ಮಂಗಳವಾರ, ಸೆಪ್ಟೆಂಬರ್ 21, 2010

ಹಾಗಿದ್ದರೆ ನಾ ಮಾಡಿದ್ದು ಏನು??

ಆ ದಿನ ಹೋಟೆಲ್ ನಲ್ಲಿ
ಊಟದ ಜೊತೆ ಅದನ್ನ ಕೊಟ್ಟಾಗಲೇ
ನಾ ಅಂದುಕೊಂಡಿದ್ದೆ,
ಒಮ್ಮೆ ಮನೇಲಿ ಮಾಡಿ ನೋಡಲೇ ಬೇಕು ಅಂತ.
PG ಯ ಅತ್ತೆಗೆ ಮಾಡಲೇ? ಎಂದು ಅನುಮತಿ ಕೇಳಿದಾಗ,
ಎಲ್ಲರಿಗೂ ಆಗುವ ಹಾಗೆ ಮಾಡುವುದಾದರೆ ಮಾಡು ಅಂದರು.
ನನಗೂ ಅದೇ ಬೇಕಾಗಿದ್ದು.
ಹತ್ತಿರದಲ್ಲೇ ಇದ್ದ ಅಂಗಡಿಗೆ ಹೋಗಿ,
ಕೆಜಿ ಗೆ ನಾಲ್ಕು ರೂಪಾಯಿ ಕಡಿಮೆ ಮಾಡುವಂತೆ ,
ಚೌಕಾಶಿ ಮಾಡಿ ಮನೆಗೆ ತಂದೆ.
ಮನೆಗೆ ತಂದ ಕೂಡಲೇ ,ಅದರ ತಲೆ,ಬಾಲವನ್ನು ಕುಯಿದು,
ಹೊರಗಿನ ಅದರ ಚರ್ಮವನ್ನು ಸಣ್ಣಗೆ ತೆಗೆದು,ನೀರಿನಲ್ಲಿ ತೊಳೆದು,
ನುಣ್ಣಗೆ ತುರಿದು, ಕುಕ್ಕರಿನಲ್ಲಿ ಒಂದು ಸೀಟಿ ಹೊಡೆಸಿ,
ಬಾಣಲೆಯಲ್ಲಿ ಕಾಯುತ್ತಿದ್ದ ಬಿಸಿ ಹಾಲಿಗೆ ಇದನ್ನು ಬೆರೆಸಿ,
ಪೂರ್ಣ ಬೆಂದ ಬಳಿಕ ಸಕ್ಕರೆ ಹಾಕಿ,ಹಾಲು ಇಂಗಿದ ಬಳಿಕ,
ಸ್ವಲ್ಪ ಸ್ವಲ್ಪವೇ ತುಪ್ಪ ಹಾಕಿ,
ತುಪ್ಪ ತಳ ಬಿಡುತ್ತಿರಲು ,ತುಪ್ಪದಲ್ಲೇ ಹುರಿದ ಗೋಡಂಬಿ,ದ್ರಾಕ್ಷಿ ಹಾಕಿ,
ಒಂದು ಹದಕ್ಕೆ ಬಂದಾದ ಮೇಲೆ,ತುಪ್ಪ ಸವರಿದ ಬಟ್ಟಲಿಗೆ ಅದನ್ನು ಹಾಕಿ,
ವಜ್ರಾಕಾರದಲ್ಲಿ ಅದನ್ನು ಕತ್ತರಿಸಿ, ಎಲ್ಲರಿಗೂ ತಿನ್ನಲು ಕೊಟ್ಟೆನಲ್ಲ!!
ಎಲ್ಲರು ಚನಾಗಿ ಮಾಡಿದೀಯ ಎಂದಾಗ ಖುಷಿ ಪಟ್ಟೆನಲ್ಲ,
ಹಾಗಿದ್ದರೆ ನೀವೇ ಹೇಳಿ ನಾನು ಮಾಡಿದ್ದು ಏನು ಅಂತ...


