ಶುಕ್ರವಾರ, ಜುಲೈ 30, 2010

ಒಂದಷ್ಟು ಸಾಲುಗಳು ...


 1. ದಿನವೂ ಕೊಡೆ ತರುತಿದ್ದ ಅವನು, ದಿನ ಕೊಡೆ ತರಲಿಲ್ಲ. ಮಳೆ ಯದ್ವಾ ತದ್ವಾ ಬಂತು!!!
 2. ಎಲ್ಲದಕ್ಕೂ ಅಪ್ಪನ ಅವಲಂಬಿಸುತಿದ್ದ ಹುಡುಗಿಗೆ , ನೌಕರಿಯ ಮೊದಲ ಸಂಬಳ ಬಂದಾಗ, "I earned my bread " ಎಂಬ ಸಂತಸ .
 3. ಬಯಸಿ ಬಯಸಿ ಬಂದವಳನ್ನು ತಿರಸ್ಕರಿಸಿದ ಆತ, ಬೇರೆಯವಳು ಬಂದಾಗ ಇವಳಿಗಿಂತ ಅವಳೇ ವಾಸಿಯಾಗಿದ್ದಳು ಅನ್ನಿಸಿ ಮರುಕಪಟ್ಟ. ಅವನಿಂದ ತಿರಸ್ಕರಿಸಿಕೊಂಡ ಹುಡುಗಿ, ಅವನಿಗಿಂತ ಇವನೇ ವಾಸಿ ಎಂದು ಹಿರಿ ಹಿರಿ ಹಿಗ್ಗಿದಳು.
 4. ಸದಾ ಮಾತಾಡುತಿದ್ದ ಹೆಂಡತಿ . ಗಂಡ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಗೊತ್ತಾದ ಮರು ಕ್ಷಣವೇ , ಶಾಶ್ವತವಾಗಿ ಮೌನಿಯಾಗಿದ್ದಳು!!
 5. ದೇವಸ್ಥಾನಕ್ಕೆ ಹೋದಾಗ ದೇವರ ಮುಡಿಯಿಂದ ಹೂವು ಬೀಳಲಿ ಎಂದು ಆತ ಹಲವಾರು ಬಾರಿ ಬೇಡಿಕೊಂಡಿದ್ದ. ಹೂವು ಬೀಳಲಿಲ್ಲ. ಈಗ ಅಲ್ಲಿ ದಿನವೂ ಹೂವು ಬೀಳುತ್ತದೆ. ಹೆಕ್ಕಿಕೊಳ್ಳುವವರು ಇಲ್ಲ!!
 6. ಇನ್ನೇನು ಕೆಲಸ ಸಿಕ್ಕೇ ಬಿಟ್ಟಿತು ಅಂತ ಖುಷಿ ಪಡುತ್ತಿದ್ದಾಗಲೇ, ಬಡ ಹುಡುಗನಿಗೆ ತಿಳಿಯಿತು , ಅದು ಸುಳ್ಳು ಎಂದು. ಕಾರಣ ಆಗಲೇ ಮತ್ತೊಬ್ಬರು ದುಡ್ಡು ಕೊಟ್ಟು ಇವನ ಕೆಲಸ ಕೊಂಡುಕೊಂಡಿದ್ದರು.
