ಮಂಗಳವಾರ, ಅಕ್ಟೋಬರ್ 12, 2010

ಅವರವರ ಭಾವಕ್ಕೆ!

ಅವರು ನನ್ನ ಯಾವಾಗಲೂ ಕರೆಯುತ್ತಿದ್ದರು.ಆದರೆ ನಾನು ಎಂದೂ ಅವರ ಕರೆಗೆ 'ಓ' ಗೊಟ್ಟು ಅವರೊಡನೆ ಹೋಗಿರಲಿಲ್ಲ. ಆದರೆ ಮೊನ್ನೆ ಅದೇನಾಯ್ತೋ ನನಗೇ ಗೊತ್ತಿಲ್ಲ. ಯಾವಾಗ ನೋಡಿದರೂ PG ಯಲ್ಲೇ ಇರುತ್ತಿಯಲ್ಲ. ನಿನಗೆ ಬೇಸರ ಆಗಲ್ವಾ? ಇವತ್ತಾದರೂ ನಡಿ ನಮ್ಮ ಜೊತೆ ಬಾ, ಎಂದು ಹೇಳಿದಾಗ ತಕ್ಷಣಕ್ಕೆ ನಾನು ಒಪ್ಪದಿದ್ದರೂ ,ಅವರು ಕಣ್ ಮರೆಯಾದ ಮೇಲೆ ಅವರ ಮಾತೇ ಕಿವಿಗಳಿಗೆ ಗುನುಗುತಿತ್ತಲ್ಲ! ಹೌದು ಎಷ್ಟೋ ಸಾರಿ ಅನ್ನಿಸಿದ್ದಿದೆ. ಎಲ್ಲರೂ ತಮ್ಮ ತಮ್ಮ ಜೀವನವನ್ನು ಹೇಗೆ ಬೇಕೋ ಹಾಗೆ ಎಂಜಾಯ್ ಮಾಡುತ್ತಿರುವಾಗ, ನಾನು ಯಾಕೆ ಒಂದಷ್ಟು ನಿಯಮಗಳು,ಆದರ್ಶಗಳನ್ನು ಇಟ್ಟುಕೊಂಡು ನನ್ನ ಯವ್ವನವನ್ನೆಲ್ಲ ಇಂಥ ಒಣ principles ಇಟ್ಟುಕೊಂಡು ಸವೆಸುತ್ತಿದ್ದೇನೆ? ನನ್ನ ದೊಡ್ಡಮ್ಮನ ಮಗಳಿಗೆ ಹೆಚ್ಚೂ ಕಡಿಮೆ ನನ್ನ ವಯಸ್ಸೇ. ಆದರೆ ಅವಳಿಗೆ ಈಗಾಗಲೇ ಮೂರು ವರುಷದ ಮಗನಿದ್ದಾನೆ!ನಿಮ್ಮ ತಪ್ಪೇನಿದೆ ಬಿಡಿ,ಅವಳು ಸರಿಯಾಗಿ ಓದಲಿಲ್ಲ.ಮನೆಯಲ್ಲಿ ಇಟ್ಟುಕೊಂಡರೂ ಎಷ್ಟು ದಿನ ಇಟ್ಟುಕೊಂಡಾರು?ಅವಳ ಮದುವೆ ಆಗುವಾಗ ನಾನು ಇನ್ನೂ ಬಿ.ಎಸ್ಸಿ ಮೊದಲನೇ ವರುಷ.ಅಕ್ಕನ ಮದುವೆಯಲ್ಲಿ ನಾನೂ ಅತ್ತೆಯ ಹತ್ತಿರ ಹಠ ಮಾಡಿ ಒಂದು ಸೀರೆ ಇಸಿದುಕೊಂಡು ಮದುವೆ ಮನೆಯಲ್ಲಿ ತಿರುಗಿದ್ದೆ.ಎಲ್ಲರ ಗಮನ ಸೆಳೆದಿದ್ದು ಖುಷಿ ಕೊಟ್ಟಿತ್ತು.ಆದರೆ ಅದು ನನ್ನ ಜಾತಕ ಕೇಳುವ ಹಂತಕ್ಕೆ ಬರುತ್ತದೆ ಎಂದು ಕಡೆಗೇ ತಿಳಿದಿದ್ದು.ಅವರು ಜಾತಕ ಕೇಳುತಿದ್ದರೆ ಕೊಡಲೇ ಎಂದಾಗ ನಾನೂ ಮಾತ್ರ ನಾನಿನ್ನೂ ಓದಬೇಕು.ಈಗಲೇ ಮದುವೆ ಬೇಡ ಅಂದಿದಕ್ಕೆ ತಾನೇ ನೀವೂ ಸುಮ್ಮನಾಗಿದ್ದು. ಅದಾದ ಮೇಲೆ ಓದು ಮುಗಿಯಿತು ,ಕೆಲಸ ಸಿಕ್ಕಿತು. ನಡು ನಡುವೆ ಹುಡುಗರು ಕಂಡಾಗ ಸಣ್ಣ ಸಣ್ಣ crush ಆಗುತ್ತಿದ್ದರೂ ಕೂಡ.ಅದು ನಿಮಗೆ ತಲೆ ನೋವು ಆಗುವಂತೆ ಎಂದೂ ನಡೆದುಕೊಂಡಿಲ್ಲ.ರಸ್ತೆಯಲ್ಲಿ ನೀವೂ ನಡೆದುಕೊಂಡು ಬರುತಿದ್ದಾಗ,ನನ್ನ ಲೆಕ್ಟುರೆರ್ ಕಂಡರೆ,ಒಹ್ ನಿಮ್ಮ ಮಗಳ?ತುಂಬಾ ಒಳ್ಳೆಯ ಹುಡುಗಿ ಅಂತಾನೇ ಹೇಳಿಸಿಕೊಂಡಿದೀನಿ ಅಲ್ವಾ?

