ಶನಿವಾರ, ಮಾರ್ಚ್ 13, 2010

ನಾವ್ಯಾಕೆ ಬ್ಲಾಗಿಂಗ್ ಮಾಡಬೇಕು???

"ಈ ಬ್ಲಾಗು ಅನ್ನೋದು ಬರಿ ಓದಿದವರೇ ಮತ್ತೆ ಓದುತ್ತಾರೆ.. ಅವರೇ ಕಾಮೆಂಟ್ ಹಾಕುತ್ತಾರೆ ... ಹೊರಗಿನವರಿಗೆ ಅದು ಮುಟ್ಟುವುದಿಲ್ಲ... ಏನು ಹೇಳಬೇಕು ಅಂತ ಇದಿವೋ ಅದು ಎಲ್ಲರಿಗೂ ತಲುಪುವುದಿಲ್ಲ ...ಅದಕ್ಕೆ ನಾನು ಬ್ಲಾಗಿಸುವುದನ್ನು ಬಿಟ್ಟಿದ್ದೀನಿ. ಅದೇ ಪುಸ್ತಕದಲ್ಲಿ ಬರೆದರೆ ಸಾವಿರಾರು ಜನಕ್ಕೆ ತಲುಪುತ್ತದೆ" ....
******************

ಹೀಗಂತ ನನ್ನ ಒಬ್ಬ ಕಥೆಗಾರ ಕಂ ಬ್ಲಾಗಿಗ ಮಿತ್ರ ಹೇಳಿದಾಗ "ಅಲ್ಲ " ಅಂತ ಹೇಳಲಾಗಲಿಲ್ಲ. ಹೌದು... ಅವನು ಹೇಳುವುದು ನಿಜವೇ ಅಲ್ಲವ? ಬ್ಲಾಗಿಂಗ್ ಮಾಡಲು ಮೊದಲು ನಿಮಗೆ ಸ್ವಂತದ್ದೊಂದು computer ಬೇಕು, ಅದಾದ ಮೇಲೆ "internet connection" ಬೇಕು. ಇದಲ್ಲದೆ ಸಾಕಷ್ಟು "time "ಬೇಕು. keyboard ನಲ್ಲಿ ಕನ್ನಡ ಅಕ್ಷರಗಳನ್ನು ಕುಟ್ಟಲು "patience " ಬೇಕು. ಆಮೇಲೆ ಬರುವುದು "publicity". ಬ್ಲಾಗ್ ಶುರು ಮಾಡಿದಾಗ ನಾಲ್ಕಾರು ಬ್ಲಾಗಿಗೆ ಭೇಟಿ ಕೊಡಬೇಕು . ಅವರ ಬರಹಕ್ಕೆ ಪ್ರತಿಕ್ರಯಿಸಬೇಕು. ನಿಮ್ಮ ಬ್ಲಾಗಿನೆಡೆ ಅವರನ್ನೂ ಕರೆಸಿಕೊಳ್ಳಬೇಕು .orkut , google buzz ,twitter, ಇಂಥ social network ಗಳು ಎಲ್ಲೆಲಿವೆಯೂ ಅಲ್ಲೆಲ್ಲ ನಮ್ಮ ಬ್ಲಾಗ್ ಲಿಂಕುಗಳ ಪ್ರದರ್ಶನ ನಡೆಸಬೇಕು. (ಇದ್ಯಾವುದನ್ನು ಮಾಡದೆ ಹೆಸರು ವಾಸಿಯಾದ ಬ್ಲಾಗರ್ ಗಳಿರಬಹುದು. every generalisation has an exception... :-)) ಹೀಗೆ ಬ್ಲಾಗ್ ಲೋಕ ನೋಡಲು ಸಾಮಾನ್ಯವಾಗಿ ಕಂಡರೂ ಒಳಗಿರುವ ಎಷ್ಟೋ ಕಣ್ಣಿಗೆ ಕಂಡರೂ ಕಾಣದ, ಅರಿವಿಗೆ ಬಂದರೂ ಬಾರದ ಎಷ್ಟೋ ವಿಷಯಗಳು ಅಡಕವಾಗಿವೆ ಅಲ್ಲವ??.. :-)


