ಮಂಗಳವಾರ, ಏಪ್ರಿಲ್ 27, 2010

ನನಗಿಷ್ಟ ...ನಿಮಗೂ ಇಷ್ಟವಾಗಿದ್ದು ....

ಭಯ್ಯ ಒಂದು ಪ್ಲೇಟ್ ಕೊಡಿ ...
ಖಾರ ಸ್ವಲ್ಪ ಜಾಸ್ತಿ (ಕೆಲವರು ಕಮ್ಮಿ) ಹಾಕಿ...
ನನಗೆ ಸ್ವೀಟ್ ಪಾನಿ ಬೇಡ , ಖಾರ ಪಾನಿ ಕೊಡಿ ....
ಭಯ್ಯ ನನಗೆ ನಾಲ್ಕು ಪೂರಿ ಪಾನಿ ಕೊಡಿ,ಮತ್ತೆ ನಾಲ್ಕು ಸೂಖಾ(ಪಾನಿ ಇಲ್ಲದೆ ) ಕೊಡಿ...

ಭಯ್ಯ ಇನ್ನೂ ಏಳೇ ಪೂರಿ ಆಗಿರೋದು..ಇನ್ನೂ ಒಂದು ಬಾಕಿ ಇದೆ...

ಸ್ವಲ್ಪ ಪಾನಿ ಕೊಡಿ....

ಹ್ಮ್ಮ್ ...ಹೌದು ..ನಾನು ಯಾವುದರ ಬಗ್ಗೆ ಮಾತಾಡುತ್ತಿದ್ದೀನಿ ಅಂತ ನಿಮಗೆಲ್ಲರಿಗೂ ಗೊತ್ತಾಗೇ ಇರುತ್ತೆ..
ನಿಮ್ಮ guess ಸರಿಯಾಗಿದೆ.

ನಾನು ಹೇಳ ಹೊರಟಿರುವುದು ಎಲ್ಲರಿಗೂ ಪ್ರಿಯವಾದ, ಇಷ್ಟವಾದ , ಬಾಯಲ್ಲಿ ನೀರೂರಿಸುವ , ಒಂದು ತಿಂದರೆ ಮತ್ತೆ ಮತ್ತೆ ತಿನ್ನಲೇ ಬೇಕು ಎನಿಸುವ 'ಪಾನಿ ಪೂರಿ' ಅಥವ 'ಗೋಲ್ ಗಪ್ಪ' ಬಗ್ಗೆ. ಮನೆಯಲ್ಲಿದ್ದಾಗ ಸಲೀಸಾಗಿ ಅಮ್ಮ ಮಾಡಿದ ತಿಂಡಿ ಅಷ್ಟೇ ತಿಂದು ಅಭ್ಯಾಸವಾದ ನನಗೆ ಬೆಂಗಳೂರಿಗೆ ಬಂದ ಮೇಲೆ ಇದುವರೆಗೂ ಬೇಸರವಾಗದ, ಎಷ್ಟು ತಿಂದರೂ ಮತ್ತೆ ತಿನ್ನಬೇಕು ಅಂತ ಅನಿಸುವ ತಿಂಡಿ ಗೋಲ್ ಗಪ್ಪ .ಯಾವಾಗಲು ಗೊಲ್ಗಪ್ಪದ ಅಂಗಡಿಗಳಿಗೆ ಹೋಗಿ ಎರಡು ಮೂರು ಪ್ಲೇಟ್ ತಿಂದು ಬರುತ್ತಿದ್ದ ನನಗೆ , ಮೊನ್ನೆ ಇದ್ದಕ್ಕಿದ್ದಂತೆ ಈ ಗೊಲ್ಗಪ್ಪದ ಬಗ್ಗೆ ಒನ್ ತರಹದ ಕುತೂಹಲ ಶುರುವಾಯಿತು. ಸರಿ ಇನ್ನೇನು ಮಾಡುವುದು , ಇದ್ದೇ ಇದೆಯಲ್ಲ ಅಂತರ್ಜಾಲ ಹುಡುಕಿ ಒಂದಷ್ಟು ಮಾಹಿತಿ ಕಲೆಹಾಕಿ ನಿಮ್ಮೆದುರಿಗೆಇಡುವ ಪ್ರಯತ್ನ..

