ಗುರುವಾರ, ನವೆಂಬರ್ 18, 2010

ಪಯಣ ಹೊಸ ಕನಸಿನೆಡೆಗೆ

ಆ ದಿನ ಕಾಲೇಜಿನಲ್ಲಿ ನಾವೆಲ್ಲ ಕ್ಲಾಸಿನಲ್ಲಿ ಕೂತಾಗ, ಪ್ರಿನ್ಸಿಪಾಲರು ಬಂದು ಇಪ್ಪತ್ತು ಜನರ ಹೆಸರನ್ನು ಕೂಗಿ , "come to my chamber " ಎಂದಾಗ ಏನಿರಬಹುದಪ್ಪಾ?! ಎಂದು ಅನುಮಾನಿಸುತ್ತಲೇ ನಾವೆಲ್ಲ ಗೆಳೆಯರು ಪಿಸು ಪಿಸು ಮಾತಡುತ್ತಾ ಹೆಜ್ಜೆ ಹಾಕಿದೆವು.ಚೇಂಬರ್ ಒಳಗೆ ಹೋದ ಮೇಲೆ ಪ್ರಿನ್ಸಿಪಾಲರು ಮಾತನ್ನು ಶುರುವಿಟ್ಟುಕೊಂಡರು. ಒಂದು ಕಂಪನಿಯವರು campus interview ಮಾಡಲು ಬರುತಿದ್ದಾರೆ.ನಾನು ನಿಮ್ಮೆಲ್ಲರನ್ನು ಸೆಲೆಕ್ಟ್ ಮಾಡಿದೀನಿ. ನೀವೆಲ್ಲ prepare ಆಗಿ ಅಂದರು. ಹೊರಗೆ ಬಂದ ನಮಗೆ ಅಯ್ಯೋ! ಯಾರಿಗೆ ಬೇಕಿತ್ತಪ್ಪ ಇದೆಲ್ಲ.ಸುಮ್ನೆ ಓಡಾಡಿಕೊಂಡಿದ್ವಿ ಅಂತ ಅನ್ನಿಸಿತ್ತು. ಹಾಗೇ preparation ಏನೂ ಮಾಡದೆ ಇಂಟರ್ವ್ಯೂ ಹೋಗ್ಬಂದ್ವಿ.ಮೊದಲ ಸುತ್ತಿನ ಇಂಟರ್ವ್ಯೂ ನಡೆದ ಮೇಲೆ ಊಟಕ್ಕೆ ಹೋಗಿ ಬನ್ನಿ.ಆಮೇಲೆ ರಿಸಲ್ಟ್ ಹೇಳುತ್ತೀವಿ ಎಂದಾಗ ನಾನಂತೂ ನನಗೆ ಸಕತ್ ಹಶ್ವಾಗಿದೆ.ಮೊದಲು ಊಟ ಮಾಡೋಣ ಅಂತ ಹೋಗಿದ್ದೆ.ಮನಸಲ್ಲಿ ನಾನು ಹೇಗಿದ್ರೂ ಸೆಲೆಕ್ಟ್ ಆಗಲ್ಲ ಬಿಡು ಅಂದುಕೊಂಡಿದ್ದೆ.ಆದರೆ, ಬಂದು ನೋಡಿದರೆ ಹತ್ತು ಜನರ ಹೆಸರಿನ ಮಧ್ಯೆ ನನ್ನ ಹೆಸರೂ ಸ್ಮೈಲ್ ಮಾಡ್ತಾ ಕೂತಿತ್ತು.ನಂಗೇ ನಂಬ್ಕೆ ಆಗ್ಲಿಲ್ಲ! ಆಮೇಲೆ ಸಿಕ್ಕಿದ್ದು ಆಫರ್ ಲೆಟರ್.ಸೀದಾ ಇತ್ತಕಡೆ ಪಯಣ.ಇದು ಫ್ಲಾಶ್ ಬ್ಯಾಕ್.

