ಶುಕ್ರವಾರ, ಅಕ್ಟೋಬರ್ 29, 2010

ನಿದ್ದೆ ಬಾರದೆ ಬರೆದೆ!

ಅನಿವಾರ್ಯ : ಒಮ್ಮೊಮ್ಮೆ ಎಷ್ಟೇ ಬರೀಬೇಕು ಅಂತ ಕೂತರೂ ಒಂದಕ್ಷರವೂ ಹೊರಡುವುದಿಲ್ಲ.ಅದೇನೋ ಇಂದು ಇಷ್ಟನ್ನು ಬರೆಯದೇ ನಿದ್ದೆ ಬರಲೇ ಇಲ್ಲ. ನಿದ್ದೆ ಇಲ್ಲದಿದ್ದರೆ ನನಗಾಗದು.ನಿದ್ದೆ ಮಾಡಲಿಕ್ಕಾದರೂ ಅಕ್ಷರಗಳ ಉಗುಳುವಿಕೆ ಅನಿವಾರ್ಯವಾಗಿದೆ. ಅಂತೆಯೇ ಲೇಖನಿಯ ಕುತ್ತಿಗೆ ಹಿಚುಕಿ, ಮುದ್ದಾದ ಬಿಳಿ ಹಾಳೆಯ ಮೇಲೆ ಮನಸಿನ ವೇದನೆಗೆ ವಿದಾಯ ಹೇಳುವುದು ಅವಶ್ಯಕವಿದೆ. ಬರುತ್ತಿರುವ ಕಣ್ಣಿರನ್ನು ಅಲ್ಲಿಯೇ ನಿಲ್ಲಿಸಿ , ಏನೂ ಆಗಿಲ್ಲ ಎಂಬ ಮುಖವಾಡವನ್ನು ಹಾಕಿಕೊಳ್ಳಲು, ಮುಂದಿನ ಕ್ಷಣಗಳಲ್ಲಿ ನಗುತ್ತಿರಲು, ಮನಸಲ್ಲಿರುವುದನ್ನು ಹೊರಹಾಕುವುದು ಅನಿವಾರ್ಯವಾಗಿದೆ. ಮನಸು ಪ್ರಶ್ನೆಗಳನ್ನು ಕೇಳುತ್ತಿದ್ದರೆ ಉತ್ತರ ಹೇಳಲೇ ಬೇಕಾದ ಅನಿವಾರ್ಯ ನನಗಿದೆ.

ಬ್ರಮೆ : ಎಂದೋ ಮುಗಿದು ಹೋದ ಅದ್ಯಾಯಕ್ಕೆ ,ಹೊಸ ಹುಟ್ಟು ಬಂದಂತೆ. ಜೀವದೊಳಗೆ ಹೊಸ ಉನ್ಮಾದ ಬಂದಂತೆ. ಎಂದೋ ಕಂಡ ಕನಸುಗಳೆಲ್ಲ ಸಾಕಾರಗೊಳ್ಳುವಂತೆ.ಅಪೂರ್ಣಗೊಂಡ ಎಷ್ಟೋ ಭಾವನೆಗಳಿಗೆ ಜೀವ ಬಂದಂತೆ,ಬೆನ್ನಿಗೆ ರಕ್ಕೆ ಬಂದು ಆಗಸದ ಎತ್ತರೆತ್ತರ ಹಾರಿದಂತೆ.ಮನದಲ್ಲಿದ್ದ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಕ್ಕಂತೆ. ನಾಲ್ಕಾರು ಜನರು ನಮ್ಮ ನೋಡಿ ಬದುಕಲು ಕಲಿತಂತೆ.ಸ್ಪಂದನೆಗೆ ,ಪ್ರತಿಸ್ಪಂದನೆಯಲ್ಲಿ ನಿಜವಾದ ಭಾವ ಅಡಕವಾಗಿರುವುದು.ಕಾಳಜಿಯಲ್ಲಿ ನಿಜವಾದ ಕಾಳಜಿ ಇರುವುದು.ಮಾತಲ್ಲಿ ನಿಜದ ಲೇಪವಿರುವುದು.ಜೀವಕ್ಕೆ ಹೊಸ ಹುಟ್ಟು ಬಂದಂತನ್ನಿಸಿದ್ದು. ಕಂಡಿದ್ದು ,ಬರೆದಿದ್ದು ಕಂಡ ಹಾಗೇ ಇರಬಹುದು ಎಂದು ನಂಬಿದ್ದು!