ಮನೆಯಲ್ಲಿ ನೆಲ ಒರೆಸುವಾಗ, ಗೋಡೆಯ ಮೂಲೆಯನ್ನು ಸರಿಯಾಗಿ ಒರೆಸದೆ ಸ್ವಲ್ಪ ಧೂಳು ಇದ್ದುದರಿಂದ ನಿನ್ನ ಹತ್ತಿರ ಬೈಸಿಕೊಂಡಿದ್ದೇನೆ ಅಲ್ವಾ?ಶಾಲೆಯಲ್ಲಿ ಎಲ್ಲ ಹುಡುಗರೂ fail ಆದರೂ ಸಂತೋಷದಿಂದ ಇರುತಿದ್ದಾಗ, ನನಗೇ ಕಡಿಮೆ ಅಂಖ ಬಂದಿದೆ ಅಂತಾನೇ ಬೇಸರದಿಂದ ಇರುತಿದ್ದೆ ಅಲ್ವಾ?ಎಷ್ಟೋ ಸಾರಿ ಸ್ನೇಹಿತೆಯರು birthday ಪಾರ್ಟಿ ,ಅದು ಇದು ಅಂತ ಕರೆಯಲು ಬಂದಾಗ,ನಿಮ್ಮ ಮುಂದೆಯೇ ನಿರಾಕರಿಸಿದ್ದೆನಲ್ಲ. ನಾನಾಯ್ತು ,ನನ್ನ ಪಾಡಾಯ್ತು ಅಂತ ಇರುತಿದ್ದೆನಲ್ಲ.ಇಂಥ ಮಕ್ಕಳು ಇನ್ನೂ ಎಷ್ಟಿದ್ದರೂ ಏನೂ ತೊಂದರೆನೇ ಇಲ್ಲ ಅಂತ ನೀವೂ ಉದ್ಗಾರ ಎತ್ತಿದ್ದಿರಲ್ಲ.ನೀನು ದಿನಾನು ದೇವಸ್ಥಾನಕ್ಕೆ ಹೋಗು, ದೇವ್ರೇ ಅಲ್ದಾ ಎಲ್ಲ ಅಂತ ಹೇಳುತಿದ್ದಾಗ, ಒಮ್ಮೊಮ್ಮೆ ಯಾಕೆ ಈ ತರ ದೇವ್ರು ಅಂತಾರೆ ,ನಾನು ಪರೀಕ್ಷೆಗೆ ಓದದಿದ್ದರೆ ,ದೇವರು ಬರೆದುಕೊಡುತ್ತಾನೆಯೇ?ಅಂತ ಮನಸಲ್ಲಿ ಅನ್ನಿಸಿದರು,ನಿಮ್ಮ ಇಷ್ಟಕ್ಕೆ ವಿರೋಧ ಮಾಡಬಾರದು ಅಂತ ಸುಮ್ಮನೆ ಹೋಗಿಲ್ಲವ?

ಇದೆಲ್ಲ ಒಂದು ಕಡೆಯಾದರೆ,ಕೆಲಸ ಸಿಕ್ಕಿ ಈ ಕಡೆಗೆ ಬಂದಾಗ ಇನ್ನೊಂದು ದ್ವಂದ್ವ.ಇಲ್ಲಿ ವಾರಕ್ಕೆ ಒಂದು ಸಾರಿ disco night ಆಗುತ್ತದೆ.ಎಲ್ಲರೂ ದೊಡ್ಡ ಸಂಗೀತಕ್ಕೆ ಹುಚ್ಚರಂತೆ,ಹುಡುಗ ಹುಡುಗಿಯರು ಎದಿರು ಬದಿರು ನಿಂತು ಕುಣಿಯುತ್ತಾರೆ.ದಣಿಯುತ್ತಾರೆ. ನಾನು ಒಂದು ಸಾರಿ ಇದನ್ನು ನೋಡಿ ಥೂ! ಎಂದು ಹಾಗೆ ಹೊರಟುಹೋಗಿದ್ದೆ.ಇದೆಲ್ಲ ನಮ್ಮ ಸಂಸ್ಕೃತಿ ಅಲ್ಲ ಎನ್ನುವ ಧೋರಣೆ ಮನದಲ್ಲೊಂದು ಕಡೆ. ಆ ದಿನ ನಾನು ಹಣೆಗೆ ಹಚ್ಚಿಲ್ಲದಿದ್ದಾಗ,ಗೆಳತಿ ನೀನು ಹಣೆಗೆ ಹಚ್ಚಿಕೋ.ಇಲ್ಲಾಂದರೆ ಚೆನ್ನಾಗಿ ಕಾಣೋಲ್ಲ ಎಂದಾಗ, ನಾನೇ ನನ್ನಷ್ಟಕ್ಕೆ, ಎಲ್ಲೋಯ್ತು ನನ್ನ ಸಂಸ್ಕ್ರತಿ ಆದರ್ಶಗಳು? ಎಂದು ಕೇಳಿಕೊಂಡಿದ್ದೆ.ಒಮ್ಮೊಮ್ಮೆ ನನಗೂ ಅನ್ನಿಸಿದ್ದಿದೆ.ಕೆಲವು ಹುಡುಗಿಯರ ಹಾಗೆ low waist jeans ಹಾಕಿಕೊಂಡು ,ಅರ್ಧ ಮುಚ್ಚಿದ ಸೊಂಟವನ್ನು ತೋರಿಸಿಕೊಂಡು,ಯಾರದೋ ಬೈಕಿನಲ್ಲಿ ಅಪ್ಪಿಕೊಂಡು ಕುಳಿತು ಹೋಗಬೇಕು ಅಂತೆಲ್ಲ.ಆದರೆ ನನಗೇ ಅಂಥ ದೈರ್ಯ ಆಗಲಿ,ನಾಚಿಕೆ ಬಿಟ್ಟು ಹೋಗುವುದಾಗಲೀ ಗೊತ್ತಿಲ್ಲ ಅನ್ನುವುದು ನಿಮಗೇ ಗೊತ್ತು. ಏನಿದ್ದರೂ ನನ್ನದು ಬಾಯಲ್ಲಿ ಬಣಕಾರ!ನಿಮಗಿಷ್ಟ ಅಂತ ಕಾಲೇಜಿಗೆ ಹೋಗುವ ದಿನಗಳಲ್ಲಿ ಉದ್ದ ಜಡೆ ಬಿಟ್ಟುಕೊಂಡರೂ ಆಮೇಲೆ ಅದನ್ನು ಕತ್ತರಿಸಿದ್ದು! ಇಲ್ಲಿ ತುಂಬಾ ಜನ ಇಲ್ಲಿನ ರಂಗು ರಂಗಿನ ಬದುಕಿಗೆ ಮರುಳಾಗುತ್ತಾರೆ. ಆದರೆ ನನಗೇ ಯಾಕೆ ಇಂತವೆಲ್ಲ ಇಷ್ಟವೇ ಆಗುವುದಿಲ್ಲ??ಆವತ್ತು ನಾರಾಯಣ ಕೆಲಸದ training ನಿಮಿತ್ತ ಬೆಂಗಳೂರಿಗೆ ಬಂದಾಗ,ಎಂದೋ ಕಾಲೇಜಿನಲ್ಲಿದ್ದಾಗ ಹೇಳಿದ ಮಾತು, ನಿನಗೆ job ಸಿಕ್ಕಾಗ ನನಗೇ ಒಂದು teddy bear ಕೊಡಿಸಬೇಕು ಅಂತ ಹೇಳಿದ್ದ ನಾನು, ಮರೆತಿದ್ದೆ.ಆದರೆ ಅವನ memory power ಗೆ ಕೊಡಬೇಕು. ಬರುತ್ತಿದ್ದಾಗ teddy bear ಜೊತೆಯಲ್ಲೇ ಬಂದಿದ್ದನಲ್ಲ.ಅವರೆಲ್ಲರ ಜೊತೆಗೂಡಿ ಗರುಡ ಮಾಲ್ ಗೆ ಹೋಗೋದೇನೋ ಹೋದೆ,ಆದರೆ ಮೊದಲ floor ನಲ್ಲೆ ನಾನು ಇನ್ನೂ ಮೇಲೆ ಬರಲ್ಲ. ನೀವು ಹೋಗಿ ಬನ್ನಿ.ನಾನು ಇಲ್ಲೇ ಇರುತ್ತೇನೆ ಎಂದರೂ ಬಿಡದೆ, ಗೊತ್ತೇ ನಿನಗೆ escalator ಅಂದರೆ ಭಯ.ನಾವು ಕೈ ಹಿಡಿದುಕೊಳ್ಳುತ್ತೇವೆ ಬಾ ಎಂದರೂ , ಎರಡನೇ ಮಹಡಿ ಹತ್ತಿ ಹಠ ಹಿಡಿದು ಬಿಟ್ಟೆ.ನಾನು ಬರೋಲ್ಲ ಎಂದು.ಪಾಪ ! ಅವರು ಹೋಗಿ ಬಂದರು. ಇಲ್ಲಿ ಇದ್ದಿದ್ದು ಸಾಕು ಯಾವುದಾದರು ಪಾರ್ಕಿಗೆ ಹೋಗಣ ,ಮಾತಾಡೋಣ, ಅಂತ ಕೋಪಿಸಿಕೊಂಡ ಮೇಲೆ ಅಲ್ಲಿಂದ ಕದಲಿದ್ದು ಅವರೆಲ್ಲ.

