ಬುಧವಾರ, ಡಿಸೆಂಬರ್ 08, 2010

ಅಪ್ಪಣೆಯಾ ?

ಕಡ್ಡಾಯವಾಗಿ ನಿನಗೆ ಈ ವಿಷಯ ತಿಳಿಸಬೇಕಿದೆ,
ಚಳಿಗಾಲ ಶುರುವಾಗುತ್ತಿದೆ.
ಬೆಚ್ಚನೆ ಯೋಚನೆಗಳಲ್ಲಿ ಎಲ್ಲ,
ನಿನ್ನದೇ ಚಹರೆಗಳು.
ಕಳೆದು ಹೋಗುತ್ತಿರುವೆ ,
ಕರಗಿ ಹೋಗುತ್ತಿರುವೆ ನಿನ್ನಲ್ಲಿ,
ನಿನ್ನ ಪ್ರೀತಿಯ ಅಮೃತ ಧಾರೆಯಲ್ಲಿ.

ಒಂದು ನಿಮಿಷವೂ ಶ್ರದ್ದೆಯಿಂದ ಕೆಲಸ ಮಾಡದವಳು,
ಈಗ "ಚನ್ನಾಗಿ ಕೆಲಸ ಮಾಡುತ್ತೀಯ" ಎಂದು ಹೇಳಿಸಿಕೊಳ್ಳುತ್ತೇನೆ ,
ಡೈರಿಯ ಪುಟದ ತುಂಬಾ ನಿನ್ನದೇ ಹೆಸರು,
ನಿನ್ನಿಂದಲೇ ಕಲಿಯುತ್ತಿರುವೆ ಸಹನೆ,
ನಿನ್ನಿಂದ ಬದುಕಿಗೆ ಹೊಸ ತಿರುವು ಬಂದಿದೆ,
ನನ್ನ ಹಸನ್ ಮುಖದ ಹಿಂದನ ಕಾರಣ ,
"ಕೇವಲ ನೀನು, ಹೌದು ಬರೀ ನೀನಷ್ಟೇ"
ಎಂದರೆ ನೀನು ನಂಬಲೇ ಬೇಕು.

ನನ್ನನ್ನು ಮರಳಿ ಹುಡುಕಿಕೊಳ್ಳುವ ಪ್ರಯತ್ನ,
ನಾನು ಇನ್ನು ಮಾಡುವುದಿಲ್ಲ.
ಕಳೆದು ಹೋಗುವುದರಲ್ಲಿರುವ ಸುಖ,
ಒಂಟಿತನದಲ್ಲಿಲ್ಲ. ಸಾಕು ನನಗೆ ,
ನಿನ್ನ ಒಂದು ಸಾಂಗತ್ಯ, ನಿನ್ನ ಪ್ರೀತಿ ಮಾತುಗಳು
ಇಷ್ಟೇ ಸಾಕೆಂದರೆ ನಿನಗೆ ಆತಂಕವೇ?

ಹೇಳು ,ನನ್ನಲ್ಲಿ ಹೇಳೋಕಾಗದ ಆಸೆ ನೂರಿವೆ,
ಮತ್ತು ಅದು ಕೇವಲ ನಿನಗಷ್ಟೇ ಹೇಳಬೇಕಿದೆ,
ನಿನಗಾಗಿಯೇ ಒಂದು ಪತ್ರ ಬರೆಯಲ?

*****************

ಈ ಕಾಮೆಂಟನ್ನು ನೋಡಿ ಸ್ನೇಹಿತರೆ,

"nim hosa postge kayodu andre upendrana super film kaada haage aagide."

