ಶುಕ್ರವಾರ, ಜುಲೈ 16, 2010

ನೀಲಿ ಕಣ್ಣುಗಳ ಹುಡುಗ..
ಆ ದಿನ ನಮ್ಮೂರಲ್ಲಿ ಚೆನ್ನಾಗಿ ಮಳೆ ಬಂದಿತ್ತು. ರಸ್ತೆಯಲ್ಲ ಒದ್ದೆ , ಒದ್ದೆ. ಸಂಬಂಧಿಕರ ಮದುವೆ ಇತ್ತೆಂದು ಮನೆಯವರೆಲ್ಲ ನಾಲ್ಕು ದಿನದ ಮಟ್ಟಿಗೆ ಊರಿಗೆ ಹೋಗಿದ್ದರು. ಮನೆಯಲ್ಲಿ ನಾನೊಬ್ಬಳೇ. ಸಂಜೆಯಾಗುತ್ತಿದ್ದಂತೆ ನನಗೂ ಒಬ್ಬಳೇ ಇದ್ದು ಬೋರ್ ಆಗುತಿತ್ತು. ಏನಾದರೂ ಬರೆಯೋಣ ಎನಿಸಿ ಒಂದು ಕಾಗದ, ಪೆನ್ನು ತೆಗೆದುಕೊಂಡು ತಾರಸಿ ಹತ್ತಿದೆ .ಒಬ್ಬಳೇ ಇದ್ದಾಗೆಲ್ಲ ತಾರಸಿ ಮೇಲೆ ಕುಳಿತುಕೊಳ್ಳೋದು ನನ್ನ ಅಭ್ಯಾಸ. ಮಳೆ ನಿಂತಿತ್ತು. ತಾರಸಿಯ ಮೆಟ್ಟಿಲು ಒದ್ದೆಯಾಗಿ ಜಾರುವಂತಿತ್ತು. ಆಕಾಶದಲ್ಲಿರುವ ಕಾರ್ಮೋಡವೆಲ್ಲ ಮಳೆ ಹನಿಯಾಗಿ ಕರಗಿ,ಆಗಸ ನಿರ್ಲಿಪ್ತತೆಯಿಂದ ಹೊಳೆಯುತ್ತಿತ್ತು.ಸೂರ್ಯ ನಿಧಾನಕ್ಕೆ ಮೋಡದಿಂದಾಚೆ ಬರಲು ಹವಣಿಸುತಿದ್ದ. ತೆಂಗಿನ ಮರದ ಗರಿಗಳನ್ನು ಒಮ್ಮೆ ಅಲ್ಲಾಡಿಸಿದೆ.ಮುಖದ ಮೇಲೆಲ್ಲಾ ಒಮ್ಮೆ ಮಳೆ ಹನಿ ಚಿಮ್ಮಿಸಿಕೊಂಡೆ. ಆಹಾ! ಎಂಥ ಸುಖ.