(*ಸರಿಯಾದ ಉತ್ತರ ಊಹಿಸಿದವರಿಗೆ, ಬಹುಮಾನ ಕೊಡುತ್ತೇನೆ.. :-))
ಸ್ನೇಹಿತರೆ comment moderation ಮಾಡಿಟ್ಟಿದ್ದೇನೆ .ಸೆಪ್ಟೆಂಬರ್ 27 ಕ್ಕೆ ಉತ್ತರಗಳನ್ನು ಪ್ರಕಟಿಸುವೆ.

28 ಕಾಮೆಂಟ್‌ಗಳು:

ಸುಶ್ರುತ ದೊಡ್ಡೇರಿ ಹೇಳಿದರು...

ನಿಮ್ ರೂಂಮೇಟ್ಸ್ ಯಾರದ್ದಾದ್ರೂ ನಂಬರ್ ಕೊಡಿ.

shivu.k ಹೇಳಿದರು...

ದಿವ್ಯ,

ಕ್ಯಾರೆಟ್ ಹಲ್ವಾ ಅಂತ ಹೇಮಾಶ್ರಿ ಹೇಳಿದಳು.
ನನ್ನ ಅಭಿಪ್ರಾಯವನ್ನು ಇನ್ನೂ ಯೋಚಿಸಬೇಕಿದೆ. ನನಗೆ ಅದನ್ನು ಸ್ವಲ್ಪ ಕೊಟ್ಟರೆ ತಿಂದು ನೋಡಿ ಏನು ಅಂತ ಹೇಳುತ್ತೇನೆ!

ಸುಧೇಶ್ ಶೆಟ್ಟಿ ಹೇಳಿದರು...

ಕ್ಯಾರೆಟ್ ಹಲ್ವಾ!

ಮನಸು ಹೇಳಿದರು...

naanu tinda mele heLteenappa.... hahaha

Subrahmanya ಹೇಳಿದರು...

ಕ್ಯಾರೆಟ್ ಹಲ್ವ ಅಥವ ಕ್ಯಾರೆಟ್ ಬರ್ಫಿ಼ ಇರಬಹುದು.

ಅದಲ್ಲದಿದ್ದರೂ ಒಗಟಾಗಿ ಬರೆದ ರೀತಿ ಚೆನ್ನಾಗಿದೆ.:-).

ತೇಜಸ್ವಿನಿ ಹೆಗಡೆ ಹೇಳಿದರು...

ಕ್ಯಾರೆಟ್ ಹಲ್ವಾ? ಉತ್ತರ ಸರಿ ಇದ್ದ್ರೆ ಬಹುಮಾನ ಕೊಡ್ಲೇಬೇಕು...no cheating :)

shreeshum ಹೇಳಿದರು...

ಕ್ಯಾರೆಟ್ ಹಲ್ವಾ -ಕವಿತಾ ಆರ್.ಶರ್ಮ
ಬೀಟ್ರೋಟ್ ಹಲ್ವಾ -ಆರ್.ಶರ್ಮಾ

ಹಷ೯ (Harsha) ಹೇಳಿದರು...

Divya,

Kyarett halva astalla dina itre halagogtu ... hangagi bahumana ivatte kodadare heLati noodu adu kyaret havala heLi ille andre ille.

ashokkodlady ಹೇಳಿದರು...

ದಿವ್ಯಾ ಅವ್ರೆ,

"ಕೌನ್ ಬನೇಗಾ ಕರೋಡ್ ಪತಿ" ಯಲ್ಲಿರುವಂತೆ ೪ options ಕೊಡ್ತೀರ???

ವನಿತಾ / Vanitha ಹೇಳಿದರು...

ಆಹಾ...ಹಾ...ಸಕತ್ ಟೇಸ್ಟು:)

ಶರಶ್ಚಂದ್ರ ಕಲ್ಮನೆ ಹೇಳಿದರು...

