ಬುಧವಾರ, ಆಗಸ್ಟ್ 18, 2010

ಯಾಕೋ ಕಾಡತಾವ ಚಿತ್ರಗಳು !

ನಿನ್ನೆ ಒಂದು ಕಾದಂಬರಿ ಓದುತ್ತಾ ಕುಳಿತವಳಿಗೆ ಇದ್ದಕ್ಕಿದ್ದಂತೆ ನನ್ನ ಫೋಟೋ ಆಲ್ಬಮ್ ನೋಡಬೇಕು ಅನ್ನಿಸಿ ಬಿಡ್ತು. ಕಪಾಟಿನ ಒಳಗೆ ಜೋಪಾನವಾಗಿಟ್ಟ 45 ಪುಟಗಳ ನನ್ನ ಪುಟ್ಟ ಭಾವಚಿತ್ರಗಳ ಆಲ್ಬಮ್ ತೆಗೆದೇಬಿಟ್ಟೆ !ಎಷ್ಟೊಂದು ಹಳೆ ನೆನಪುಗಳೆಲ್ಲ ಮರುಕಳಿಸಿದವು.ಯಾಕೋ ಕಾಡತಾವ ಚಿತ್ರಗಳು !

"ಸವಿ ಸವಿ ನೆನಪು,ಸಾವಿರನೆನಪು,
ಎದೆಯಾಳದಲಿ ಬಚ್ಚಿಕೊಂಡಿರುವ,
ಅಚ್ಚಳಿಯದ ನೂರೊಂದು ನೆನಪು"ಮೂರನೇ ಕ್ಲಾಸಿನಲ್ಲಿ ಇದ್ದಾಗ ಮುಂದಿನ ಹಲ್ಲು ಬಿದ್ದು ಎಲ್ಲರೂ ನನ್ನ ಮುದುಕಿ ಆದೆ ಎಂದು ಚುಡಾಯಿಸುತಿದ್ದಾಗ ತೆಗೆಸಿಕೊಂಡ ಚಿತ್ರ, ನಾನು ನನ್ನ ತಂಗಿ ನಮ್ಮ ತೋಟದಲ್ಲಿ ತೆಗೆಸಿಕೊಂಡ ಚಿತ್ರ, ಅಪ್ಪ ಮುಂಬಾಯಿಗೆ ಹೋದಾಗ ನನಗಂತ ತಂದ ಚಿಟ್ಟೆ ಚಿತ್ರಗಳಿದ್ದ ಅಂಗಿಯಲ್ಲಿ ತೆಗಿಸಿಕೊಂಡ ಚಿತ್ರ, ಎಂದೋ ಕಾರ್ಯದ ಮನೆಯಲ್ಲಿ ಹುಡುಗರು ನಾವಷ್ಟೇ ಅಡಿಗೆ ಭಟ್ರು ಮಾಡಿದ ಸಿಹಿ ತಿಂಡಿಯ ರುಚಿ ನೋಡುತಿದ್ದಾಗ, ಮಕ್ಕಳೆಲ್ಲ ಹೊಳೆ ದಂಡೆಗೆ walking ಹೋದ ಚಿತ್ರ, ಗುಡ್ಡ ಬೆಟ್ಟ ತಿರುಗಿ "ಮುಳ್ಳು ಹಣ್ಣು" ಕಿತ್ತು ತಂದ ಚಿತ್ರ,ಮಾವನ ಮದುವೆಯಲ್ಲಿ ಮೊದಲನೇ ಸಾರಿ,ಸೀರೆ ಉಟ್ಟಾಗ ತೆಗೆಸಿಕೊಂಡ ಚಿತ್ರ, ನಾನು ಚಿಕ್ಕ ಮಗುವಾಗಿದ್ದಾಗ ಅಪ್ಪ ಇಷ್ಟ ಪಟ್ಟು studio ಗೆ ಹೋಗಿ ಅಪ್ಪನ ಮಡಿಲಿನಲ್ಲಿ , ಅಮ್ಮನ ಜೊತೆ ತೆಗೆಸಿಕೊಂಡ ಚಿತ್ರ, ಹೀಗೆ ಇನ್ನೂ ಎಷ್ಟೋ..ಅಬ್ಬ ಎಲ್ಲಿಂದ ಎಲ್ಲಿಗೆ ಕರೆದುಕೊಂಡು ಹೋಗುತ್ತೆ ಚಿತ್ರಗಳು!