ಕಾಗದ ಹಿಡಿದುಕೊಂಡು ಕುಳಿತವಳ ಮನಸಲ್ಲಿ ಏನೂ ಬರೆಯಲು ತೋಚುತ್ತಿಲ್ಲ. ತಣ್ಣನೆ ಬೀಸುತಿದ್ದ ಗಾಳಿಗೆ ,ಛಳಿ ಆಗುತ್ತಿರುವುದಷ್ಟೇ ಭಾಸವಾಗುತ್ತಿತ್ತು ನನಗೆ. ಏನಪ್ಪಾ ಮಾಡೋದು, ಇನ್ನು ನಾಲ್ಕು ದಿನ ಹೇಗಪ್ಪ ಕಳೆಯೋದು? ಮಾತಾಡದೆ ಹೇಗಿರೋದು? ಫೋನಲ್ಲಿ ಎಷ್ಟು ಮಾತಾಡಕೆ ಸಾದ್ಯ?ಸುಮ್ನೆ ಹಾಡು ಕೇಳುತ್ತ ಕುಳಿತೆ.ತುಂತುರು ಅಲ್ಲಿ ನೀರ ಹಾಡು ... ಗುನುಗುತಿತ್ತು ನನ್ನ ಕಿವಿಯಲ್ಲಿ.ಸಂದರ್ಭಕ್ಕೆ ತಕ್ಕ ಹಾಡು. ಸ್ವಲ್ಪ ಹೊತ್ತಲ್ಲೇ ಹಾಡು ಸಾಕೆನಿಸಿತು. ಕತ್ತಲಾಗುತ್ತಾ ಬಂದಿತ್ತು. ಯಾರೋ ಸಣ್ಣಗೆ ಕಿರುಚಿದ್ದು ಕೇಳಿತು. ಆ ಧ್ವನಿ ಇನ್ನು ಇನ್ನೂ , ಸ್ಪಷ್ಟವಾಗುತ್ತ , ಹೆಚ್ಚಾಗುತ್ತಾ ಹೋಯಿತು.ಇದ್ದಕ್ಕಿದ್ದಂತೆ ಹಸು ತರಹ ಯಾರೋ ಜೋರಾಗಿ ಕಿರುಚಿದ್ದು ಕೇಳಿಸಿತು. ಏನಿರಬಹುದು ಎಂದು ತರಾಸಿ ಇಂದ ಇಣುಕಿ ನೋಡಿದರೆ, ನಮ್ಮನೆ ತೋಟದಲ್ಲಿದ್ದ ಹುಲ್ಲಿನ ರಾಶಿ ಮೇಲೆ ಯಾರೋ ಬಿದ್ದು ಒದ್ದಾಡುತ್ತಿದ್ದುದು ತಿಳಿ ಬೆಳಕಿನಲ್ಲಿ ಅಸ್ಪಷ್ಟವಾಗಿ ಕಾಣಿಸಿತು.ಕೈಯಲ್ಲಿದ್ದ ಪೆನ್ನು ಕಾಗದ ಅಲ್ಲೇ ಬಿಸಾಕಿ ದರ-ದರನೆ ತಾರಸಿಯ ಮೆಟ್ಟಿಲುಗಳನ್ನು, ಜಾರುತ್ತವೆ ಎಂದೂ ಲೆಕ್ಕಿಸದೇ, ಒಂದೇ ಉಸುರಿಗೆ ಇಳಿದೆ. ಜೊತೆಜೊತೆಯಲ್ಲೇ , ಏನಪ್ಪಾ ಮನೇಲಿ ಯಾರು ಇಲ್ಲ. ಏನಿದು ಅಂತ ಅಂಜಿಕೆಯೂ ಶುರುವಾಗಿದ್ದು ಸುಳ್ಳಲ್ಲ.

ಹುಲ್ಲಿನ ರಾಶಿಯ ಮೇಲೆ ತಲೆ ಕೆಳಗಾಗಿ,ಬೆನ್ನು ಮೇಲಾಗಿ ಒಂದು ಮೂರು ವರೆ ಅಡಿ ಗಾತ್ರದ ಒಂದು ಪ್ರಾಣಿ ಇತ್ತು. ಮನುಷ್ಯನ ಹಾಗೆ ಕಾಣಿಸಿತು. ನೋಡ ನೋಡುತ್ತಿದ್ದಂತೆ ಯಾವುದೋ ಒಂದು ಗುಂಪು ನನ್ನ ಮನೆ ಕಡೆಗೆ ಓಡಿ ಬರುವುದು ಕಾಣಿಸಿತು. ಆಗಲೇ ತಿಳಿದಿದ್ದು ಅವರು ಈ ಪ್ರಾಣಿಯನ್ನು ಬೆರೆಸಿಕೊಂಡು ಬಂದಿದ್ದರು ಎಂದು. ಹಾಗೇ ಸುತ್ತ ಮುತ್ತಲು ನೋಡಿ ಅವರು ಹೊರಟು ಹೋದರು. ನಾನು ಆತನನ್ನು ಎಬ್ಬಿಸಲು ಮುಂದಾದೆ. ಅವನ ತಲೆ ಹಿಡಿದು ಎತ್ತಬೇಕು ಎಂದುಕೊಂಡಾಗ ಕೈಗೆ ಏನೋ ತಗುಲಿದಂತಾಯಿತು. ನೋಡಿದರೆ ಏನ್ ಆಶ್ಚರ್ಯ! ಹಸು-ಕರುಗಳಿಗಿರುವಂಥ ಕಿವಿಗಳು.

