ಗುರುವಾರ, ಜುಲೈ 01, 2010

ಸುಮ್ ಸುಮ್ನೆ ...!!!


ಆ ದಿನಗಳಲ್ಲಿ ನನ್ನ ಮೊಬೈಲಿನ ಸ್ಕ್ರೀನ್ ಸೇವರ್ ಹೇಳುತಿತ್ತು..

"All i ever wanted in my life was someone to love me "...

ಸುಮಾರ್ ದಿನ ಆಯ್ತು ಯಾಕೆ ಪ್ರೇಮ ಪತ್ರ ಬರಿಲಿಲ್ಲ ? ಅಂತ ನೀನು ಅದೆಷ್ಟು ಮುದ್ದಾಗಿ ಕೇಳಿದ್ದೆ. ಏನೋ ಇತ್ತೀಚಿಗೆ ಈ sweet feelings ನೆಲ್ಲ ಮರೆತು ಬಿಟ್ಟು ಅದೇನೋ ನನ್ನ ಪಾಡಿಗೆ ನಾನು ಬೇರೆ ಕಡೆಗೆ ಗಮನ ಹರಿಸುತ್ತಿದ್ದೆ. ನೀನು ಕೇಳಿದ ಮೇಲೆ ನನಗೂ ಅನ್ನಿಸಿತು , ಹೌದು ... ಇನ್ನೇನು ಪ್ರೇಮಿಗಳು, ರಸಿಕರು, ಎಲ್ಲರೂ ಇಷ್ಟ ಪಡುವ ಮಳೆಗಾಲ ಶುರುವಾಗೇ ಹೋಯಿತು. ಬರೆದೇ ಬಿಡೋಣ ಒಂದು ಪ್ರೇಮ ಪತ್ರ ಅಂತ ಕುಳಿತು ಬಿಟ್ಟೆ.

"ಪತ್ರ ಬರೆಯಲಾ ....
ಇಲ್ಲ ಚಿತ್ರ ಬಿಡಿಸಲಾ...
ಹೇಗೆ ಹೇಳಲಿ ನನ್ನ ಮನದ ಹಂಬಲ.."

"ಸಂತೆಯಲ್ಲೆ ನಿಂತರೂನು ನೋಡು ನೀನು ನನ್ನನ್ನೆ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೆ
ಹೃದಯವೆ ಬಯಸಿದೆ ನಿನ್ನನೆ"

ಪ್ರತೀ ಸಾರಿ ಪತ್ರಗಳನ್ನು ಬರೆಯುವಾಗ ಏನೇನೋ ಕಲ್ಪನೆಗಳನ್ನು, ಮೊಗ್ಗಿನ ಮನಸು ಚಿತ್ರದ ಯಶ್ ನೋ ,ಆರ್ಯ ಚಿತ್ರದ ಅಲ್ಲೂ ಅರ್ಜುನ್ನೋ ,ಅಥವ ನಾನು ಇಷ್ಟ ಪಡುವ Michael Jackson ನೋ ಮನಸಲ್ಲಿ ಇಟ್ಟುಕೊಂಡು ಬರೆಯುತ್ತಿದ್ದೆ . ಈ ಸಾರಿ ಕಲ್ಪನೆಗೆ ಏನೂ , ಯಾರೂ ಸಿಗುತ್ತಿಲ್ಲ. ಅದಕ್ಕೆ ಕಲ್ಪನೆಗೆ ಅರ್ಹರು ಯಾರದ್ರು ಸಿಗುವ ಒರೆಗೂ ಪ್ರೇಮ ಪತ್ರಗಳನ್ನು ಬರೆಯುವುದಿಲ್ಲ ಅಂತ ತೀರ್ಮಾನಿಸಿ ಬಿಟ್ಟೆ.