ಕೆಲಸ ಬಿಡುತ್ತೀನಿ ಎಂದು ನನ್ನ ಟೀಂ ಲೀಡರ್ ಗೆ ಹೋಗಿ ಒಂದು ತಿಂಗಳ ಹಿಂದೆ ಹೇಳುತ್ತೀನಿ.ಅವರೋ ಆಶ್ಚರ್ಯ , ಆತಂಕದಿಂದ "ವೈ ,ವಾಟ್ ಹ್ಯಾಪೇನ್ಡ್? ಅಂತಾರೆ.ನಾನು ಕೆಲಸಕ್ಕೆ ರಿಸೈನ್ ಮಾಡುತ್ತೀನಿ.ಒಹ್! ನೀವು ಪೆಪೆರ್ಸ್ ಹಾಕಿದ್ರಾ? ಯಾವಾಗ ಲಾಸ್ಟ್ ವರ್ಕಿಂಗ್ ಡೇ ? ಎಂದು ಕೇಳುವ ಎಲ್ಲರಿಗೂ ಉತ್ತರ ಕೊಟ್ಟು ದಣಿಯುತ್ತೇನೆ.ಇನ್ನು ಕೆಲವರು ಯಾಕೆ ಬೇರೆ ಕಡೆ ಕೆಲಸ ಸಿಕ್ಕಿತಾ? ಮದುವೆ ಆಗ್ತಾ ಇದ್ದೀರಾ? ನೀವು ಸೇರುವ ಹೊಸ ಕಂಪನಿಯಲ್ಲಿ ನಮಗೂ ರೆಫರ್ ಮಾಡಿ ಅಂತ ಹೇಳುತ್ತಾರೆ.. ಇನ್ನು ಕೆಲವರು ,ಸಾಕು ಬಿಡಿ ,ಇನ್ಮೇಲಾದ್ರು ಆರಾಮಾಗಿರಿ, ಎಂದು ಬಿಟ್ಟಿ ಸಲಹೆ ಕೊಡುವವರು.ಏನೋ..ಇಷ್ಟು ದಿನ ಮಣ್ಣು ಹೊತ್ತು ಕಷ್ಟ ಪಟ್ಟ ಹಾಗೆ! ಮರಿಬೇಡ ಕಣೆ ಎಂದು ,ಒಂದು ದಿನವೂ ಮಾತಾಡಿಸದ ಹುಡುಗಿ ಬಂದು ಹೇಳುತ್ತಾಳೆ.ಹೋ..ನೀನು ಆರ್ಕುಟ್ನಲ್ಲಿ ಇದಿಯಲ್ಲ..ನಾನು ನಿನಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸ್ತೇವೆ ಅಂತ ಸ್ವಲ್ಪ ಜನ ಹೇಳುತ್ತಾರೆ.ನೀವು ಈಗ "ಫ್ರೀ ಬರ್ಡ್"ಅಂತ ಇನ್ಯಾರೋ ಹೇಳುತ್ತಾರೆ. ನಾವೆಲ್ಲ ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.ಯಾರೇ ಬ್ಲಾಗ್ ಬಗ್ಗೆ, ಅಥವ ಪುಸ್ತಕದ ಬಗ್ಗೆ ಮಾತಾಡಿದರೆ ನಿನ್ನ ನೆನಪೇ ಆಗುತ್ತೆ ಎಂದು ಹೇಳಿ ನನ್ನನ್ನು ಭಾವುಕಗೊಳಿಸುತ್ತಾರೆ. ನನ್ನ ಸುಂದರ campus , ಇಲ್ಲಿ ಇರುವ ಈಜು ಕೊಳದ ಬಳಿ ನಾನು ಕಳೆಯುತ್ತಿದ್ದ ಸಮಯ ಎಲ್ಲವೂ ಒಮ್ಮೆಲೇ ನೆನಪಾಗುತ್ತದೆ. ನಮ್ಮನ್ನೆಲ್ಲ ಬಿಟ್ಟು ಹೋಗಬೇಡಾ ಪ್ಲೀಸ್ ಅಂತ ಹೇಳಿದ ಹಾಗೇ ನನಗೆ ಭಾಸವಾಗುತ್ತದೆ. ಬಸ್ ನಲ್ಲಿ ಎರಡು ಘಂಟೆಗಳ ಪಯಣ ಮಾಡಿದರೂ, ಅದರಲ್ಲಿ ಇರುವ ಖುಷಿ ಇನ್ನು ಮೇಲೆ ಸಿಗಲ್ಲವಲ್ಲ ಅಂತ ಒಂದು ಸಾರಿ ಬೇಸರವಾಗುತ್ತದೆ. ಮತ್ತೆ ಇದೆಲ್ಲ ನನ್ನ ಸ್ವಂತದ್ದ? ನೀನು ಮುಂದುವರೆಯಬೇಕು.ನಿಂತ ನೀರಾಗಬೇಡ ಅಂತ ನನ್ನ ಮನಸು ಎಲ್ಲೋ ಒಂದು ಕಡೆ ಎಚ್ಚರಿಸುತ್ತೆ.ಮೂರು ವರುಷಗಳಲ್ಲಿ ಪಡೆದುಕೊಂಡಿದ್ದು ಬಹಳಿದೆ. ಕಳೆದುಕೊಂಡಿದ್ದು ಏನೂ ಇಲ್ಲ.ಬರೀ ಗಳಿಕೆ.ಮೊದಲ ಜಾಬು ,ಅಂದರೆ ಏನೋ ವಿಶೇಷ ಪ್ರೀತಿ.ಅಪ್ಪ ಅಮ್ಮನ ನಂತರ ಇದೇ ನನ್ನ ಅನ್ನದಾತ.ನನ್ನ ಜಾಬು ನನಗೆ ಬ್ರೆಡ್,ಬಟರ್ ,ಜಾಮ್,ಗೋಲ್ -ಗಪ್ಪ, ಹೊಸ ಡ್ರೆಸ್ಸು,ಮೊಬೈಲ್, ಕ್ಯಾಮೆರಾ,ಅಮ್ಮಂಗೆ -ಅಪ್ಪಂಗೆ-ತಂಗಿಗೆ ಗಿಫ್ಟುಗಳು,ಹುಡುಗನಿಗೆ ಕೊಟ್ಟ ನಾಯಿ ಮರಿ ಗೊಂಬೆ, ಎಲ್ಲದಕ್ಕೂ ದುಡ್ಡು ಒದಗಿಸಿದೆ. Thank you soo much .ಆದರೂ ಕಂಪನಿ ಬಿಟ್ಟು ಹೋಗುತ್ತಿರುವುದಕ್ಕೆ ಬೇಸರವಾದರೂ, ಮುಂದಿನ ದಿನಗಳ ಬಗ್ಗೆ ನೆನೆಸಿಕೊಂಡು ಪುಳಕಗೊಳ್ಳುತ್ತೀನಿ.