ಎಷ್ಟೋ ಜನರು ಬರೆಯುತ್ತಾರೆ. ಎಷ್ಟೋ ಜನರು ವಾರ ಪತ್ರಿಕೆ , ದಿನ ಪತ್ರಿಕೆಗಳಿಗೆ ತಮ್ಮ ಲೇಖನಗಳನ್ನು ಕಳಿಸಿಯೂ ಇರುತ್ತಾರೆ. ಆದರೆ ಇದರಲ್ಲಿ ಎಷ್ಟು ಜನರ ಲೇಖನಗಳು ಪ್ರಕಟವಾಗಲು ಸಾದ್ಯ ? ಪತ್ರಿಕಾ ಸಮೂಹದಲ್ಲಿ ಪರಿಚಯಸ್ತರು ಇದ್ದರೆ , ಕೆಲವೊಮ್ಮೆ ಲೇಖನಗಳಲ್ಲಿ ಅಂತಹ ಗುಣಮಟ್ಟ ಇಲ್ಲದಿದ್ದರೂ ಕೆಲವೊಮ್ಮೆ ಕೆಲವು ಲೇಖನಗಳು ಪ್ರಕಟಗೊಂಡಿರುತ್ತದೆ. (ಉದಾ ಕೊಡಿ ಅಂತ ಕೇಳಬೇಡಿ . ನಿಮಗೆಲ್ಲಾ ಗೊತ್ತೇ ಇದೇ.. :-))..... ಇನ್ನು ನಿಮ್ಮ ಲೇಖನಗಳು ಚೆನ್ನಾಗಿದ್ದರೆ ಎಲ್ಲೋ 10 ಲೇಖನಗಳನ್ನು ಕಳಿಸಿದಾಗ ಒಂದು ಪ್ರಕಟವಾಗಬಹುದು. ಆದರಿಂದ ನಾವು ಬರೆಯುವ ಬರಹಗಳನ್ನು ಹೊರ ಹಾಕಲು, ಜನರಿಗೆ ತಲುಪಿಸಲು ಪತ್ರಿಕೆಗಳೊಂದನ್ನೇ ನಂಬಿಕೊಂಡಿರಲು ಸಾದ್ಯ ಇಲ್ಲವೇ ಇಲ್ಲ . ಅಲ್ಲವ?
******************


ಮತ್ತೆ ಇನ್ನೊಂದು ವಿಷಯ . ಜನರು ಪುಸ್ತಕದಲ್ಲೋ, ಬಿಡಿ ಹಾಳೆಯಲ್ಲೋ, ತಮ್ಮ ಬರಹಗಳನ್ನು ಬರೆದು ಬಚ್ಚಿಡುವುದಕ್ಕಿಂತ ತಮ್ಮ ಬ್ಲಾಗ್ನಲ್ಲಿ ಅದನ್ನು ಪ್ರಕಟಿಸಿದರೆ , ಕಡೆ ಪಕ್ಷ ಕೆಲವರಾದರು ಅದನ್ನು ಓದುತ್ತಾರೆ. ಒಳಿತಿದ್ದರೆ ಹೊಗಳುತ್ತಾರೆ, ತಪ್ಪಿದ್ದರೆ ತಿದ್ದುತ್ತಾರೆ, etc etc .ಒಂದು ಮಾತಿದೆಯಲ್ಲ " human beings crave for appreciation "ಅಂತ. ಬರೆದವರಿಗೆ , ಓದಿದವರು ಒಂದೆರಡು ಮೆಚ್ಚಿಗೆಯ ಮಾತಾಡಿದರೆ ಖಂಡಿತ ಸಂತೋಷ ಆಗದೆ ಇರಲು ಸಾದ್ಯವಿಲ್ಲ. ಅದಕ್ಕೆ ಬ್ಲಾಗ್ ಬರೆಯಲು ನನ್ನ 100% ಸಹಮತವಿದೆ. ಯಾರಿಗೂ ನೋವಾಗದಂತೆ, ಮನಸಿನ ಅನಿಸಿಕೆಯನ್ನು ಹಂಚಿಕೊಳ್ಳಲು, ನಾವು ಬರೆದಿದ್ದನ್ನು ತೆರೆದಿಡಲು ಇದೊಂದು ಅತ್ಯುತ್ತಮ ವೇದಿಕೆ. ನಮ್ಮ ಬ್ಲಾಗಿಗೆ ನಾವೇ owner. ಅದಕ್ಕೆ ಯಾರ approval ಬೇಕಾಗಿಲ್ಲ .ಇದು ಬಹುಷಃ ಎಲ್ಲ ಬ್ಲಾಗಿಗರ ಮನಸಿನ ಮಾತುಗಳಿರಬಹುದು. (ಅಲ್ಲದೆನೂ ಇರಬಹುದು ..... ;-))
thanks to blogger .... :-). ಏನಂತಿರ? .... :-)

