ಸೋಮವಾರ, ನವೆಂಬರ್ 08, 2010

ಮಾತನ್ನು ಹೇಳುತ್ತಾ - ಎರಡು ವರುಷಗಳು!!

ನಾನು ಯಾರಾದರು ನಾವಲ್ಲಿ ಹೋಗುತ್ತಿದ್ದೇವೆ.ಇಲ್ಲಿ ಹೋಗುತ್ತಿದ್ದೇವೆ..ನಿನಗೆ ಏನು ತರಬೇಕು ಅಂತ ಕೇಳಿದಾಗ,"ನನಗೆ ನೈಲ್ ಪೋಲಿಷ್ ತಗೊಂಡು ಬನ್ನಿ"..ಮತ್ತೇನೂ ಬೇಡ ಅಂತ ಹೇಳೋದು.ಸುಮಾರು 35-40 ಬಣ್ಣದ ನೈಲ್ ಪೋಲಿಷ್ ಬಾಟಲಿಗಳು ಇವೆ ನನ್ನ ಬಳಿ.ಅದೇನೋ ನನಗೆ ಬಹಳ ಪ್ರೀತಿ. ಸ್ವಚ್ಛವಾಗಿ ತೊಳೆದುಕೊಂಡ, ಬೆಳೆಸಿದ ಉಗುರುಗಳಿಗೆ ಬಣ್ಣ ಹಚ್ಚಿಕೊಂಡಾಗ ಅದೇನೋ ಒಂತರಹ ಹೇಳಿಕೊಳ್ಳಲಾಗದ ಖುಷಿ ಆಗುತ್ತದೆ ನನಗೆ.ಖುಷಿ ಪಡುವಂತಹ ಕ್ಷಣಗಳನ್ನು ಬಿಡುವುದುಂಟೆ? ಅದಕ್ಕೆಂದೇ ಅವನ್ನು ನನ್ನದಾಗಿಸಿಕೊಂಡೆ. ಚಿಕ್ಕಂದಿನಲ್ಲಿ ಬಾಟಲಿ ಅರ್ಧ ಖಾಲಿ ಆದ ಕೂಡಲೇ ನೀರನ್ನು ಹಾಕಿ ಅದನ್ನು ತುಂಬಿಸುತಿದ್ದೆ. ಅದು ಹಾಳಾಗಿ ಉಗುರುಗಳಿಗೆ ಹಚ್ಚಲು ಬಾರದೇ ಅಳುತಿದ್ದಾಗ ,ಅಪ್ಪ ಬಂದು "ಹೋಗ್ಲಿ ತಗ...ಆಳಡ ಮಗಾ,ನಿಂಗೆ ಹೊಸಾ ನೈಲ್ ಪೋಲಿಷ್ ಕೋಡ್ಸ್ತಿ.ನೀರು ತಾಗ್ಸಿದ್ರೆ ಹಾಳಗ್ತು.ನೀರ್ ತಾಗ್ಸಡ ..ಫ್ರಿಡ್ಜ್ ನಲ್ಲಿ ಇಟ್ಕ "ಅಂತ ಹೇಳ್ತಿದ್ರು.