ಹೊಸತಾಗಿ PG ಗೆ ಬಂದ ಹುಡುಗಿಗೆ ಇಡೀ ಬೆಂಗಳೂರನ್ನು ನೋಡೋ ಉಮೇದಿ. ಜೊತೆಗಾರ್ತಿ ನಾನಾಗುತ್ತಿನೇನೋ ಅನ್ನುವ ಹಂಬಲ. ನೀನು ಮೂರು ವರುಷ ಆಯ್ತು ,ಇನ್ನೂ ಬೆಂಗಳೂರನ್ನು ನೋಡಿಲ್ವಾ?ಕೇಳಿದರೆ PG ಹತ್ತಿರ ಇರುವ ಪಾರ್ಕಿಗೆ ಕರೆದೊಯ್ಯುತ್ತಿಯ.ಜೊತೆಗೆ ಆ ಜೋಳ ಬೇರೆ ತಿನ್ನಲೇ ಬೇಕು ಅಂತ ಹಠ ಅಂತ ಹುಸಿ ಮುನಿಸ್ಕೊತಾಳೆ.ಏನು ಮಾಡಲೇ ಗೆಳತೀ? ,ನಾನು ಇರುವುದೇ ಹೀಗೆ ಅಂತ ನನ್ನ ಸಮರ್ಥನೆ.ಅಷ್ಟರಲ್ಲೇ ಜೊತೆಗಾರರನ್ನು ಹುಡುಕಿಕೊಂಡಿರುತ್ತಾಳೆ.ಬೇಕಾದ್ದು ಸಿಗದಿದ್ದರೂ ಅದೇ ಬೇಕು ಎಂದು ಕಾಯುವ ನಿನ್ನಂಥ ಫೂಲ್ ನಾನಲ್ಲ ಎಂದು ತೋರಿಸಿಕೊಡುತ್ತಾಳೆ.ತೀರ ಬೇಸರ ಬಂದಾಗ ಒಬ್ಬಳೇ ದೇವಸ್ಥಾನಕ್ಕೆ ಹೋಗುವೆ. ಹೇಯ್ ! ನೀನು beer ಟೇಸ್ಟ್ ಮಾಡಿಲ್ವಾ ಇನ್ನೂ? ನಿಮ್ಮ ಆಫೀಸ್ನಲ್ಲಿ ಪಾರ್ಟಿ ನಡೆದಾಗ ನೀನು ಕುಡಿಯಲ್ವಾ?ಅಂದ್ರೆ ನಾನೇನು ಹೇಳಲಿ?ಪಾರ್ಟಿಗಳಿಗೆ ನಾನು ಹೋದರೆ ತಾನೇ!ಯಾರೋ ಹತ್ತು ವರುಷಗಳಿಂದ ಪ್ರೀತಿಸಿದ್ದರಂತೆ.ಮನೆಯವರಿಗೂ ತಿಳಿಯದಂತೆ.ಈಗ ಮನೆಯವರೂ ಒಪ್ಪಿ ಅವರ ಮದುವೆಯಂತೆ.ಇನ್ಯಾರೋ, ಈ ಮದುವೆಗಳಲ್ಲಿ ನಂಬಿಕೆ ಇಲ್ಲದಿರುವರಂತೆ.ಸಂಸಾರ ,ಜವಾಬ್ದಾರಿ ಬೇಡದೆ,living together relationship ಒಳ್ಳೇದು ಅಂತ ಸಮರ್ಥಿಸಿಕೊಳ್ಳುವವರು . ಇಂಥವರೆಲ್ಲ ಮಧ್ಯೆ ನಾನು... ಹುಚ್ಚು ,ಹುಚ್ಚು ಯೋಚನೆಗಳೊಡನೆ,ಭಾವನೆಗಳೊಡನೆ!