18 ಕಾಮೆಂಟ್‌ಗಳು:

ಚುಕ್ಕಿಚಿತ್ತಾರ ಹೇಳಿದರು...

houdu...
nanna manasina maatige blog sarala maadhyama..

Subrahmanya ಹೇಳಿದರು...

ಸರಿಯಾಗಿ ಹೇಳಿದ್ದೀರಿ. ಇದು ನಿಜವಾಗಲೂ ನನ್ನಮನಸಿನ ಮಾತೂ ಹೌದು. ಪತ್ರಿಕೆಗಳಲ್ಲಿ ಬರುವುದೆಲ್ಲಾ ಗುಣಮಟ್ಟದ್ದೇ ಆಗಿರಬೇಕೆಂದೂ ಇಲ್ಲ. ನಮಗೆ ಇದು powerful ಮಾಧ್ಯಮವೇ ಸರಿ. Good ..Thank u

ಸೀತಾರಾಮ. ಕೆ. / SITARAM.K ಹೇಳಿದರು...

ನಮ್ಮ ಮನಸಿಗನಿಸಿದ್ದನ್ನು ಬರೆದು ಪತ್ರಿಕೆಗೆ ಕಳುಹಿಸುತ್ತೆವೆ.
ಪತ್ರಿಕೆಯವರು ಪ್ರಕಟಿಸಬಹುದು-ಪ್ರಕಟಿಸಲಿಕ್ಕಿಲ್ಲ.
ಪ್ರಕಟಿಸಿದರೆ ಸಾವಿರಾರು ಜನಕ್ಕೆ ಮುಟ್ಟುತ್ತೆ.
ಇಲ್ಲವಾದಲ್ಲಿ ಕ ಬು ಸೇರಿ ನೇಪಥ್ಯವಾಗುತ್ತೆ.
ಬ್ಲೊಗ್-ಹಾಗಲ್ಲ. ನಿಮ್ಮ ಬರಹ ಕನಿಷ್ಠ ನಾಲ್ಕು ಜನಕ್ಕಾದರೂ ( ನೀವೆ ಮಾಡಿಕೊ೦ಡ) ಮುಟ್ಟತ್ತದಲ್ಲವೇ!!
ತಮ್ಮ ಲೇಖನ ತು೦ಬಾ ಸತ್ಯವಾದುದು.
ಎಲ್ಲಕ್ಕಿ೦ತ ಮಿಗಿಲಾಗಿ ನಮ್ಮ ಬರಹ ನಾಲ್ಕು ಜನ ಓದಬಹುದಾದ ತಾಣದಲ್ಲಿ ಬ೦ದಿದೆಯಲ್ಲ ಎ೦ಬ ಖುಷಿ ಇದೆಯಲ್ಲ ಅದು ದೊಡ್ಡದು (ಯಾರು ಅಲ್ಲಿ ಓದದಿದ್ದರೂ ಸಹಾ)

ಸವಿಗನಸು ಹೇಳಿದರು...