ಯಾರಾದರೂ ಕಂಪನಿ ಬಿಟ್ಟು ಹೋಗುವಾಗ,ಯಾರದೋ ಹುಟ್ಟಿದ ದಿನ ಆದಾಗ,ಯಾರದೋ ಮದುವೆ ಆದಾಗ ಟೀಮಿನಲ್ಲಿ ಎಲ್ಲರ ಬಳಿ ಹಣ ಸಂಗ್ರಹ ಮಾಡಿ ಅವರಿಗೊಂದು ನೆನಪಿನ ಕಾಣಿಕೆಯನ್ನು ಕೊಡೋದು ಅಭ್ಯಾಸ.ನನಗೂ ಹಾಗೊಂದು ಬೀಳ್ಕೊಡುಗೆ ಸಮಾರಂಭವನ್ನು ಇಟ್ಟುಕೊಳ್ಳಲು ಇವರೆಲ್ಲ ಗುಟ್ಟು ಗುಟ್ಟಾಗಿ ದುಡ್ಡು ಸಂಗ್ರಹ ಮಾಡುತ್ತಿರುವುದು ನನ್ನ ಗಮನಕ್ಕೆ ಬರುತ್ತಿದೆ.ಈಗಾಗಲೇ ಎಲ್ಲರು ಸೇರಿ ಒಂದು ದೊಡ್ಡ ಡಬ್ಬಿಯಲ್ಲಿ ಚಂದನೆ ,ಬಣ್ಣ ಬಣ್ಣದ ಹೊಳೆಯುವ ಕಾಗದದಲ್ಲಿ ಸುತ್ತಿ,ಅದಕ್ಕೊಂದು ಲೇಬೆಲ್ ಹಚ್ಚಿ ಇಟ್ಟುಕೊಂಡಿದ್ದಾರೆ."ನಾಳೆ ನನ್ನ ಫೇರ್ವೆಲ್ ಕಣೋ.ಹೊಸ ಡ್ರೆಸ್ ಕೊಳ್ಳಲಾ ಅಂತ ನೋಡ್ತಾ ಇದೀನಿ ಅಂತ ಹುಡುಗನಿಗೆ ಹೇಳಿದರೆ, 'ಎಂತದೂ ಬೇಡ.ಇದ್ದಿದ್ ಡ್ರೆಸ್ಸು ಹಾಕಂಡು ಹೋಗು ಸಾಕು.ಏನ್ ಭಾರಿ!!.:-)." ಅಂತಾನೆ.ಇಲ್ಲಿಂದ ಬಿಟ್ಟು ಹೋಗಲು ಬೇಸರ ಆಗುತ್ತಿದ್ದರೂ( ಬೇಸರ ಅನ್ನೋಕಿಂತ mixed feelings ಅನ್ನಬಹುದು )ಹೇಳಿಕೊಳ್ಳಲು ಅವನು,ಮತ್ತು ಅಪ್ಪ ಅಮ್ಮ ಎಲ್ಲರೂ ಇದ್ದಾರೆ ಅನ್ನುವ ನೆಮ್ಮದಿ ಬಿಟ್ಟರೆ ಇನ್ನೇನು ಅಲ್ಲ.ಎಲ್ಲವೂ ಚೆನ್ನಾಗಿದೆ.ಯಾಕೆ ಬಿಡುತಿದ್ದೀಯ ಎಂದು ಯಾರಾದ್ರು ಕೇಳಿದರೆ ನನ್ನ ಬಳಿ ಉತ್ತರ ಇಲ್ಲ. ಪಯಣ ನಾಳೆಯಡೆಗೆ.ಹೊಸ ಕನಸಿನೆಡೆಗೆ.