ಬೇಸರ : ಎಂದೋ ಕಿಟಕಿಯಾಚೆ ಕೈಯ್ಯಾಡಿಸಿದ ಬೆರಳುಗಳು, ಕಾಣದ ಕನ್ನೆಡಿಯೊಳಗಿನ ಗಂಟನ್ನು ತೋರಿಸುತಿದ್ದರೆ ಕನ್ನೆಡಿಯೊಳಗೆ ಇದೆ ಗಂಟು ಎಂದು ತಿಳಿಯಲಾರದೆ ಹೋಗಿದ್ದು. ಮಾಯಾಮೃಗ ಅಸಲಿಗೆ ಕೈಗೆ ಸಿಗುವುದೇ ಇಲ್ಲ. ಅದೇನಿದ್ದರು ಬೆನ್ನಟ್ಟಿಸಿಕೊಂಡು ಹೋಗುತ್ತದೆ ಎಂದು ತಿಳಿಯದಿದ್ದು. ಅಥವ ತಿಳಿದುಕೊಳ್ಳುವುದರಲ್ಲಿ ತುಂಬಾ ತಡ ಮಾಡಿದ್ದು!ಎಲ್ಲರಿಂದನೂ ತಿಳಿದರೂ ಮನದಲ್ಲಿ ಅದು ಹೌದೆಂದು ನಂಬಿಕೆ ಬರದಿದ್ದು. ಕುದ್ದಾಗಿ ಪ್ರಯತ್ನಿಸುವ ಹುಂಬತನ ತೋರಿದ್ದು. ಭಾವನೆಗೆ ಸ್ಪಂದನೆ ಸಿಗದಿದ್ದಾಗಲೂ ಗೋಗರೆದಿದ್ದು.ಎಷ್ಟೋ ಆಸೆಗಳನ್ನು,ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರೂ , ಅದ್ಯವುದು ಇಲ್ಲದೆ ಇದ್ದರೂ ಸಹಿಸಿಕೊಂಡು ಹೀಗಿದ್ದರೂ ಸರಿ.ಅದು ನಾನು ಇಷ್ಟಪಟ್ಟಿದ್ದು ಎಂದು ಮನಸನ್ನು ಪುಸಲಾಯಿಸಿದ್ದು. ಕಾಗೆಯನ್ನು ನವಿಲೆಂದು ಪರಿಗಣಿಸಿದ್ದು!ಮದ್ಯ ರಾತ್ರಿಗಳಲ್ಲಿ ನಿದ್ದೆ ಅಲ್ಲದೆ, ಒದ್ದೆ ಕಣ್ಣು ಇದ್ದಿದ್ದು!

ಪ್ರಶ್ನೆ: ಎಂದೋ ಸಿಕ್ಕ ನಿಮಿಷ ಸ್ಪಂದನೆಗಳು ಜೀವನದುದ್ದಕ್ಕೂ ಬರಲು ಸಾದ್ಯವೇ? ಬರುವ ಯೋಗ್ಯತೆ ಇದೆಯೇ?ಜೀವನ ಪೂರ್ತಿ ಭಾವಕ್ಕೆ ಜೀವ ತುಂಬಲು,ಬಣ್ಣ ನೀಡಲು ಸಾದ್ಯವ??

ಖೇದ :ಏನೂ ನಡೆಯದೇ ಇದ್ದರೂ ನೋಡುಗರಿಗೆ, ಆಡುವವರಿಗೆ, ಆಹಾರವಾಗಿದ್ದು! ಬಿಟ್ಟಿ ಮನೋರಂಜನೆಯಾಗಿದ್ದು.ಎಲ್ಲರ ಹಾಗೇ ವಾಸ್ತವಕ್ಕೆ ಹೊಂದಿಕೊಳ್ಳಳು ಸುಲಭವಾಗದೆ ಇರುವುದು!