ಅಬ್ಬ!! ಭಯ ಆಗ್ತಾ ಇದೆ. ಸ್ವಲ್ಪವೇ ಪ್ರಜ್ಞೆ ಇದ್ದ ಅವನನ್ನು ಮನೆ ಒಳಗೆ ಕರೆಕೊಂಡು ಹೋಗಿ ಸೋಫಾದ ಮೇಲೆ ಮಲಗಿಸಿದೆ. ಹೆಚ್ಚೆಂದರೆ ಹದಿನೈದು ವರುಷ ಇರಬಹುದು ಆತನಿಗೆ. ಅವನ ಬಟ್ಟೆಗಳು ತೀರಾ ವಿಚಿತ್ರ ಎನಿಸುವಂತೆ ಇದ್ದವು. ಯಾವುದೋ ಬೇರೆ ಗ್ರಹದ ಪ್ರಾಣಿಯಂತೆ ಕಂಡಿತು ನನಗೆ. ನಾನು ಆ ದಿನ ರಾತ್ರಿ ಮಲಗಲಿಲ್ಲ. ಅವನಿಗೆ ಪ್ರಜ್ನೇನು ಹೊರಟು ಹೋಗಿತ್ತು. ಏನೂ ಮಾಡಲು ತಿಳಿಲಿಲ್ಲ. ಅಂತೂ ಬೆಳಗ್ಗೆ ಅಗುವಷ್ಟ್ತೊತ್ತಿಗೆ ಎಚ್ಚೆತ್ತುಕೊಂಡ. ನನಗೂ ಸಮಾಧಾನವಾಯಿತು. ಆತ ಏಳುತ್ತಿದ್ದಂತೆ ಸುತ್ತಲೂ ಆಶ್ಚರ್ಯದಿಂದ ತನ್ನ ನೀಲಿ ಕಣ್ಣುಗಳನ್ನು ಬಿಟ್ಟುಕೊಂಡು ನೋಡುತಿದ್ದ. ಅವನಿಗೆ ಕನ್ನಡ ಬರುತ್ತದೆಯೋ ಎಂಬ ಕಲ್ಪನೆನೂ ಇಲ್ಲದೆ ಅವನ ಬಳಿ ಮಾತಾಡಿಸಿದೆ.ಅವನ ಬಳಿ ಕುಳಿತಿದ್ದೆ. ಅವನು ನನ್ನ ಹೆಗಲಿಗೆ ತಲೆ ಇಡಲು ಮುಂದಾದ. ನಾನು ಒಂದೇ ಸರೀ ಗುಪ್ ಅಂತ ಎದ್ದು ನಿಂತೆ. what the hell are you doing ? ಅಂತ, ಸಿಟ್ಟಿಂದ ಹೇಳಿದೆ. ಪಾಪ!! ಆ ಪ್ರಾಣಿಯ ಮುಖ ಬಾಡಿತ್ತು. ಅವಾಗಲೇ ನಂಗೆ ತಿಳಿಯಿತು , ಇಂಗ್ಲಿಷ್ ಅರ್ಥ ಆಗುತ್ತೆ ಅಂತ. I was trying to say thanks ಅಂತು ಅದು . Ok but I dont like such closeness . Please dont mind ಅಂದೆ. "I am sorry "ಅಂದ. ತಣ್ಣಗಾದೆ.