ಕ್ಯಾರೆಟ್ ಹಲ್ವಾ :)

ದಿನಕರ ಮೊಗೇರ.. ಹೇಳಿದರು...

ದಿವ್ಯಾ...
ನನಗೆ ತಿಳಿದ ಮಟ್ಟಿಗೆ ಕ್ಯಾರೇಟ್ ಹಲ್ವ....ಬರೆದ ರೀತಿ ಚೆನ್ನಾಗಿದೆ.....

sunaath ಹೇಳಿದರು...

ಕೊಬ್ಬರಿಯ ಸ್ವೀಟು!

Dileep Hegde ಹೇಳಿದರು...

ನೀವು ಮಾಡಿದ್ದು ಕ್ಯಾರೆಟ್ ಹಲ್ವಾ.. ಅಲ್ವಾ..??

Prakash ಹೇಳಿದರು...

ಹಾಲುಗುಂಬಳ ಕಾಯಿ ಹಲ್ವ.
ಚೊಲೋ ಇತ್ತ ಹೆಂಗೆ ????

ಪ್ರಗತಿ ಹೆಗಡೆ ಹೇಳಿದರು...

ಕ್ಯಾರೆಟ್ ಬರ್ಫಿ.. ಸರಿನಾ?

ಮನದಾಳದಿಂದ............ ಹೇಳಿದರು...

ದಿವ್ಯಾ,
ಕೊಬ್ಬರಿ ಮಿಠಾಯಿ ಇರಬಹುದೇ?


ಆದರೆ ನಿಮ್ಮ ಮೇಲೆ ಸುಪ್ರೀಂ ಕೋರ್ಟಿನಲ್ಲಿ ಮೊಖದ್ದಮೆ ಹೂಡುವುದಂತೂ ನಿಜ!

ಯಾಕೇ ಅಂತ ಕೇಳಿದಿರಾ?

ನಿಮಗೆ ಗೊತ್ತೇ ಇರುವಂತೆ ನನಗಿನ್ನೂ ಮದುವೆ ಆಗಿಲ್ಲ,

ಅಂತಿರುವಾಗ ನೀವು ಈ ತರ ಒಗಟುಗಳನ್ನು ಕೇಳಿ,
ಅದರ ಉತ್ತರಕ್ಕಾಗಿ ಪರ ಪರ ತಲೆ ಕೆರ್ಕೊಂಡು,
ಇರೋ ಬರೋ ಕೂದಲೆಲ್ಲ ಉದುರಿಹೋಗಿ,
ಬರೀ ಬುರುಡೆ ಪಳ ಪಳ ಹೊಳೆಯುತ್ತಿರಲು
ಹುಡುಗಿಯರು ಕಣ್ಣೆತ್ತಿ ನೋಡಲು ಕಷ್ಟ ಆಗಿ,
ನನ್ನಂತ ಹುಡುಗರು ಅಜನ್ಮ ಬ್ರಹ್ಮಚಾರಿಯಾಗಿಯೇ ಇರುವಂತೆ ಮಾಡುವ ಯೋಚನೆ ನೀವು ಮಾಡಿದ್ದರಿಂದ!
ತಿಳಿಯಿತೇ............?

Keshava Chandra ಹೇಳಿದರು...

Idu carrot halwa :)

ಕ್ಷಣ... ಚಿಂತನೆ... bhchandru ಹೇಳಿದರು...

ನಮಸ್ತೆ. ಒಗಟು ಚೆನ್ನಾಗಿದೆ.

ಕ್ಯಾರೆಟ್‌ ಹಲ್ವ ಎಂದುಕೊಂಡಿದ್ದೇನೆ.

ಧನ್ಯವಾದಗಳು.

Amit Hegde ಹೇಳಿದರು...

カボチャのケーキ..?

vijayhavin ಹೇಳಿದರು...

carrot halva

ಶಾನಿ ಹೇಳಿದರು...

ಕ್ಯಾರೇಟ್ ಹಲ್ವಾಂತ ನಾನು ಹೇಳಲ್ಲಾ....