ಈ ಕಾಮೆಂಟ್ ಹಾಕಿದವರು ಅನಾಮಧೇಯರು! ಆದರೆ ಯಾರೇ ಹಾಕಿರಲಿ ಅವರಿಗೊಂದು ಥ್ಯಾಂಕ್ಸ್.ಹೊಟ್ಟೆ ಹುಣ್ಣಾಗುವಷ್ಟು ನಗು ಬಂತು. ಖುಷಿ ಆಯ್ತು (ಇದನ್ನ ನೋಡಿ ಇನ್ನಷ್ಟು anonymous ಕಾಮೆಂಟುಗಳು ಬರಬಹುದು.. ;-) ಬಿಡಿ ಕಾಮೆಂಟ್ ಮಾಡರೇಶನ್ ಇದೆಯಲ್ಲ ಹೇಗಿದ್ರು! )

16 ಕಾಮೆಂಟ್‌ಗಳು:

ಶರಶ್ಚಂದ್ರ ಕಲ್ಮನೆ ಹೇಳಿದರು...

"ಪತ್ರ ಬರೆಯಲಾ.. ಚಿತ್ರ ಬಿಡಿಸಲಾ... ಹೇಗೆ ಹೇಳಲಿ ನನ್ನ ಮನದ ಹಂಬಲ..." ಹಾಡು ನೆನಪಾಯಿತು ನಿಮ್ಮ ಕವನ ಓದಿ.. ಚಳಿಗಾಲದ ಬೆಚ್ಚಗಿನ ನೆನಪುಗಳು ಇನ್ನಷ್ಟು ಕವನಗಳಿಗೆ ಸ್ಪೂರ್ತಿಯಾಗಲಿ :)

ದಿನಕರ ಮೊಗೇರ ಹೇಳಿದರು...

chaLigaalada becchaneya nenapugaLu eshTondu madura...

innashTu kavana horabarali...

Unknown ಹೇಳಿದರು...

nice poem :)

ಸಾಗರದಾಚೆಯ ಇಂಚರ ಹೇಳಿದರು...

ದಿವ್ಯಾ
ನೋಡಿ ಉಪೇಂದ್ರ ಫಿಲಂ ಗಿಂತ ನೀವು ಫೇಮಸ್ ಆಗಿದಿರಾ :)
ಚಳಿ ಅಂದಕೂಡಲೇ ನಂಗೆ ನಡುಕ ಸ್ಟಾರ್ಟ್ ಆಗುತ್ತೆ
ಇಲ್ಲಿ -೮ ಡಿಗ್ರಿ ಲಿ ನರಳಲ್ತ ಇದಿವಿ :)
ಚೆನ್ನಾಗಿದೆ ಅಪ್ಪಣೆಯ? ಕವನ

ಸುಧೇಶ್ ಶೆಟ್ಟಿ ಹೇಳಿದರು...

"ಕಳೆದು ಹೋಗುವುದರಲ್ಲಿರುವ ಸುಖ ಒ೦ಟಿತನದಲ್ಲಿಲ್ಲ..."

ಅಪ್ಪಟ ಸತ್ಯ... :)

ಚಳಿಗಾಲದಲ್ಲೊಂದು ಬೆಚ್ಚಗಿನ ಸುಂದರ ಕವನ...

ವಾಣಿಶ್ರೀ ಭಟ್ ಹೇಳಿದರು...

ಒಂದೇ ಮಾತಲ್ಲಿ ಹೇಳುವುದಾದರೆ..
"ಬೆಚ್ಚನೆಯ ಎದೆಯಲ್ಲಿ ಒಮ್ಮೆ ಬಚ್ಚಿಕೋ ನನ್ನ, ಕಣ್ಣು ಮುಚ್ಚಿ ,ಮೆಚ್ಚಿ ನಿನ್ನ ಅಚ್ಚಲ್ಲೇ ಕರಗಿ ಹೋಗುವೆ ನಾನು ಕಣ್ಣು ಮುಚ್ಚುವ ತನಕ....."
ತುಂಬಾ ಆತ್ಮೀಯ,ನೂರು ಭಾವಗಳನ್ನು ಹೇಳುವ ಕವನ ದಿವ್ಯ..
ಚಳಿಗಾಲದ ಚಳಿಗೆ ಮುದ ನೀಡಿದಂತಿದೆ...