ಹ್ಮ್!! ..ಹೌದು .ಈ ನೈಲ್ ಪೋಲಿಷ್ ಹೇಗೆ ಬಂದಿರಬಹುದು? ಎಂಬ ಯೋಚನೆ ಬಂದಿದ್ದು ತೀರಾ ಇತ್ತೀಚೆಗೆ ! ಮಾರುಕಟ್ಟೆಯಲ್ಲಿ ದೊರೆಯುವ ಬಣ್ಣ ಬಣ್ಣದ ನೈಲ್ ಪೋಲಿಷ್ ಗಳಿಗೆ ಮನ ಸೋಲದೆ ಇರುವವರೇ ಇಲ್ಲ. ನೈಲ್ ಪೋಲಿಷ್ ಪ್ರಾಚೀನ ಕಾಲದಿಂದಲೂ ಪ್ರಚಲಿತ. ಪ್ರಾಚೀನ ಚೀನಾದಲ್ಲಿ ಮೊದಲ ಬಾರಿ ಇದರ ಆವಿಷ್ಕಾರವಾಯಿತು.ಆಮೇಲೆ ಕಾಲಕ್ರಮೇಣ ಬೇರೆ ದೇಶಗಳಿಗೆ ರಾವಾಣೆಯಾಯಿತಂತೆ.ಆಗಿನ ಕಾಲದಲ್ಲಿ ಇದು ಕೇವಲ ಫ್ಯಾಶನ್ ಗಾಗಿ ಅಷ್ಟೇ ಮೀಸಲಾಗದೆ, ಒಬ್ಬ ವ್ಯಕ್ತಿಯ ಅಂತಸ್ತನ್ನು ತೋರಿಸುತಿತ್ತು . ಒಂದೊಂದು ಬಣ್ಣಕ್ಕೆ ಒಂದೊಂದು ಅರ್ಥಗಳಿದ್ದವು. ಶ್ರೀಮಂತರು ತಮಗೆ ಬೇಕಾದ ಬಣ್ಣವನ್ನು ಧರಿಸಬಹುದಾಗಿಯೂ ,ಬಡವರು ಯಾವಾಗಲೂ ಮಣ್ಣಿನ ಬಣ್ಣವೋ,ಅಥವಾ ತೀರಾ ಉಗುರಿಗಿಂತ ಬಿನ್ನವಾಗದಂತಹ ಬಣ್ಣವನ್ನು ಹಚ್ಚಬೇಕಾಗುತಿತ್ತು.. ಕೆಲವೊಂದು ಬಣ್ಣಗಳನ್ನು ಕೇವಲ ಹಬ್ಬ, ತಿಥಿ, ಮದುವೆ ಮುಂತಾದ ಕಾರ್ಯಕ್ರಮಗಳಿಗಾಗಿಯೇ ಎತ್ತಿಟ್ಟಿದ್ದರು. ಹೀಗೆ ಇದು ಒಂದು ರೀತಿಯಲ್ಲಿ ಧಾರ್ಮಿಕ ಸಂಕೇತವೂ ಆಗಿತ್ತು ಎಂದರೆ ತಪ್ಪಾಗಲಾರದು.

ಆದರೆ ಇತ್ತೀಚಿನ ದಿನಗಳಲ್ಲಿ ಇದು ಧಾರ್ಮಿಕ ಸಂಕೇತವಾಗಿ ಉಳಿದಿಲ್ಲ.ಎಷ್ಟೋ ಕಂಪನಿಗಳು ನೈಲ್ ಪೋಲಿಷ್ಅನ್ನೇ ಮುಖ್ಯ ಉತ್ಪನ್ನವನ್ನಾಗಿ ಮಾಡಿಕೊಂಡಿದೆ. ಲಾಕ್ಮೆ, ಎವೊನ್ ,ಎಲ್ಲೇ 18 ಇನ್ನೂ ಅನೇಕ ಕಂಪನಿಗಳು ನೈಲ್ ಪೋಲಿಷ್ ತಯಾರಿಕೆಯಲ್ಲೆ ಹೆಸರುವಾಸಿಯಾಗಿವೆ .15 ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿ ಬೆಲೆ ಬಾಳುವ ನೈಲ್ ಪೋಲಿಶಗಳು ಅಂಗಡಿಗಳಲ್ಲಿ ದೊರೆಯುತ್ತಿವೆ. ಎಲ್ಲರೂ ಕೊಳ್ಳಬಹುದಾದ ಬೆಲೆಗಳಲ್ಲಿ. ಈಗ ಇದನ್ನು ಕೇವಲ ಫ್ಯಾಶನ್ ,ಮತ್ತು ಕೈ -ಕಾಲುಗಳ ಸೌಂದರ್ಯ ವೃದ್ಧಿ ಸಾಧನ ಎಂದಷ್ಟೇ ನೋಡಲಾಗುತ್ತದೆ ಎಂಬುದು ಏನೋ ವನ್ ತರಹ ಸಮಾಧಾನಕರ ವಿಷಯವೇ ಅಂತ ಹೇಳಬಹುದು.ಇಲ್ಲಿಗೆ ನೈಲ್ ಪೋಲಿಷ್ ಪುರಾಣ ಮುಕ್ತಾಯವಾಯಿತು.********
ದೀಪಾವಳಿಯ ರಂಗು ರಂಗಿನ ಬೆಳಕುಗಳಲ್ಲಿ, ಎಲ್ಲಿ ನೋಡಿದ್ರೂ ಜಗಮಗಿಸುವ ಲೈಟಿನ ಸರಗಳು,ಸಿಹಿ ತಿಂಡಿಗಳು, ಹೊಸ ಬಟ್ಟೆಗಳು, ಹುಡುಗನ ಕಾಲ್ ,ಮೆಸ್ಸೇಜುಗಳು, ಆಗಾಗ ಬರುವ ಮಳೆಗಳು ,ಅಮ್ಮ-ಅಪ್ಪನ ಶುಭಾಶೀರ್ವಾದಗಳು, ತಂಗಿಯ ಶುಭಾಶಯಗಳು,ಸ್ನೇಹಿತರ ಮೈಲ್‍ಗಳು,ಪಟಾಕಿಗಳು ,ಅಲಂಕಾರಗಳು, ಟಿವಿಯಲ್ಲಿ ಬರುವ ಹಬ್ಬದ ವಿಶೇಷ ಕಾರ್ಯಕ್ರಮಗಳು, ಪಿಜಿಯಲ್ಲಿ ನಡೆಯುವ ಮೆಹೇಂದಿ ಕಾರ್ಯಕ್ರಮಗಳು, ಹೊರಗಿನಿಂದ ತರಿಸಿದ ಹೋಳಿಗೆಗಳು ,ಇವೆಲ್ಲದರ ಮಧ್ಯೆ ನನ್ನ ಬ್ಲಾಗ್ ಮಗೂಗು ಎರಡು ವರ್ಷ ಆಯ್ತು. ನನ್ನ ಬ್ಲಾಗ್ ಶುರು ಮಾಡಿ ಇವತ್ತಿಗೆ ಸರಿಯಾಗಿ ಎರಡು ವರುಷಗಳು!!