 7. ಭಿಕ್ಷೆ ಬೇಡುತಿದ್ದ ತಾತನಿಗೆ , ಹತ್ತು ರೂಪಾಯಿ ತನಗೆ ಹಾಕುತಿದ್ದವನನ್ನು ಕಂಡು ಸಂತಸ. ಒಂಭತ್ತು ರೂಪಾಯಿ ವಾಪಾಸ್ ಕೊಡು ಅಂದಾಗ ವಿಷಾದದ ನಗು.
 8. ತೋಟಕ್ಕಾಗಿ ಸಾಲ ಮಾಡಿದ್ದನ್ನು ತೀರಿಸಲೆಂದೇ ಮನೆಯಿಂದ ಹೊರ ಹೊರಟವನಿಗೆ , ಮತ್ತೆ ಮನೆಯ ಆಸ್ತಿ ಕೇಳುವ ಹಕ್ಕನ್ನು ಕಳೆದುಕೊಂಡಿದ್ದ. ಕಾರಣ ಅಣ್ಣ ತೋಟ ನೋಡಿಕೊಂಡಿದ್ದ.
 9. ಮುದ್ದು ಮುಖದ ಕಂದಮ್ಮನನ್ನು ಕಂಡು ಎತ್ತಿಕೊಳ್ಳುವ ಮನಸ್ಸಾಗಿ, ಹೆಸರು ಕೇಳಿದಾಗ , ಯಾರೋ ಹತ್ತಿರದವರ ನೆನಪಾಗಿ ಕಣ್ಣಲ್ಲಿ ನೀರಾಡಿದವು.
 10. ಜೀವನ ಪೂರ್ತಿ ಇನ್ನೊಬ್ಬರಿಗೆ i miss you ಹೇಳಿಕೊಂಡಿದ್ದವಳಿಗೆ , ಇನ್ಯಾರೋ i missed you ಅಂದಾಗ ಹೇಳಿಕೊಳ್ಳಲಾಗದ ಆನಂದದ ಉನ್ಮಾದ .
 11. ಒಂದು ಕಾಲದಲ್ಲಿ ತನ್ನ ಪ್ರೀತಿಗಾಗಿ ಕಾಡಿದ್ದವನ ಮಗನೇ, ಮತ್ತೆ ತನ್ನ ಮಗಳ ಪ್ರೀತಿಗಾಗಿ ಕಾಡುತಿದ್ದಾನೆ ಎಂದು ತಿಳಿದ ತಾಯಿಗೆ ಒಳಗೊಳಗೇ ತಳಮಳ!!
 12. ಜ್ವರ ಬಂದದ್ದನ್ನೂ ಲೆಕ್ಕಿಸದೇ, ಊರೆಲ್ಲ ತಿರುಗಾಡಿ ಅವನಿಗಾಗಿ ತಂದ ಹುಟ್ಟು ಹಬ್ಬದ ಉಡುಗೊರೆ , ಅವನಿಗಿಷ್ಟವಾಗಿಲ್ಲ ಎಂದು ತಿಳಿಯುವ ಹೊತ್ತಿಗಾಗಲೇ ಮತ್ತೆ ಜ್ವರದ ನಿದ್ದೆ!!
 13. ಗಂಡ ಕುಡಿಯುತ್ತಾನೆ ಎಂದು ಯಾವಾಗಲೂ ಅಪವಾದ ಮಾಡುತಿದ್ದ ಹೆಂಡತಿಗೆ, ಆತ ಕುಡಿಯಲು ತಾನೇ ಕಾರಣ ಎಂದು ಅವನ ಕೊನೆ ಉಸಿರಿರುವರೆಗೂ ತಿಳಿಯಲೇ ಇಲ್ಲ.


