ಸೋಮವಾರ, ಜೂನ್ 28, 2010

ಶುಭ ಹಾರೈಸೋಣನಾನು ಕೆಲವರನ್ನು ಗಮನಿಸಿದ್ದೀನಿ...

ಅದೇನು ಆಂಗ್ಲ ಭಾಷೆಯ ಮೇಲಿನ ವ್ಯಾಮೋಹವೋ ಏನೋ?? ಎಷ್ಟೋ ಸಾರಿ ಕನ್ನಡ ಭಾಷೆ ಬಂದರೂ ಆಂಗ್ಲ ಭಾಷೆ ಮಾತಾಡುವವರನ್ನ . ಅಂಗ್ಲ ಭಾಷೆ ಚೆನ್ನಾಗಿ ಬರುವವರು ಮಾತಾಡಿದರೆ ಸ್ವಲ್ಪ ಮಟ್ಟಿಗಾದರೂ ಸಹಿಸಿಕೊಳ್ಳಬಹುದು. ಆದರೆ ಈ ಅರೆ- ಬರೆ ಆಂಗ್ಲ ಭಾಷೆ ಮಾತಾಡೋರನ್ನ ದೇವ್ರಾಣೆ ಸಹಿಸಿಕೊಳ್ಳಕೆ ಆಗಲ್ಲ!! ಪಾಪ.. ಬಸ್ conductor ಹತ್ರ ಒಂದು ಹುಡುಗಿ ಆ ದಿನ ಏನೋ ಕೇಳ್ತಾ ಇದ್ಲು. ಅವನಿಗೋ ಆಂಗ್ಲ ಭಾಷೆ ತಿಳಿಯುತ್ತಿಲ್ಲ. ಇವಳಿಗೂ ಕನ್ನಡ ಬರುವುದಿಲ್ಲವೇನೋ ಅಂದುಕೊಂಡೆ ನಾನು . ಸ್ವಲ್ಪ ಹೊತ್ತಲ್ಲೇ ಇವಳಿಗೆ ಯಾವುದೋ ಕರೆ ಬಂತು.ನೋಡಿದರೆ ಗಳಗಳನೆ ಕನ್ನಡ ಮಾತಾಡ್ತಾ ಇದಾಳೆ..ಅಬ್ಬ!! ಇದೇನು ತಿಕ್ಲು ಇರಬಹುದು ಅಂದುಕೊಂಡು ಸುಮ್ನೆ ನಕ್ಕು ಬಿಟ್ಟಿದ್ದೆ.ಇದೊಂದು ಉದಾಹರಣೆ ಅಷ್ಟೇ !!
ಕನ್ನಡ ಪ್ರೀತಿ ಇದ್ದ ಮಾತ್ರಕ್ಕೆ ಬೇರೆ ಭಾಷೆ ದ್ವೇಷ ಅಂತಲ್ಲ. ಅವಶ್ಯಕತೆ ಇದ್ದರೆ ಅಷ್ಟೇ ಬೇರೆ ಭಾಷೆ ಪ್ರಯೋಗ ಮಾಡಬಹುದೇನೋ ಅನ್ಸುತ್ತೆ ನಂಗೆ. ಇರಲಿ ಬಿಡಿ . ಇದು ನನ್ನ ಸ್ವಂತ ಅಭಿಪ್ರಾಯ....


***********

ವಿಷಯ ಇದಲ್ಲ...

ನಿಮಗೆಲ್ಲರಿಗೂ "ಮೃದುಮನಸು" ಬ್ಲಾಗ್ ತಿಳಿದೇ ಇದೆ.ಇದರ ನಿರ್ವಾಹಕರು ಕುವೈತ್ ನಲ್ಲಿದ್ದರೂ ಕನ್ನಡ ಮರೆತಿಲ್ಲ .ಇದಕ್ಕೆ ಇವರು ಪ್ರತಿ ತಿಂಗಳೂ ಹೊರತರುತ್ತಿರುವ "ಮರಳ ಮಲ್ಲಿಗೆ " ಎಂಬ ಸಂಚಿಕೆ , ಕನ್ನಡ ಕಂಪನ್ನು ಬೀರುತ್ತಾ ಮರಳುಗಾಡಿನಲ್ಲಿ ಬಿತ್ತರ ಗೊಳ್ಳುತ್ತಿರುವುದೇ ಸಾಕ್ಷಿ. ಸ್ನೇಹಿತರೇ ನಿಮ್ಮ ಬರಹಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡಿ.