ಬರೆದ ಬರಹಗಳು ಎಷ್ಟರ ಮಟ್ಟಿಗೆ ಓದಲು ಸಹ್ಯವೋ ನನಗಂತೂ ಖಂಡಿತ ತಿಳಿದಿಲ್ಲ. ಬರೆದದ್ದಷ್ಟೇ ಗೊತ್ತು. ಬ್ಲಾಗ್ ನಿಂದಾಗಿ ಒಳ್ಳೇ ಸ್ನೇಹಿತರು, ಅಣ್ಣಂದಿರು, ಅಕ್ಕಂದಿರೂ, ತಂಗಿಯರು,ತಮ್ಮಂದಿರು ಹೀಗೆ ಇನ್ನೂ ಹಲವಾರು ಸಿಕ್ಕಿದ್ದಾರೆ. ಬ್ಲಾಗ್ ನನಗೆ ಯಾವತ್ತಿದ್ದರೂ ಖುಷಿ ಕೊಡುವ ಸ್ನೇಹಿತ. ನನ್ನ ಮಾತನ್ನು ಕೇಳಿಸಿಕೊಳ್ಳುವ ಜಾಣ. ಒಂದೊಂದು ಬರಹವೂ ನನಗೆ ಅಷ್ಟಿಷ್ಟು ಖುಷಿ ಕೊಟ್ಟವೆ. ಎಲ್ಲರೂ ಬರೆಯುತ್ತಾರೆ ಅಂತಲೋ, ಅಥವಾ ಇನ್ಯಾರೊಂದಿಗೋ ಸ್ಪರ್ಧೆಗಾಗಿ ನಾನು ಖಂಡಿತ ಬರೆಯೋದಿಲ್ಲ. ಬರೆಯೋಕೆ ನಂಗಿಷ್ಟ.