ಕಾಫಿ ತಂದು ಕೊಟ್ಟೆ. ಅದನ್ನು ಕುಡಿಯೋದು ಬಿಟ್ಟು , ನಾಲಿಗೆ ಇಂದ ನೆಕ್ಕ ತೊಡಗಿದ. ನಾನೇ ಮಾತಾಡಿಸಿದೆ. ಯಾರು ನೀನು, ಯಾಕೆ ಹೀಗೆ ಬಂದಿದೀಯ ?ನಿಮ್ ಮನೆ ಎಲ್ಲಿದೆ ಹೇಳು. ನಿನ್ನನ್ನು ನಿಮ್ಮ ಮನೆಗೆ ಬಿಟ್ಟು ಬರುತ್ತೇನೆ ಅಂತ. ಅವ ಕಾಫಿ ನೆಕ್ಕುತ್ತಲೇ ಹೇಳಿದ. ನನ್ನ ಮನೆ ಇದಲ್ಲ. "ತಾರಾ ಪ್ರಪಂಚ" ಅಂತ ನನ್ನ ಊರಿನ ಹೆಸರು. ನನ್ನ ಹೆಸರು ಪೋಲಾರಿಸ್. ನಾನು ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ. ನಮ್ಮ ಜಗತ್ತಲ್ಲಿ ಉತ್ತಿರ್ಣನಾಗದಿದ್ದರೆ ಅವರನ್ನು ಕೊಲ್ಲಲಾಗುತ್ತದೆ. ನನ್ನ ಅಮ್ಮನ ಹೇಳಿಕೆಯ ಮೇರೆಗೆ ನನ್ನ ಬಿಡುಗಡೆ ಮಾಡಿದ್ದಾರೆ. ನಾನು ಈಗ ಮತ್ತೆ ಅಲ್ಲಿ ಹೋದರೆ ನನ್ನ ಕೊಂದೇ ಬಿಡುತ್ತಾರೆ. ಅವನ ಮಾತುಗಳನ್ನು ಕೇಳಿ ನನಗೇನೋ ಪಾಪ ಅನ್ನಿಸಿತು. ಅವ ನನ್ನ ಪ್ರಶ್ನೆ ಕೇಳಲು ಶುರು ಮಾಡಿದ. ನೀನು ಯಾಕೆ ಒಬ್ಬಳೇ ಇದ್ದೀಯ? ಇದು ಯಾವ ಊರು ಹಾಗೆ ಹೀಗೆ ಅಂತೆಲ್ಲ. ನಾನು ಹೇಳಿದೆ, ಅಮ್ಮ ಅಪ್ಪ ಊರಿಗೆ ಹೋಗಿದಾರೆ. ಇದು ಭೂಮಿ . ಈ ಗ್ರಹಕ್ಕೆ ಭೂಮಿ ಅಂತ ಹೆಸರು ಅಂತ. ಅವನು ನಾನು ಮಾತಾಡುವುದನ್ನು ಕಣ್ಣು ಮಿಟುಕಿಸದೆ ನೋಡುತಿದ್ದ. ನೀನು ತುಂಬಾ ಚೆನ್ನಾಗಿ ಮಾತಾಡುತ್ತಿಯ ಅಂದ. ಥ್ಯಾಂಕ್ಸ್ ಅಂದಿದ್ದೆ. ನಾನು ನಿಮ್ಮ ಮನೆಯಲ್ಲೇ ಉಳಿದುಕೊಳ್ಳುತ್ತೇನೆ. ನನಗೆ ಈ ಭೂಮಿಯಲ್ಲಿ ನಿನ್ನ ಬಿಟ್ಟರೆ ಇನ್ಯಾರು ಗೊತ್ತಿಲ್ಲ. ದಯವಿಟ್ಟು ಇಲ್ಲ ಹೇಳಬೇಡ. ನಿಮ್ಮ ಮನೆ ನಂಗೆ ಬಹಳ ಹಿಡಿಸಿತು ಹೇಳಿದ. ಇದೆಂತ ಸಂಕಟ ಬಂತಪ್ಪ. ಒಳ್ಳೆ ಹಸು ತರಹವೇ ಇದ್ದಾನೆ ಅಂದರೂ ತಪ್ಪಿಲ್ಲ. ಕೈ-ಕಾಲುಗಳು ಮನುಷ್ಯರ ಹಾಗೆ ಇದ್ದರೂ, ಮುಖ ಮಾತ್ರ ಹಸುದೆ! ನನಗೂ ಹಸು ಅಂದರೆ ಇಷ್ಟವೇ.. ಯೋಚಿಸಿ , ಅಂತೂ ಸ್ವಲ್ಪ ಹೊತ್ತಿನ ನಂತರ ನನ್ನ ನಿರ್ಧಾರ ತಿಳಿಸಿದೆ. ಸರಿ, ಅಮ್ಮ , ಅಪ್ಪ ಬಂದ ಮೇಲೆ ಅವರಿಗೂ ಕೇಳಿ ನಿನಗೆ ವಿಷಯ ತಿಳಿಸುತ್ತೇನೆ ಮರಿ. ಅಲ್ಲಿವರೆಗೂ ನೀನು ನಮ್ಮ ಮನೆಯಲ್ಲೇ ಇರು ಅಂದೆ. ಅದಕ್ಕವನು , ಹಾಗಿದ್ದರೆ ನೀನು ಇನ್ನು ಮೇಲೆ ನನ್ನ "ತಮ್ಮಾ " ಅಂತ ಕರಿ ಅಂದ. ನನಗೆ ಖುಷಿ ಆಯ್ತು. ನಿನಗೆ maggi ಇಷ್ಟ ಆಗುತ್ತಾ ? ತಿನ್ನುತ್ತಿಯ? ಎಂದೆ..ಹ್ಞೂ ಅಂದ.