ಹಾಗೆ ಮತ್ತೆ ಹಾಳೆ ತಿರುಗಿಸುತಿದ್ದಾಗ ಮತ್ತೆ ಅದೇ ಫೋಟೋಗಳು. ಶಾಲೆಲಿ ಭಾಷಣ ಮಾಡಿದ, ಬಹುಮಾನ ಗೆದ್ದಾಗ, ಶಾಲೆ ಮುಗಿಯುತಿದ್ದಾಗ ಸೆಂಡ್ ಆಫ ಪಾರ್ಟಿಯಲ್ಲಿ ತೆಗೆಸಿಕೊಂಡ ಫೋಟೋ, ಮತ್ತೆ ಕಾಲೇಜಲ್ಲಿ fashion ಶೋ ಮಾಡಿದ್ದು, ನಾಟಕ ಮಾಡಿದ್ದು , ಟ್ರಿಪ್ ಗಳಿಗೆ ಹೋಗಿದ್ದು, ಮೆಚ್ಚಿನ ಸ್ನೇಹಿತರಿದ್ದು, ಆಹಾ! ಎಂಥ ಆನಂದ. ನಾವು ಡಿಗ್ರಿಯಲ್ಲಿ ಓದುವಾಗ ಕ್ಲಾಸಿಗೆ ಮೂರೇ ಜನ heroine ಗಳು. ಬೇರೆ ಹುಡುಗಿಯರೆಲ್ಲ ಅಯ್ಯೋ ನಮ್ದು scienceu .ನಾವು ಓದಬೇಕು ಅನ್ನುತಿದ್ದರು. ಓದೋದು ಅಂದರೆ ಅವರ ಅರ್ಥದಲ್ಲಿ ಕೇವಲ ಪಟ್ಯ ಪುಸ್ತಕಗಳಷ್ಟೇ! ನಾವಷ್ಟೇ ಸ್ವಲ್ಪ ದೂರ ಆಗಿಬಿಟ್ಟಿದ್ದೆವು. ಆದ್ರೆ ಇದೆ ಕಾರಣ ಹುಡುಗರ ಸ್ನೇಹಕ್ಕೆ ಎಡೆಯಾಯಿತು. ನಾವು ಹುಡುಗರೊಡನೆ ತುಂಬಾ ಗೆಳೆತನದಿಂದ ಇರುತಿದ್ದೆವು. ಯಾವ ಕೆಟ್ಟ ಪಟ್ಟದ ಹಂಗಿಲ್ಲದೆ. "ಆ ದಿನಗಳು" ನೆನಪಾದವು. ಮತ್ತೆ ಬರಲಿ ಅನಿಸಿತು. Hard chance ದಿವ್ಯ!ಅಂತು ಮನಸು. ಚಿತ್ರಗಳನ್ನು ನೋಡುತ್ತಾ ಯಾವುದೋ ಬೇರೆ ಲೋಕದಲ್ಲೇ ಕಳೆದು ಹೋದೆ.ವರ್ತಮಾನದಿಂದ ಭೂತದೆಡೆ ಸಾಗಿತ್ತು ನನ್ನ ಮನಸಿನ ಪಯಣ. ಈ ಚಿತ್ರಗಳು ಮನುಷ್ಯನ ಜೀವನದಲ್ಲಿ ಬೆರೆತು ಹೋಗಿವೆ. ಎಷ್ಟೋ ಖುಷಿಯ ಕ್ಷಣಗಳು ನಮ್ಮ ಬದುಕಿನಲ್ಲಿ ಬಂದೇ ಬರುತ್ತವೆ. ಗೃಹಪ್ರವೇಶ, ಮದುವೆ, ಮುಂಜಿ ಇನ್ನೂ ಅನೇಕ ಸಂದರ್ಭಗಳು ಜೀವನಲ್ಲಿ ಎಂದೂ ಮರೆಯಲು ಅಸಾದ್ಯ ! ಆದರೂ ಯಾವಾಗಾದರೂ ನೆನಪಿಸಿಕೊಂಡು ಆ ಕ್ಷಣಗಳನ್ನು ಮೆಲಕು ಹಾಕಲು ಈ ಫೋಟೋಗಳೇ ಬೇಕು. ಮತ್ತೆ ನೆನಪುಗಳೆಲ್ಲ ಹಸಿರು ಹಸಿರು, ತಾಜಾ ತಾಜಾ ! ಬೇಸರಗೊಂಡ ಮನಸಿಗೊಂದು ಮದ್ದು.

