ಸೋಮವಾರ, ಆಗಸ್ಟ್ 02, 2010

ಅವನು ಕಾಯುತ್ತಿದ್ದಾನೆ....


ತೆರೆದ ಕಿಟಕಿಯಾಚೆ ಮುಖವಿತ್ತು ಆಚೆ ನೋಡುತ್ತಾ , ಆಟ ಆಡುತ್ತ ಇದ್ದ ಹುಡುಗರನ್ನು , ಖುಷಿ ಖುಷಿ ಆಗಿರುವುದನ್ನು ಕಂಡನು ಚಲಪತಿ. ತಾನೆಷ್ಟೆಲ್ಲ ದಿನಗಳಾಗಿ ಹೋಯಿತು ಇಂಥ ದಿನಗಳನ್ನು ಅನುಭವಿಸಿ!! ಎಷ್ಟೊಂದು ಸಂತೋಷದಿಂದಿದ್ದ ದಿನಗಳಲ್ಲಿ ಅದೆಲ್ಲಿಂದ ಆ ದಿನ ರಸ್ತೆಯಲ್ಲಿ ಹೋಗುವಾಗ, ಆ ಮನೆ ಎದುರಿಗೆ ತಾನು ಕಣ್ಣು ಹಾಯಿಸದಿದ್ದರೆ, ಅದು ನನ್ನನ್ನು ಅಷ್ಟೊಂದು ಸೆಳೆದಿರದಿದ್ದಿದ್ದರೆ, ಅಲ್ಲಿ ಬರೆದಿಟ್ಟ ಅಕ್ಷರಗಳನ್ನು ನಾನು ಓದಿರದಿದ್ದರೆ, ಆ ಅಕ್ಷರಗಳನ್ನೇ ನಂಬಿಕೊಂಡು ಮರುಳಾಗಿರದಿದ್ದರೆ, ಮುಖ ಪರಿಚವಿಲ್ಲದ ಒಂದು ಜೀವದೆಡೆಗೆ ಸೆಳೆತ ಬರದಿರದಿದ್ದರೆ , ಆ ವಾಂಚೆಯು ತೀವ್ರವಾಗಿ ಕಾಡಿರದಿದ್ದರೆ , ಆ ಮರೀಚಿಕೆಯ ಬೆನ್ನು ಹಿಂದೆ ಬಿದ್ದಿರದಿದ್ದರೆ, ಏನೆಲ್ಲಾ ಊಹಿಸಿಕೊಂಡಾಗ , ಜನರ ಸಾವಿರ ಮಾತುಗಳಿಗೆ ಬೆಲೆ ಕೊಟ್ಟಿದಿದ್ದರೆ, ದಿನವೂ ಒಂದೇ ತರಹದ ವಿಲಕ್ಷಣವಾದ ಚಡಪಡಿಕೆ ಆಗಿರದಿದ್ದರೆ, ನಿಮಿಷ ನಿಮಿಷದ ಹತಾಶೆ ಆಗಿರದಿದ್ದರೆ, ಆ ಮನೆಗೆ ಬಂದ ಹೊಸ ಹೊಸ ನೆಂಟರ ಮುಖಗಳನ್ನು ಲಕ್ಷಿಸದಿದ್ದರೆ, ಮನೆ ಒಡತಿಯ ಹುಡುಕಿಕೊಂಡು ಹೋಗಿರದಿದ್ದರೆ, ಯಾರನ್ನ ನೋಡಿದರು ಎಲ್ಲೋ ಒಂದು ಕಡೆ ಆ ಮನೆ ಯಜಮಾನಿಯನ್ನು ಹುಡುಕಿರದಿದ್ದರೆ,ಆ ಮನೆಯವಳ ಬಗ್ಗೆ ಪಕ್ಕದ ಮನೆಯವರಿಂದ ಬರುತಿದ್ದ ಮಾತುಗಳಿಗೆ ಸೊಪ್ಪು ಹಾಕಿದಿದ್ದರೆ, ಆ ಮೆನೆಗೆ ಹೋಗಲು ಅನುಮತಿ ಇಲ್ಲ ಅಂತ ಗೊತ್ತಿದ್ದೂ ಹೋಗಲು ಪ್ರಯತ್ನ ಪಡದಿದ್ದರೆ, ನೋವಲ್ಲೂ ನಗುವ ಪ್ರಯತ್ನ ಮಾಡಿರದಿದ್ದರೆ, ಮೆನೆಯಲ್ಲಿರುವವರು ಮಾಡಿದ ಪ್ರತೀ ತಪ್ಪನ್ನು ಮನ್ನಿಸಿ ಮುಂದೆ ನಡೆಯದಿದ್ದರೆ, ಅದರ ಬಗ್ಗೆ ಒಂದು ದ್ವೇಷ ಬೆಳೆಸಿಕೊಂಡಿರೋಕೆ ಸಾದ್ಯವಾಗಿದ್ದಿದ್ದರೆ,ಇಷ್ಟೆಲ್ಲಾ "ರೆ" ಗಳ ಮಧ್ಯೆಯೂ ಒಂದು ಸಣ್ಣ ನಗು ಬಂತು ಅವನಿಗೆ . ಕುಡಿಯುತ್ತಿದ್ದ ಕಾಪಿ ಸಿಹಿ ಅನಿಸಿತು. ಮನಸು ಉತ್ತರ ಕೊಟ್ಟಿತ್ತು ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ . " ಮನೆಯಾಗಲಿ, ಮನೆಯಲ್ಲಿರುವ ಜನರಾಗಲಿ, ಹೇಗೇ ಇರಲಿ ಅವರು "ನನ್ನವರು" , "ನನ್ನಿಷ್ಟದವರು" ನನಗವರೇ ಇಷ್ಟ. . ಮಕ್ಕಳ ಮುಖದಲ್ಲಿರುವ ನಗೆಗಿಂತ ಉತ್ತಮವಾದ ನಗೆ ಬಂದಿತ್ತು. ರೇಡಿಯೋದಲ್ಲಿ ಹಾಡು ಗುನುಗಿತ್ತು.