ಶಾನಿ ಹೇಳಿದರು...

ಕ್ಯಾರೇಟ್ ಹಲ್ವಾಂತ ನಾನು ಹೇಳಲ್ಲಾ....

Badarinath Palavalli ಹೇಳಿದರು...

ಏನ್ರೀ ಅದು? ಪ್ಲೀಸ್ ಹೇಳಿ ಬಿಡಿ. ಗೊತ್ತಾಗಲಿಲ್ಲ...

ಶ್ವೇತ ಹೇಳಿದರು...

vajrakaradalli kattarisi endaaga swalpa doubtful anisitu. Otherwise it can be dumroot or winter melon halwa?

aak ಹೇಳಿದರು...

carrot halwa

ದಿವ್ಯಾ ಹೇಳಿದರು...

ಮೊದಲಿಗೆ, ದೊಡ್ಡವರ ಮಾತುಗಳಂತೆ. "ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ.ಬಹುಮಾನದ ಬಗ್ಗೆ ಚಿಂತಿಸಬಾರದು " ಅಂತ.
ಭಾಗವಹಿಸಿದ ಎಲ್ಲರಿಗೂ ನನ್ನ ಹೃದಯ ಪೂರ್ವಕ ಅಭಿನಂದನೆಗಳು...:-)

ಹಾಗೆ ಕೆಲವೊಂದು ಹೊಸ ಬ್ಲಾಗಿಗರು ನನ್ನ ಬ್ಲಾಗಿಗೆ ಭೇಟಿ ಇತ್ತು ಉತ್ತರಿಸಿದ್ದೀರ .ನನ್ನ ಬ್ಲಾಗಿಗೆ ಸ್ವಾಗತ... :-)

ನನ್ನ ಪ್ರಶ್ನೆಗೆ ಸರಿಯಾದ ಉತ್ತರ.. ಅಂದರೆ ನಾನು ಮಾಡಿದ್ದು "ಕ್ಯಾರೆಟ್ ಬರ್ಫೀ " ಅಥವ "ಕ್ಯಾರೆಟ್ ಹಲ್ವಾ"
ಸಾಧಾರಣವಾಗಿ ಕ್ಯಾರೆಟ್ ಹಲ್ವಾ ಎಂದರೆ ಸ್ವಲ್ಪ ದ್ರವ ರೂಪದಲ್ಲಿರುವುದಕ್ಕೆ ಅದನ್ನು ತಟ್ಟೆಯಲ್ಲಿ ಹಾಕಿಕೊಂಡು ತಿನ್ನಬೇಕಾಗುತ್ತದೆ. ಆದರೆ ನಾನು ಅದನ್ನು ಬಟ್ಟಲಿಗೆ ಸುರಿದು ವಜ್ರಾಕರದಲ್ಲಿ ಕತ್ತರಿಸುವುದರಿಂದ "ಕ್ಯಾರೆಟ್ ಬುರ್ಫೀ" ಅತ್ಯಂತ ಸರಿ ಉತ್ತರ.

ಅತ್ಯಂತ ಸರಿ ಉತ್ತರ ಊಹಿಸಿದವರು "ಸುಬ್ರಹ್ಮಣ್ಯ ಮತ್ತು ಪ್ರಗತಿ ಹೆಗಡೆ ".ನಿಮ್ಮಿಬ್ಬರಿಗೂ CONGRATULATIONS !!..:-)

"ಕ್ಯಾರೆಟ್ ಹಲ್ವಾ"ಕೂಡ ಸಮೀಪದ ಉತ್ತರವಾದ್ದರಿಂದ ನಿಮಗೂ ಬಹುಮಾನ ಕೊಡುತ್ತೀನಿ.ಉಳಿದಂತೆ ಉತ್ತರಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ಕೊಡುತ್ತೇನೆ.