maralamallige@kuwaitkannadakoota.org

ಕೆಲವೊಂದಷ್ಟು ನಿಯಮಾವಳಿಗಳು ಇವೆ ... ತಿಳಿಯಲು ಇಲ್ಲಿ ಕ್ಲಿಕ್ಕಿಸಿ

http://mrudhumanasu.blogspot.com/2010/05/blog-post.html


ಕನ್ನಡಕ್ಕಾಗಿ ಇವರು ಮಾಡುತ್ತಿರುವ ಕೆಲಸಕ್ಕೆ ನಾವೂ ಸೇರಿಕೊಳ್ಳೋಣ. ಅವರು ಮಾಡುತ್ತಿರುವ ಪ್ರಯತ್ನಕ್ಕೆ ನಾವೂ ಕೈ ಜೋಡಿಸೋಣ. ಶುಭ ಹಾರೈಸೋಣ.

ಕಳಿಸುತ್ತೀರಲ್ಲ ???

- ದಿವ್ಯಾ :-)

9 ಕಾಮೆಂಟ್‌ಗಳು:

shivu.k ಹೇಳಿದರು...

ಖಂಡಿತ ಅವರ ಜೊತೆ ನಾವು ಕೈ ಜೋಡಿಸಲೇಬೇಕು. ಈ ಬಾರಿಯ ಮರಳ ಮಲ್ಲಿಗೆ ಪತ್ರಿಕೆ ಡೌನ್ ಲೋಡ್ ಮಾಡಿದೆ. ಆದ್ರೆ open ಆಗುತ್ತಿಲ್ಲ. ದಯವಿಟ್ಟು ನಿಮಗೆ open ಆಗಿದ್ರೆ ನನಗೆ ಕಳಿಸಿ ಪ್ಲೀಸ್...

ಥ್ಯಾಂಕ್ಸ್..

ಮನಸು ಹೇಳಿದರು...

ದಿವ್ಯ ನೀವು ನಮ್ಮ ಕನ್ನಡ ಕೂಟದ ಪತ್ರಿಕೆಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು. ಕನ್ನಡನಾಡ ನುಡಿಸಿರಿಗೆ ನಮ್ಮದೊಂದು ಕಿರುಕಾಣಿಕೆ ಅಷ್ಟೆ.... ನಮಗೂ ಅನುಕೂಲ ಕೂಡ, ಕನ್ನಡದಲ್ಲಿ ಕಲಿಯುವುದು ಬಹಳಷ್ಟಿದೆ ನಿಮ್ಮಂತಹವರೆಲ್ಲರ ಲೇಖನಗಳು ಮತ್ತಷ್ಟು ಭಾಷಾ ಸಾಮಾರ್ಥ್ಯವನ್ನು ನಮೆಲ್ಲರಿಗೆ ತಿಳಿಸಿಕೊಟ್ಟಿದೆ.

ಸಸ್ನೇಹ ಮಿತ್ರರೆಲ್ಲರಿಗೂ ನಮ್ಮ ಧನ್ಯವಾದಗಳು ಅವರೆಲ್ಲರ ಸಹಕಾರದಿಂದ ನಮ್ಮ ಪತ್ರಿಕೆ ಇಷ್ಟರ ಮಟ್ಟಿಗೆ ಸಾಗಿ ಬರುತ್ತಲಿದೆ. ನಮ್ಮ ಪತ್ರಿಕೆಗೆ ಬರೆಯುವ ಅಭಿಲಾಷೆ ಉಳ್ಳವರು ನಮ್ಮಗೆ ಲೇಖನಗಳನ್ನು ಕಳಿಸಬಹುದು ಮತ್ತು ನಮ್ಮ ಕಳೆದ ಎಲ್ಲಾ ಸಂಚಿಕೆಗಳನ್ನು ವೀಕ್ಷಿಸಲು ನಮ್ಮ ಈ ಕೆಳಕಂಡ ವೆಬ್ ಸೈಟಿಗೆ ಭೇಟಿ ನೀಡಬಹುದು.

http://www.kuwaitkannadakoota.org/marala_mallige.html

ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು

Ittigecement ಹೇಳಿದರು...