ತೇಜಸ್ವಿನಿ ಹೆಗಡೆ ಹೇಳಿದರು...

ಕವನ ಹಾಗೂ ಕೊನೆಯ ಕಮೆಂಟ್ ಎರಡೂ ಮಸ್ತ್! :)

~: яαтнηαкαя :~ ಹೇಳಿದರು...

"ನನ್ನನ್ನು ಮರಳಿ ಹುಡುಕಿಕೊಳ್ಳುವ ಪ್ರಯತ್ನ,
ನಾನು ಇನ್ನು ಮಾಡುವುದಿಲ್ಲ.
ಕಳೆದು ಹೋಗುವುದರಲ್ಲಿರುವ ಸುಖ,
ಒಂಟಿತನದಲ್ಲಿಲ್ಲ. ಸಾಕು ನನಗೆ ,
ನಿನ್ನ ಒಂದು ಸಾಂಗತ್ಯ, ನಿನ್ನ ಪ್ರೀತಿ ಮಾತುಗಳು
ಇಷ್ಟೇ ಸಾಕೆಂದರೆ ನಿನಗೆ ಆತಂಕವೇ?"

ತುಂಬಾ ಇಷ್ಟವಾಯಿತು

Ambika ಹೇಳಿದರು...

nimma kavana ishtavaayitu...tumba chennagide...

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ನಿನಗಷ್ಟೇ ಹೇಳಬೇಕಾದ,
ಆದರೆ,
ಹೇಳಲಾಗದ...ಆಸೆ.
ಚೆನ್ನಾಗಿದೆ,ಇಷ್ಟವಾಯಿತು.

ಶಿವಪ್ರಕಾಶ್ ಹೇಳಿದರು...

channige madam :)

shivu.k ಹೇಳಿದರು...

ಕಡ್ಡಾಯವಾಗಿ ನಿನಗೆ ಈ ವಿಷಯ ತಿಳಿಸಬೇಕಿದೆ,

ನಾನು ಹೊಸ ಮಂಕಿ ಉಲ್ಲನ್ ಕ್ಯಾಪ್,
ಹೊಸ ಸ್ವೆಟರ್ ಖರೀದಿಸಿದ್ದೇನೆ.
ನಂತರ ನಿನ್ನ ಕವನ ಓದುತ್ತಿದ್ದೇನೆ.

ಚಳಿಗೆ ಹಿತಕೊಡುತ್ತೆ ನಿನ್ನ ಪುಟ್ಟ ಕವನ.
ಉಪೇಂದ್ರ ಸಿನಿಮಾ ನೋಡಿದೆ.
ಅದು ನೋಡುತ್ತಿದ್ದಂತೆ ಮೈಯೊಳಗೆ
ಚಳಿಯಾಯ್ತು. ಆದರೆ
ನಿನ್ನ ಕವನ ಓದಿ ಮೈ
ಬಿಸಿಯಾಯ್ತು..

Soumya. Bhagwat ಹೇಳಿದರು...

nice poem.. romantic too divya :) liked it ... !

Naveen Shekar ಹೇಳಿದರು...

ನಿಮ್ಮ ಬ್ಲಾಗ್ ಓದಿ ನನಗೆ Inspiration ಸಿಕ್ತು ನನ್ನ ಬ್ಲಾಗ್ ಎಲ್ಲಿ ನಿಂತ ನೀರಾಗಿ ಬಿಡುತದೊ ಎನ್ದು ಕೊಂಡಿದವನಿಗೆ ಸಮಾದಾನ ಹೇಳಿದ ಹಾಗಾಯಿತು.. ತುಂಬಾ ಧನ್ಯವಾದಗಳು...

ಅನಾಮಧೇಯ ಹೇಳಿದರು...

nimma blog odide thumba chennagi bardiddira.. bahala ista aytu.. hige barita iri

ಅನಾಮಧೇಯ ಹೇಳಿದರು...

nimma blog odide thumba chennagi bardiddira.. bahala ista aytu.. hige barita iri