"ತಮ್ಮ " ಅಂತ ಕರಿ ಅಂದ್ನಲ್ಲ, ನನಗೂ ಸ್ವಂತ ಅಣ್ಣ,ತಮ್ಮ ಇಲ್ಲ. ಇವನು ಒಳ್ಳೇ ತಮ್ಮ ಸಿಕ್ಕ ಅಂತ ಸಂತೋಷದಿಂದ maggi ಮಾಡಿಕೊಂಡು ಅವನಿಗೆ ಕೊಡಲು ಬಂದರೆ , ತಮ್ಮ ಅಲ್ಲಿ ಇರಲಿಲ್ಲ!!!

22 ಕಾಮೆಂಟ್‌ಗಳು:

Unknown ಹೇಳಿದರು...

kate tumba intresting agide

good!!!

Sushrutha Dodderi ಹೇಳಿದರು...

ಕೊನಿಗೆ ಅಂವ ನಮ್ಮನಿಗೆ ಬಂದಿದಿದ್ದ.. ಅವಂಗೆ ನಾನು ಚಿತ್ರಾನ್ನ ತಿಂತೀಯಾ ಅಂತ ಕೇಳ್ದೆ. ಹೂಂ ಅಂದ. ಮಾಡ್ಕೊಂಡ್ ತಂದು ನೋಡ್ತೀನಿ, ಅಂವ ಇಲ್ಲ!!

ಮನಸು ಹೇಳಿದರು...

hahaha divya...tumba chennagide.... neeli kannu kathe...

ಸೀತಾರಾಮ. ಕೆ. / SITARAM.K ಹೇಳಿದರು...

ಯಾವದೋ ಎಲಿಯನ್ ಬಂದಿದ್ದು!!!
ಜಾದುನಾ?
ರೋಚಕವಾಗಿತ್ತು ಆದರೇ ಮುಂದುವರೆಯುತ್ತದೆಯಾ? ಕಲ್ಪನೆಯಾ? ಅವನ್ಯಾರು? ನೀನ್ಯಾರು? ಹೀಗೆ ಹತ್ತು ಹಲವು ಪ್ರಶ್ನೆಗಳು ಅಲೆಯಲ್ಲಿ ಉಳಿದವು.

Uday Hegde ಹೇಳಿದರು...

good one....did you get inspired by "Koi... Mil Gaya"

ಸಾಗರಿ.. ಹೇಳಿದರು...

koi mil gaya part 2,, nice.