ಸುಶ್,ನನ್ ರೂಂ ಮೇಟ್ ಹತ್ರ ಕೇಳ್ತಿ.ಅವ್ಳು ಓಕೆ ಅಂದ್ರೆ ಕೊಡ್ತಿ.ok ನಾ? ... ;-)

ಶಿವಣ್ಣ,ಹೇಮಕ್ಕ ಹೇಳಿದ್ದು ಸರಿ.ನಿಮಗೆ ತಿನ್ನಲು ಇನ್ನೊಮ್ಮೆ ಮಾಡಿದ್ದಾಗ ಖಂಡಿತ ಕರೆಯುತ್ತೇನೆ. ಥ್ಯಾಂಕ್ಸ್.

ಸುಧೇಶ್, ಕರೆಕ್ಟ್.ನಿಮಗೊಂದು ಬಹುಮಾನ ಇದೆ... :-)

ಸುಗುಣಕ್ಕ,ನಿಮಗೆ ಕೊಡೋಣ ಅಂದ್ರೆ ನೀನು ಅಷ್ಟು ದೂರ ಇದೀರಲ್ಲ... :-(

ಸುಬ್ರಹ್ಮಣ್ಯ, ಬಹಳ ಸರಿಯಾದ ಉತ್ತರ!!.:-)

ತೇಜಕ್ಕ, ಉತ್ತರ ಸರಿ ಇದ್ದು. ಬಹುಮಾನ ಕೊಡ್ತಿ.ನಾನು ಮಾತಿಗೆ ತಪ್ಪದಿಲ್ಲೇ. cheating ಅಂದ್ರೆ ಎಂತು ಹೇಳೇ ಗೊತ್ತಿಲ್ಲೆ ನಂಗೆ.. :-)

ರಾಘಣ್ಣ ,ಕವಿತತ್ತಿಗೆದು ಸರಿ ಉತ್ತರ.ಅವಳಿಗೆ ಬಹುಮಾನ.ನಿಂಗಿಲ್ಲೇ... ;-)

ಹರ್ಷ ಅವ್ರೆ,ಕ್ಯಾರೆಟ್ ಹಲ್ವಾ ಅವತ್ತೇ ಖರ್ಚಾಗೊತು. ನಿನ್ಗವೆಲ್ಲ ನಾ ಮಾಡಿದ್ದು ಎಂತು ಹೇಳಿ guess ಮಾಡ್ಲಿ ಅಂತ ಕೆಳದಿ.ನಿಮ್ಮ ಉತ್ತರ ಸರಿ ಇದ್ದು. ಖಂಡಿತ ಬಹುಮಾನ ಕೊಡನ. wait ಮಾಡಿ.. :-)

ಅಶೋಕ್ ಸರ್, ಕರೋಡ್ ಪತಿ ತರ ಎಲ್ಲ ಬೇಡ.ನಮ್ದು ಸ್ವಂತದ್ದೇ ಇರ್ಲಿ. ನೋ options . ನೀವೇ guess ಮಾಡಬೇಕಿತ್ತು.... :-)

ವನಿತಕ್ಕ,ತಿನ್ನದೇ ನೆ tastu ಹೇಳ್ತೆ.ಇನ್ನು ತಿಂದರೆ!!..ಥ್ಯಾಂಕ್ಸ್ ... :-)ನಿಂಗೂ ಬಹುಮಾನ ಕೊಡ್ತಿ.. ;-)

ಶರಸ್, ಕರೆಕ್ಟ್.. :-)

ದಿನಕರ್ ಸರ್ ,ಸರಿ ಉತ್ತರ.ಥ್ಯಾಂಕ್ಸ್.. :-)

ಸುನಾಥ್ ಅಂಕಲ್, ಕೊಬ್ಬರಿ ಸ್ವೀಟ್ ತಪ್ಪುತ್ತರ.ಆದರೂ ಬಹುಮಾನ ಇದೆ ನಿಮಗೂ. .. :-)

ದಿಲೀಪ್, ಹೌದು.ನಿಮ್ಮುತ್ತರ ಸರಿ.. :-)