ಆದರೆ ಮೊನ್ನೆ ಯಾಕೋ ತಲೆ ಕೆಟ್ಟಿತು. ಈ ಆದರ್ಶಗಳು ಎಲ್ಲ ಜೀವನಕ್ಕೆ ಯಾಕೆ ಬೇಕು? ಜೀವನ ಹೀಗೆ ಅಂತ ಕಡಿವಾಣ ಯಾಕೆ ಹಾಕಿಕೊಳ್ಳಬೇಕು? ನಾನು ಎಲ್ಲರ ಹಾಗೆ ಎಂಜಾಯ್ ಯಾಕೆ ಮಾಡಬಾರದು ಅನ್ನ್ನಿಸಿದ್ದು ಸುಳ್ಳಲ್ಲ. ಈ ಆದರ್ಶಗಳನ್ನೆಲ್ಲ ಒಂದು ಭದ್ರವಾದ ಡಬ್ಬಿಯಲ್ಲಿ ತುಂಬಿಟ್ಟು ಅದನ್ನು ಹೂತು ಬಿಡೋಣ .ಅಪ್ಪಿ-ತಪ್ಪಿ ಕೂಡ ಅದು ಹೊರ ಬರದಂತೆ ಅನ್ನಿಸಿದ್ದು ಸುಳ್ಳಲ್ಲ. ಯಾವುದೋ ಹಳೆಯ ಗೆಳೆಯನ ನೆನಪಾಯಿತು. ಸಿಗುತ್ತೀಯ ಎಂದು ಕೇಳಿ, ಗಾಂಧಿ ಬಜಾರ್ನಲ್ಲಿ ಸಿಗುವ ಎಂದು ನಿರ್ಧರಿಸಿ, ಚಂದ ತಯಾರಾಗಿ , ಇದ್ದಿದ್ದರಲ್ಲೇ ಒಂದು ಚಂದದ ಸಲ್ವಾರ್ ಸಿಕ್ಕಿಸಿಕೊಂಡು ಹೊರಟೆ., ಬಸ್ಸು ಹತ್ತಿ ,ಅಲ್ಲಿ ಇಳಿದ ಮೇಲೆ ಅನ್ನಿಸಿತು! ಬೇಡ.ಇಷ್ಟು ದಿನಗಳು ಹೀಗೆ ಬದುಕಿದ್ದು ಸಂತೋಷವೇ ಕೊಟ್ಟಿದೆ.ಯಾರ ಮನಸ್ಸಿಗೂ ನೋವು ತಂದಿಲ್ಲ.ಇವಳು ಯಾಕಾದರೂ ಇದಾಳೋ ಅಂತ ಒಬ್ಬರ ಹತ್ತಿರವೂ ಅನ್ನಿಸಿಕೊಂಡಿಲ್ಲ. ನಿಮ್ಮ ಮನಸ್ಸಿಗೆ ಎಂದೂ ನೋವು ಮಾಡಿಲ್ಲ.ಇದೆಲ್ಲ ಯಾಕೆ ಬೇಕು ಅನ್ನ್ನಿಸಿ,ಅದೇ ಬಸ್ ಸ್ಟಾಪ್ನಲ್ಲಿ ನಿಂತುಕೊಂಡೇ, ಗೆಳೆಯನಿಗೆ ,ತಲೆ ನೋವು ನನಗೆ ಬರಲಾಗುವುದಿಲ್ಲ ಎಂದು ಸಂದೇಶ ಕಳಿಸಿ ಮತ್ತೆ ಮನೆಗೆ ಮರಳಿದ್ದೆ. ಇಷ್ಟು ವರುಷಗಳಲ್ಲಿ ನಾನು ಸಂಪಾದಿಸಿದ್ದು ನಿಮ್ಮ ಪ್ರೀತಿ ನಂಬಿಕೆ ಅಲ್ಲದೆ ಇನ್ನೇನು ಅಲ್ಲ.ಅದಕ್ಕಿಂತ ಹೆಚ್ಚು ನನಗೇನು ಬೇಕೂ ಆಗಿಲ್ಲ.ಮನಸಿಗೆ ಏನೋ ಅನ್ನಿಸಿ ಹೊರಟರೂ,ಮತ್ತೆ ಅದೇನೋ ಶಕ್ತಿ ನನ್ನ ಕಾಲನ್ನು ಹಿಂದಕ್ಕೆ ಎಳೆಯುತ್ತಲೇ ಇತ್ತು.ಭದ್ರವಾಗಿ ಹೂತಿಟ್ಟ ಆದರ್ಶಗಳ ಪೆಟ್ಟಿಗೆ ನನ್ನ ಕರೆಯುತ್ತಲೇ ಇತ್ತು,ಡಬ್ಬಿಯಲ್ಲಿ ಕೂಡಿಟ್ಟ ಆದರ್ಶಗಳು ನಮ್ಮನ್ನ ಮುಕ್ತ ಗೊಳಿಸು.ನಾವೂ ನಿನ್ನೊಂದಿಗೇ ಇರುತ್ತೇವೆ ಎಂದು ಕೂಗಿದಂತಾಯ್ತು.ಅದು ನಿನ್ನ ಪಾಲಿನ ಜೀವನ ಅಲ್ಲ ಎಂದು ಹೇಳುತ್ತಲೇ ಇತ್ತು .ನಿಮ್ಮ ಮೇಲಿನ ಪ್ರೀತಿ ಜಾಸ್ತಿ ಆಗುತ್ತಲೇ ಇದೆ.ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ....

35 ಕಾಮೆಂಟ್‌ಗಳು:

Sushrutha Dodderi ಹೇಳಿದರು...

Class! Thumba chanag bardidiya..

Ashok.V.Shetty, Kodlady ಹೇಳಿದರು...

ದಿವ್ಯಾ....

ನಿಜವಾಗಿ ತುಂಬಾ ತುಂಬಾ ಸಂತೋಷ ಆಯಿತು, ತುಂಬಾ ಚೆನ್ನಾಗಿ ಬರೆದಿದ್ದೀರಿ, ಬದಲಾವಣೆ ಜಗದ ನಿಯಮ ಹೌದು. ಆದರೆ ಯಾರೋ ಬದಲಾಗಿದ್ದಾರೆ ಎಂದು ನಾವು ಬದಲಾಗಬೇಕೆ ??? ಖಂಡಿತಾ ಇಲ್ಲಾ..ನಮಗೆ ಯಾವುದು ಸರಿ ಅನ್ನಿಸುತ್ತದೋ ಅದನ್ನೇ ಮಾಡಬೇಕೇ ವಿನಃ ಯಾರೋ ಮಾಡುತ್ತಾರೆ ಅಂತ ಅಲ್ಲ. ಉತ್ತಮ, ಮೌಲ್ಯಾಧಾರಿತ ಬರಹ...ಧನ್ಯವಾದಗಳು..