"ದೇವರಂಥ ಗೆಳೆಯ ಬೇಕು , ಹೇಳದೇನೆ , ಅವನಿಗೆಲ್ಲ ತಿಳಿಯಬೇಕು.
"

ಹಾಗೆ ಅಂದುಕೊಂಡ ಮರುಕ್ಷಣದಲ್ಲಿ ನನ್ನ ತುಟಿಯಲ್ಲೊಂದು ನಗು ಬಂತು. ನನಗರಿವಿಲ್ಲದೆ!
ನಿಜ .. ಅದೊಂದು ಕಾಲ . ಭೂತಕಾಲ ಅಂತಾನೆ ಹೇಳಬಹುದೇನೋ. ಎಲ್ಲರಲ್ಲೂ ಒಂದು ಗೆಳೆತನ ಹುಡುಕುತಿದ್ದೆ ನಾನು . ಎಲ್ಲರನ್ನು ಹಚ್ಚಿಕೊಂಡು ಬಿಡುವುದು. ಅವರು ಅದಕ್ಕೆ ಅರ್ಹರು ಹೌದೋ ಅಲ್ಲವೋ ಎಂಬ ಬಗ್ಗೆ ಒಂದು ಚೂರೂ ಯೋಚನೆ ಮಾಡದೆ. ಆಗಲೇ ಅನ್ನಿಸಿದ್ದು , ಹೊಳೆಯುವುದೆಲ್ಲಾ ವಜ್ರವಲ್ಲ ಅಂತ. ಬೆಂಗಳೂರು, ತುಂಬಾ ಪಾಠಗಳನ್ನು ಹೇಳಿಕೊಟ್ಟಿದೆ. ಆದರೆ ಈ ಕಲಿಯುವಿಕೆಯ ಮಧ್ಯದಲ್ಲಿ ಎಲ್ಲೋ ಒಂದು ಕಡೆ ನನ್ನ ಮುಗ್ಧತೆ ಮರೆಯಾಗುತ್ತಿದೆ ಎಂಬ ನೋವು ನನ್ನ ಕಾಡುತ್ತಲೇ ಇರುತ್ತದೆ. ಒಂಟಿತನದ ಭಯ ಆಗಾಗ ಕಾಡುತಿತ್ತು. ಅದನ್ನು ಕಂಡು ನಾನು ಭಯ ಪಡುತ್ತಿದ್ದೆ. ಮನೆಯ ಬೆಚ್ಚನೆಯ ಗುಬ್ಬಿ ಗೂಡಿನಿಂದ ಹೊರ ಬಂದ ನನಗೆ ಇಲ್ಲಿ ಹೊಂದಿಕೊಳ್ಳಲು ಬಹಳವೇ ಕಷ್ಟ ಆಯಿತು.