ಪ್ರಕಾಶ್, ಹಾಲುಗುಂಬಲ ಹಲ್ವಾ ಅಲ್ಲ ಅದು.ಆದರೂ ಚನಾಗಿತ್ತು ...:-)

ಪ್ರಗತಿ,ಬಹಳ ಸರಿಯಾದ ಉತ್ತರ.ನಿನಗೆ ಬಹುಮಾನ... ;-)

ಪ್ರವೀಣ(ಮನದಾಳದಿಂದ) ನೀವು ಹೀಗೆಲ್ಲ ಹೆದರಿಸೋದೆ ?? ಆದಷ್ಟು ಬೇಗ ಮದುವೆ ಆಗಿ ನೀವು ಸಿಹಿ ಮಾಡಿಸಿಕೊಂಡು ತಿನ್ನುವ ಹಾಗಾಗಲಿ ಅಂತ ಹಾರೈಸುವೆ. ಅಂದಹಾಗೆ ನಿಮ್ಮ ಉತ್ತರ ತಪ್ಪು.ಆದರೂ ಬಹುಮಾನ ಇದೆ.. :-)

ಕೇಶವ ಚಂದ್ರ ಸರ್,ಸರಿ ಉತ್ತರ :-)

ಚಂದ್ರು ಸರ್,ನಿಮ್ಮ ಉತ್ತರ ಸರಿ.ಬಹುಮಾನ ಇದೆ ನಿಮಗೂ.. :-)

Amit ,ಇಟ್ಸ್ Pumkin cake .Its carrot burfee .. :-)

vijay ,right answer ... :-)

ಶಾನಿ,ನಿಮ್ಮುತ್ತರ ಸರಿ ಅಂತ ನಾನು ಹೇಳಲ್ಲ... ;-) ನಿಮಗೂ ಬಹುಮಾನ ಇದೆ.. :-)

ಬದರಿನಾಥ್ ಸರ್, ಸರಿ ನಾನೇ ಹೇಳುವೆ.ಅದು carrot ಬುರ್ಫೀ.. :-)

ಶ್ವೇತ,ಅದು ಕಾರ್ರೋತ್ ಬುರ್ಫೀ.ಥ್ಯಾಂಕ್ಸ್..ನಿಮಗೂ ಬಹುಮಾನ ಇದೆ.. :-)

aak ಸರ್,ನಿಮದೂ ಸರಿಯಾದ ಉತ್ತರ.ಬಹುಮಾನ ಇದೆ ನಿಮಗೂ.. :-)

ಅಂದಹಾಗೆ ಉತ್ತರ ಊಹಿಸಿದವರಲ್ಲಿ ಗಂಡಸರದೇ ಮೇಲು ಗೈ. ಒಂದು ಚಪ್ಪಾಳೆ ನಿಮಗೆಲ್ಲರಿಗೂ. .ಬಹುಮಾನಗಳನ್ನು ಕೊಡಲು ಶೀಘ್ರವೇ ನಿಮ್ಮಲ್ಲರ ಮನೆಗಳಿಗೆ ಬರುವೆ. ಅಲ್ಲಿವರೆಗೂ ಕಾಯುತ್ತಿರಿ. ನಿಮ್ಮೆಲ್ಲರ ಪ್ರೋತ್ಸಾಹ,ಪ್ರೀತಿಗೆ ನನ್ನದೊಂದು thanks ... :-)

ಪ್ರೀತಿಯಿಂದ,
ದಿವ್ಯಾ:-)

ಸೀತಾರಾಮ. ಕೆ. / SITARAM.K ಹೇಳಿದರು...

ನಾ ಮೊದಲೇ ಓದಿದ್ದರೆ ಸರಿಯಾಗಿ ಹೇಳಿರೋನು!
ಈಗ ಹೇಳಿದ್ರೆ ಉತ್ತರ ನೋಡಿದ್ದ ಅಂತಾರೆ ಬಿಡಿ.