ಅನಾಮಧೇಯ ಹೇಳಿದರು...

"ಎಲ್ಲರೂ ತಮ್ಮ ತಮ್ಮ ಜೀವನವನ್ನು ಹೇಗೆ ಬೇಕೋ ಹಾಗೆ ಎಂಜಾಯ್ ಮಾಡುತ್ತಿರುವಾಗ, ........"

ಅವರು ಅವರಿಗೆ ’ಹೇಗೆಬೇಕೋ ಹಾಗೆ ’ ಎಂಜಾಯ್ ಮಾಡುತ್ತಿದ್ದಾರೆ ತಾನೆ?. ನೀವು ನಿಮಗೆ ಹೇಗೆ ಬೇಕೋ ಹಾಗೆ ಇರಿ, ಅದೇ ನಿಮ್ಮ ಜೀವನದ ಎಂಜಾಯ್ಮೆಂಟ್. ಅವರ ಹಾಗೆ ನಾನು ಮಾಡದಿದ್ದರೆ ಅದು ಒಣ ಜೀವನ ಅಂತ ಅಂದುಕೊಳ್ಳುವುದ್ಯಾಕೆ? ಎಂಜಾಯಿಂಗ್ ಅಂದ್ರೆ ಬೈಕಲ್ ಸುತ್ತೋದು, ಪಬ್ಬಲ್ ಕುಣಿಯೋದು ಮಾತ್ರ ಆಗಬೇಕಂತಿಲ್ಲವಲ್ಲ !

ಬಟ್, ಇದು ಈಗಿನ ಜನರೇಶನ್ ನ ದ್ವಂದ್ವವಂತೂ ಹೌದು. ಚೆನ್ನಾಗಿ ಬರೆದಿದ್ದೀರಿ.

sunaath ಹೇಳಿದರು...

ತುಂಬ ಚೆನ್ನಾಗಿ ಬರೆದಿದ್ದೀರಿ. I liked it.

ಪ್ರಗತಿ ಹೆಗಡೆ ಹೇಳಿದರು...

ದಿವ್ಯಾ .. ತುಂಬಾ ಚೆನ್ನಾಗಿ ಬರೆದಿದೀಯ... ಒಂದ್ ಟೈಮಲ್ಲಿ ಮನಸ್ಸು ಇಂತ ದ್ವಂದ್ವದಲ್ಲಿ ಬೀಳೋದು ಸಹಜ... ಆದರೆ ನಾವು ಬೆಳೆದು ಬಂದ ಸಂಸ್ಕಾರ ನಮ್ಮನ್ನು ಇಂತಹದರಿಂದ ದೂರವಿರಿಸುತ್ತದೆ... ಅಲ್ವೇ?..

ಜಲನಯನ ಹೇಳಿದರು...

ದಿವ್ಯಾ...ಬಲು ವೈನಾಗಿ ಬರ್ದಿದ್ದಿ ಕನಮ್ಮಿ. ಅಲ್ಲ, ನಿಂಗಾಪಾಟಿ ಬ್ಯಾಸರ ಆದ್ರೆ ನಮ್ ಸಸಿವನಕ್ಕ್ ಬಂದ್ಬಿಡಾಕಿಲ್ವ...ಇನ್ಮ್ಯಾಲೆ ಅಂಗಾದ್ರೆ ..ನಾನೇಳ್ದಂಗೆ ಮಾಡು ..ಆಯ್ತಾ...???

ಮನಮುಕ್ತಾ ಹೇಳಿದರು...

ದಿವ್ಯಾ.. ಭಾವನೆಗಳನ್ನು ತು೦ಬಾ ಚೆನ್ನಾಗಿ ತೆರೆದಿಟ್ಟಿದ್ದೀರಿ.
ಸ೦ತೋಷದ ಜೀವನ ನಿಮ್ಮದಾಗಲಿ.

ವನಿತಾ / Vanitha ಹೇಳಿದರು...

ಚಂದ ಬರದ್ದೆ, ಇಷ್ಟ ಆತು :-)
ಬೇರೆಯವರಿಗೆ hurt ಮಾಡದೆ, ನಾವಿರೋ ರೀತಿ ನಮಗೆ ಕುಶಿ ತಂದರೆ ಅದೇ enjoyment ಅಲ್ವ!!
ಹೌದು..ಇದು ಅವರವರ ಭಾವಕ್ಕೆ!

jithendra hindumane ಹೇಳಿದರು...

ಬದುಕು.. ಅವರವರದ್ದೇ ನಿಜ. ಆದರೇ ಬದುಕುವ ರೀತಿ ನೀವು ಬರೆದಂತಿದ್ದರೇ ಚೆನ್ನ.. ಗೌರಮ್ಮ ಗೌರಮ್ಮನಂತಿದ್ದರೇ ಚೆನ್ನ.....

shivu.k ಹೇಳಿದರು...

ದಿವ್ಯ...

ನಿಜಕ್ಕೂ ತುಂಬಾ ಚೆಂದದ ಬರವಣಿಗೆ. ಒಂದು ಸ್ವಗತ ಹೀಗೀರಬೇಕೆನಿಸುತ್ತದೆ...

balasubramanya ಹೇಳಿದರು...

ಜೀವನದ ಮೌಲ್ಯಗಳ ತಾಕಲಾಟ ಆಧುನಿಕತೆಗೆ ಸೆಳೆಯುವ ಹುನ್ನಾರ ,ಬೆಳೆದು ಬಂದ ಪರಿಸರ ,ಎಲ್ಲದರ ಜೊತೆಗೆ ತನ್ನದೇ ಮನದ ಮಾತಿಗೆ ಬೆಲೆಕೊಡುವ ನಿರ್ಧಾರ !!ವಾವ್ ಕಣ್ತೆರೆಸುವ ಲೇಖನ . ಚೆನ್ನಾಗಿದೆ ನಿಮಗೆ ಧನ್ಯವಾದಗಳು.

ಚುಕ್ಕಿಚಿತ್ತಾರ ಹೇಳಿದರು...

