಡು ಘಂಟೆಗಳ ನಂತರ
ತಿಳಿದ ವಿಷಯ ಅವನು ಊಟ ಮಾಡಿಲ್ಲ!
ನಾನೇನೋ ಅತ್ತೆಯ "ಅನ್ನ ಹೆಚ್ಚಾಗ್ತು, ಮೊದಲೇ ಹೇಳವು"
ರಗಳೆಗೆ ಹೆದರಿ ಉಂಡು ಬಿಟ್ಟೆ
ಆದರೆ ಅವನು? ಊಹೂಂ ಊಟ ಮಾಡಿಲ್ಲ.

ಇನ್ನು ಮುಂದೆ ಊಟ ಬಿಡಬಾರದೆಂದು
ಆಣೆ ಮಾಡಿಸಿಕೊಂಡು, ಅವನ ಕಳಿಸುವಷ್ಟರಲ್ಲಿ
ಅವನ ಬಾಡಿದ ಮುಖ,ನನ್ನ ಮುಂಗೋಪ
ನನ್ನನ್ನು ಸಹಿಸಿಕೊಳ್ಳುವ ಅವನ ದೊಡ್ಡ ಗುಣ ನೆನೆದು,
ಕಣ್ಣುಗಳು ತೇವ, ಮನದಲ್ಲೇಕೋ ಪಾಪಪ್ರಜ್ಞೆ,
ತುಟಿಯಲ್ಲಿ ಕಿರುನಗೆ!!!

14 ಕಾಮೆಂಟ್‌ಗಳು:

sunaath ಹೇಳಿದರು...

ಅಬ್ಬಾ, ನೆಮ್ಮದಿಯಾಯ್ತು!

ಅನಾಮಧೇಯ ಹೇಳಿದರು...

sadhya...raaji aaytallaa :P

shivu.k ಹೇಳಿದರು...

ತುಟಿಯಲ್ಲಿ ಕಿರುನಗೆ...ಜಯ ಸಾಧಿಸಿದ ಗುರುತಿಗಾಗಿಯಾ?

Unknown ಹೇಳಿದರು...

nice lines :) :)

ಅನಾಮಧೇಯ ಹೇಳಿದರು...

sadya, aa huDuga badukida!

ಕಾಂತೇಶ ಹೇಳಿದರು...

ಹೌದು ರಾಜೀ ಅನ್ನೋದು ನಮ್ಮ ಸೋಲಲ್ಲ..
ನಾವು ಸಂಬಂಧಗಳಿಗೆ ಕೊಡುವ ಬೆಲೆ..:)
ಒಳ್ಳೆ ಕವನ ..:)

ಸುಧೇಶ್ ಶೆಟ್ಟಿ ಹೇಳಿದರು...

pata pata odhisikondu hoyithu :)

heegella irutta preethiyalli :P

jithendra hindumane ಹೇಳಿದರು...

:)

V.R.BHAT ಹೇಳಿದರು...

ತಮಾಷೆಗೆ ಕಳಿಸಿದ ಸಂದೇಶಕ್ಕೆ ಮನಸ್ಸು ಒಗ್ಗಿಕೊಳ್ಳುವಾಗ, ’ಅಸ್ತು’ ಎನ್ನುವುದಕ್ಕಿಂತಾ ಮುಂಚೆ ಕಣ್ಣು-ಮೂಗು ಕೆಂಪು ಹುಡುಗಿಯರಿಗೆ ಸಹಜ. ಹುಡುಗರು ಊಟಬಿಟ್ಟು ಬರುವುದೂ ಕೆಲವೊಮ್ಮೆ ನಿಜ! ಇದರೊಳಗೇ ಇರುವುದು ಮಜಾ, ಆಮೇಲೆ ನೀವೇ ವಿಚಾರಿಸಿ ಆತನೇ ಹೇಳುತ್ತಾನೆ ನನಗೆ ಈಗ ರಜವೇ ಇಲ್ಲ ಯಾವಾಗಲೂ ಸಜಾ! ಕಿರುನಗೆಯ ಕವನ ಚೆನ್ನಾಗಿದೆ! ಶುಭಾಶಯಗಳು

Soumya. Bhagwat ಹೇಳಿದರು...

ದಿವ್ಯಾ ಚಂದ ಬರದ್ದೆ ಸಹಜ ಸುಂದರ .. :) ಸಿಟ್ಟು ಬಂದು, ಗಂಟಲುಬ್ಬಿ, ಕಣ್ಣೀರು ಸುರಿದು, ಹುಸಿಮುನಿಸು ತೋರಿ, ಕೊನೆಗೆ ರಾಜಿಯಾಗುವ ಪ್ರೀತಿಯ ಮೋಡಿ ಅದ್ಭುತ :)) ಅದೊಂದು ಹುಚ್ಚು ಎನಿಸಿದರೂ,ಆದರೂ ಅದು ಒಂಥರಾ ಇಷ್ಟ ಅಲ್ದಾ ? ತುಟಿಯಂಚಿನ ಮುಗುಳುನಗೆ ಹಾಗೆ ಇರಲಿ ಎಂದು ಹಾರೈಸುತ್ತೇನೆ .

ಮನಸಿನ ಮಾತುಗಳು ಹೇಳಿದರು...

ಸುನಾಥ್ ಅಂಕಲ್, :-)
ಸುಮಕ್ಕ, hmm .:-)
ಶಿವಣ್ಣ,ಸುಮ್ನೆ..;-)
ವಿಜಯ್,ಥ್ಯಾಂಕ್ಸ್..
ಅನಾಮಧೇಯ,hmm
ಕಾಂತೇಶ ,ಹೌದು
ಸುಧೇಶ್, ಪಾಪ ತಮ್ಗೇನೂ ಗೊತ್ತೇ ಇಲ್ಲ..!!!..;-) :P
ಜಿತೇಂದ್ರಣ್ಣ , :-))))
ವಿ.ಆರ್.ಭಟ್ ಸರ್,ಥ್ಯಾಂಕ್ಯು
ಸೌಮ್ಯ.ಥ್ಯಾಂಕ್ಸ್ ಕಣೆ.. :-)

ಶಿವಪ್ರಕಾಶ್ ಹೇಳಿದರು...

ha ha ha.. channagide.. :)

ಈಶ್ವರ ಹೇಳಿದರು...

ಮೊದಲ ಅಭಿಪ್ರಾಯವೇ... ಅಬ್ಬ ಸಮಾಧಾನ ಆಯ್ತು !! ಒಳ್ಳೆಯ ಕವನ

shan ಹೇಳಿದರು...

suuuuuuuupppppeeeeeeeeeerrrrrrrrkonegu raajiyaagide