ನಾನು ಹಿಂದೆ ಒಂದು ಪುಸ್ತಕದ ಬಗ್ಗೆ ಬರೆದಿದ್ದೆ. ಅದರಲ್ಲಿ ನಮ್ಮ boss ( ರೋಬಿನ್ ಶರ್ಮಾ) ಹೇಳುತ್ತಾರೆ, ಕೆಲವರಿಗೆ ತಮ್ಮ ಅಂದ ಚಂದದ ಬಗ್ಗೆ ಬಹಳ ಕೀಳರಿಮೆ ಇರುತ್ತದೆಯಂತೆ. ಅಂತಹವರು ಆದಷ್ಟು ಚಿತ್ರಗಳನ್ನು ತೆಗೆಸಿಕೊಂಡು ,ತಮ್ಮಲ್ಲಿ ಏನು ಸುಧಾರಣೆಯಾಗಬೇಕಿದೆ ಅಂತ ನೋಡಿ ಕೊಳ್ಳಬೇಕಂತೆ. ಅದು ನಮ್ಮ ಆತ್ಮ ವಿಶ್ವಾಸ ಹೆಚ್ಚಿಸುತ್ತದಂತೆ. ಇದು ಒಂದು ಒಳ್ಳೆಯ ಉಪಾಯವೇ. ಇಷ್ಟೆಲ್ಲಾ ಯಾಕ್ರಿ ಮಾಡಬೇಕು? ಕನ್ನೆಡಿಯಲ್ಲಿ ನೋಡ್ಕೊಂಡ್ರೆ ಸಾಕಲ್ವ? ಅಂತ ಅನ್ನಬೇಡಿ. ಇದು ರೋಬಿನ್ ಶರ್ಮ ಉವಾಚ,ನನ್ನದಲ್ಲ :-) ಫೋಟೋಗಳು ಎಷ್ಟೊಂದು ಉಪಯುಕ್ತ ಗೊತ್ತ? ದಪ್ಪಗಿದ್ದವರು ಸಣ್ಣಗಾಗಿದ್ದು, ಕಪ್ಪಗಿದ್ದವರು ಬೆಳ್ಳಗಾಗಿದ್ದು, ಮನುಷ್ಯನಲ್ಲಿ ಆದ ಎಲ್ಲ ಬದಲಾವಣೆಗಳನ್ನು ಗಮನಿಸಬಹುದು. ಕಾರಣಾಂತರದಿಂದ ಕಾರ್ಯಕ್ರಮಕ್ಕೆ ಬರಲಾಗದವರು ಫೋಟೋ ನೋಡಿ ಸಮಾಧಾನ ಮಾಡಿಕೊಳ್ಳಬಹುದು. ಯಾರದೋ ಬಗ್ಗೆ ಮಾತಾಡುವಾಗ ಅವರ ಚಿತ್ರ ತೋರಿಸಿಕೊಂಡು ಮಾತು ಮುಂದುವರಿಸಬಹುದು.

