ಮಂಗಳವಾರ, ಮಾರ್ಚ್ 16, 2010

ನೆನಪಲ್ಲೇ...


ಎಲ್ಲರಿಗೂ ಯುಗಾದಿ ಹಬ್ಬಕ್ಕೆ ರಜೆ. ನನಗೊಂದೇ ಆಫೀಸ್ ಅಲ. ರಜೆ ಇದ್ರೆ ಎಷ್ಟು ಚೆನ್ನಾಗಿತ್ತು ಅಂತ ಮನಸಲ್ಲಿ ಅಂದುಕೊಳ್ಳುತ್ತ ಬಸ್ ಹತ್ತಿದೆ. ಬಸ್ನಲ್ಲಿ ಕುಳಿತು ಕಿಟಿಕಿ ಆಚೆ ನೋಡುವುದು ನಂಗೆ ಪಂಚಪ್ರಾಣ. ಅಲ್ಲಿ ಸಿಗುವ "ಏಕಾಂತ "ನನಗೆ ತುಂಬಾ ತುಂಬಾ ಇಷ್ಟ.ಗಾಳಿಗೆ ಮುಖಒಡ್ಡಿ ಕೂರುತ್ತೇನೆ. ಅಬ್ಬ! ಎಂಥ ಸುಖವಿದೆ !!! ಹಾಗೇ ಹೋಗುತ್ತಿರಬೇಕಾದರೆ ಒಂದು ಮನೆಯಾಚೆ ಒಂದು ಹೆಂಗಸು, ಸುಮಾರು ನನ್ನ ಅಮ್ಮನ ವಯಸ್ಸಿರಬಹುದು . ಮನೆ ಅಂಗಳವನ್ನು ಸಗಣಿ ಹಾಕಿ ಸಾರಿಸಿ ರಂಗೋಲಿ ಹಾಕುತ್ತಿದ್ದರು. ನೋಡಿ ಬಹಳ ಸಂತೋಷ ಆಯಿತು. ಅಬ್ಬ! ದಿನೇ ದಿನೇ ಯಾಂತ್ರಿಕವಾಗುತ್ತಿರುವ ಬದುಕಿನ ಮದ್ಯದಲ್ಲೂ ಈ ಮಹಿಳೆ ರಂಗೋಲಿ ಹಾಕುವಂತ ತಾಳ್ಮೆ ಹೊಂದಿದಾಳಲ್ಲ ಅಂತ ಖುಷಿ ಆಯಿತು.


ನನಗಿನ್ನೂ ನೆನೆಪಿದೆ. ಯಾವುದಾದರು ಹಬ್ಬ ಬಂದರೆ ಅಮ್ಮನ ಬಳಿ " ಅಮ್ಮ ನನಗೆ ಸಗಣಿ ಮುಟ್ಟಲು ಒನ್ ತರ. ನೀನೆ ಸಗಣಿ ಹಾಕಿ ಸಾರಿಸಿ ಕೊಡು ನಾನು ರಂಗೋಲಿ ಹಾಕುತ್ತೀನಿ ಅಂತ ಹೇಳುತ್ತಿದ್ದುದ್ದು . ನಾನು , ನನ್ನ ತಂಗಿ ನಾನು ರಂಗೋಲಿ ಹಾಕುತ್ತೀನಿ, ನಾನು ಹಾಕುತ್ತೀನಿ ಅಂತ ಕಿತ್ತಾಡುವಾಗ, ಅಮ್ಮ ಬಂದು ಸರಿ ಇಬ್ಬರು ಒಂದೊಂದು ಹಾಕಿ ಹೇಳಿದಾಗ, ನಾನು ,ತಂಗಿ compromise ಮಾಡಿ ಕೊಂಡು ಒಂದೇ ದೊಡ್ಡ ರಂಗೋಲಿ ಹಾಕೋಣ, 15 ರಿಂದ 8 ಹಾಕೋಣ? ಅಥವ 17 ರಿಂದ 9 ಹಾಕೋಣ ?ಬಾತುಕೋಳಿಗೆ ಯಾವ ಬಣ್ಣ? ಶಂಖಕ್ಕೆ ಯಾವ ಬಣ್ಣ ಅಂತ ಮಾತಾಡಿಕೊಂಡು ರಂಗೋಲಿ ಹಾಕುತ್ತಿದ್ವಿ. ಯಾಕೋ ನೆನಪಾಗಿ ಬೇಸರವಾಯಿತು. ಕಿರು ನಗೆ ಬಂತು ನನಗೆ.