ರೋಬರ್ಟ್ ಫ್ರಾಸ್ಟ್ ಅವರ ಕವನದ ಸಾಲುಗಳು ನೆನಪಾಗುತ್ತಿವೆ.

"The woods are lovely, dark, and deep,
But I have promises to keep,
And miles to go before I sleep,
And miles to go before I sleep. "ನನಗಾಗಿ ತಂದ ಡಬ್ಬಿಯಲ್ಲಿ ಏನಿರಬಹುದೋ ಗೊತ್ತಿಲ್ಲ.ಇಲ್ಲಿಂದಾನೆ ಇಣುಕುತ್ತಾ ಇದೀನಿ!!...ಸರ್ವೇ ಜನಃ ಸುಖಿನೋ ಭವಂತು!!..:-)

24 ಕಾಮೆಂಟ್‌ಗಳು:

ಸುಮ ಹೇಳಿದರು...

nice :) ....ಹೊಸ ಕನಸು ಸಾಕಾರಗೊಳ್ಳಲಿ.

Naveen ಹಳ್ಳಿ ಹುಡುಗ ಹೇಳಿದರು...

All the Best :)

ಚುಕ್ಕಿಚಿತ್ತಾರ ಹೇಳಿದರು...

ಹೊಸ ಕನಸು..
ಹಳೆ ನೆನಪು..
ಹೊಸ ಬದುಕು..
ಹಳೆ ಎಕ್ಸ್ಪೀರಿಎನ್ಸು...!!

ಆಲ್ ದಿ ಬೆಸ್ಟ್..

Unknown ಹೇಳಿದರು...

good luck :)

sunaath ಹೇಳಿದರು...

ಶುಭಾಸ್ತೇ ಪಂಥಾನಃ ಸಂತು.

ಕಾಂತೇಶ ಹೇಳಿದರು...

ya thats life n meant to be..gud luck.. ella bittu hogtidivi annodakintha.. banda dari maride iddre sakalwa? :)

ವಾಣಿಶ್ರೀ ಭಟ್ ಹೇಳಿದರು...

ಹೊಸ ಕನಸು ಏನೆಂದು ಕೇಳಬಹುದ..?
ನಿಮ್ಮ ಕನಸು ಸಕರಗೊಂದು ಬದುಕು ಹಸನಾಗಲಿ..