ಚಿತ್ರಗಳನ್ನು ನೋಡಿ ಎಲ್ಲ ನೆನಪಾಯಿತು . ಕಾಲೇಜು ಜೀವನದ ವೈವಿಧ್ಯತೆಯಲ್ಲ ಕಳೆದು , ಈಗಿನ ಏಕತಾನತೆಯ ಜೀವನದ ಬಗ್ಗೆ ಸ್ವಲ್ಪ ಬೇಸರವು ಮೂಡಿತು.

"Memories play a confusing role,
They make you cry for the days you laughed together,
And make you laugh for the days you cried!!"


kodak ಜಾಹಿರಾತು , "ನಿಮ್ಮ ಸುಮಧುರ ಕ್ಷಣಗಳನ್ನು ಸೆರೆ ಹಿಡಿಯಿರಿ"ಅಂತ. ಅಮ್ಮ ಈಗಲೂ ಅಪ್ಪನ ಹಳೇ ಚಿತ್ರಗಳನ್ನು ನೋಡಿ ಹೇಳುತ್ತಾಳೆ "ನಿನ್ನ ಅಪ್ಪ ಎಷ್ಟು ಚನಾಗಿದ್ರು ನೋಡು,ಈಗಲೇ ಸ್ವಲ್ಪ ಹಾಳಾಗಿದಾರೆ" ಅಂತ. ಅಮ್ಮ ಹಳೇ ದಿನಗಳನ್ನು ನೆನೆಸಿಕೊಂಡು ನಗುತ್ತಾಳೆ. ತಂಗಿ , ಅಪ್ಪ, ನಾನು ಇಲ್ಲದಿದ್ದಾಗ ನನ್ನ ಫೋಟೋ ನೋಡುತ್ತಾರೆ. ನಾನು ಕೂಡ. ಇದೆ ತಾನೇ 4 -5 ಇಂಚಿನ ಕಾಗದದ ಮಹತ್ವ!
ನನಗೆ ಈಗಲೂ ಫೋಟೋ ಹುಚ್ಚು ಇದೆ. ಎಲ್ಲಿ ಹೋದರೂ ಮೊದಲು ಫೋಟೋ ತೆಗೆಯೋದೇ ನನ್ನ ಕೆಲಸ. ಹಾಗಂತ ನಾನೇನು ಒಳ್ಳೆ photographer ಅಲ್ಲ.ಆದರೂ ನನಗಿಷ್ಟ. ಮದುವೆ,ಮುಂಜಿ ಮನೆಗಳಲ್ಲಿ ಆಲ್ಬಮ್ ನೋಡಲು ಕೊಟ್ಟಾಗ, ಅದರ ಮೇಲೆ ಬರೆದ ಪದಗಳು "happy moments " ," memorable moments ","treasured minutes" , "unforgettable timings"ಎಂಬ ಪದಗಳು ನನ್ನ ಸೆಳೆಯುತ್ತವೆ.
ಫೋಟೋಗಳು ಈಗ ಒಳ್ಳೆ ಉದ್ಯೋಗಾವಕಾಶವನ್ನು ಕಲ್ಪಿಸಿರುವುದು ಒಂದು ಒಳ್ಳೆ ವಿಷ್ಯ. ಕೆಲವರಿಗೆ photography fashion , ಇನ್ನೂ ಕೆಲವರಿಗೆ passion , ಇನ್ನೂ ಕೆಲವರಿಗೆ profession . ನಾನು ಮೊದಲ ಎರಡರಲ್ಲಿ ಯಾವುದರಲ್ಲೂ ಬರಬಹುದು. ಚಿತ್ರಗಳನ್ನು ನೋಡುತ್ತಾ ,ನೋಡುತ್ತಾ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಚಿಕ್ಕ ಮಗುವಾಗಿದ್ದಾಗಿಂದ ಈ ವರೆಗೂ ಪಯಣಿಸಿದ್ದೆ ಕುಳಿತಲ್ಲೇ!
ಮತ್ತೆ ನಾನು ನನ್ನ ಪುಸ್ತಕದಲ್ಲಿ ಬರೆದ ಮಾತು " I like photos, because people can change,but photos cant " ನೆನಪಾಗಿ ನನ್ನಷ್ಟಕ್ಕೆ ನಕ್ಕು ಆಲ್ಬಮ್ ಮುಚ್ಚಿ ಇಟ್ಟೆ. ತುಟಿಯಲ್ಲೊಂದು ಕಾಮನಬಿಲ್ಲು ಮೂಡಿತ್ತು:)(ಚಿತ್ರಕೃಪೆ: ಅಂತರ್ಜಾಲ)