ಮನೇಲಿದ್ದಾಗ ಅಮ್ಮ, ಅಪ್ಪ , ತಂಗಿ ಅಷ್ಟೇ ನನ್ನ ಪ್ರಪಂಚ. ಬೆರಳೆಣಿಕೆಯಷ್ಟು ಗೆಳೆಯರು ಮಾತ್ರ. ಅಮ್ಮ ಯಾವಾಗಲು ಹೇಳುತ್ತಿದ್ದಳು." ಹಿಂಗೆ ಇರಡ ಮಗ..friends ಮಾಡಕ.. ನಾಲ್ಕು ಜನರ ಜೊತೆ ಬೆರಿ " ಅಂತ . ಅದಕ್ಕೆ ನಾನು- "ಅಮ್ಮ ನೀನೇ ಇದ್ಯಲೇ ಒಳ್ಳೆ friendu ನಂಗ್ಯಾರು ಬೇಡ "ಅಂತ ಹೇಳುತ್ತಿದ್ದೆ.ಬೆಂಗಳೂರಿಗೆ ಬಂದ ಮೇಲೇ ಗೆಳೆತನ ಎಷ್ಟು ಅವಶ್ಯ ಅಂತ ಗೊತ್ತಾಗಿದ್ದು. ಯಾವಾಗಲೂ ಅಷ್ಟೇ. ಯಾವುದೇ ಒಂದು ಸಂಭಂಧದ ಮಹತ್ವ ತಿಳಿಯುವುದು ಅದನ್ನು ಪೂರ್ಣ ಅನುಭವಿಸಿದಾಗ ಮಾತ್ರ. ನನಗೀಗ ಸಿಕ್ಕಾಪಟ್ಟೆ ಸ್ನೇಹಿತರು. ಅವರುಗಳು ನನ್ನೆಂದೂ ಒಂಟಿ ಅಂದುಕೊಳ್ಳಲು ಬಿಡುವುದಿಲ್ಲ. ಅವರಿಗೆಲ್ಲ ಒಂದು thanks :-). ಪುಸ್ತಕಗಳು, ಸಂಗೀತ , ಹಾಡುಗಳು ಎಂದಿನಂತೆ ಯಾವಾಗಲೂ ನನಗೆ "ಸಾತ್" ನೀಡುತ್ತವೆ . ಇಷ್ಟೊಂದು ಸ್ನೇಹಿತರೇ ನನಗಿರುವಾಗ ಇನ್ನೊಂದು, "ಪ್ರೇಮ ಪತ್ರ" ಬರೆಯುವಂತ ಸಂಬಂಧ ಬೇಡ ಅನ್ನಿಸಿದೆ. ಬೇಕು ಅನ್ನಿಸಿದಾಗ ನಾನೇ ಬರೆಯುತ್ತೇನೆ. ಮಾಡಬೇಕಾದ ಕೆಲವೊಂದಿಷ್ಟು ಕೆಲಸಗಳು, ಜವಾಬ್ದಾರಿಗಳು ಬಹಳಿವೆ. ನಾನು ಈಗ ಒಂಟಿ ಅಲ್ಲ ಅಂತ ನನಗನ್ನಿಸಿದೆ. ನನಗೀಗ ಒಂಟಿತನ ಕಾಡುವುದಿಲ್ಲ. ಒಂಟಿತನಕ್ಕೆ ನಾನು ಹೆದರುವುದಿಲ್ಲ. ಒಂದು ಮಾತಿದೆ - "ಕಾಯುವುದರಲ್ಲಿ ಇರುವ ಸುಖ ಕೂಡುವುದರಲ್ಲಿ ಇಲ್ಲ " ಅಂತ..ನಾನೀಗ ಕಾಯುವ ಸುಖವನ್ನಷ್ಟೇ ಅನುಭವಿಸುವ ನಿರ್ಧಾರ ಮಾಡಿದ್ದೀನಿ.

I'm Gonna Make A Change,
For Once In My Life
It's Gonna Feel Real Good,
Gonna Make A Difference
Gonna Make It Right . . .

ಈಗ ನನ್ನ ಮೊಬೈಲ್ ಸ್ಕ್ರೀನ್ ಸೇವರ್ ಹೇಳುತ್ತದೆ.....

"I AM HAPPY IN MY WORLD ":-)

20 ಕಾಮೆಂಟ್‌ಗಳು:

ಶಿವಪ್ರಕಾಶ್ ಹೇಳಿದರು...

sumne sumne channagi barediddiri... nice one.. :)

ಮನಸು ಹೇಳಿದರು...

ಸುಮ್ ಸುಮ್ ನೆ ಹೇಳಬೇಕು ಅಂದರೆ.........ಚೆನ್ನಾಗಿದೆ............

ಸೀತಾರಾಮ. ಕೆ. / SITARAM.K ಹೇಳಿದರು...

ಚೆ೦ದದ ಅ೦ತರಾಳದ ಮಾತನ್ನು ಲೇಖನವನ್ನಾಗಿಸಿದ್ದಿರಾ...
"ಆದರೆ ಈ ಕಲಿಯುವಿಕೆಯ ಮಧ್ಯದಲ್ಲಿ ಎಲ್ಲೋ ಒಂದು ಕಡೆ ನನ್ನ ಮುಗ್ಧತೆ ಮರೆಯಾಗುತ್ತಿದೆ ಎಂಬ ನೋವು ನನ್ನ ಕಾಡುತ್ತಲೇ ಇರುತ್ತದೆ' ತು೦ಬಾ ಮಾರ್ಧವಾದ ಸಾಲುಗಳು. ಲೇಖನ ಇಷ್ಟವಾಯಿತು.

Uday Hegde ಹೇಳಿದರು...

Nice one Divya....

I liked the way your screen saver changed...

sunaath ಹೇಳಿದರು...