"ಹರುಷವೊಂದೆ ಯಾರಿಗುಂಟು ಹೇಳು ಜಗದಲಿ...
ಹೂವು ಮುಳ್ಳು ಎರಡು ಉಂಟು ಬಾಳಲತೆಯಲಿ...
ದುರಾಸೆ ಏತಕೆ ?... ನಿರಾಸೆಯೇತಕೆ...?
ಅದೇನೆ ಬಂದರೂ ಅವನ ಕಾಣಿಕೆ..."

ಒಡಲಿಗೆ ತಾನಾಗೆ ಬೆಂಕಿ ಇಟ್ಟುಕೊಂಡಾಗಿದೆ. ಇನ್ನದರಲ್ಲಿ ಸುಟ್ಟು ಭಾಸ್ಮವಾಗುವುದೊಂದೇ ಬಾಕಿ ಉಳಿದಿರುವುದು. ತನ್ನ ಒಡಲಿನ ಬೆಂಕಿ ಅವಳನ್ನು ಸುಡಕೊಡದಂತೆ ,ಬದಲಿಗೆ ಆ ಬೆಂಕಿಯೇ ತನ್ನ ಬಾಳಿಗೊಂದು ಇಂಧನವಾಗಿ, ಬದುಕಲು ಸ್ಪೂರ್ತಿಯಾಗಿ, ಆ ಬೆಂಕಿಯ ಬಿಸಿ ಅವಳಿಗೆ ಬೆಚ್ಚನೆಯ ಅನುಭೂತಿಯಾಗಿ, ತನ್ನೊಳಗೆ ಬಚ್ಚಿಟ್ಟು ಅವಳು ನಲಿಯುವುದನ್ನು ನೋಡುತ್ತಾ, ತನ್ನ ಬದುಕಿನ ಕೊನೆ ಕ್ಷಣಗವರೆಗೆ ಉಳಿದಿರುವುದು ತನಗೆ ನಿರೀಕ್ಷೆ , ಅವಳೊಂದಿಗೆ ಕಳೆದ ನಾಲ್ಕಾರು ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ವರುಷಗಳ ಮರೆಯಲಾರದ ಸಾವಿರ ಸವಿ ನೆನಪುಗಳು ಅಷ್ಟೇ. .!!! ಒಂದು ದಿನ ನಿರೀಕ್ಷೆ ನಿಜವಾಗುತ್ತೆ ಎಂಬ ಹುಚ್ಚು ಬ್ರಮೆಯಿಂದ ದೂರದಲ್ಲೇ ನೋಡುತ್ತಾ ಆಯುಸ್ಸನ್ನು ಗಟ್ಟಿ ಹಿಡಿದುಕೊಂಡು ಕಾಲ ಕಳೆಯುತ್ತಾನೆ.ಬೆಟ್ಟದಷ್ಟು ತಾಳ್ಮೆ, ಸಹನೆ ಆತನಿಗೆ.
ಹೀಗೂ ಪ್ರೀತಿ ಮಾಡಬಹುದೇ ? ಎಂಬ ಅಚ್ಚರಿಯನ್ನು ಮೂಡಿಸಿದ ಪಾತ್ರ ಚಲಪತಿ.