25 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ದಿವ್ಯಾ

ನೆನಪುಗಳ ಮಾತು ಮಧುರ ಆಲ್ವಾ

ಹಳೆಯ ನೆನಪುಗಳು ಮನಸ್ಸಿಗೆ ಕೆಲವೊಮ್ಮೆ ನೋವು ಕೊಡುತ್ತವೆ

ಆದರೆ ಬಹಳಷ್ಟು ಸಲ ಮನದ ನೋವಿಗೆ ಸಾಂತ್ವನ ನೀಡುತ್ತವೆ

ಸುಂದರ ಬರಹ

ದಿನಕರ ಮೊಗೇರ ಹೇಳಿದರು...

I like photos, because people can change,but photos cant " eshtu satya alvaa...
modalu nagaaDuttaa maataaDuttivana nija baNNa nantara tilidaaga .... avanade photo nantara noDidaaga eshtu asahya aagiratte alvaa....

nanna tumbnaa haLeya photogaLannu nanna mood emba kharaab manushya kettaaga nodutta iruttene... aashcharya embante nanna mood sari aagatte....

dhanyavaada nanage idellaa nenapu maadisiddakke...

jotege nimmade ondu haleya photo haakiddare lekhana innu chennaagiruttittu....

ಸವಿಗನಸು ಹೇಳಿದರು...

ಸವಿನೆನಪುಗಳು ಬೇಕು ಸವಿಯಲು ಈ ಬದುಕು....
ಚೆಂದದ ಬರಹ....

balasubramanya ಹೇಳಿದರು...

ದಿವ್ಯ ರವರೆ,ನಿಮ್ಮ ನೆನಪುಗಳ ಲೋಕದ ಪಯಣ ಚೆನ್ನಾಗಿದೆ. ರಂಗು ರಂಗಾದ ,ಮಾಸದ ಪಡೆ ಪಡೆ ಕಾಡುವ ಬಾಲ್ಯದ ಸುಂದರ ನೆನಪುಗಳ ನಿಮ್ಮ ಲೆಲ್ಹನ ಚೆನ್ನಾಗಿದೆ.ಥ್ಯಾಂಕ್ಸ್.

ಮನಸು ಹೇಳಿದರು...

divya enamma ninna nenapugaLu tumba joru ideya haha..
nenapu savi saviyaagiddare chenna allave.. very nice

V.R.BHAT ಹೇಳಿದರು...

NICE !

ಮನಮುಕ್ತಾ ಹೇಳಿದರು...

ಬರಹ..ಅದರ ಭಾವನೆ ತು೦ಬ ಸು೦ದರವಾಗಿದೆ.ಓದಿ ನ೦ಗ೦ತೂ ರಾಶಿ ಖುಶಿ ಆತು..

sunaath ಹೇಳಿದರು...

ದಿವ್ಯಾ,
ನಿಮ್ಮ ನೆನಪಿನ ಪಯಣದಲ್ಲಿ ನಮ್ಮನ್ನೂ ಭಾಗಿಗಳನ್ನಾಗಿ ಮಾಡಿದಿರಿ. ತುಂಬ ಖುಶಿಯಾಯಿತು. ನೀವು ನೀಡಿದ ಕೊಟೇಶನ್ಸ ಸಹ ತುಂಬ ಚೆನ್ನಾಗಿವೆ.

jithendra hindumane ಹೇಳಿದರು...

ಒಂದೇ ಮಾತಲ್ಲಿ ಹೇಳೋದಾದ್ರೆ ಬಾಲ್ಯದ/ ಕಳೆದ ದಿನಗಳನ್ನು ನೆನೆಸಿಕೊಳ್ಳುವದೇ ಸಂದರ ಅನುಭೂತಿ....
ಧನ್ಯವಾದಗಳು.