ಪ್ರವೀಣ ಹೇಳಿದರು...

nice fantasy.

ಕೆಲವು ಸಂದೇಹಗಳಿವೆ. ಫ್ಯಾಂಟಸಿ ಆಗಿರುವುದರಿಂದ ಕೇಳುವುದಿಲ್ಲ . :)

Dileep Hegde ಹೇಳಿದರು...

ಅದ್ಭುತ ಕಲ್ಪನೆಗೊಂದು ಅಕ್ಷರದ ರೂಪ ಕೊಟ್ಟಿದ್ದೀರಾ ದಿವ್ಯಾ.. ಚೆನ್ನಾಗಿದೆ ಕಥೆ..
ಹಾಗೆಯೇ ಸಖಿ ಪತ್ರಿಕೆಯಲ್ಲಿ ಒಂದು ಲೇಖನ ಓದಿದೆ.. ದಿವ್ಯಾ ಹೆಗಡೆ ಅಂತಿತ್ತು.. ಅದು ನಿಮ್ಮದೇನಾ..?? ನಿಮ್ಮದೇ ಆಗಿದ್ರೆ ಅಭಿನಂದನೆಗಳು...
ಬರೆಯುತ್ತಿರಿ...

jithendra hindumane ಹೇಳಿದರು...

ಹಲೋ ದಿವ್ಯ ಕಥೆ ಚೆನ್ನಾಗಿದೆ.
ಒಳ್ಳೊಳ್ಳೆ ಕನಸು ಕಾಣ್ತೀರಾ...!

Raghu ಹೇಳಿದರು...

ಪಾಪ ಬಂದ ಕೂಡಲೇ ಶಾಕ್ ಕೊಟ್ಟರೆ ಹೇಗೆ ಮೇಡಂ..:)
ಕಥೆ ಚೆನ್ನಾಗಿದೆ. ಒಳ್ಳೆ ರೀತಿಯಲ್ಲಿ ಕೊಂಡೊಯ್ದಿದ್ದಿರಿ.
ನಿಮ್ಮವ,
ರಾಘು.

Soumya. Bhagwat ಹೇಳಿದರು...

nice story divya.... i liked ....

Soumya. Bhagwat ಹೇಳಿದರು...

nice story.. divya i liked it

sunaath ಹೇಳಿದರು...

ದಿವ್ಯಾ,
ಹೊಸ ರೀತಿಯ ಬರಹ. ತುಂಬ ಸುಂದರ fantasy.

balasubramanya ಹೇಳಿದರು...

ಹೊಸ ಆಲೋಚನೆ ,ಆದ್ರೆ ಕಥೆಯಲ್ಲಿ ಕೆಲವು ಗೋಜಲಿದೆ. ಉತ್ತಮ ಪ್ರಯತ್ನ.

Vinay Hegde ಹೇಳಿದರು...

kathe tumba chennaagide...idu kanasina katheyoo athava kathyalli kansoo???? atleast avanu maggi tinno varege kathe mundorisabekittu... :) paapa estu hasididdaanoo enoo .... good story ...!!! :)

ದಿನಕರ ಮೊಗೇರ ಹೇಳಿದರು...

ದಿವ್ಯ,
ಅತ್ತ ಕನಸು ಎನ್ನಲೂ ಇಲ್ಲ.... ಕಥೆ ಎನ್ನಲೂ ಇಲ್ಲ.... ಚೆನ್ನಾಗಿತ್ತು ಆರಂಭ...... ಅಂತ್ಯವೂ ಚೆನ್ನಾಗಿದೆ....

V.R.BHAT ಹೇಳಿದರು...