ಸುಮ್ ಸುಮ್ನೆ ಎಷ್ಟೆಲ್ಲಾ ಅನುಭವ ಆಯ್ತು ನೋಡಿ!

arya_forU ಹೇಳಿದರು...

ಮನಸಿನ ತೊಳಲಾಟಗಳಿಗೆ ಬರಹದ ರೂಪ ಚೆನ್ನಾಗಿ ಮೂಡಿ ಬಂದಿದೆ.

Guru's world ಹೇಳಿದರು...

"ಕಾಯುವುದರಲ್ಲಿ ಇರುವ ಸುಖ ಕೂಡುವುದರಲ್ಲಿ ಇಲ್ಲ... " ಇದು ಯಾವ ಮಾತೋ ಗೊತ್ತಿರಲಿಲ್ಲ... ಇವಾಗ ಗೊತ್ತ ಯಿತು...
good article.....ಚೆನ್ನಾಗಿ ಇದೆ..

jithendra hindumane ಹೇಳಿದರು...

ದಿವ್ಯಾ , ಬರಹ ಸಕಾಲಿಕ...!ಪ್ರೇಮ ಪತ್ರ ಬರೆಯುವ ವಯಸ್ಸಲ್ಲಿ ಬರೆದು ಬಿಡಬೇಕು..! ಆಮೇಲೆ ಅದು ಔಟ್ ಡೇಟೆಡ್ ಆಗಿ ಬಿಡುತೆ ಅಲ್ವ?

vijayhavin ಹೇಳಿದರು...

rocking article!!!

liked a lot

ಮನದಾಳದಿಂದ............ ಹೇಳಿದರು...

ದಿವ್ಯಾ ಮೇಡಂ,
ಕಾಲ ನಮ್ಮನ್ನು ಬದಲಿಸುತ್ತದೆ ಎಂಬ ಮಾತಿಗಿಂತ ನಾವು ಕಾಲ ಕಾಲಕ್ಕೆ ಬದಲಾಗುತ್ತೇವೆ ಎಂಬುದು ಕಟುಸತ್ಯ! ಅದರಂತೆ ನಾವು ಬದಲಾಗಬೇಕು ಕೂಡಾ! ಎಂದೋ ಆದ ನೋವಿನ ಸಮಾದಾನಕ್ಕಾಗಿ ಬದಲಾಗಬೇಕು, ಪ್ರತಿಕಾರಕ್ಕಾಗಿ ಬದಲಾಗಬೇಕು, ಎಂದೂ ಸಿಗದ ಸುಖಕ್ಕಾಗಿ ಬದಲಾಗಬೇಕು, ಅದಕ್ಕಾಗಿ ಬದಲಾಗಬೇಕು, ಇದಕ್ಕಾಗಿ ಬದಲಾಗಬೇಕು.....................
ನಿತ್ಯ ಬದಲಾಗುತ್ತಲೇ ಇರಬೇಕು. ಅದೆ ಜೀವನ.
ಆದರೆ ಒಂದು ಮಾತು, ನಾವು ಬದಲಾಗಬೇಕು ಆದರೆ ನಮ್ಮತನ ಎಂದೂ ಬದಲಾಗಬಾರದು ಅಷ್ಟೇ!
ಒಳ್ಳೆಯ ಲೇಖನ. ಈ ಬದಲಾವಣೆಯಲ್ಲಿ ನಿಮ್ಮ ಮುಗ್ಧತನ ಕಡಿಮೆಯಾಗಿದ್ದು ಯಾಕೋ ಬೇಜಾರಾಯ್ತು!

shivu.k ಹೇಳಿದರು...

ಸುಮ್ ಸುಮ್ನೆ ಇಂಗೆಲ್ಲಾ ಆಗುತ್ತಾ! ಚೆನ್ನಾಗಿ ಬರೆದಿದ್ದೀರಿ.

ಸವಿಗನಸು ಹೇಳಿದರು...

ಸುಮ್ ಸುಮ್ನೆ ಬರೆದರೂ ಚೆನ್ನಾಗಿದೆ...
ಸ್ಕ್ರೀನ್ ಸೇವರ್ ಮೆಸೇಜ್ ಸಹ ಸೂಪರ್.....