ಚ೦ದ ಬರೆದಿದ್ದೀರಿ..
ಈಗ ನಾವಿರುವ ಹಾಗೇ ಇರೋಣ.. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ... ಅಲ್ಲಿಯ ಸೈಡ್ ಎಫೆಕ್ಟ್ಗಳು ಏನೇನಿರುತ್ತವೋ.. ಏನೋ... ಯಾಕೆ ಸುಮ್ನೆ ರಿಸ್ಕು....?
ಗೊತ್ತಾಯ್ತಾ...?

ಶರಶ್ಚಂದ್ರ ಕಲ್ಮನೆ ಹೇಳಿದರು...

ದಿವ್ಯ,
ಪ್ರತಿಯೊಬ್ಬರಿಗೂ ತಮ್ಮದೇ ಆದ ಜೀವನ ಶೈಲಿ, ಜೀವನವನ್ನು ನೋಡುವ ರೀತಿ ಇರುತ್ತದೆ... ಅದೇ ಅಪ್ಪಟವಾದ ನಮ್ಮತನ.. ಕೆಲವೊಮ್ಮೆ ಬೇರೆಯವರ ಜೀವನ ಶೈಲಿ ಇಷ್ಟವಾದರೂ, ಅದನ್ನು ಅನುಕರಿಸಲು ನಮ್ಮಿಂದ ಆಗದು. ನಿಮ್ಮತನವನ್ನು ಎಂದಿಗೂ ಬಿಡದೆ ಉಳಿಸಿಕೊಳ್ಳಿ :) ಚಂದದ ಬರಹಕ್ಕೆ ಧನ್ಯವಾದಗಳು :)

ತೇಜಸ್ವಿನಿ ಹೆಗಡೆ ಹೇಳಿದರು...

ನುಡಿದಂತೇ ನಡೆಯುವುದು ಬಲು ಕಷ್ಟ. ಅದನ್ನು ಸಾಧಿಸುವುದು ಸುಲಭವಲ್ಲ. ಉತ್ತಮ ಆದರ್ಶಗಳು ಮೊದಮೊದಲು ಕಷ್ಟವೆನಿಸಿದರೂ ಅವು ಕೊಡುವ ಸುಖ ಶಾಶ್ವತವಾಗಿರುತ್ತದೆ.

ಉತ್ತಮ ಆಲೋಚನೆಗಳನ್ನು ಪ್ರತಿಬಿಂಬಿಸುವ ಬರಹ. ಚೆನ್ನಾಗಿದೆ.:)

ಅನಾಮಧೇಯ ಹೇಳಿದರು...

benne baralu majjige kadeyale beku haagene chinthanegala manthanadidna tane jeevanada satvagalu hora baralu sadhya. jeevana nirantara sangharsha. novinallu nalivide adare nove nalivalla. ellara badukalu santoshagalu tumbali endu aashisona allava.

ಅನಾಮಧೇಯ ಹೇಳಿದರು...

benne baralu majjige kadeyale beku haagene chinthanegala manthanadidna tane jeevanada satvagalu hora baralu sadhya. jeevana nirantara sangharsha. novinallu nalivide adare nove nalivalla. ellara badukalu santoshagalu tumbali endu aashisona allava.

ಸವಿಗನಸು ಹೇಳಿದರು...

ಯಾರೋ ಬದಲಾಗಿದ್ದಾರೆ ಎಂದು ನಾವು ಬದಲಾಗಬೇಕೆ ....
ನಮ್ಮ ಆದರ್ಶಗಳು ನಮಗೆ ಚೆಂದ....
ಚೆಂದದ ಬರಹ...

Soumya. Bhagwat ಹೇಳಿದರು...

ಸುಂದರವಾದ ಬರಹ ದಿವ್ಯ. ಹೊಸ ಸಖಿಯಲ್ಲೂ ನಿಂದೊಂದು article ನೋಡಿದೆ ... ಚೆಂದಕಿದ್ದು.......:) ನಮ್ಮ ಮನಸನ್ನು ತಡೆಹಿಡಿದಾಗ ನಮ್ಮ ಮನಸಿನ ಸಾಮರ್ಥ್ಯ ತಿಳಿಯುವುದು. really nice one...... :)

ಮನದಾಳದಿಂದ............ ಹೇಳಿದರು...

ದಿವ್ಯಾ,
’ಅವರವರ ಭಾವಕ್ಕೆ’
ಶೀರ್ಷಿಕೆಯೇ ಹೇಳಿಬಿಡುತ್ತದೆ ಎಲ್ಲಾ ಕತೆಯನ್ನು.
ಚಂದದ ನಿರೂಪಣೆ.
ಬರವಣಿಗೆಯ ಶೈಲಿ ತುಂಬಾ ಇಷ್ಟ ಆಯ್ತು.

ಸುಧೇಶ್ ಶೆಟ್ಟಿ ಹೇಳಿದರು...

thumba chennagidhe Dhivya E baraha.... manasannu theredhitta reethi thumba ishta aayithu... E bengaloorina janasantheyalli naavu naavaagi iruvudhu thumba kashta.. anthaddaralli prathiyondhannu gamansikondu neevu neevaagiye uLididdeeralla adhu nijakku neevu hemme padabekaadha sadhane anisuttade....

Kalavatimadhisudan ಹೇಳಿದರು...

divya ravare,naauo badalaaguttevendaru nammaaatma saakshi bidodilla.nammatana uolisikondu, olleyadanna alvadisikollodralli tappilla.lekhana tumbaa chennaagide.abhinandanegalu.

ಮನಸು ಹೇಳಿದರು...

chinna lekhana chennagide... heege halavu vicharagaLu manassige barodu saadya.... ninna jeevana santasadindirali

ವಾಣಿಶ್ರೀ ಭಟ್ ಹೇಳಿದರು...