ಸಂತೋಷ : ಯಾರ ಮನಸಿಗೂ ನೋವಾಗದೇ,ಆಟವಾಡದೆ ಇದ್ದಿದ್ದು.ಮನದಲ್ಲಂದು ಮೂಡಿದುದು ಮನದ ಪದರುಗಳಲ್ಲಿ ಸಿಕ್ಕು ಮರೆಯಾಗಿ ಹೋಯಿತು. ಮತ್ತದರ ನೆನವೂ ಇಲ್ಲ.

ಕನಸು: ಕನಸು ಕಾಣುವುದರಲ್ಲೂ ಒನ್ ತರಹ ಸುಖವಿದೆ. ಬದುಕಲ್ಲಿ ಸಿಗದಿದ್ದು ಕನಸಲ್ಲಿ ಎಂದಿಗೂ ನಮ್ಮದೇ. ಕನಸು ಕಾಣುವ ಆಶೆಯಾಗಿದೆ. ನಿದ್ದೆ ಸಣ್ಣಗೆ ಆವರಿಸುತ್ತಿದೆ. ಮನಸಿನ ಭಾರ ಕಡಿಮೆಯಾಗುತ್ತಿದೆ.

ನಂಬಿಕೆ: ಯಾರೋ ಕಡಿದ ಗಿಡಕ್ಕೆ ಇನ್ಯಾರೋ ನೀರೆರೆಯುತ್ತಾರೆ. ಗಿಡಕ್ಕೆ ಗೊತ್ತಿಲ್ಲ ಇದ್ಯಾವುದೂ! ಅದಕ್ಕೇನಿದ್ದರೂ ಬೆಳೆಯುವುದೊಂದೇ ಗೊತ್ತು! ಗಿಡವಿದ್ದುದ್ದು ಮರವಾಗಲೇ ಬೇಕು. ನಾಲ್ಕು ಜನರಿಗೆ ನೆರಳನ್ನು ಕೊಡಲೇ ಬೇಕು. ಕಡಿದಷ್ಟು ಸಲ ಮತ್ತೆ ಹುಟ್ಟಲೇ ಬೇಕು.

ಮುಗಿಸೋಕು ಮುಂಚೆ: ಯಾಕೋ ಇಷ್ಟೆಲ್ಲಾ ಬರೆದಾದ ಮೇಲೆ ಆಶ್ಚರ್ಯ ರೀತಿಯಲ್ಲಿ ನನ್ನ ಮನಸ್ಸು ಮತ್ತೆ ಮೊದಲಿನಂತಾಗಿದೆ. ಇನ್ನು ಮಲಗಬೇಕು. ಮತ್ತೆ ಮತ್ತೆ ಕನಸನ್ನು ಕಾಣಬೇಕು. ಕನಸನ್ನು ನನಸಾಗಿಸಲು ಪ್ರಯತ್ನಿಸಬೇಕು. ಸಾಕಿನ್ನು. ರಾತ್ರಿ ಹನ್ನೆರಡು ಒರೆ. ಇನ್ನು ನಿದ್ದೆ ಬರುತ್ತದೆ ಎಂಬ ನಂಬಿಕೆ ಇದೆ. ಹೊಸ ಕನಸುಗಳನ್ನು ಕಾಣುವ ಕನಸಿನೊಂದಿಗೆ.....

93 .5 red fm ನ ಹಾಡು ಗುನುಗಿದ್ದು ಕೇಳಿಸಿತು. ಆಡಿಸಿ ನೋಡು ,ಬೀಳಿಸಿ ನೋಡು ಉರುಳಿ ಹೋಗದು..ಏನೇ ಬರಲಿ ಯಾರಿಗೂ ಸೋತು .....

ಇಂತಿ ನಾನು.....
(28 Oct 2010)

15 ಕಾಮೆಂಟ್‌ಗಳು:

ಸುಮ ಹೇಳಿದರು...

ನಿದ್ರೆ ಬಾರದೆ ಬರೆದ ಲೇಖನ ನನಗೆ ನಿದ್ರೆ ತರಿಸದೆ ಓದಿಸಿಕೊಂಡಿತು . ನೈಸ್ :)

ಚೆಂದುಳ್ಳಿ ಹೇಳಿದರು...

Shubha raatri..

Cholo baradde.. :)

ಮನದಾಳದಿಂದ............ ಹೇಳಿದರು...