(ರವಿ ಬೆಳೆಗೆರೆಯವರ "ಮಾಂಡೋವಿ" ಕಾದಂಬರಿಯಿಂದ ಪ್ರೇರಿತವಾಗಿ ಮೂಡಿದ ಸಾಲುಗಳು.ಚಲಪತಿ ಪಾತ್ರ ನನಗಿಷ್ಟ)
( ಚಿತ್ರ ಕೃಪೆ: ಅಂತರ್ಜಾಲ )

17 ಕಾಮೆಂಟ್‌ಗಳು:

Subrahmanya ಹೇಳಿದರು...

:). Very good. ಇಂತಹ ಬರಹಗಳಿಗಾಗಿ ನಾನೂ ಕಾಯುತ್ತೀರುತ್ತೇನೆ !.

ತೇಜಸ್ವಿನಿ ಹೆಗಡೆ ಹೇಳಿದರು...

ನೈಸ್ ಪೋಸ್ಟ್ ದಿವ್ಯಾ.. :) ಆದರೆ ಕೊನೆಯಲ್ಲಿ ಕೇಳಿದ ಪ್ರಶ್ನೆಗೆ ನನ್ನ ಸ್ಪಷ್ಟ ಉತ್ತರ - "ಅಂಥ ಪ್ರೀತಿ ಖಂಡಿತ ಒಂದು ಭ್ರಮೆಯೇ! ಯಾರೂ ಯಾರನ್ನೂ ಏನನ್ನೂ ನಿರೀಕ್ಷಿಸದೇ ಆಜೀವನ ಪರ್ಯಂತ ಕಾಯುತ್ತಲೇ ಇರುವ ಕನಸು ಸುಂದರ.. ಆದರೆ ವಾಸ್ತವ ಹೀಗಿರದು." ಇಂತಹ ಭ್ರಮೆಯನ್ನು ಸೃಷ್ಟಿಸಿ ಓದುಗರನ್ನು ಸೆಳೆದು ರಂಜಿಸುವುದರಲ್ಲಿ ರವಿ ಬೆಳಗೆರೆ ತುಂಬಾ ಎಕ್ಸ್‌ಪರ್ಟ್ :)

ಮನಸು ಹೇಳಿದರು...

very nice divya ....

ಮನದಾಳದಿಂದ............ ಹೇಳಿದರು...

ಭ್ರಮಾ ಲೋಕದಲ್ಲೇ ವಿಹರಿಸಿ, ನಿರೀಕ್ಷೆಯ ಜೀವಂತಿಕೆಯಲ್ಲಿ ಕನಸು ಕಾಣುವುದರಲ್ಲೇ ಸುಖ ಪಡುವ ಸುಂದರ ಕ್ಷಣಗಳ ಈ ಕತೆ ತುಂಬಾ ಇಷ್ಟವಾಯಿತು, ಇನ್ನು ರವಿ ಬೆಳೆಗೆರೆಯವರ ಕತೆಯಿಂದ ಪ್ರೇರಣೆ ಅಂದರೆ ಕೇಳಬೇಕೆ?

jithendra hindumane ಹೇಳಿದರು...

Yes, m also waiting DivyA.....................

sunaath ಹೇಳಿದರು...

ಎಕ್ಸಪ್ರೆಸ್ ರೈಲಿನ ತರಹಾ ಭಾವನೆಗಳು ದುಮ್ಮಿಕ್ಕಿವೆ. ಒಳ್ಳೆಯ ಬರವಣಿಗೆ.

ಸುಧೇಶ್ ಶೆಟ್ಟಿ ಹೇಳಿದರು...

ಕಾದ೦ಬರಿ ಓದಿಲ್ಲ... ನೀವು ಬರೆದಿರುವುದು ಮಾತ್ರ ತುಂಬಾ ಇಷ್ಟವಾಯಿತು..... :)

ಮನಸಿನಮನೆಯವನು ಹೇಳಿದರು...

ಸೊಗಸಾದ ಬರಹ..

Akshay ಹೇಳಿದರು...

Nice one, keep them coming..

V.R.BHAT ಹೇಳಿದರು...

very nice !ತುಂಬಾ ಚೆನ್ನಾಗಿ ಬರೆದಿದ್ದೀರಿ, ಧನ್ಯವಾದಗಳು

ದಿನಕರ ಮೊಗೇರ ಹೇಳಿದರು...

ದಿವ್ಯ...
ಮಾಂಡೋವಿಯ ಚಲಪತಿ ಮತ್ತೆ ನೆನಪಾದ.... ನನ್ನ ಇಷ್ಟದ ಕಾದಂಬರಿ ಅದು.... ನಿಮ್ಮ ಕಲ್ಪನೆಯ ಮಾತು ತುಂಬಾ ಚೆನ್ನಾಗಿದೆ.... ಜೀವನೋತ್ಸಾಹ ಹೀಗೆ ಇರಲಿ ಎಲ್ಲರಲ್ಲೂ................, ಅಪೇಕ್ಷೆ ಪಡದೆ ಪ್ರೀತಿಸೋದನ್ನ ಎಲ್ಲರೂ ಕಲಿಯಲಿ....