ಎಲ್ಲರಿಗೂ ತಿಳಿದಿರುವಂತೆ "ಪಾನಿ ಪೂರಿ" ಅಥವ "ಗೋಲ್ ಗಪ್ಪ " ತಿನ್ನಲು ಬಲು ರುಚಿ. ಇದನ್ನು "ಬತಾಶ" , "ಗುಪ್ ಶುಪ್" ಅಂತ ಕರೆಯುವುದೂ ಉಂಟು. ಗೋಲ್ ಗಪ್ಪ ಅಂತ ಯಾಕೆ ಹೆಸರು ಬಂತು ಅಂತ ಹೇಳಿದ್ರೆ ಗೋಲ್ ಅಂದ್ರೆ ಉರುಟಾದ , ಅಥವ ಗುಂಡಾಕಾರ ಅಂತ, ಗಪ್ಪ ಅಂದ್ರೆ 'ಗಪ್' ಅಂತ ಒಂದೇ ಗುಟುಕಿನಲ್ಲಿ ತಿನ್ನುವುದು ಅಂತ . ಅದಕ್ಕೆ ಗೊಲ್ಗಪ್ಪ ಅಂತ ಹೆಸರು ಬಂದಿದ್ದಂತೆ. ಹಾಗೇ ಪಾನಿ ಅಂದರೆ ನೀರು( ಇದನ್ನು ಹುಣಿಸೆ ಹುಳಿ ಇಂದ ತಯಾರುಮಾಡಲಾಗುತ್ತದೆ. ಒಂದು ಪಾತ್ರೆಯಲ್ಲಿ ಸಿಹಿ ಹಾಕಿ, ಮತ್ತೊಂದರಲ್ಲಿ ಖಾರ ಹಾಕಿ ಇಟ್ಟಿರುತ್ತಾರೆ) . ಪೂರಿ ಅಂದರೆ ಗೋಧಿ ಅಥವ ಮೈದಾ ಹಿಟ್ಟಿನಿಂದ ತಯಾರಾದ ತಿಂಡಿ. ಅದಕ್ಕೆಂದೇ ಪಾನಿ ಪೂರಿ ಅಂತನೂ ಕರೆಯುವುದು.


ಪಾನಿ ಪೂರಿ ಅಂಗಡಿಗೆ ಹೋಗಿ ನಿಂತಾಗ ಅಂಗಡಿಯಾತ ಕೈಗೊಂದು ಎಲೆಯ ಅಥವ ಪ್ಲಾಸ್ಟಿಕ್ ತಟ್ಟೆಯನ್ನು ಕೊಟ್ಟು , ಒಂದೊಂದು ಪಾನಿ ಪೂರಿಯನ್ನು , ನಡುವೆ ಭಾರಿ ನಾಜೂಕಾಗಿ ತೂತು ಮಾಡಿ ಅದರಲ್ಲಿ ಬೆಂದ ಬಟಾಟೆ , ಕಡಲೆಕಾಳು, ದನಿಯಾ ಸೊಪ್ಪು, ಉಪ್ಪು,ಖಾರ, ಚಾಟ್ ಮಸಾಲ, ಈರುಳ್ಳಿ ,ನಿಂಬೆ ಹುಳಿ ತುಂಬಿ ,ಆಮೇಲೆ ಅಲ್ಲೇ ಪಾತ್ರೆಯಲ್ಲಿ ತುಂಬಿತ್ತ ನೀರು (ಪಾನಿ)ಯನ್ನು ತುಂಬಿಸಿ ನಮ್ಮ ತಟ್ಟೆಯಲ್ಲಿ ಹಾಕುತ್ತಿದ್ದರೆ ಆಹಾ !, ಒಂದೇ ಗುಟುಕಲ್ಲಿ ತಿಂದು ಮುಗಿಸಲು ಎಷ್ಟು ಸಂತಸವಾಗುತ್ತದೆ . ತಿನ್ನಲು ಚುರುಕಾಗಿರಬೇಕಷ್ಟೇ !!.