ಸುಮಾರು ಜನ ಚೆನ್ನಾಗಿ ಬರೆಯುತ್ತಿಯ ಅಂದರು. ಇನ್ಯಾರೋ ಏನು ಬರಿತಿಯ. ಬರೀ ಭಾವನೆಗಳ advertisement ಅಂದರು.ಹಾಗೆ ಹೇಳಿದವರು ಇನ್ಯಾರದೋ ಬ್ಲೋಗಿಗೆ ಚಪ್ಪರಿಸಿಕೊಂಡು ಕಾಮೆಂಟ್ ಹಾಕಿದರು! ಇಂಥವರ ಬಗ್ಗೆ ಅಸಡ್ಡೆ ಇದೆ. ಹೋಗ್ಲಿ ಬಿಡಿ,ಮನಸು ಹಾಳು ಮಾಡಿಕೊಳ್ಳೋದು ಬೇಡ. ಒಳ್ಳೇದು ,ಕೆಟ್ಟದ್ದು ಎರಡನ್ನೂ ಸ್ವೀಕರಿಸಲು ಬರಬೇಕು ಅಲ್ಲವ? ಯಾರು ಏನೇ ಹೇಳಿದರು ನಾನು ಮಾತ್ರ ನನ್ನ "ಮನಸಿನ ಮಾತುಗಳನ್ನು" ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ .ನಾನು ನಿಮ್ಮೆಲ್ಲರ ಬ್ಲಾಗುಗಳನ್ನು ಓದುತ್ತೇನೆ.ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತೇನೆ.ನಿಮಗೆ ,ನಿಮ್ಮ ಬ್ಲಾಗಿನ ಮೇಲಿನ ಪ್ರೀತಿ ನನಗೂ ಬರೆಯುವ ಉಮೇದಿ ಹೆಚ್ಚಿಸುತ್ತದೆ. ಯಾರು ಏನು ಬೇಕಾದರೂ ಅಂದುಕೊಳ್ಳಲಿ.ಸಹನೆಯಿಂದ ಕೇಳಿಸಿಕೊಳ್ಳಲು ನೀವಿದ್ದೀರಿ ಎಂಬ ನಂಬಿಕೆ ನನಗಿದೆ. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಇಲ್ಲದಿದ್ದರೆ ಖಂಡಿತ ನಾನು ಬರೆಯುತ್ತಿರಲಿಲ್ಲ. ನಿಮ್ಮೆಲ್ಲರ ಪ್ರೀತಿಗೆ, ಪ್ರೋತ್ಸಾಹಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು.ಪ್ರೀತಿ ಹೀಗೆ ಇರಲಿ .ಎಲ್ಲರಿಗೂ ಶುಭವಾಗಲಿ.
Love you all....


ಪ್ರೀತಿಯಿಂದ,
ದಿವ್ಯಾ...:-)

(ಚಿತ್ರಕೃಪೆ: ಅಂತರ್ಜಾಲ)

38 ಕಾಮೆಂಟ್‌ಗಳು:

ಮಹೇಶ ಹೇಳಿದರು...

ನಿಮ್ಮ ಬ್ಲಾಗಿಗೆ 2 ವರ್ಷದ ಶುಭಾಶಯಗಳು. ಹೀಗೆ ಇನ್ನೂ ಹಲವಾರು ವರ್ಷ ಸಾಗಲಿ ಎಂದು ಹಾರೈಸುತ್ತೇನೆ. ನೇಲ್ ಪಾಲಿಷ್ ಪುರಾಣ ಕುತೂಹಲವಾಗಿದೆ

ತೇಜಸ್ವಿನಿ ಹೆಗಡೆ ಹೇಳಿದರು...

ದಿವ್ಯಾ,

ಹಾರ್ದಿಕ ಶುಭಾಶಯಗಳು. ಮನಸಿನ ಮಾತುಗಳ ಪಯಣ ಸದಾ ಸಾಗುತ್ತಿರಲಿ...:) ನೈಲ್ ಪಾಲಿಷ್ ಪುರಾಣ ಈವರೆಗೂ ಗೊತ್ತಿರಲಿಲ್ಲ. Nice article :) Good Luck

ಚೆಂದುಳ್ಳಿ ಹೇಳಿದರು...

ಚೊಲೋ ಇದ್ದು ನೈಲ್ ಪೋಲಿಷ್ ಕಥೆ..
ಇನ್ನೂ ನೀರು ಹಾಕ್ತ ಇದ್ಯ ?