ದಿವ್ಯಾ...

ಕುವೈತ್ ಕನ್ನಡಕೂಟದ ಬಗೆಗೆ ಹೆಮ್ಮೆ ಎನಿಸುತ್ತದೆ...
ಅವರ ಅಭಿಮಾನ..
ನಾವೆಲ್ಲ ಕನ್ನಡಿಗರು ಒಂದೆ ಎನ್ನುವ ಭಾವದಿಂದ ನಡೆಸುವ
ಅವರ ಕಾರ್ಯಕ್ರಮಗಳು...
ಪತ್ರಿಕೆಗಳು... ತುಂಬಾ ಖುಷಿ ಕೊಡುತ್ತದೆ...

ನಮ್ಮೆಲ್ಲರ ಅಭಿನಂದನೆಗಳು... ಅವರ ಕನ್ನಡ ಅಭಿಮಾನಕ್ಕೆ...
ಅವರ ಪರಿಶ್ರಮಕ್ಕೆ...

ನಮಗೆಲ್ಲ ಶುಭಾಶಯ ಕೋರಲಿಕ್ಕೆ ವೇದಿಕೆ ಅನುವು ಮಾಡಿಕೊಟ್ಟಿದ್ದಕ್ಕೆ ನಿಮಗೂ ಅಭಿನಂದನೆಗಳು...

Raghu ಹೇಳಿದರು...

ಮರಳ ಮಲ್ಲಿಗೆ ಇಂಪು, ತಂಪು ಎಲ್ಲಡೆ ಹರಡಬೇಕು.
ಒಳ್ಳೆದಾಗಲಿ.
ನಿಮ್ಮವ,
ರಾಘು.

ಸೀತಾರಾಮ. ಕೆ. / SITARAM.K ಹೇಳಿದರು...

ಕುವೈತನ ಕನ್ನಡಿಗರ ಕೂಟದ ಕನ್ನಡ ಅಭ್ಮಾನದ ಬಗ್ಗೆ ಮರಳ ಮಲ್ಲಿಗೆ ಬಗ್ಗೆ ಬ್ಬರೆದು ಶ್ಲಾಘಿಸಿದ್ದಿರಾ! ನಿಮ್ಮ ಜೊತೆಗೆ ನನ್ನದು ಸಹ!

ಸಾಗರದಾಚೆಯ ಇಂಚರ ಹೇಳಿದರು...

ಕುವೈತ್ ಕನ್ನಡ ಸಂಘಕ್ಕೆ ಶುಭವಾಗಲಿ

ಸುಧೇಶ್ ಶೆಟ್ಟಿ ಹೇಳಿದರು...

Naanu Odidhe maraLa malligeyannu.. thumba chendada prayathna :)

ಮನಸಿನ ಮಾತುಗಳು ಹೇಳಿದರು...

ಕುವೈತನ ಕನ್ನಡಿಗರ ಕೂಟಕ್ಕೆ ಪ್ರೋತ್ಸಾಹಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು.. :-)

sunaath ಹೇಳಿದರು...

ದಿವ್ಯಾ,
ಕಂಪು ಬೀರುವ ಮಲ್ಲಿಗೆಯನ್ನು ಕಂಡಾಗ ಇತರರಿಗೂ ತೋರಿಸುವದು ದೊಡ್ಡ ಗುಣ. ಅದಕ್ಕಾಗಿ ನಿಮಗೆ ಧನ್ಯವಾದಗಳು.
ಮರಳು ಮಲ್ಲಿಗೆಗೆ ಶುಭಾಶಯಗಳು.