Raghu ಹೇಳಿದರು...

ಹೌದು. ನೆನಪಿನ ಪುಸ್ತಕ ತೆರದರೆ ತುಂಬಾ ಕಥೆ ಸಿಗುತ್ತೆ. ಎಲ್ಲೊ ಒಂದು ಕಡೆ ಅಡಗಿ ಕೊಂಡಿರುತ್ತೆ ನಗು..!!
ಸವಿ ಸವಿ ನೆನಪು...
ನಿಮ್ಮವ,
ರಾಘು.

ಸುಮ ಹೇಳಿದರು...

nice ದಿವ್ಯ . ನಂಗೂ ಫೋಟೊ ನೋಡೋದು ತೆಗೆಯೋದು ಎಲ್ಲ ಇಷ್ಟ. ಹಳೆಯ ಫೋಟೋಗಳು ತುಂಬ ಖುಷಿ ಕೊಡುತ್ತವೆ.

ಸೀತಾರಾಮ. ಕೆ. / SITARAM.K ಹೇಳಿದರು...

ಅಲ್ಮ್ಬಂ ತಿರುವೋ ಅಭ್ಯಾಸ ನನಗೂ ಇದೆ. ಮನಸನ್ನು ಪ್ರಫುಲ್ಲವಾಗಿಡಿಸಲು ಅದು ಪರಿಣಾಮಕಾರಿ.
ಚೆಂದವಾಗಿ ಹೇಳಿದ್ದಿರಾ...

ದಿವ್ಯಾ ಮಲ್ಯ ಕಾಮತ್ ಹೇಳಿದರು...

>> I like photos, because people can change,but photos cant <<
Beautiful line.. so as your blog post:) Memories are always sweet Alva?

ತೇಜಸ್ವಿನಿ ಹೆಗಡೆ ಹೇಳಿದರು...

ದಿವ್ಯಾ,

ನಿಜ ಹಳೆಯ ಚಿತ್ರಗಳನ್ನು ನೋಡಿದಾಗ ಫಿಲ್ಮ್ ರೀಲು ತಿರುಗಿದಂತೇ ಸವಿ/ಕಹಿ ನೆನಪುಗಳೂ ಮನದೊಳಗೆ ಗಿರಕಿಹೊಡೆಯುತ್ತವೆ. ಕೆಲವೊಂದು ಚಿತ್ರಗಳನ್ನು ನೋಡಲೇ ಆಗದಂತಿದ್ದರೆ, ಕೆಲವೊಂದನ್ನು ನೋಡದೇ ಇರಲಾಗದು! :) ಕಾಡುವ ಚಿತ್ರಗಳ ಬರಹ ಚೆನ್ನಾಗಿದೆ.

Soumya. Bhagwat ಹೇಳಿದರು...

really nice one divya.........:)

ಪ್ರವೀಣ್ ಭಟ್ ಹೇಳಿದರು...

ಚೆನ್ನಾಗಿ ಬರ್ದ್ಯೆ.. ನಂದು ಎಲ್ಲ ಫೋಟೋಸ್ ನೋಡಕ್ಕು ಅನ್ನಿಸ್ತಾ ಇದ್ದು :) .. ಹಲ್ಲು ಬಿದ್ದಿದ್ದು ಫೋಟೋ ಹಾಕು ನೋಡನ,,, :)

ಪ್ರವಿ

ವನಿತಾ / Vanitha ಹೇಳಿದರು...

ಫೋಟೋ ನೋಡ್ತಾ ಕೂರೋದು ನಂಗೂ ಇಷ್ಟ..
ಸವಿ ಸವಿ ಬರಹ..:))

ಚೆಂದುಳ್ಳಿ ಹೇಳಿದರು...

Divya,

Tumba sundara baravanige!

