ಸೋಮವಾರ, ಸೆಪ್ಟೆಂಬರ್ 27, 2010

ನಾ ಮಾಡಿದ್ದು - ಉತ್ತರ.. :-)


ಮೊದಲಿಗೆ, ದೊಡ್ಡವರ ಮಾತುಗಳಂತೆ. "ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ.ಬಹುಮಾನದ ಬಗ್ಗೆ ಚಿಂತಿಸಬಾರದು " ಅಂತ.
ಭಾಗವಹಿಸಿದ ಎಲ್ಲರಿಗೂ ನನ್ನ ಹೃದಯ ಪೂರ್ವಕ ಅಭಿನಂದನೆಗಳು...:-)

ಹಾಗೆ ಕೆಲವೊಂದು ಹೊಸ ಬ್ಲಾಗಿಗರು ನನ್ನ ಬ್ಲಾಗಿಗೆ ಭೇಟಿ ಇತ್ತು ಉತ್ತರಿಸಿದ್ದೀರ .ನನ್ನ ಬ್ಲಾಗಿಗೆ ಸ್ವಾಗತ... :-)

ನನ್ನ ಪ್ರಶ್ನೆಗೆ ಸರಿಯಾದ ಉತ್ತರ..

ಅಂದರೆ ನಾನು ಮಾಡಿದ್ದು "ಕ್ಯಾರೆಟ್ ಬರ್ಫೀ " ಅಥವ "ಕ್ಯಾರೆಟ್ ಹಲ್ವಾ"

ಸಾಧಾರಣವಾಗಿ ಕ್ಯಾರೆಟ್ ಹಲ್ವಾ ಎಂದರೆ ಸ್ವಲ್ಪ ದ್ರವ ರೂಪದಲ್ಲಿರುವುದಕ್ಕೆ ಅದನ್ನು ತಟ್ಟೆಯಲ್ಲಿ ಹಾಕಿಕೊಂಡು ತಿನ್ನಬೇಕಾಗುತ್ತದೆ. ಆದರೆ ನಾನು ಅದನ್ನು ಬಟ್ಟಲಿಗೆ ಸುರಿದು ವಜ್ರಾಕಾರದಲ್ಲಿ ಕತ್ತರಿಸುವುದರಿಂದ "ಕ್ಯಾರೆಟ್ ಬರ್ಫಿ " ಅತ್ಯಂತ ಸರಿ ಉತ್ತರ.

ಅತ್ಯಂತ ಸರಿ ಉತ್ತರ ಊಹಿಸಿದವರು " ಸುಬ್ರಹ್ಮಣ್ಯ "ಮತ್ತು " ಪ್ರಗತಿ ಹೆಗಡೆ ".ನಿಮ್ಮಿಬ್ಬರಿಗೂ CONGRATULATIONS !!..:-)

"ಕ್ಯಾರೆಟ್ ಹಲ್ವಾ"ಕೂಡ ಸಮೀಪದ ಉತ್ತರವಾದ್ದರಿಂದ ನಿಮಗೂ ಬಹುಮಾನ ಕೊಡುತ್ತೀನಿ.ಉಳಿದಂತೆ ಉತ್ತರಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ಕೊಡುತ್ತೇನೆ.

ಒಂದು ಚಪ್ಪಾಳೆ ನಿಮಗೆಲ್ಲರಿಗೂ... :-) ಉತ್ತರಗಳನ್ನು ಊಹಿಸಿ ನನ್ನಲ್ಲೂ ಲವಲವಿಕೆ ತಂದ ನಿಮಗೆಲ್ಲ ಧನ್ಯವಾದಗಳು.

ಬಹುಮಾನಗಳನ್ನು ಕೊಡಲು ಶೀಘ್ರವೇ ನಿಮ್ಮಲ್ಲರ ಮನೆಗಳಿಗೆ ಬರುವೆ. ಅಲ್ಲಿವರೆಗೂ ಕಾಯುತ್ತಿರಿ. ನಿಮ್ಮೆಲ್ಲರ ಪ್ರೋತ್ಸಾಹ,ಪ್ರೀತಿಗೆ ನನ್ನದೊಂದು thanks ... :-)

ಪ್ರೀತಿಯಿಂದ,
ದಿವ್ಯಾ:-)


(ಚಿತ್ರಕೃಪೆ: ಅಂತರ್ಜಾಲ)

7 ಕಾಮೆಂಟ್‌ಗಳು:

ಮನಸು ಹೇಳಿದರು...

hahaha very nice ......

sunaath ಹೇಳಿದರು...