"ನೆನಪಲ್ಲೇ ನಾ ಉಸಿರಾಡಿದೆ ,
ನೆನಪಲ್ಲೇ ನಾ ಜೀವಿಸಿದೆ "


ಈ ನೆನಪುಗಳೇ ಹೀಗೆ ಅಲ್ಲವ? ನೆನಪಿನ ದೋಣಿಯಲ್ಲಿ ತೇಲಾಡಲು ಏನೋ ಸಂತೋಷ!!!


ಅಪ್ಪನ ಹತ್ತಿರ ಹಠ ಮಾಡಿ 200 ಪುಟಗಳ 2 small size notebook ತರಿಸಿಕೊಂಡು , ಚುಕ್ಕಿ ರಂಗೋಲಿ ಗೆ ಒಂದು, ಬಳ್ಳಿ ರಂಗೋಲಿ ಗೆ ಒಂದು ಅಂತ ಎರಡು ಪುಸ್ತಕವನ್ನು ಮಾಡಿಟ್ಟುಕೊಂಡು, ಯಾರ ಮನೆ ಎದುರಿಗೆ ರಂಗೋಲಿ ಹಾಕಿದರು ಅದನ್ನು ನೋಡಿಕೊಂಡು ತಕ್ಷಣ ಮನೆಗೆ ಬಂದು ಅದನ್ನು ಪುಸ್ತಕದಲ್ಲಿ ಸೇರಿಸುತಿದ್ದೆ. ಹಿಂಗೆ ಮಾಡಿ ನನ್ನ ಹತ್ತಿರ ಕಡಿಮೆ ಅಂದರೂ 500 ರಂಗೋಲಿಗಳು ಶೇಖರವಾಗಿದ್ದವು . ಆದರೆ free hand ರಂಗೋಲಿ ಮಾತ್ರ ನನಗೆ ಕಡೇ ಓರೆಗೂ ಬಿಡಿಸಲು ಬರಲೇ ಇಲ್ಲ. ಎಷ್ಟೋ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಕೂಡ ಗೆದ್ದಿದ್ದೆ. ಆದ್ರೆ ಈಗ ರಂಗೋಲಿ ಹಾಕದೆ ಹತ್ತಿರ 2.5 ವರುಷಗಳು ಕಳೆದೇ ಬಿಟ್ಟಿದೆ. ಯಾಕೋ ಹಬ್ಬದಂದು ಇದನೆಲ್ಲ ಮಿಸ್ ಮಾಡಿಕೊಲ್ಳುತ್ತಿದ್ದೆನಲ್ಲ ಅಂತ ಮನಸಲ್ಲೇ ಅಂದುಕೊಂಡು , ರಜೆ ಕೊಡದ tl ನಾ ಮನಸಲ್ಲೇ ಧಾರಾಳವಾಗಿ ಬೈದುಕೊಂಡು ಆಫೀಸ್ ನೆಡೆಗೆ ಹೊರಟೆ.


=====****====****======


ಸ್ನೇಹಿತರೇ ,

ನಿಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಯುಗಾದಿಯು ನಿಮ್ಮ ಬದುಕಿನಲ್ಲಿ ಸಿಹಿ ತರಲಿ ಅಂತ ನಿಮ್ಮ ಈ ಗೆಳತಿಯ ಹಾರೈಕೆ.... :-)

19 ಕಾಮೆಂಟ್‌ಗಳು:

sunaath ಹೇಳಿದರು...