( ಚಿತ್ರ ಕೃಪೆ: ಅಂತರ್ಜಾಲ )

24 ಕಾಮೆಂಟ್‌ಗಳು:

ಸುಮ ಹೇಳಿದರು...

ಜೀವನದ ಕಟುಸತ್ಯವನ್ನು ಬಿಂಬಿಸುವ ಸಾಲುಗಳು ಚೆನ್ನಾಗಿವೆ ದಿವ್ಯ.

ಸೀತಾರಾಮ. ಕೆ. / SITARAM.K ಹೇಳಿದರು...

ನಿತ್ಯ ಬದುಕಿನ ಜಂಜಾಟದ ಹಲವು ವಾಸ್ತವ ಸತ್ಯವನ್ನ ಸೊಗಸ್ಸಾಗಿ ಎರಡು ಸಾಲಿನಲ್ಲಿ ಸಮರ್ಪಕವಾಗಿ ಹೇಳಿದ್ದಿರಾ....
ತುಂಬಾ ಸೊಗಸಾಗಿವೆ....

shridhar ಹೇಳಿದರು...

ದಿವ್ಯಾ,
ಅರ್ಥಭರಿತವಾದ ಸಾಲುಗಳು ..ಚೆನ್ನಾಗಿವೆ.

Sunil ಹೇಳಿದರು...

Thanks for ur lines

Subrahmanya ಹೇಳಿದರು...

Good. :-)

ಪ್ರವೀಣ್ ಭಟ್ ಹೇಳಿದರು...

ಒಳ್ಳೆಯ ಸಾಲುಗಳು... ಬಹಳ ಅರ್ಥವತ್ತಾಗಿದೆ

ಪ್ರವೀಣ ಹೇಳಿದರು...

"ಇವಳಿಗಿಂತ ಅವಳೇ ವಾಸಿಯಾಗಿದ್ದಳು ಅನ್ನಿಸಿ ಮರುಕಪಟ್ಟ".

’ಮರುಕ’ ಅನ್ನುವ ಪದ ಆ ಸಂದರ್ಭಕ್ಕೆ ಸರಿಹೊಂದುವುದಿಲ್ಲ.

ಉಳಿದವೆಲ್ಲಾ ಚೆನ್ನಾಗಿವೆ.

ಮನಸಿನ ಮಾತುಗಳು ಹೇಳಿದರು...

ಪ್ರವೀಣ,
ನನ್ನ ಲೇಖನದ ಬಗ್ಗೆ ನಿಮ್ಮ ಕಾಳಜಿ ಪ್ರಶಂಸನೀಯ.ಮರುಕ ಪದದ ಬದಲಿಗೆ ಯಾವ ಪದ ಸರಿ ಇರುತಿತ್ತು ತಿಳಿಸುವಿರಾ.?.. ತಿದ್ದಿಕೊಳ್ಳುತ್ತೇನೆ.. :-)

ಅನಾಮಧೇಯ ಹೇಳಿದರು...

Seems like you are antagonizing male community!!! Dont be so mean to us.

-Chinmay

ದಿನಕರ ಮೊಗೇರ ಹೇಳಿದರು...

ದಿವ್ಯಾ...
ಒಳ್ಳೆಯ ಮಾತುಗಳು..... ಸತ್ಯಕ್ಕೆ ಹತ್ತಿರವಾದ ಮಾತುಗಳು..... ಅನಾಮಧೇಯ ರಿಗೆ ಸತ್ಯದ ಬಗ್ಗೆ ಅಲರ್ಜೀ ಅನಿಸತ್ತೆ... ನಮಗೆ ಅನಿಸಿದ್ದನ್ನ ಇಷ್ಟವಾದದನ್ನ ಬರೆಯೋದಕ್ಕೆ ಬ್ಲಾಗ್ ಬರೆಯೋದು.....ನೀವು ಮುಂದುವರಿಸಿ....

ಕನ್ನಡಬ್ಲಾಗ್ ಲಿಸ್ಟ್ ಹೇಳಿದರು...

good keep it up.

ಸವಿಗನಸು ಹೇಳಿದರು...

soopero sooper divs....
keep writing....

ಮನದಾಳದಿಂದ............ ಹೇಳಿದರು...

ಜೀವನದ ನಿತ್ಯ ಪಡಿಪಾಟಲಿನ ಚಿತ್ರಗಳ ಸಂಕ್ಷಿಪ್ತ ವಿವರಣೆ!
ಚೆನ್ನಾಗಿದೆ.

sunaath ಹೇಳಿದರು...

Wonderful lines. ಇನ್ನಷ್ಟನ್ನು ಕೊಡುವಿರಾ?

balasubramanya ಹೇಳಿದರು...

ಜೀವನದಲ್ಲಿ ಯೋಚಿಸದೆ ಮಾಡಿಕೊಂಡ ಎಡವಟ್ಟು ಗಳ ದರ್ಶನ ಮಾಡಿಸುವ ಒಂದು ಪ್ರಯತ್ನ !! ಬದುಕಿನ ಅರ್ಥ ತಿಳಿಯದೆ ಗೊಂದಲಮಯ ನಿರ್ಧಾರ ತೆಗೆದುಕೊಂಡಾಗ ಆಗುವ ಅನರ್ಥದ ದರ್ಶನ ನಿಮ್ಮ ಪದಗಳ ಪ್ರತಿ ಸಾಲಿನಲ್ಲಿ ಕಾಣುತ್ತದೆ. ಉತ್ತಮ ಬರಹ .