೨ ವರ್ಷ ಆಗಿದ್ದಕ್ಕೆ "ಅಭಿನಂದನೆಗಳು"..
ನಿನ್ನ ಬ್ಲಾಗ್ ಓದಿ ಹಲವು ವಿಚಾರ ತಿಳಿದುಕೊಂಡೆ.
ತುಂಬಾ ಲೇಖನಗಳು ವಿಚಾರಪೂರ್ಣ ..
ಕೆಲವು ಬಾಲ್ಯದ ನೆನಪು ಮರಳಿ ತಂದವು...
ನಿಮಗಿರುವ ಸಾಮಾಜಿಕ ಕಳಕಳಿಗೆ ಅಭಿನಂದನೆ..
ಕೆಲವು ಅರ್ಥ ಆಗಿಲ್ಲ .. ;) ..
ಇಲ್ಲಿಯವರೆಗೆ ನಿಮ್ಮ ಬ್ಲಾಗ್ನಲ್ಲಿ ಬರುವ "ಅವನಾರು" ಅಂತ ನಮ್ಮೆಲ್ಲರಿಗೆ ಹೇಳಲೇ ಇಲ್ಲ.. :)

ಇನ್ನೂ ಹಲವಾರು ವರುಷ ಹೀಗೆಯೇ ಬರೆಯುತ್ತಿರು..
ನೆಟ್ access ಇದ್ದಾಗೆಲ್ಲ ದಿನಕ್ಕೊಂದು ಬಾರಿ ನಿನ್ನ ಬ್ಲಾಗ್ ಓಪನ್ ಮಾಡಿ "ಯಾವ್ದಾದ್ರೂ ಹೊಸ ಲೇಖನ ಇದ್ದ" ಹೇಳಿ ನೋಡದು ಅಭ್ಯಾಸ ಆಗೊಯ್ದು.. ಹ ಹ

ಚುಕ್ಕಿಚಿತ್ತಾರ ಹೇಳಿದರು...

ಓಡಾಡಲು ಕಲಿತ ಎರಡು ವರ್ಷದ ಪುಟ್ಟ ಪೋರಿಗೆ ಹಾರ್ದಿಕ ಶುಭಾಶಯಗಳು.

ನೈಲ್ ಪಾಲಿಶ್ ಪುರಾಣ ಶ್ರವಣ ದಿ೦ದ ಉಗುರುಗಳಿಗೆಲ್ಲಾ ಪುಣ್ಯ ಸಿಕ್ಕಿತು...!

ಬರೆಯುತ್ತಾ ಸಾಗಿರಿ... ನಾವೂ ಬರುವೆವು... ಜೊತೆಯಲಿ ಬ್ಲಾಗಲಿ... ಎನ್ನುತ್ತಾ ಎಲ್ಲಾ ಸೇರಿ ಹಾಡೋಣ....:)

jithendra hindumane ಹೇಳಿದರು...

ನಿಮ್ಮ ಬ್ಲಾಗ್ಗೆ ಎರಡನೇ ವರ್ಷ ತುಂಬದ್ದಕ್ಕೆ ಹಾರ್ದಿಕ ಶುಭಾಶಯಗಳು..
ಇನ್ನೂ ಬರಹಗಳು ಕೇವಲ ನಮ್ಮ ಸ್ವಂತ ಅಭಿಪ್ರಾಯಗಳಷ್ಟೇ..

ಅದರ ಬಗ್ಗೆ ಬರುವ ಪ್ರತಿಕ್ರಿಯೆಗಳು :" ಅವರವರ ಭಾವಕ್ಕೇ ಬಿಡುವುದೊಳಿತು "

ಸುಧೇಶ್ ಶೆಟ್ಟಿ ಹೇಳಿದರು...

Congrats :)

vaividhyamaya barahagaLa blog idhu... yaavaththu manasige kushi kottive nimma barahagaLu...

heege munduvariyali nimma maathugaLu manasininda :)

sunaath ಹೇಳಿದರು...

ದಿವ್ಯಾ,
ಮೂರನೆಯ ವರ್ಷದಲ್ಲಿ ಕಾಲಿಟ್ಟ ಮಗುವಿಗೆ ಜನ್ಮದಿನದ ಶುಭಾಶಯಗಳು.

ಗೌತಮ್ ಹೆಗಡೆ ಹೇಳಿದರು...

congrats akkayya :) keeep going :)

ಮನಮುಕ್ತಾ ಹೇಳಿದರು...

ಚೆ೦ದದ ನಿಮ್ಮ ಬ್ಲಾಗ್ ಮೂರನೆ ವರ್ಷದಲ್ಲಿ ಕಾಲಿಟ್ಟಿದೆ..ಅಭಿನ೦ದನೆಗಳು. ನೈಲ್ ಪೊಲಿಶ್ ಕಥೆ ಯನ್ನು ಚೆನ್ನಾಗಿ ಬಣ್ಣಿಸಿದ್ದೀರಿ.very nice..
best of luck.