Raghu ಹೇಳಿದರು...

ನಿಮ್ಮ ಮನಸ್ಸಿನ ಭಾವನೆಗಳನ್ನೂ ಆಕ್ಷರಗಳ ಪ್ರಿತಿಯನ್ನ ಜೋಡಿಸಿ ಒಳ್ಳೆಯ ಲೇಖನ ನೀಡಿದ್ದಿರಿ.
ನೈಸ್.
ನಿಮ್ಮವ,
ರಾಘು.

ದಿನಕರ ಮೊಗೇರ.. ಹೇಳಿದರು...

chennaagide baraha, heege khushi khushiyaagiru....... bege prema patra baresikoLLuva huduga sigali....

ಅನಾಮಧೇಯ ಹೇಳಿದರು...

ಸುಮ್ ಸುಮ್ನೆ ಓಳು ಬಿಡೋ ಸುಂದರೀ .... :P

ಪ್ರವೀಣ ಹೇಳಿದರು...

Michael Jackson ಮನಸಲ್ಲಿ ಇಟ್ಟುಕೊಂಡು ಬರೆಯುತ್ತಿದ್ದಿರಾ? great! ಅದಕ್ಕೇ ಪತ್ರಗಳು ಹಾಗಿರುತ್ತಿದ್ದವು!

ಸಾಗರದಾಚೆಯ ಇಂಚರ ಹೇಳಿದರು...

ಮನಸಿನ ತೊಳಲಾಟದ ಬರಹ ಸುಂದರವಾಗಿದೆ

ದಿವ್ಯಾ ಹೇಳಿದರು...

ಶಿವಪ್ರಕಾಶ್ , ಮನಸು ಮೇಡಂ, ಸೀತಾರಾಮ ಸರ್, ಉದಯ್ ಬ್ರದರ್, ಸುನಾಥ್ ಸರ್,, arya_forU ,ಗುರು, ಎಲ್ಲರಿಗೂ ನನ್ನ ಧನ್ಯವಾದಗಳು.. :-)

ಜಿತೇಂದ್ರ ಸರ್, ನನ್ನ ಪ್ರಕಾರ ಪ್ರೇಮ ಪತ್ರ ಔಟ್ ಡೇಟೆಡ್ ಆಗೋಕೆ ಸಾದ್ಯ ಇಲ್ಲ. ಯಾಕಂತಿರ?? ಪ್ರೀತಿ ಇರುವವರೆಗೂ ಭಾವನೆಗಳು ಇದ್ದೇ ಇರುತ್ತವೆ. ಹಾಂ ! ಅಕ್ಷರ ರೀತಿಯಲ್ಲಿ ಇಳಿಸಬೇಕಷ್ಟೇ..

ವಿಜಯ್,ಮನದಾಳದಿಂದ, ಶಿವೂ ಸರ್, ಸವಿಗನಸು, ರಘು, ದಿನಕರ್ ಸರ್ ಎಲ್ಲರಿಗೂ thanksu .. :-)

ಅನಾಮಧೇಯ, ಹೆಸರಿಲ್ಲದೆ ಕಾಮ್ಮೆಂತಿಸಿದಕ್ಕೆ ಕೋಪ ಇದ್ದರೂ, ಸುಂದರಿ ಹೇಳಿದಕ್ಕೆ ಕ್ಷಮೆ ನೀಡಲಾಗಿದೆ.. :P

ಪ್ರವೀಣ, ಸಾಗರದಾಚೆಯ ಇಂಚರ ಧನ್ಯವಾದ.. :-)

Nagashree ಹೇಳಿದರು...

hii.. divya nim ee post manasige bahala hidustu ri...!its very nice..:)
nanu ee blog prapanchake hosabalu.. nan blog link http://spoorthi-manadamaatu.blogspot.com/ ome vist madi nim abipraya tilsi.. :)

Nagashree ಹೇಳಿದರು...

hii divya.. i liked this post a lot.. its really good one..:)
Am new to this blogging world
http://spoorthi-manadamaatu.blogspot.com/ this is my blog.. biduvina time alli ome visit madi abipraya tilsi :)