Idannu vodutta haage nenapinaanaladalli telide!, nanna haleya Album one time tiruvi haakide!

illi share maadalagada kelavu nenapugalu manasige mudaneedidavu.
baalyadanenapugalu sundara.

yaavaagalo vodida Hindi poem nenapaaytu "aaja bachapan ek baar fir, de de apani nirmala shaanti"- Mithili sharanagupra barediddirabeku.

Nimma baravanigeyalli bhaavane adagide, idu nimma maatonde alla, vodidavara mana muttuva lekhana.

E lekhana vodutta telgu movie nenapaaytu- "Happy days!"

Hats up!

Hegde.. :)

Ashok.V.Shetty, Kodlady ಹೇಳಿದರು...

tumbaa sundara baraha...nice one....

Badarinath Palavalli ಹೇಳಿದರು...

ಫೋಟೋಗಳೇ ಹಾಗೆ ಏನೋ ನೆನಸಿ ಎಲ್ಲೋ ಪುಳಕಿಸಿ, ಎಲ್ಲೋ ಮೀಟಿ ಒಳಗೊಂದು ಹಿತವಾಗ ನೋವು ತಂದು ಬಿಡುತ್ತದೆ. ಫೋಟೋ, ಪತ್ರಗಳಲ್ಲಿರುವ ಮಜ ಮೊಬೈಲ್, ವಿಡಿಯೋ, ಎಸ್.ಎಂ.ಎಸ್ಗಳಲ್ಲೆದೆ? ಶಾಲೆ ಪುಸ್ತಕದಲ್ಲಿ ಅಡಗಿಸಿಟ್ಟ ಅವಳ ಹಳತೊಂದು ಫೋಟೋವನ್ನು ಎಷ್ಟು ಸಾರಿ ಕದ್ದು ನೋಡಿತ್ತಿದ್ದೆನೋ?

ಶೈಲಿ ಮತ್ತು ಬರಹ ಚೆನ್ನಾಗಿದೆ. ಸಮಯ ಮಾಡಿಕೊಂಡು ನನ್ನ ಬ್ಲಾಗಿಗೂ ಬನ್ನಿ.

ಮನಸಿನ ಮಾತುಗಳು ಹೇಳಿದರು...

ಗುರುಮೂರ್ತಿ ಅಣ್ಣ, ಹೌದು... ನೆನಪುಗಳ ಮಾತು ಮಧುರ.. :-)ಮಾತೇ ಇಲ್ಲ. thanks

ದಿನಕರ್ ಸರ್, ತುಂಬಾ ಧನ್ಯವಾದಗಳು ... :-) ನನ್ನ ಫೋಟೋ ಬ್ಲಾಗ್ನಲ್ಲಿ ಹಾಕೋಕೆ ನನಗಿಷ್ಟ ಆಗಲ್ಲ . ಅದಕ್ಕೆ ಹಾಕಲಿಲ್ಲ.. :-)

ಸವಿಗನಸು(ಮಹೇಶಣ್ಣ) , ಸವಿನೆನಪು, ಸವಿಗನಸು ಎರಡೂ ಬೇಕು ಸವಿಯಲು ಬದುಕು.. :-)

ನಿಮ್ಮೊಳಗೊಬ್ಬ(ಬಾಲು ಸುಬ್ಬು) ಸರ್, ತುಂಬಾ ಧನ್ಯವಾದಗಳು... :-)

ಮನಸು(ಸುಗುಣಕ್ಕ) ಹೌದು ನೆನಪುಗಳು ಸವಿಯಾಗಿದ್ದರೆ ಚೆನ್ನ.. :-)

ವಿ.ಆರ್.ಭಟ್ ಸರ್ ಧನ್ಯವಾದಗಳು .. :-)

ಮನಮುಕ್ತ, ನಿಮಗೆ ಖುಷಿ ಆತು ಅಂದ್ರೆ ನನಗು ಖುಷಿ ಆದಂಗೆಯ.. :-)

ಸುನಾಥ್ ಸರ್, thank you .. :-)