ಚೆಂದುಳ್ಳಿ ಹೇಳಿದರು...

ದಿವ್ಯ,
ಬರವಣಿಗೆ ತುಂಬಾ ಚೆನ್ನಾಗಿದೆ... ನನಗೊಂದು ಸಾಲು ನೆನಪಾಯ್ತು .. ಇರಲಿ ಅಂಥ ಸೇರಿಸುತ್ತಿದ್ದೇನೆ .. :)

೭ ವರ್ಷಗಳ ಕಾಲ ಮದುವೆ ಆಗುವ ಅಂತ ಪ್ರೀತಿಯ ನಾಟಕ ಆಡಿ, ಕೊನೆಗೆ ನೀನು ಕುರೂಪಿ ಎಂದು ಹೇಳಿ ಬೇರೆಯವನನ್ನು ಮದುವೆ ಆದ ಹುಡುಗಿಗೆ
" ತಾಯಿ ಆಗುವ ಸಾಮರ್ಥ್ಯ ಇಲ್ಲ " ಎಂದು ತಿಳಿದಾಗ , ಹುಡುಗ ಮನೆಯವರ ವತ್ತಾಯಕ್ಕೆ ಮದುವೆಯಾದರೂ ತಂದೆಯಾಗಿದ್ದ.. (ನಿಜ ಘಟನೆ )

ಮನಮುಕ್ತಾ ಹೇಳಿದರು...

ಒಳ್ಳೆಯ ಅರ್ಥ ಪೂರ್ಣ ಸಾಲುಗಳು...

ಮನಸು ಹೇಳಿದರು...

divya ........

excellent chinna.... keep writing

ಮನಸಿನ ಮಾತುಗಳು ಹೇಳಿದರು...

ಸುಮಕ್ಕ, ಸೀತಾರಾಂ ಸರ್,ಶ್ರೀಧರ್ ಸರ್, ಸುನಿಲ್, ಸುಬ್ರಹ್ಮಣ್ಯ , ಪ್ರವೀಣ್ ಭಟ್, ಎಲ್ಲರಿಗು ಧನ್ಯವಾದಗಳು... :-)

@ Chinmay, I think you need to go back to SCHOOL, learn kannada and then start reading blogs so that you can better understand and not mis understand people's writings. Thanks for commenting.


ದಿನಕರ್ ಸರ್ ಅಷ್ಟೇ ಬಿಡಿ.. ಅದೇನೋ ಗಾದೆ ಇದೆಯಲ್ಲ... ಹೋಗೋ ಆನೆ ಹೋಗ್ತಾ ಇರತ್ತಂತೆ.. (ಮುಂದೆ ಹೇಳಲ್ಲ) ;-)
ಕನ್ನಡ ಬ್ಲಾಗ್ ಲಿಸ್ಟ್ thanks ,
ಸವಿಗನಸು,ಮನದಾಳದಿಂದ, ಸುನಾಥ್ ಸರ್, ನಿಮ್ಮೊಳಗೊಬ್ಬ, ಪ್ರಕಾಶ್,ಮನಮುಕ್ತ, ಮನಸು.... ಎಲ್ಲ್ಲರಿಗೂ ಧನ್ಯಾವದಗಳು... :-)

ಸುಧೇಶ್ ಶೆಟ್ಟಿ ಹೇಳಿದರು...

ಒ೦ಬತ್ತನೆಯದು ತುಂಬಾ ಹಿಡಿಸಿತು :)

Mila ಹೇಳಿದರು...

super!!

Dileep Hegde ಹೇಳಿದರು...

good one

ಮನಸಿನ ಮಾತುಗಳು ಹೇಳಿದರು...

Sushesh,Mila, Dileep...thanku... :-)

Soumya. Bhagwat ಹೇಳಿದರು...

fentastic lines divya........