ಬ್ಲಾಗ್ ಬರೆಯೋದರೆಲ್ಲಿ ಓದುವುದರಲ್ಲಿ ಎನೋ ಒಂತರಹ ಖುಷಿ....
ಚೆನ್ನಾಗಿ ಬರೆದಿದ್ದೀರಿ....

ಅಲೆಮಾರಿ ಹೇಳಿದರು...

nice post akkayya...

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ನಿಜ ದಿವ್ಯಾ...
ಸರಿಯಾಗಿ ಹೇಳಿದ್ದೀರಿ.

sunaath ಹೇಳಿದರು...

ದಿವ್ಯಾ,
ನಮ್ಮ blog ಅಂದರೆ ನಮ್ಮದೇ personal ಪತ್ರಿಕೆ ಇದ್ದಂತೆ. ಪತ್ರಿಕೆಗಳ circulation ನಮಗೆ ಇರದಿದ್ದರೂ ಸಹ, ಕೆಲವರಾದರೂ ಸಹೃದಯರಿಗೆ ನಾವು ತಲುಪುತ್ತೇವಲ್ಲ, ಸಾಕು.

ದಿನಕರ ಮೊಗೇರ ಹೇಳಿದರು...

satya.... satya...... blog yaarigalladiddaroo, namagaagi bareyabahudu........

ಜಲನಯನ ಹೇಳಿದರು...

ದಿವ್ಯಾ...ನಿಮ್ಮ ಮಾತನ್ನು ಒಪ್ಪುವುದಕ್ಕೆ ಪೂರ್ತಿಮನಸ್ಸಿಲ್ಲದಿದ್ದರೂ...ತಲೆ ಮೇಲೆ ಕೆಳಗೂ ಅಲ್ಲದೇ ಅಡ್ಡಡ್ಡವೂ ಅಲ್ಲದೇ ಓರೆಕೋರೆಯಾಗಿ ಓಡಿದೆ...ಹೌದು..ನಾನು ಮೊದಲಿಗೆ ಪತ್ರಿಕೆಗೆ ಕಳುಹಿಸಿ ವಿಕ್ರಮ ಭೇತಾಳನ್ನ ಹಿಡಿದು ವಶಪಡಿಸೋ ತರಹ ಪರದಾಡಿ ಎಲ್ಲ ಕ.ಬು. ಕಂಡಾಗ...ನಾನು ಕೈ ಬಿಟ್ಟೆ ಲೇಖನ ಅಥವಾ ಕವನ ಪತ್ರಿಕೆಗೆ ಹಾಕುವುದನ್ನು....ಬ್ಲಾಗಿನಲ್ಲಿ ಒಂದಂತೂ ನಿಜ ಓದಲಿ ಬಿಡಲಿ ನನ್ನ ಲೇಖನ, ಕವನ, ನೆಟ್ ನಲ್ಲಿದೆ ಆನ್ನೋ ಸಮಾಧಾನ...ಯಾರಾದ್ರೂ ಓದೇ ಓದ್ತಾರೆ ಅನ್ನೋಕೆ...ಮುಖ್ಯ ಸಾಧನ...ಗೂಗಲ್ ಎಂಬುವ ನಮ್ಮ ಸ್ನೇಹಿತ....ನಿಮಗೂ ಅನುಭವವಾಗಿರಬೇಕು...ನಾವು ಹುಡುಕುವ ವಿಷಯ ಅಪರಿಚಿತ ಬ್ಲಾಗಿಯ ತಾಣಕ್ಕೆ ಕೊಂಡೊಯ್ಯುತ್ತೆ.....ಸ್ಥಾಪಿತ ಲೇಖಕರಿಗೆ ಬ್ಲಾಗ್ ಪ್ರಮುಖ ಸಾಧನವಾಗದಿದ್ದರೂ ತಮ್ಮ ಲೇಖನದ ಲಿಂಕನ್ನು ಕೊಡುವ ಮೂಲಕ ಅದರ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಬಹುದು....ಒಳ್ಳೆಯ ಪೋಸ್ಟ್...