ತುಂಬಾ ಸುಂದರ ವಾಗಿಬರದ್ದೆ ಸೌಮ್ಯ...ಕೆಲವೊಂದು ಗಳಿಗೆಯಲ್ಲಿ ಮನಸಿಗೆ ಹಾಗೆ ಅನಿಸಿದಾಗ ಬೇಸರವೆನ್ನಿಸದರು ಆ ಗಳಿಗೆ ತುಂಬಾ ಒಳ್ಳೆಯರೀತಿಯಲ್ಲಿ ದೊರೆತಾಗ ಅದು ಶಾಶ್ವತ ವಾಗಿ ನಮ್ಮದಾಗುತ್ತದೆ...ಹುಚ್ಚುಕೋಡಿ ಮನಸಿಗೆ ಲಗಾಮ ಹಾಕಿದವನ ಬದುಕೇ ಮುಂದೊಂದು ದಿನ ಬಂಗಾರವಾಗುತ್ತದೆ..ಕ್ಷಣಿಕ ಸುಖಕ್ಕಿಂತ ಅತ್ಮತ್ರಪ್ತಿ ಹೆಚ್ಚಲ್ಲವೇ. ? ಜೀವಕೊಟ್ಟವರ ಸುಖಕ್ಕಿಂತ ದೊಡ್ದು ಯಾವದೂ ಇಲ್ಲ ಎಂಬುದು ನನ್ನ ಭಾವನೆ...

ಮನಸಿನ ಮಾತುಗಳು ಹೇಳಿದರು...

@ ಸುಶ್, ತುಂಬಾ ಥ್ಯಾಂ...ಕ್ಸ್ ಕಣೋ. :-)

@ ಅಶೋಕ್ ಸರ್, ನಿಮಗೂ ಧನ್ಯವಾದಗಳು..

@ ಅನಾಮಧೇಯ, ಇಷ್ಟೊಂದು ಸಲಹೆ, ಮೆಚ್ಚುಗೆ ವ್ಯಕ್ತ ಪಡಿಸಿದ ನಿಮಗೆ ತಮ್ಮ ಹೆಸರನ್ನು ಹೇಳಿಕೊಳ್ಳಲು ಹಿಂಜರಿಕೆಯೇ? ಧನ್ಯವಾದಗಳು.ಬರುತ್ತಿರಿ.. :-)


@ ಸುನಾಥ್ ಅಂಕಲ್, ಥ್ಯಾಂ...ಕ್ಯೂ.:)

@ ಪ್ರಗತಿ, ಹೌದು,ನಿನ್ನ ಮಾತು ಸತ್ಯ.. ಥ್ಯಾಂಕ್ಸ್ .:)

@ ಭಯ್ಯಾ, ಭಾಳ್ ಚೊಲೋ ಹೇಳಿದ್ರಿ ನೋಡ್ರಿ.ನೀವೆಲ್ಲ ಕುವೈತ್ನಲ್ಲಿ ಇದ್ರ ನಾ ಹೆಂಗ ಒಬ್ಬಾಕಿ ಹೋಗ್ಲಿ? ...:-)

@ ಮನಮುಕ್ತಾ, ನಿಮ್ಮ ಹಾರೈಕೆಗೆ ಮನಃಪೂರ್ವಕ ಧನ್ಯವಾದಗಳು.. :-)

@ ವನಿತಕ್ಕ, ಥ್ಯಾಂಕ್ಸ್ ಹೇಳವಾ??... :-)

@ ಜಿತೇಂದ್ರ ಣ್ಣ, ಹೌದು ನಮ್ಮ ಬದುಕು ನಮ್ಮದು.ಯಾರನ್ನೂ ಮೆಚ್ಚಿಸಬೇಕಾಗಿ ಬದುಕಬೇಕಿಲ್ಲ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು..:-)

@ ಶಿವಣ್ಣ, ಒಂದೇ... :-)

@ ಬಾಲು ಸರ್,ಥ್ಯಾಂ...ಕ್ಸ್ .. :-)

@ಚುಕ್ಕಿಚಿತ್ತಾರ , ಇಲ್ಲ ನಾ ಯಾವತ್ತೂ ಅದಕೆಲ್ಲ ಮರುಳಾಗಲ್ಲ. ಸುಮ್ನೆ ಮನಸಿಗೆ ಒಮ್ಮೊಮ್ಮೆ ಹೇಗೆ ಅನಿಸುತ್ತೆ ,ಆದ್ರೆ ಮಾಡಲು ಆಗುವುದಿಲ್ಲ ಎಂಬ ವಿಷಯಗಳನ್ನು ಹೇಳಿದೆ ಅಷ್ಟೇ.ಇಲ್ಲಿ "ನಾನು"ಎಂಬುದು ನನ್ನ ತರ ಇರುವ (!) ಎಲ್ಲರಿಗೂ ಅನ್ವಯಿಸಬಹುದು!.ನನ್ನ ವಯಸ್ಸಿನ ಗುಂಪಿನವರಿಗೆ ಕೊನೆ ಪಕ್ಷ!.. :-)ಥ್ಯಾಂಕ್ಯು..

@ ಶರಸ್, ನಾನು ಯಾವತ್ತೂ ನನ್ನತನ ಬಿಟ್ಟುಕೊಡುವುದಿಲ್ಲ ಬಿಡು.ಥ್ಯಾಂಕ್ಸ್.. :-)

@ ತೇಜಕ್ಕ ,ಹೌದು ನೀ ಹೇಳಿದ್ದು.ಥ್ಯಾಂಕ್ಸ್.. :-)

@ಅನಾಮಧೇಯರೆ, ಮೇಲಿನ ಅನಾಮಧೇಯರಿಗೆ ಹೇಳಿದ ಮಾತೇ ನಿಮಗೂ ಅನ್ವಯಿಸುತ್ತದೆ. ಎಲ್ಲ ಓಕೆ ..ಆದರೆ ಹೆಸರು ಹೇಳಲು ಹಿಂಜರಿಕೆ ಯಾಕೆ??ಮುಂದಿನ ಸಾರಿ ಹೆಸರು ಹೇಳುತ್ತಿರಲ್ಲ ??... :) ಬರುತ್ತಿರಿ..

