ಶುಕ್ರವಾರ, ಅಕ್ಟೋಬರ್ 08, 2010

ನಿರ್ಲಿಪ್ತ !


ಅವಳು ಚಂದದ ಹುಡುಗಿ,ಗೊತ್ತು!
ಅವನು ಬುದ್ದಿವಂತ , ಗೊತ್ತು!
ಇವರು ಮಾತಾಡಿದರು.
ಅವಳಿಗೆ ಅವನಂದ್ರೆ ಇಷ್ಟನಾ?ಗೊತ್ತಿಲ್ಲ!
ಅವನಿಗೆ ಅವಳಂದ್ರೆ ಇಷ್ಟನಾ?ಗೊತ್ತಿಲ್ಲ!
ಆದರೂ ಜನ ಮಾತಾಡಿದರು.
ಅವಳ ಹುಟ್ಟಿದ ದಿನ ಇವನು ವಿಶ್ ಮಾಡಿದನ? ಗೊತ್ತಿಲ್ಲ!
ಅವನ ಹುಟ್ಟಿದ ದಿನ ಇವಳು ವಿಶ್ ಮಾಡಿದಳ? ಗೊತ್ತಿಲ್ಲ!
ಆದರೂ ಇವರು ಮಾತಾಡಿದರು.
ಅವನು ಅವಳನ್ನು ಎಲ್ಲರಿಗೂ "ನನ್ನವಳು"ಎಂದು ಪರಿಚಯಿಸಿದನ? ಗೊತ್ತಿಲ್ಲ!
ಇವಳು ಎಲ್ಲರಿಗೂ "ನನ್ನವನು"ಎಂದು ಪರಿಚಯಿಸಿದಳ? ಗೊತ್ತಿಲ್ಲ!
ಆದರೂ ಇವರು ಮಾತಾಡಿದರು.
ಅವಳಿಗೆ ಬೇರೊಂದು ಹುಡುಗನೊಡನೆ ನಿಶ್ಚಯ ಆಯಿತಾ ?ಗೊತ್ತಿಲ್ಲ!
ಅವನಿಗೆ ಬೇರೆ ಹುಡುಗಿಯೊಂದಿಗೆ ನಿಶ್ಚಯ ಆಯಿತಾ ? ಗೊತ್ತಿಲ್ಲ!
ಆದರೂ ಇವರು ಮಾತಾಡಿದರು.
ಅವನು ಒಳ್ಳೆಯವನ? ಗೊತ್ತಿಲ್ಲ!
ಅವಳು ಎಂಥವಳು?ಗೊತ್ತಿಲ್ಲ!
ಆದರೂ ಇವರು ಮಾತಾಡಿದರು.
ಇವರು ಮಾತಾಡುತ್ತಲೇ ಇದ್ದರು,
ಕೋಳಿ ಕೂಗಿಗೆ ಬೆಳಗಾಗುವುದಿಲ್ಲ ಎಂದು ತಿಳಿದ,
ಅವನು ಮತ್ತು ಅವಳು ಮಾತ್ರ ,
ನಿರ್ಲಿಪ್ತತೆಯಿಂದ ಅವರವರ ಜೀವನ ಮಾಡುತ್ತಲೇ ಇದ್ದರು!


(ಚಿತ್ರಕೃಪೆ: ಅಂತರ್ಜಾಲ)

11 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ನಿರ್ಲಿಪ್ತತೆಯಲ್ಲಿ ಜೀವನ ಕಷ್ಟ. ಅದು ಅವರು ಇವರು ಮಾತನಾಡುವಾಗ. ಚೆಂದದ ಕವನ.

shivu.k ಹೇಳಿದರು...

ಸಕ್ಕತ್ ಅರ್ಥಗರ್ಭಿತವಾಗಿದ್ದರೂ ಹೇಳುವ ಶೈಲಿ ಸೂಪರ್ ಆಗಿದೆ..

ಮನಸು ಹೇಳಿದರು...

good one divs...

ಸವಿಗನಸು ಹೇಳಿದರು...

ಚೆಂದದ ಕವನ....

ವಾಣಿಶ್ರೀ ಭಟ್ ಹೇಳಿದರು...

super!!!!!! divya.. keep rocking!!!!!!

Nagashree ಹೇಳಿದರು...

tumba chennagide ri...!!

nimmolagobba ಹೇಳಿದರು...

ನಿರ್ಲಿಪ್ತ ಜೀವಗಳ ಜೀವನ ಯಾನ ಇಲ್ಲಿ ಸುಂದರವಾಗಿ ಮೂಡಿಬಂದಿದೆ.

ashokkodlady ಹೇಳಿದರು...

Divya avre,

Sogasaagide nimma kavana.

ದಿವ್ಯಾ ಹೇಳಿದರು...

ಎಲ್ಲರಿಗೂ ಧನ್ಯವಾದಗಳು .. ಬರುತ್ತಿರಿ

ಜಲನಯನ ಹೇಳಿದರು...

ವಿದ್ಯಾ ನೀನು ಮನಸಲ್ಲಿ ಏನಿಟ್ಟಿದ್ದೆ..ಗೊತ್ತಿಲ್ಲ
ಏನನ್ನ ಬಿಂಬಿಸೋಕೆ ಯೋಚಿಸ್ದೆ ..ಗೊತ್ತಿಲ್ಲ..
ಆದ್ರೂ ಬ್ಲಾಗ್ ಪೋಸ್ಟ್ ಹಾಕ್ದೆ.
ಇಲ್ಲಿ ಮನಸು ಬಿಚ್ಚಿಟ್ಟೆಯಾ..ಗೊತ್ತಿಲ್ಲ
ಇದು ನಮಗೆ ಮುಟ್ಟಿದೆಯಾ...ಗೊತ್ತಿಲ್ಲ
ಆದರೂ ಎಲ್ಲಾ ನಮಗೆ ಹೇಳಿದೆ.
ಅದರೂ ನಿನಗೂ ಗೊತ್ತು ನಾವು ಓದುತ್ತೀವಿ ಅಂತ
ನಿನಗೂ ಗೊತ್ತು ನಾವೂ ಬರೀತೀವಿ ಅಂತ
ಅದಕ್ಕೆ....ಹಹಹಹ......
ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ......

ಶಿವಪ್ರಕಾಶ್ ಹೇಳಿದರು...

Nice one.. good forming of words.. :)