ಮನಸು ಹೇಳಿದರು...

congrats... and all the best..

http://santasajoy-vasudeva.blogspot.com ಹೇಳಿದರು...

Congrts Dear :-)

ಕಾಂತೇಶ ಹೇಳಿದರು...

Congrats to 2nd anivrsry of your blog baby..:)

shivu.k ಹೇಳಿದರು...

ದಿವ್ಯ ಬ್ಲಾಗಿಗೆ ಎರಡು ವರ್ಷವಾಗಿದ್ದಕ್ಕೆ ಅಭಿನಂದನೆಗಳು. ಅದಕ್ಕೆ ನಯವಾಗಿ ಬ್ಲಾಗಿನ ಲೇಖನವನ್ನು ನೇಲ್ ಪಾಲೀಶ್ ಮಾಡಿದ್ದೀಯಾ[ತಮಾಷೆಗೆ]...ಇನ್ನಷ್ಟು ಬರಿ ಮತ್ತಷ್ಟು ಬರಿ ಮನಸ್ಸಿಗೆ ಇಷ್ಟವಾದುದನ್ನು ಬರಿ...ಬರೆಯುತ್ತಿರು..ಬರೆಯುತ್ತಾ ನಗುತ್ತಿರು..ನಿನ್ನ ನಗು ತುಂಬಾ ಚೆಂದ...

ವಾಣಿಶ್ರೀ ಭಟ್ ಹೇಳಿದರು...

ದಿವ್ಯ...
ಯಾರು ಏನೇ ಅಂದರು ನನಗಂತೂ ನಿನ್ನ ಬರಹಗಳು ತುಂಬಾನೇ ಇಷ್ತಾಗ್ತು..ಮನಸಿಗೆ ಹತ್ತಿರವಾಗುವಂತೆ ನಿನ್ನ ಅಕ್ಷರಗಳು ಮೂಡಿಬರ್ತು..ಹೀಗೆ 'ಮನಸಿನ ಮಾತುಗಳನ್ನು' ಮನಸ್ಸಿಂದ ಮಾತನಾಡುತ್ತಿರು..

ದಿನಕರ ಮೊಗೇರ ಹೇಳಿದರು...

divya,

manasina maatige eradu varshada subhaashaya....

manasina maatu manassige taagiddakke ishTellaa janarige ishTavaagide...

heLuvavaru ellaa kaDe iddaare...
ninnashTkke baritaa iru....

congrats....

best of luck...

V.R.BHAT ಹೇಳಿದರು...

೨ ವರ್ಷಗಳನ್ನು ಪೂರೈಸಿ ಮೂರನೇ ವರ್ಷಕ್ಕೆ ಕಾಲಿಡುತ್ತಿರುವ ನಿಮ್ಮ ಬ್ಲಾಗಿಗೆ, ನಿಮ್ಮ ಬರೆಯುವ ಹವ್ಯಾಸಕ್ಕೆ ಹಾರ್ದಿಕ ಶುಭಾಶಯಗಳು, ಮತ್ತಷ್ಟು ಲೇಖನಗಳು ನಿಮ್ಮಿಂದ ಬರಲಿ, ಪ್ರೀತಿಯಿಂದ ನಾವೆಲ್ಲಾ ಓದುವಂತಾಗಲಿ ಎಂದು ಹಾರೈಸುತ್ತೇನೆ, ನಮಸ್ಕಾರ

Ambika ಹೇಳಿದರು...