೫೦೦ ರಂಗೋಲಿಗಳು ನಿಮ್ಮ ಸಂಗ್ರಹದಲ್ಲಿ!
ದಿವ್ಯಾ, ನಿಮ್ಮನ್ನು ರಂಗೋಲಿ-ಮಾಸ್ಟರ್ ಎಂದು ಕರೆಯಬುದು! ಯುಗಾದಿಯ ಶುಭಾಶಯಗಳು.

Guruprasad ಹೇಳಿದರು...

ಎಷ್ಟೇ ಆದರು .... ನೆನಪುಗಳೇ ಹಾಗೆ ಅಲ್ಲವೇ.....ತುಂಬಾ ಚೆಂದದ ಬರಹ,,, ೫೦೦ ರಂಗೋಲಿಗಳ ಸಂಗ್ರಹಕ್ಕೆ ಧನ್ಯವಾದಗಳು.....
ಬಿಡುವಾದಾಗ ಅದನ್ನು ಹಾಕುತ್ತ ಇರಿ... :-)
ನಿಮ್ಮ ಹಾಗೆ ನಾನು ಕೂಡ ಇವೊತ್ತು ಆಫೀಸ್ ಗೆ ಬಂದಿದ್ದೇನೆ... :-( ಸೊಡೋಂಟ್ ವರಿ,, ನಿಮ್ಮ ಕಂಪನಿ ಗೆ ನಾನು ಇದ್ದೇನೆ :-)
ನಿಮಗೂ ಹಾಗು ನಿಮ್ಮ ಪರಿವಾರದವರಿಗೂ ಯುಗಾದಿ ಹಬ್ಬದ ಹೊಸ ಸಂವತ್ಸರದ ಶುಭಾಶಯಗಳು
ಗುರು

ಮನಸು ಹೇಳಿದರು...

divya rangoli oLLe collection, namgu kalsi naanu kuwaitna maralamallige magazinege akteeni....

yugadi shubhashayagaLu

shivu.k ಹೇಳಿದರು...

ಮೇಡಮ್,

ರಂಗೋಲಿಗಳ ಒಳ್ಳೇ ಕಲೆಕ್ಷನ್ ನಿಮ್ಮ ಬಳಿಯಿದೆ ಅಂತಾಯ್ತು...ನಿಮ್ಮ ರಂಗೋಲಿ ನೆನಪು ಕೂಡ ಚೆನ್ನಾಗಿದೆ...

ಯುಗಾದಿಯ ಶುಭಾಶಯಗಳು.

V.R.BHAT ಹೇಳಿದರು...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

ದಿನಕರ ಮೊಗೇರ ಹೇಳಿದರು...

ದಿವ್ಯಾ,
ಯಾಂತ್ರಿಕ ಜಗತ್ತು ನಮ್ಮಿಂದ ಏನೆಲ್ಲಾ ಕಿತ್ತುಕೊಲ್ಲತ್ತೆ ಆಲ್ವಾ...... ತುಂಬಾ ಚಿಕ್ಕದಾದ ನೆನಪಲ್ಲಿ ತುಂಬಾ ಹೇಳಿದ್ದೀಯಾ..... ನಿಮಗೂ ಉಗಾದಿ ಹಬ್ಬದ ಶುಭಾಶಯ............

Subrahmanya ಹೇಳಿದರು...

ನೆನಪುಗಳ ಮಾತು ಮಧುರ. ಶುಭಾಶಯಗಳು.

ಸೀತಾರಾಮ. ಕೆ. / SITARAM.K ಹೇಳಿದರು...

ತಮ್ಮ ರ೦ಗೋಲಿ ಸ೦ಗ್ರಹಗಳನ್ನು ಸ್ಕಾನ ಮಾಡಿ ಬ್ಲೊಗ್-ಗೆ ಏರಿಸಿ. ತಮಗೂ ಯುಗಾದಿಯ ಶುಭಾಶಯಗಳು. ರಜೆ ಇರದಿದ್ದರೇ ರಜೆ ಹಾಕಬಹುದಿತ್ತು ಅಲ್ಲವೇ. ಮನಸ್ಸಿಗನ್ನಿಸಿದ್ದನ್ನು ಮಾಡಿ ಬಿಡಬೇಕು. ಏನ೦ತೀರಾ!