ಈ ಗೋಲ್ ಗಪ್ಪ ಎನ್ನುವುದು ವಿಕಿಪೀಡಿಯ ಪ್ರಕಾರ ಮೂಲತಃ ಉತ್ತರ ಪ್ರದೇಶದ 'ಬನಾರಸ್' ಎಂಬ ಊರಿನಿಂದ ಬಂದಂತ್ತದ್ದು. ತುಂಬಾ ಜನ ಉತ್ತರ ಭಾರತದವರು ಬೆಂಗಳೂರಿನಲ್ಲಿ ಬಂದು ನೆಲೆಸಿದ್ದರಿಂದ ಅದು ಬೆಂಗಳೂರಿನಲ್ಲಿ ಪ್ರಸಿದ್ದಿ ಪಡೆದಿದೆ. ಗೊಲ್ಗಪ್ಪದಲ್ಲಿರುವ ಹಲವಾರು ಮಸ್ಸಾಲೆ ಪದಾರ್ಥಗಳು ಕೆಮ್ಮು, ನೆಗಡಿ, ಹಾಗೂ ಸೈನಸ್ ನಿವಾರಿಸುವ ಗುಣವನ್ನು ಹೊಂದಿದೆ.
ಮಳೆ ಬಂದು ನಿಂತ ಮೇಲೆ ಹೊರಗೆ ಹೋಗಿ ಪಾನಿ ಪೂರಿ ತಿನ್ನುವಲ್ಲಿನ ಆನಂದವೇ ಬೇರೆ!!! ಹಾಗಾದ್ರೆ ಯಾಕೆ ತಡ ಮಾಡ್ತೀರ ?? ಇವತ್ತೇ ಹೋಗಿ ಗೋಲ್ ಗಪ್ಪ ತಿನ್ತೀರಾ ಅಲ್ವಾ??

20 ಕಾಮೆಂಟ್‌ಗಳು:

ಸುಶ್ರುತ ದೊಡ್ಡೇರಿ ಹೇಳಿದರು...

ನೀ ಕೊಡ್ಸಿರ್ ತಿಂತಿ ನೋಡು. ;)

ಸಾಗರಿ.. ಹೇಳಿದರು...

ಮಳೆಗಾಲದಲ್ಲಿ ಖಾರ ಖಾರ ಪಾನಿಪುರಿ.... ಯಮ್ಮೀಈಈಈಈ.

ಸೀತಾರಾಮ. ಕೆ. ಹೇಳಿದರು...

ಒನ್ದೆರಡು ಪ್ಲೇಟ್ ಕೊಡಿಸುತ್ತಾ ಹೇಳಿದ್ದರೆ ಇನ್ನೂ ಚೆನ್ನಾಗಿರ್ತಿತ್ತು!!!

Subrahmanya ಹೇಳಿದರು...

ಬಾಯಲ್ಲಿ ನೀರೂರಿಸಿಬಿಟ್ಟಿರಲ್ಲಾ...!

sunaath ಹೇಳಿದರು...

ಸುಶ್ರುತ,
ಎಂತಾ ಕಂಜೂಸಿ ಮಾರಾಯಾ ನೀನು!

nimmolagobba ಹೇಳಿದರು...

ವಾವ್ ಪಾನಿಪುರಿ ಬ್ಲಾಗಿಗೆ ಬಂದಿದೆ !!!ಬರಹ ರುಚಿಯಾಗಿದೆ.ಖಾರ ಜಾಸ್ತಿ ಹಾಕಿ ಇನ್ನೊಂದು ಪ್ಲೇಟ್ ಕೊಡಿ ಮತ್ತೆ!!!

ಸುಧೇಶ್ ಶೆಟ್ಟಿ ಹೇಳಿದರು...

mundhina thingaLu bengaloorige bandhaaga kodisabeku maththe :)

chandhadha baraha :)

ಮನಸು ಹೇಳಿದರು...

ಪಾನಿ ಪುರಿ ಬಗ್ಗೆ ಹೇಳಿ ಬಾಯಲ್ಲಿ ನೀರುಬರಿಸಿದಿರಾ....ಇಲ್ಲಿ ಬೆಂಗಳೂರಿನಷ್ಟು ಚೆನ್ನಾಗಿ ಮಾಡುವವರು ಇಲ್ಲ ಇನ್ನು ರಜೆಗಾಗಿ ಕಾಯಬೇಕು.......

ಜಲನಯನ ಹೇಳಿದರು...