ದಿವ್ಯ,
ಅಭಿನ೦ದನೆಗಳು.
ಯಾರು ಏನೇ ಅ೦ದರೂ, ನಿಜ ನಿನ್ನ ಬರವಣಿಗೆ ನ೦ಗೂ ಇಷ್ಟ ಆಗ್ತು. ಬೇರೆಯವ ಇಷ್ಟಪಡದಕ್ಕಿ೦ತ ನಾವು ಇಷ್ಟಪಟ್ಟು ಬರೆದಾಗ ಸಿಕ್ಕ ಸಮಾಧಾನ ಮುಖ್ಯ. ಹಾ೦ಗೆ ತು೦ಬ ಇಷ್ಟಪಟ್ಟು ಬೆಳೆಸಿದ ಬ್ಲಾಗ್ ಮನಸ್ಸಿಗೆ ಎಷ್ಟು ಹತ್ತಿರದ ಸ್ನೇಹಿತನಾಗಿರ್ತು ಹೇಳಿ ನಾನು ಬ್ಲಾಗ್ ಬರೆಯಲು ಶುರುಮಾಡಿದಮೇಲೆ ಅರ್ಥ ಆತು.
Good Luck :)

ಮನಸಿನ ಮಾತುಗಳು ಹೇಳಿದರು...

ಮಹೇಶ್ ಅವರೇ,

ನಿಮ್ಮ ಹಾರೈಕೆಗೆ ಧನ್ಯವಾದಗಳು.ಬರುತ್ತಿರಿ.. :-)

ಮನಸಿನ ಮಾತುಗಳು ಹೇಳಿದರು...

ತೇಜಕ್ಕಾ,

ನುರಿತ ಬ್ಲಾಗಿಗರಾದ ನೀವು ನನ್ನ ಬ್ಲಾಗಿಗೂ ಭೇಟಿ ಕೊಟ್ಟು ಅಭಿಪ್ರಾಯ ತಿಳಿಸುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಹೀಗೇ ಮುಂದುವರೆಯಲಿ ನಿಮ್ಮ ಪ್ರೋತ್ಸಾಹ.ಧನ್ಯವಾದಗಳು.. :-)

ಮನಸಿನ ಮಾತುಗಳು ಹೇಳಿದರು...

ಚಂದುಳ್ಳಿ( ಪ್ರಕಾಶ್),

ನಿನ್ನ ಹಾರೈಕೆಗೆ ತುಂಬಾ ಧನ್ಯವಾದಗಳು ಕಣೋ. ನೀನು ದಿನಾ ಹೊಸ ಬರಹ ಇದ್ದ ಹೇಳಿ ಕಾದು ಓದ ವಿಷಯ ಕೇಳಿ ಕುಶಿ ಆತು..ಪ್ರೋತ್ಸಾಹ ಹಿಂಗೆ ಇರ್ಲಿ."ಅವನು " ಯಾರು ಅಂತ ಸದ್ಯದಲ್ಲೇ ಹೇಳ್ತಿ.. ;-)

ಥ್ಯಾಂಕ್ಯು :-)

ಮನಸಿನ ಮಾತುಗಳು ಹೇಳಿದರು...

ಚುಕ್ಕಿ ಚಿತ್ತಾರ,

ನನ್ನ ಜೊತೆಯಲ್ಲಿ ಬರುವ ನಿಮ್ಮ ಇಷ್ಟಕ್ಕೆ ನನ್ನ ಸಂಪೂರ್ಣ ಸಮ್ಮತಿ ಇದೆ. ಜೊತೆ ಜೊತೆಯಲಿ ಸಾಗೋಣ ಬ್ಲಾಗ್ ಎನ್ನುವ ದೋಣಿಯಲ್ಲಿ.. :-) ಥ್ಯಾಂಕ್ಯು..:-)

ಮನಸಿನ ಮಾತುಗಳು ಹೇಳಿದರು...

ಜಿತೇಂದ್ರ ಣ್ಣ,

ಹ್ಮ್ಮ್...ಬರುವ ಅಭಿಪ್ರಾಯಗಳು "ಅವರವರ ಭಾವಕ್ಕೆ" ಬಿಡುವುದೇ ಒಳಿತು.ಆದ್ರೆ ಎಷ್ಟು ಕೀಳಾಗಿ ಮಾತಾಡುವರು ,ಆಮೇಲೆ ಮಾಡೋದೇನು ಅಂತ ಯೋಚಿಸಿ ಹೀಗೆ ಬರೆದೆ. ಅಷ್ಟೇ.

ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.ಥ್ಯಾಂಕ್ಯು... :-)

ಮನಸಿನ ಮಾತುಗಳು ಹೇಳಿದರು...