ಸೀತಾರಾಮ. ಕೆ. / SITARAM.K ಹೇಳಿದರು...

ಹದಿನೈದು ವರ್ಷ ಕೆಲಸ ಮಾಡಿ ಈಗ ನಿಮ್ಮ ಹಾಗೆ ರಿಸೈನ್ ಮಾಡಿ ಕುಳಿತಿರುವ ನನ್ನ ಮನವನ್ನೇ ನಿಮ್ಮಲ್ಲಿ ನೋಡಿದ ಹಾಗಾಯಿತು. ನನ್ನ ಮನದ ಭಾಷೆಗೆ ನಿಮ್ಮ ಅಕ್ಷರವೆನಿಸಿತು.

ದಿನಕರ ಮೊಗೇರ ಹೇಳಿದರು...

divya,
idenu kalpaneyaa.../ athavaa nijavaa.....?

shivu.k ಹೇಳಿದರು...

nanu kelalla yake antha, all the best!

ಚೆಂದುಳ್ಳಿ ಹೇಳಿದರು...

Best wishes..
Nagu nagutaa nali nali , ene aagali.. :)

ಮನಮುಕ್ತಾ ಹೇಳಿದರು...

Best of luck..Divya.
May all your dreams come true...

ಸುಧೇಶ್ ಶೆಟ್ಟಿ ಹೇಳಿದರು...

haan... nanagoo heege aagittu... aa campus, eejukola, sundara parisara yellavoo kaadittu :)

best of luck :)

ಸುಧೇಶ್ ಶೆಟ್ಟಿ ಹೇಳಿದರು...

thumba chennagi barediddeeri... bere oorininda bengaloorige bandaaga prathiyobbarige inthadde anubhava aagiruttade..

Ambika ಹೇಳಿದರು...

Good Luck :)
Hosa kanasu nanasagali.
Nimagagi tanda dabbiyalli enide endu namagu heli :)

Prasad Shetty ಹೇಳಿದರು...

Wish you all the best for the future endeavor.

V.R.BHAT ಹೇಳಿದರು...

ನವೋ ನವೋ ಭವತಿ ಜಾಯಮಾನಃ ಎಂಬುದನ್ನು ಸಂಸ್ಕೃತವೇ ಹೇಳುತ್ತದೆ, ಸಹಜವಾಗಿ ಜೀವನದಲ್ಲಿ ಉತ್ತಮ ಆರ್ಥಿಕತೆ, ಒಳ್ಳೆಯ ಸ್ಥಾನಮಾನ ಬಯಸಿ ಎಲ್ಲರೂ ಮುನ್ನಡೆಯ ಬಯಸುತ್ತಿರುತ್ತಾರೆ, ನಿಮ್ಮ ಕನಸುಗಳಂತೇ ಹಲವರು ಕನಸುಕಾಣುತ್ತಿರುತ್ತಾರೆ. ನಿಮ್ಮ ಕನಸು ನನಸಾಗಲಿ, ಅನಂತ ಶುಭಹಾರೈಕೆಗಳು

Anveshi ಹೇಳಿದರು...

ಪೊಟ್ಟಣದೊಳಗೇನಿತ್ತು? ಹೇಳಲೇ ಇಲ್ಲ!

jithendra hindumane ಹೇಳಿದರು...

ಹೊಸ ಕನಸಿಗೆ ಶುಭಾಶಯಗಳು....!

ಮನಸಿನ ಮಾತುಗಳು ಹೇಳಿದರು...

@ ALL FRIENDS,

Thanku choo much... :-)

ಅನಾಮಧೇಯ ಹೇಳಿದರು...

enadru bariri munde...

ಅನಾಮಧೇಯ ಹೇಳಿದರು...

nim hosa postge kayodu andre upendrana super film kaada haage aagide.

ಶಿವಪ್ರಕಾಶ್ ಹೇಳಿದರು...

Wish you good luck divya :)

Padma Gopinath ಹೇಳಿದರು...

nimma writing interesting agide, adre kelavu vishayagalu clear agilla.. neevu yaake job bidthidira.. nimma munida kanasu yenu.. neevu share madilla!! anyway's My best wishes for your future projects:)