ನಾನು ಡಯಾಬೆಟಿಕ್. ಆದುದರಿಂದ ನನ್ನ ಉತ್ತರ ತಪ್ಪಾಗಿದೆ.
ಆದರೇನು? ಈಗ ಗಜ್ಜರಿ ಹಲ್ವಾ ತಿಂದಷ್ಟೇ ಖುಶಿಯಾಯಿತು!

ದಿನಕರ ಮೊಗೇರ ಹೇಳಿದರು...

ದಿವ್ಯ ,
ಇದೇನು ಮೋಸ... ನಾನೂ ಸರಿ ಉತ್ತರ ಕೊಟ್ಟಿದ್ದೇನೆ.... ನನಗೆ ಬಹುಮಾನ ಇಲ್ಲ.... ಸಮಾಧಾನಕ್ಕೆ ನನ್ನ ಹೆಸರೂ ಬರೆದಿಲ್ಲ.... ನಾನು ಕೋರ್ಟ್ಗೆ ಹೋಗ್ತೇನೆ.....

shivu.k ಹೇಳಿದರು...

ದಿವ್ಯಾ,,

ನಿನ್ನ ತಿಂಡಿಗೆ "ಕ್ಯಾರೆಟ್ ಅಲ್ವಾ" ಅಂತ ಹೇಮಾಶ್ರೀ ಮೊದಲ ಕಾಮೆಂಟು ನನ್ನ ಕಡೆಯಿಂದ ಹಾಕಿಸಿದ್ದಳು. ಈಗ ನೋಡಿದರೆ ಬಹುಮಾನವಿಲ್ಲ. ನನ್ನ ಹೆಸರು ಕೂಡ ಇಲ್ಲ. ನಾನು ಕೋರ್ಟಿಗೆ ಹೋಗಲ್ಲ...ನಿಮ್ಮ ಪಿಜಿ ಮುಂದೆ ಧರಣಿ ಕೂರುತ್ತೇವೆ...

shivu.k ಹೇಳಿದರು...

ದಿವ್ಯ,

ನಮಗೆ ಬಹುಮಾನ ಸಿಗದಿದ್ದಲ್ಲಿ...ಮುಂದೆ ನಿನಗೆ ಘೋರ ಅಪಾಯ ಕಾದಿದೆ..
ಅಮಿತ್ ಹೆಗಡೆ ಬರೆದ カボチャのケーキ.. ಇಂಥವನ್ನು ಇನ್ನುಮುಂದೆ ನಾನು ನಿನ್ನ ಬರಹಕ್ಕೆ ಕಾಮೆಂಟಿಸುತ್ತಿರುತ್ತೇನೆ.
カボチャのケーキ..?॒)॑॓*!++~?"""%+官話)北方話),北方中國官話我們/我们 匆忙 电脑(我) 我不累.天发脾气的外交警察取消了沒有交钱的那些人的入境
ಇಷ್ಟು ಸಾಕಾ? ಬಹುಮಾನ ಸಿಗದಿದ್ದಲ್ಲಿ ಇನ್ನೂ ಪುಟಗಟ್ಟಲೆ ಸಿದ್ದವಾಗುತ್ತಿದೆ ಎಚ್ಚರ! ಎಚ್ಚರ!

ಜಲನಯನ ಹೇಳಿದರು...

ದಿವ್ಯಾ...ಮೋಸ ಬಹಳ ಮೋಸ ನಾನು ಎಲ್ಲಾ ಉತ್ತರ ಸರಿಯಾಗೇ ಹೇಳಿದೆ...ಅದನ್ನ ಎನ್ನ-ಸೈಕಲ್-ಪಿಡಿಯಾ ದಲ್ಲಿ ನೋಡಿದೆ...ಸರಿ ಇದೆ...ಆದ್ರೂ ನೀನು ಬಹುಮಾನ ಕೊಡೊಲ್ಲ ಅಂದ್ರೆ....ಠೂ..ಠೂ..ಠೂ...

ಸೀತಾರಾಮ. ಕೆ. / SITARAM.K ಹೇಳಿದರು...

ಸಧ್ಯ ನಾನು ಇನ್ನು ಪ್ರಶೆ ನೋಡದೆ ಒಮ್ಮೆ ಉತರ ನೋಡ್ತಾ ಇದ್ದೇನೆ. ಹಾಗಾಗಿ ನನ್ನ ಉತ್ತರ ಸರಿಯಾಗುತ್ತೆ. ನಾನು ಎಲ್ಲ ಹಳೆಯ ಪೋಸ್ಟಿಂಗ್ ಮುಂದಿನಿಂದ ಹಿಂದೆ ಓದ್ತಾ ಇದ್ದೇನೆ! ಹೇ ಹೇ!