ದಿವ್ಯಾ ಮೇಡಂ,
ಎಂದೋ ಆದ ನೋವು ಮನಸ್ಸನ್ನು ಘಾಸಿ ಮಾಡುವುದು ಸತ್ಯ, ಆದರೆ ಅದೇ ನೋವಿನ ಕಹಿ ನೆನಪಲ್ಲಿ ನರಳುವುದು ಜಾಣತನ ಅಲ್ಲ.
ಮನಸ್ಸಿನ ಭಾರವನ್ನು ಹೊರಹಾಕಿದಾಗ ಮನ ಹಗುರಾಗಿ, ಕಣ್ತುಂಬ ನಿದ್ದೆ ಬಂದು, ಸವಿಗನಸುಗಳು ಮನತುಂಬುತ್ತವೆ.
ನಿಮಗೂ ಚಂದದ ಕನಸುಗಳು ಬೀಳಲಿ......

nimmolagobba ಹೇಳಿದರು...

ಚೆನ್ನಾಗಿದೆ.

sunaath ಹೇಳಿದರು...

ಮನದಲ್ಲಡಗಿದ ಭಾವನೆಗಳು ಹೊರಬೀಳುವವರೆಗೆ ನಿದ್ರೆ ಬರುವದಾದರೂ ಹೇಗೆ?

ಚುಕ್ಕಿಚಿತ್ತಾರ ಹೇಳಿದರು...

nidde baarade hoddu cholo aatu...:)

shivu.k ಹೇಳಿದರು...

ದಿವ್ಯಾ,

ನಿದ್ರೆ ಬಾರದಿದ್ದಲ್ಲಿ ಹೀಗೆಲ್ಲಾ ಆಗುತ್ತಾ...ತುಂಬಾ ಚೆನ್ನಾಗಿ ಬರೆದಿದ್ದಿ.ಸೂಪರ್..

vijayhavin ಹೇಳಿದರು...

nice article :)

ಮನಸು ಹೇಳಿದರು...

nidre baarada lekhana chennagide

Badarinath Palavalli ಹೇಳಿದರು...

ಶೈಲಿ ವಿಭಿನ್ನವಾಗಿದೆ. ನಿಮಗೆ ನಿದ್ರೆ ಬಾರದಿದ್ದಾಗ ಒಳ್ಳೆ ಲೇಖನ ಬರುತ್ತದೆ ಅಂತಾಯಿತು. ನಿದ್ರೆ ನಿಮಗೆ - ನಮಗಾಗಿ ಬರವಾಗಲಿ ?

ನಿಮಗೆ ರಾಜ್ಯೋತ್ಸವ ಶುಭಾಶಯಗಳು...

Narayan Bhat ಹೇಳಿದರು...

ಲೇಖನ ಬರೆದ ಮೇಲೆ ಸೊಂಪಾದ ನಿದ್ರೆ ಆವರಿಸಿ ಈಗ ಮನ ನಿರಾಳವಾಗಿರಬಹುದೆಂದು ಅಂದುಕೊಂಡಿದ್ದೇನೆ.

ಮನಮುಕ್ತಾ ಹೇಳಿದರು...

ಲೇಖನಿಯ ಕುತ್ತಿಗೆ ಹಿಚುಕಿ, ಮುದ್ದಾದ ಬಿಳಿಹಾಳೆಗಳ ಮೇಲೆ ವೇದನೆಗೆ ವಿದಾಯವನ್ನು ಚೆನ್ನಾಗಿಯೇ ಅಕ್ಷರಗಳಲ್ಲಿ ಉಗುಳಿಸಿದ್ದೀರಿ..ಬರೆದಾದ ನ೦ತರ ನಿದ್ರೆ ಬ೦ತಲ್ವಾ?
ಕ೦ಡ ಸು೦ದರ ಕನಸುಗಳೆಲ್ಲವೂ ನನಸಾಗಲಿ.

ದಿವ್ಯಾ ಹೇಳಿದರು...

@ALL friends,

Thanku so much.. :-)

ಸುಧೇಶ್ ಶೆಟ್ಟಿ ಹೇಳಿದರು...

oorige hogiddarinda odhalu aaagiralilla... thumba chennagidhe... ishta aayithu :)

ದಿವ್ಯಾ ಹೇಳಿದರು...

ಸುಧೇಶ್, ಧನ್ಯವಾದಗಳು ಕಣ್ರೀ.. :-)