ಮನಸಿನ ಮಾತುಗಳು ಹೇಳಿದರು...

Subrahmanya sir,ಹೌದೆ? ತಿಳಿಸಿದಕ್ಕೆ ಥ್ಯಾಂಕ್ಸ್.. :-)

ತೇಜಕ್ಕ, ಹ್ಞೂ... :-)

ಮನಸು mam ,ಪ್ರವೀಣ್ ಧನ್ಯವಾದಗಳು.. :-)

Jitendranna, waiting for what and whom? ನಿಮ್ ಕಾಮೆಂಟ್ ನನಗೆ ಅರ್ಥ ಆಗ್ಲಿಲ್ಲ :( thanks.. :)

ಸುನಾಥ್ ಸರ್, ಥ್ಯಾಂಕ್ಸ್.. :-)

ಸುಧೇಶ್, ಕಾದಂಬರಿ ಓದಿ ಬಿಡಿ.. :-)

ಕತ್ತಲ ಮನೆ, ಧನ್ಯವಾದಗಳು.. :-)

Akshay, thank you so much for visiting my blog and dropping by your comment. thanks kano...:)

ವಿ.ಆರ್. ಭಟ್ ಸರ್,ಧನ್ಯವಾದಗಳು.. :-)

ದಿನಕರ್ ಸರ್, ಅದು ನಿಮ್ಮಿಷ್ಟದ ಕಾದಂಬರಿ ಅಂತ ನನಗೆ ಗೊತ್ತು. ನಿಮ್ಮ about me columnನಲ್ಲಿ ಬರೆದಿದ್ದನ್ನ ಓದಿದೀನಿ. ಥ್ಯಾಂಕ್ಸ್.. :-)

Unknown ಹೇಳಿದರು...

mate nenapayitu a kadambari!!!

chalapati mane, tanti sandesha, gulmohar gidagaliruva raste, a hale benchu abba adbuta!!!

good article :)

shivu.k ಹೇಳಿದರು...

ಮಾಂಡೋವಿ ನಾನು ಓದಿದ್ದೇನೆ. ಬರಹ ಬಲು ಸೊಗಸು.

ಸೀತಾರಾಮ. ಕೆ. / SITARAM.K ಹೇಳಿದರು...

ಚೆಂದದ ಬರಹ. ಮಾಂಡೋವಿ ನಾನು ಓದಿಲ್ಲ. ತಮ್ಮ ಬರಹ ಭಾವೊತ್ಕಟತೆಯಿಂದ ಕೂಡಿದೆ.

ಮನಸಿನ ಮಾತುಗಳು ಹೇಳಿದರು...

Vijay, Shivu sir,Sitaram sir...thanku... :-)

*ಚುಕ್ಕಿ* ಹೇಳಿದರು...

ರೆ ಗಳ ಮಧ್ಯೆಯೇ ಬದುಕು,
ಚಿಗುರುವುದು ಕನಸು,
ಹಾರುವುದು ಕಲ್ಪನೆಯ ಆಗಸಕೆ,
ಗುರಿ ತಿಳಿಯದು ಸ್ಪಸ್ಟ..........!

ರವಿ ಬೆಳಗೆರೆಯವರ ಪಾತ್ರಗಳು ವಾಸ್ತವತೆಯನ್ತೆಯೇ ಅತಿಯಾದ ಕಲ್ಪನೆಯನ್ನೂ ಒಳಗೊಂಡಿವೆ. ಬಿಟ್ಟು ಹೋದವಳಿಗೊಂದು ಥ್ಯಾಂಕ್ಸ್ ಹೇಳಿದರೆ ಬದುಕು ಸುಂದರವೇ . ಅವಳ ನೆನಪಾಗಲಿರಲೆಂದೇ ಮತ್ತೊಂದು ಪ್ರೀತಿಯ ಆಸರೆ ಬಯಸಿ, ಹೊಸ ಬದುಕಿನ ಯಾನದಲ್ಲಿ ತೇಲಬೇಕು. ಕಾಣದ ಕಡಲಿನ ಹಂಬಲವೇಕೆ , ಇರುವ ನದಿಯಲ್ಲೇ ಈಜಬೇಕು. ಇದ್ದು ಜಯಿಸಬೇಕು.

ಆಗ ಒಮ್ಮೊಮ್ಮೆ ನೆನಪಾಗುತ್ತದೆ, ಈ ಹಾಡು
" ದೀಪವೂ ನಿನ್ನದೇ..........................."

ಹೃದಯಸ್ಪರ್ಶಿ ಭಾವ ಬಿಂದು. ಶುಭಾಶಯಗಳು .