ಸವಿಗನಸು ಹೇಳಿದರು...

ದಿವ್ಯ,
ನಿಮಗೆ ರಂಗೋಲಿ ನೋಡಿ ನೆನಪಾದ ಹಾಗೆ ನನಗೂ ತುಂಬ ನೆನಪಾಯಿತು....
ನಾವು ತುಂಬ miss ಮಾಡಿ ಕೊಳ್ಳುತ್ತ ಇದ್ದೀವಿ ಹಬ್ಬಗಳನ್ನು...
ನಿಮಗೆಲ್ಲರಿಗೂ ಯುಗಾದಿಯ ಶುಭಹಾರೈಕೆಗಳು....
ಹೊಸ ವರುಷ ಇನ್ನಷ್ಟು ಹರುಷವನ್ನು ತರಲಿ...

Naveen ಹಳ್ಳಿ ಹುಡುಗ ಹೇಳಿದರು...

ದಿವ್ಯಕ್ಕ..ನನ್ನ ಬಾಲ್ಯದ ದಿನಗಳ್ಳನ್ನ ನೆನಪಿಸಿ ಅಳಸಿದ್ದಕ್ಕೆ ಧನ್ಯವಾದಗಳು... ನಿನಗೂ ಕೂಡ ಯುಗಾದಿ ಹಬ್ಬದ ಶುಭಾಶಯಗಳು..

ಮನಸಿನ ಮಾತುಗಳು ಹೇಳಿದರು...

ಮನಸು ಮೇಡಂ,
ಕಳಿಸುತ್ತೇನೆ... :-)

***********
ನವೀನ,
ನಾನುನಿನಗೆ ಅಕ್ಕ ಅಲ್ಲ...:-( ತಂಗಿ ....

akshata ಹೇಳಿದರು...

ನೆನಪುಗಳು ಹಾಗೇ ಅಲ್ಲವೆ? ಖಾಲಿಯಿದ್ದಾಗ ಬಂದು ಕಚಗುಳಿಯಿಟ್ಟು ಹೋಗುತ್ತ್ವೆ. ನಿಮ್ಮಲ್ಲಿ ರಂಗೋಲಿ ಕಲೆಕ್ಷನ್ನ್ ಇದ್ದಂತೆ ನನ್ನಲ್ಲಿ ಹಳೆಯ ಹಿಂದಿ ಹಾಡಿನ ಆರುನೂರು ಕಲೆಕ್ಷನ್ ಇತ್ತು.
ಅಕ್ಷತ.

Naveen ಹಳ್ಳಿ ಹುಡುಗ ಹೇಳಿದರು...

ಕ್ಷಮಿಸಿ ದಿವ್ಯ.. ಎಲ್ಲರಿಗಿಂತ ಕಿರಿಯವ ಅನ್ನುವ ಭಾವ ನನ್ನದು...

jithendra hindumane ಹೇಳಿದರು...

ಸವಿ ನೆನಪುಗಳು ಮಧುರ...

ಮತ್‌ಎ ಸಗದಲ್ಲ ಆ ಕಾಲ? ಎಲ್ಲ ಕಾಲನ ದವಡೆಗೆ ಸಿಕ್ಕು ಹೋಯ್ತು....

Ranjita ಹೇಳಿದರು...

nice post divya ... houdu .. namageega avella nenapu matra :(

ಸಾಗರಿ.. ಹೇಳಿದರು...