@ಮಹೇಶಣ್ಣ, ಥ್ಯಾಂ...ಕ್ಯೂ.:)

@ ಸೌಮ್ಯ, ತುಂಬಾ ಥ್ಯಾಂಕ್ಸ್ ಕಣೆಮಾ..ನಿನ್ನ ಮಾತುಗಳಿಗೆ ನಾನು ಧನ್ಯ.. ಸಖಿ ನಾನಿನ್ನು ಕೊಂಡಿಲ್ಲ.ಕೊಳ್ಳುವೆ.. :-)

@ಮನದಾಳದಿಂದ ಪ್ರವೀಣ್,ಥ್ಯಾಂ...ಕ್ಯೂ.:)

@ಸುಧೇಶ್,ಥ್ಯಾಂ...ಕ್ಯೂ.:)

@ಕಲರವ , ನನ್ನ ಬ್ಲಾಗಿಗೆ ಸ್ವಾಗತ. ಧನ್ಯವಾದಗಳು.ಓದಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ.. :-)

@ ಸುಗುಣಕ್ಕ, ನಿಮ್ಮ ಹಾರೈಕೆಗೆ ಮನಃಪೂರ್ವಕ ಧನ್ಯವಾದಗಳು.. :-)

@ವಾಣಿ,ನನ್ನ ಮನಸಿನ ಮಾತನ್ನೇ ನೀನೂ ಹೇಳಿದ್ದೀಯ. ನೀನೂ ಕೂಡ ನನ್ನ ಹಾಗೇ ಯೋಚಿಸುತ್ತಿಯ ಅಂತ ತಿಳಿದು ಖುಷಿ ಆತು ಕಣೆ. ನಿಜ. ಇಂಥ ನಿಮಿಷ ಸುಖಗಳಿಗೆ ಮರುಳಾಗಿ ಜೀವನ ಹಾಳು ಮಾಡಿಕೊಳ್ಳುವ ಹುಡುಗಿಯರ ಬಗ್ಗೆ ಮರುಕ ಹುಟ್ಟಿ ಈ ಲೇಖನ ಬರೆದೆ.ಇದು ನಾನು ಅಪ್ಪ ಅಮ್ಮನಿಗೇ ಹೇಳಿಕೊಳ್ಳುತ್ತಾ ಬರೆದಿರುವೆ. ಥ್ಯಾಂಕ್ಯು ಕಣೆ.. :-)

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ನನಗಂತೂ ತುಂಬಾನೇ ಹಿಡಿಸಿದ್ದು ಈ ಬರಹ..
ವಂದನೆಗಳು ಉತ್ತಮ ಬರಹಕ್ಕೆ..

ಬಾಲು ಸಾಯಿಮನೆ ಹೇಳಿದರು...

ವಾವ್! ಎಷ್ಟು ಸರಳ ಭಾಷೆಲಿ ಎಷ್ಟು ಚನ್ನಾಗಿ ಬರೀತೀರಿ ನೀವು!ನಾವು ನಮ್ಮ ಹಾಗೆ ಇರೋದೇ ಎಷ್ಟು ಚೆನ್ನ ಅಲ್ವಾ! ಹೀಗೆ ಬರೀತಾ ಇರಿ.

ಕಾಂತೇಶ ಹೇಳಿದರು...

ಓಳೆಯ ಲೇಖನಾ ಶೈಲಿ..
Yup it just remembers my life.. mine is the same experience..:) ಅದರಿಂದ ಕೀಳರಿಮೆಗೂ ಗುರಿಯಾಗಿದ್ದೆನೆ..
ನಮ್ಮ ಆದರ್ಶಗಳನ್ನು ನಮಗೆ ನಾವು ಹಾಕಿಕೊಲ್ಲುವ ಬಂಧನಗಳು ಎಂಬ ಅನಿಸಿಕ ಮನಸ್ಸಿನಲ್ಲಿರುವವರೆಗೆ ನಮಗೆ ಹಾಗೆ ಅನಿಸುವುದು.. ಹಾಗೆ ನಾವು ಬದುಕಬೆಕು ಅಂದುಕೊಂಡರೆ ಬದುಕು ನಿಶ್ಚಿಂತವಾಗುವುದೇನೊ..

ಶಿವಪ್ರಕಾಶ್ ಹೇಳಿದರು...

Really an excellent writeup... :)
congrats :)

ಕಾವ್ಯ ಸುಗಂಧ ಹೇಳಿದರು...

really superb... yes changes are necessary for life not for self... its easy to say that we wont change ourself to changes but following is very difficult... good, u have showed that..

ಕಾವ್ಯ ಸುಗಂಧ ಹೇಳಿದರು...

really superb.. yes, changes are necessary for life not for self. its easy to say that we wont change ourself to changes but following those words are difficult.. good, u have attained self actualization...

Ambika ಹೇಳಿದರು...

Nice one :)

ಮನಸಿನ ಮಾತುಗಳು ಹೇಳಿದರು...

ಎಲ್ಲರಿಗೂ ಧನ್ಯವಾದಗಳು .. ಬರುತ್ತಿರಿ

mahesh ಹೇಳಿದರು...

thumba chennagidhe...
nimma bareuva shaili ista aythu...

ಶ್ವೇತ ಹೇಳಿದರು...

ಅವರವರ ಭಾವಕ್ಕೆ ನಿಜ. ಮತ್ತೊಂದು ಸಾಂಪ್ರದಾಯಿಕ ನಂಬಿಕೆಗಳು ಅಥವಾ orthodox ಅನ್ನು ಆದರ್ಶ ಎಂದು ಪರಿಗಣಿಸಬಾರದು. orthodox ಅನ್ನುವುದು ಸಾಮಾನ್ಯವಾಗಿ ಒಂದು ಪಂಗಡ ಅಥವಾ religious ಗ್ರೂಪ್ ಇಂದ ಅಂದರೆ ಬೇರೆಯವರಿಂದ ಹೇರಲ್ಪತ್ತಿರುತ್ತದೆ. ಆದರೆ ಆದರ್ಶ ನಮ್ಮ ಮನಸ್ಸಿಗೆ ಏನು ಸರಿ ಅನಿಸುತ್ತದೋ ಅದು. ಸಂಪ್ರದಾಯವಾದಿತ್ವವೇ ನಮ್ಮ ಆದರ್ಶವಾಗಿದ್ದಲ್ಲಿ, ಅದು ಬೇರೆಯವರಿಂದ ಹೇರಲ್ಪಡದೇ ಇದ್ದಲ್ಲಿ ಅದನ್ನು ಪರಿಪಾಲಿಸುವುದರಲ್ಲಿ ತಪ್ಪೇನಿಲ್ಲ. ನಾವು ಏನೇ ಮಾಡಿದರು ೫-೧೦ ವರ್ಷಗಳಾದಮೇಲೆ ಅದನ್ನು regret ಮಾಡದೆ ಇದ್ದರೆ ಆಯ್ತು ...

ಮನಸಿನ ಮಾತುಗಳು ಹೇಳಿದರು...

ಮಹೇಶ್, ಧನ್ಯವಾದಗಳು.. :-)

ಶ್ವೇತ , ನಿಜ ನಿಮ್ಮ ಮಾತು.I agree.