ಹೊಸ ನೋಟವನ್ನು ಹರಿಸಿದ್ದೀರಿ, ಬರಹ ಚೆನ್ನಾಗಿದೆ,ಧನ್ಯವಾದ

ಮನಸಿನ ಮಾತುಗಳು ಹೇಳಿದರು...

vijay ,thanksu.. :-)

ಸುಶ್, ಅವ ಮತ್ತೊಂದ್ ಸರಿ ಬಂದ್ರೆ ನಮ್ಮನೆಗೆ ಕಳ್ಸಿ ಬಿಡು ...ಪ್ಲೀಜ್ :)

manasu mam, thanks..:)

ಸೀತಾರಾಮ. ಕೆ, ಜಾದು ಅಲ್ಲ ಸರ್, ಸುಮ್ಮನೆ ನನಗೆ ಹಾಗನ್ನಿಸಿದ್ದು ಅಷ್ಟೇ..:)

Uday bro, actually I first wrote this story and then realised even Koi Mil gaya also resembles same.. :)

ಸಾಗರಿ.. thanks.. :)

ಪ್ರವೀಣ,ನಿಮ್ಮ ಸಂದೇಹಗಳನ್ನು ಕೇಳದಿದ್ದಕ್ಕೆ ಥ್ಯಾಂಕ್ಸ್.. ;)

ದಿಲೀಪ್ ,ಹೌದು ಸಖಿ ಪತ್ರಿಕೆಯಲ್ಲಿ ಬಂದ ಲೇಖನ ನನ್ನದೇ.. ಧನ್ಯವಾದಗಳು.. :)

ಜಿತೇಂದ್ರ ಸರ್, ಅದು ಕನಸೂ ಅಲ್ಲ, ನನಸೂ ಅಲ್ಲ....;-)

Raghu ,ಥ್ಯಾಂಕ್ಸ್... :)

Soumya, thanks kane.. :)

Sunaath sir, thanks.. :)
ಏನೋ fantasy ಬಗ್ಗೆ ಬರೆಯೋಣ ಅನ್ನಿಸ್ತು.. ಸೊ ಬರ್ದೇ.. ಆದರೂ ನನಗಷ್ಟು ಖುಷಿ ಆಗಲಿಲ್ಲ ಕಥೆ... :(

nimmolagobba,ಹೌದು ಸರ್, ಕಥೆಯಲ್ಲಿ ಹಲವು ಗೋಜಲುಗಳಿವೆ ಅಂತ ನಾನೂ ಒಪ್ಪಿಕೊಳ್ಳುತ್ತೇನೆ.

ವಿನಯ್ , ಓಕೆ,,, ಮುಂದಿನ ಸಾರಿ ಅವನು maggi ತಿಂದು ಮುಗಿಸುವವರೆಗೂ ನಾನೂ ಕಥೆ ಮುಗಿಸೋಲ್ಲ... :)

ದಿನಕರ್ ಸರ್,ಥ್ಯಾಂಕ್ಸ್.. :)

ವಿ.ಆರ್.ಭಟ್ ಸರ್,ಥ್ಯಾಂಕ್ಸ್.. :)

Subrahmanya ಹೇಳಿದರು...

Very interesting. ಚೆನ್ನಾಗಿದೆ.

ಅವ ಅಲ್ಲೇ ಇದ್ದು ಮ್ಯಾಗಿ ತಿಂದಿದ್ದರೆ ಇನ್ನೂ ಚೆನ್ನಾಗಿರ್ತಿತ್ತು.

ಮನಸಿನ ಮಾತುಗಳು ಹೇಳಿದರು...

thanks, Subrahmanya..:)

Manjunatha Kollegala ಹೇಳಿದರು...

ನೀವು ಮ್ಯಾಗಿ ಮಾಡ್ತೀನಿ ಅಂದಕೂಡಲೇ ಅವ ಗಾಯಬ್. ಸುಮ್ನೇ ಹೋಟೆಲಿನಿಂದ ಏನಾದ್ರೂ ತಂದುಕೊಟ್ಟಿದ್ದರೆ ಚೆನ್ನಿತ್ತು. ಸುಮ್ಮನೇ ಓಡಿಸಿಬಿಟ್ರಿ.

Nice fantasy.

ಮನಸಿನ ಮಾತುಗಳು ಹೇಳಿದರು...

Manjunatha... :-)