ದಿವ್ಯಾ...ಪಾನಿ ಪೂರಿಯ ಸಂಸ್ಕೃತಿ ನಮ್ಮ ಬೆಂದಕಾಳೂರಿನ ಕಡಲೆಕಾಯಿ ಸಂಸ್ಕೃತಿಯನ್ನು ತಿಂದಿದೆ...ನನಗೆ ಹೆಚ್ಚಾಗಿ ನೆನಪಿಗೆ ಬರುವ ಘಟನೆ ಅಂದ್ರೆ ನಾವು ಪಿ.ಯು ನಲ್ಲಿದ್ದಾಗ ತಪ್ಪದೆ ಶನಿವಾರದ ಕಬ್ಬನ್ ಪಾರ್ಕ್ ಆರ್ಕೆಸ್ಟ್ರಾಗೆ ಹೋಗುತ್ತಿದ್ದುದು...ಅಲ್ಲಿ ಹಾಡುಗಳ ಸವಿಯುವ ಜೊತೆಗೆ ಕಳ್ಳೇಕಾಯಿ ಕುಕ್ಕಿ ಕುಕ್ಕಿ ತಿನ್ನೋದು...
ಈಗ ಪಾನಿ..ಭೇಲ್ ಇತ್ಯಾದಿ ಪೂರಿಗಳು....ಹಹಹ

ಸಾಗರದಾಚೆಯ ಇಂಚರ ಹೇಳಿದರು...

ಏನ್ರಿ ದಿವ್ಯಾ
ವಿದೇಶದಲ್ಲಿರೋ ನಮಗೆ ಅದನ್ನೆಲ್ಲ ಹೇಳಿ ಬಾಯಲ್ಲಿ ನೀರು ಬಾರೋ ಹಾಗೆ ಮಾಡಿದಿರಿ
ಮುಂದಿನ ವಾರ ಭಾರತ ಬಂದಾಗ ಅಸಲು ಬಡ್ಡಿ ಸಮೇತ ತಿಂದು ಹೋಗ್ತೀನಿ

Naveen...ಹಳ್ಳಿ ಹುಡುಗ ಹೇಳಿದರು...

olleya mahithi...

tentcinema ಹೇಳಿದರು...

Nice. I am hungry......

Pl. visit my Kannada poetry bog:
www.badari-poems.blogspot.com

- Badarinath Palavalli

jithendra hindumane ಹೇಳಿದರು...

ಹಂ ದಿವ್ಯಾ, ನನಗೂ ಪಾನಿಪೂರಿ ಅಂದ್ರೆ ಇಷ್ಟ..!
ಬೆಂಗಳೂರಿಗೆ ಬಂದಾಗ ಕೊಡಿಸ್ತೀರಾ?!

jithendra hindumane ಹೇಳಿದರು...

ಹಂ ದಿವ್ಯಾ, ನನಗೂ ಪಾನಿಪೂರಿ ಅಂದ್ರೆ ಇಷ್ಟ..!
ಬೆಂಗಳೂರಿಗೆ ಬಂದಾಗ ಕೊಡಿಸ್ತೀರಾ?!

ಸವಿಗನಸು ಹೇಳಿದರು...

ಬಾಯಲ್ಲಿ ನೀರು ಬರಿಸಿ ಬಿಟ್ಟಿರಲ್ಲಾ

ದಿವ್ಯಾ ಹೇಳಿದರು...

ಪಾನಿ ಪೂರಿ ಕೊಡಿಸೋಣ ಎಲ್ಲರಿಗೂ ...
ಎಲ್ಲರಿಗೂ ನನ್ನ ಧನ್ಯವಾದಗಳು..

ವಾಣಿಶ್ರೀ ಭಟ್ ಹೇಳಿದರು...

nanna mechhina panipuriya bagge odi bayalli neerooritu..
ene heli dharavada hubballi panipuri ruchi ee banglore dakke ella

ವಾಣಿಶ್ರೀ ಭಟ್ ಹೇಳಿದರು...

nanage eshtavaada pani puriya baraha odi tumba khushi aytu..
eniddaroo namma dharavaada hubballi pani puri ruchi ee banglore nallilla..

Raghu ಹೇಳಿದರು...

ದಿವ್ಯ ಅವರೇ..ಪಾನಿ ಪೂರಿ ನಂಗು ಬೇಕು... :)
ನಿಮ್ಮವ,
ರಾಘು.

ದಿವ್ಯಾ ಹೇಳಿದರು...

ವಾಣಿಶ್ರೀ howdu..

Raghu,paanipoori kodisuttene.. :)