ರಂಗೋಲಿ ಹಾಕುವ ಕಲೆ ನಮ್ಮೂರ ಜನಕ್ಕಿಂತಲೂ ಬೆಂಗಳೂರು ಜನರಿಗೆ ತುಂಬಾ ಚೆನ್ನಾಗಿ ಬರತ್ತೆ ಅಂತ ನಂಗೆ ಯವಾಗಲೂ ಅನ್ನಿಸುತ್ತಿರತ್ತೆ. ಇಲ್ಲಿನ ಜನ ದಿನ ಬೆಳಿಗ್ಗೆ ಎದ್ದು ಬಾಗಿಲು ತೊಳೆದು ರಂಗೋಲಿ ಇಟ್ಟೇ ಮುಂದಿನ ಕೆಲಸಕ್ಕೆ ಹೋಗುತ್ತಾರೆ, ಅವರು ರಂಗೋಲಿ ಇಡುವ ಪರಿಯೂ ಅಷ್ಟೇ ಆಕರ್ಷಕ, ೩-೪ ಎಳೆಗಳನ್ನು ಒಮ್ಮೆಗೇ ಬಿಡುತ್ತರೆ ಅಲ್ವಾ??? ನೀವೂ ಬಹಳ ಸುಂದರವಾಗಿ ರಂಗೋಲಿ ಹಾಕುತ್ತೀರಿ ಅನ್ನಿಸತ್ತೆ. ನನಗೂ ನನ ರಂಗೋಲಿಗಳ ನೆನಪು ಬಂತು..

ಸಾಗರದಾಚೆಯ ಇಂಚರ ಹೇಳಿದರು...

ದಿವ್ಯಾ
ರಂಗೋಲಿ Collection ಕೇಳಿ ಬೆರಗಾದೆ
ಕೆಲವು ಹವ್ಯಾಸಗಳು ಮನಸ್ಸಿಗೆ ಮುದ ನೀಡುತ್ತವೆ
Happy Ugadi

ಜಲನಯನ ಹೇಳಿದರು...

ದಿವ್ಯಾ...ನಿನಗೆ ನೀರು ಅಂದ್ರೆ ಸ್ವಲ್ಪ ಹೆದರಿಕೇನಾ...? ಜಲನಯನಕ್ಕೆ ಬಂದೇ ಇಲ್ಲ ಈ ಮಧ್ಯೆ.....??? ಹಹಹ....ಉಗಾದಿಯ ಹಾರ್ದಿಕ ಶುಭಾಷಯಗಳು...ರಂಗೋಲಿ ಹೆಣ್ಣಿನ ಸೃಜನಶೀಲತೆ ಪ್ರದರ್ಶನದ ಇನ್ನೊಂದು ವೇದಿಕೆ.....ಚನ್ನಗಿದೆ ಲೇಖನ....

ಮನಸಿನ ಮಾತುಗಳು ಹೇಳಿದರು...

sunaath ಅವರೇ,
ಧನ್ಯವಾದಗಳು.. :)

Guru , thankyou :)

ಶಿವು ಸರ್, ಧನ್ಯವಾದಗಳು.. :)

ವಿ.ಆರ್.ಭಟ್ ಸರ್, ನಿಮಗೂ ಶುಭಾಶಯಗಳು.. :)

ದಿನಕರ ಮೊಗೇರ. ,ಶಂಭುಲಿಂಗ, . ಧನ್ಯವಾದಗಳು.. :)

ಸೀತಾರಾಮ. ಕೆ, ನಾನು ರಜೆ ಕೇಳಿದ್ದೆ ಆದ್ರೆ ನಮ್ ಮ್ಯಾನೇಜರ್ ಕೊಡಲಿಲ್ಲ.. :(


ಸವಿಗನಸು ,ಥ್ಯಾಂಕ್ಸ್.

akshata , ಒಹ್ good...:) ಥ್ಯಾಂಕ್ಸ್

Naveen... , ಹಾಗಾದ್ರೆ ಸರಿ ...:)

jithendra hindumaneಸರ್, ಹೌದು...
ಧನ್ಯವಾದ..

Ranjita hmm, :(
ಸಾಗರಿ.. , ಸಾಗರದಾಚೆಯ ಇಂಚರ,ಧನ್ಯವಾದಗಳು ... :)

ಜಲನಯನ ಸರ್,
ನೀರು ಕಂಡರೆ ಹೆದರಿಕೆ ಏನು ಇಲ್ಲ... ಆಕರ್ಷಣೆಯೂ ಇಲ್ಲ ..ಹ ಹ..
ಧನ್ಯವಾದಗಳು.. :)