ಜಿತೇಂದ್ರಣ್ಣ , ಹೌದು ಬಾಲ್ಯದ ದಿನಗಳು ಎಂದು ಮರೆಯೋಕಾಗದ ದಿನಗಳು.. :-)thanku .. :-)

raghu , ನೆನಪಿನ ಪುಸ್ತಕ ತೆಗೆದೇ ಕೂಡಲೇ ಅಡಗಿ ಕುಳಿತ ನಗು ಮತ್ತೆ ಎದಿರು ಬರುತ್ತೆ.. ಥ್ಯಾಂಕ್ಸ್.. :-)

ಸುಮಕ್ಕ, ನೀನೂ ನನ್ ಹಂಗೆಯ ಅಂತಾತು.:) ಥ್ಯಾಂಕ್ಸ್.. :-)

ಸೀತಾರಾಮ ಸರ್ ,ಧನ್ಯವಾದಗಳು.. :-)

ದಿವ್ಯಾ , ಥ್ಯಾಂಕ್ಸ್ ಕಣೆ.. :-) ಹೌದು memories are always sweet .. :-)thanks for your comment ..

ತೇಜಕ್ಕ, ಹ್ಮ್ಮ್ ಹೌದು... :-) thank you .. :)

ಸೌಮ್ಯ ,ಥ್ಯಾಂಕ್ಸ್ ಕಣೆ.. :-)

ಪ್ರವಿ, ಧನ್ಯವಾದಗಳು . ಏಯ್ ಹಲ್ಲು ಬಿದ್ದ ಫೋಟೋ ನೋಡಿ ಜನ ಹೆದರಿಕೊಂಡರೆ ಕಷ್ಟ. ಅದ್ಕೆ ಬೇಡ.ನೀ ಮನೆಗೆ ಬಾ. ಆವಾಗ ಆಲ್ಬಮ್ ನೋಡ್ಳಕ್ಕು..:-)

Vanitha , same pinchu ... :-)thanks
ಪ್ರಕಾಶ್, ತುಂಬಾ ಥ್ಯಾಂಕ್ಸ್ . ಆ ಕವನ ನಂಗೆ ಬಹಳ ಇಷ್ಟ. ನೆನಪಿಸಿದಕ್ಕೆ ಖುಷಿ ಆತು.. :-)

ಅಶೋಕ್ ಸರ್, ಧನ್ಯವಾದಗಳು.. :-)

Badarinath ಪಳವಲ್ಲಿ ಸರ್,ಹೌದು. ಯಾವದೇ sms ,ವೀಡಿಯೊ ಗಳಿಗೆ ಇಲ್ಲದ ಶಕ್ತಿ ಫೋಟೋಗಳಿಗಿವೆ. ನೀವು ನಿಮ್ಮವರ ಫೋಟೋ ಕದ್ದು ನೋಡುತಿದ್ದಿರ?..:O nice ... ಧನ್ಯವಾದ ನಮ್ಮೊಡನೆ ಹಂಚಿಕೊಂಡಿದ್ದಕ್ಕೆ.. :-)

ಶಿವಪ್ರಕಾಶ್ ಹೇಳಿದರು...

Nija guru..
HaLe photos nodutta, namma haLe nenapugalige jaarutteve.. nenapisikoLLuttiruvaaga namma mukhadalli namage tiLiyaada haage muguLnage hommuttade... :)

ಸುಧೇಶ್ ಶೆಟ್ಟಿ ಹೇಳಿದರು...

ದಿವ್ಯ...

ತು೦ಬಾ ಚೆನ್ನಾಗಿ ಬರೆದಿದ್ದೀರಿ... ಆಹ್ ಅನಿಸುವ೦ತೆ ಇತ್ತು. ನಿಮಗೆ photo ಹುಚ್ಚು ಇದೆ ಅ೦ತ ನಿಮ್ಮ ಆರ್ಕುಟ್ ಪ್ರೊಫೈಲ್ ನೋಡಿದಾಗ ಅನಿಸಿತ್ತು :)

Veena DhanuGowda ಹೇಳಿದರು...

:)
chennagithu ...

ಮನಸಿನ ಮಾತುಗಳು ಹೇಳಿದರು...

Sudhesh, Shivu, Veena thanks all... :-)