ಸುಧೇಶ್,

ನನ್ನ ಪ್ರತಿಯೊಂದು ಬರಹಗಳನ್ನು ಓದಿ ಕಾಮೆಂಟ್ ಮಾಡುವ ನಿಮ್ಮ ಪ್ರೀತಿಗೆ , ಅದರ ರೀತಿಗೆ. ಥ್ಯಾಂಕ್ಯೂ..:-)

ಮನಸಿನ ಮಾತುಗಳು ಹೇಳಿದರು...

ಸುನಾಥ್ ಅಂಕಲ್,

ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ..:-)

ಮನಸಿನ ಮಾತುಗಳು ಹೇಳಿದರು...

ಗೌತಮ್ ,

thankyou..:-)

ಮನಸಿನ ಮಾತುಗಳು ಹೇಳಿದರು...

ಮನಮುಕ್ತಾ ಅವರೇ,

ತುಂಬಾ ಧನ್ಯಾವಾದಗಳು.ಪ್ರೋತ್ಸಾಹ ಹೀಗೇ ಮುಂದುವರೆಯಲಿ..:-)

ಮನಸಿನ ಮಾತುಗಳು ಹೇಳಿದರು...

ಮನಸು(ಸುಗುಣಕ್ಕ),

ಥ್ಯಾಂಕ್ಯೂ.. :-)

ಮನಸಿನ ಮಾತುಗಳು ಹೇಳಿದರು...

santasajoy ,

Thank you so much... :-)

ಮನಸಿನ ಮಾತುಗಳು ಹೇಳಿದರು...

Kantesh ,

thankyou so much... :-)

ಮನಸಿನ ಮಾತುಗಳು ಹೇಳಿದರು...

ಶಿವಣ್ಣ,

ನಿಮ್ಮ ಹಾರೈಕೆಗೆ, ಮೆಚ್ಚಿನ ನುಡಿಗಳಿಗೆ ಧನ್ಯವಾದಗಳು.ಪ್ರೋತ್ಸಾಹ ಹೀಗೇ ಇರಲಿ... :-)

ಮನಸಿನ ಮಾತುಗಳು ಹೇಳಿದರು...

ದಿನಕರಣ್ಣ,

ನಿಮ್ಮ ಹಾರೈಕೆಗೆ ತುಂಬಾ ಧನ್ಯಾವದಗಳು... :-) ಬರುತ್ತಿರಿ.. :-)

ಮನಸಿನ ಮಾತುಗಳು ಹೇಳಿದರು...

ವಿ.ಆರ್.ಭಟ್ ಸರ್,

ತುಂಬಾ ಧನ್ಯವಾದಗಳು ಸರ್.ನನ್ನ ಬ್ಲೋಗಿನೆಡೆಗಿನ ನಿಮ್ಮ ಪ್ರೀತಿ, ಪ್ರೋತ್ಸಾಹ ಹೀಗೇ ಇರಲಿ. ಥ್ಯಾಂಕ್ಯೂ.. :-)

ಮನಸಿನ ಮಾತುಗಳು ಹೇಳಿದರು...

ವಾಣಿ,

ಮೆಚ್ಚಿನ ನುಡಿಗಳಿಗೆ ಧನ್ಯವಾದಗಳು ಕಣೆ.ಬರುತ್ತಿರು.. :-)

ಮನಸಿನ ಮಾತುಗಳು ಹೇಳಿದರು...

ಕವಿತಾ,

ತುಂಬಾ ಥ್ಯಾಂಕ್ಸ್ ಕಣೆ. ಬರ್ತಾ ಇರು... :-)

Soumya. Bhagwat ಹೇಳಿದರು...

same pinch divya :) ನಂಗೂ nail polish ಹುಚ್ಚು ಇದ್ದು :) really i enjoy your articles not only in blogs but also in ಸಖಿ. :) ಶುಭಾಶಯಗಳು :)

ಪ್ರವೀಣ್ ಭಟ್ ಹೇಳಿದರು...

Hmm barita barita tumba prabuddavayde.. barahagalu tumba chennagi moodi barta iddu.. heege sagali ninna payana. adetadegalannu dati...

Pravi

ಮನಸಿನ ಮಾತುಗಳು ಹೇಳಿದರು...

soumya,

u also like nailpolishes is it??... :-) thanks dear... :-)

ಮನಸಿನ ಮಾತುಗಳು ಹೇಳಿದರು...

Pravi,

thanks kano.. :-)