Raghu ಹೇಳಿದರು...

ನಮಗನ್ನಿಸಿರೋದನ್ನ ನೇರವಾಗಿ ಬರಿಯೋಕ್ಕೆ ಬ್ಲಾಗ್ ಬೇಕು... ನೀವೇ ನೋಡಿ ಅನ್ನಿಸ್ಸಿದನ್ನ ಸೀದಾ ಹೇಳಿದ್ದಿರಿ.. ಇಷ್ಟ ಆಯಿತು..
ನಿಮ್ಮವ,
ರಾಘು.

balasubramanya ಹೇಳಿದರು...

ಇಂದು ಬ್ಲಾಗ್ ಲೋಕದ ಬರಹಗಳು ಪತ್ರಿಕೆಗಳಲೋಕಕ್ಕಿಂತ ಉತ್ತಮವಾಗಿದೆ. ಪತ್ರಿಕೆಗಳಲ್ಲಿನಹಾಗೆ ಬ್ಲಾಗಿಗರು ಯಾವುದೇ ಖಾಸಗಿ ಕಾರ್ಪೊರೇಟ್ ಸಂಸ್ತೆಗಳ ಹಾಗೆ ಯಾರನ್ನು ಓಲೈಸಲು ಬರೆಯಬೇಕಾದ ಹಂಗಿಲ್ಲ.ತಮಗೆ ಅನ್ನಿಸಿದ್ದನ್ನು ನಿರ್ಭಯವಾಗಿ ಅಭಿವ್ಯಕ್ತ ಪಡಿಸಲು ಉತ್ತಮ ವೇಧಿಕೆಯಾಗಿದೆ.ನಿಮ್ಮ ಅನಿಸಿಕೆ ಸರಿಯಾಗಿದೆ.

ಮನಸು ಹೇಳಿದರು...

nija nimma maatu

jithendra hindumane ಹೇಳಿದರು...

ನಮ್ಮ ಭಾವನೆಗಳ ಅಭಿವ್ಯಕ್ತಿಗೆ ಸೂಕ್ತ ವೇದಿಕೆ ಈ ಬ್ಲಾಗ್ ಅಂತ ನನ್ನ ಅನಿಸಿಕೆ. ಯಾರಾದ್ರು ಓದಿ ಕಮೆಂಟಿಸಿದರೆ ಅದೇ ಸಂತೋಷ...!
ಬರಹ ಚೆನ್ನಾಗಿದೆ....

ಶರಶ್ಚಂದ್ರ ಕಲ್ಮನೆ ಹೇಳಿದರು...

ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ... ಬ್ಲಾಗ್ ಬರೆಯುವುದರಲ್ಲಿ ಯಾರ ಹಂಗಿಗೂ ಒಳಗಾಗುವುದಿಲ್ಲ ಎಂಬ ಸಂತೋಷ ಇದೆ...

ಮನಸಿನ ಮಾತುಗಳು ಹೇಳಿದರು...

ಧನ್ಯವಾದಗಳು.... :-)

ಶಿವಪ್ರಕಾಶ್ ಹೇಳಿದರು...

you are right divya :)

ಮನಸಿನ ಮಾತುಗಳು ಹೇಳಿದರು...

ಶಿವಪ್ರಕಾಶ್ , thanku.. :)

ಶಿವರಾಮ ಭಟ್ ಹೇಳಿದರು...

ನಮಸ್ಕಾರ.ತುಂಬಾ ಸತ್ಯ. ನನಗನ್ನಿಸಿದ್ದು ಕೂಡ ಹೀಗೆ.
ನಮ್ಮ ಆತ್ಮೀಯರೊಂದಿಗೆ ಇದು ಸರಳ "iteractive " ಮಾಧ್ಯಮ.
ಇಲ್ಲಿ ಓದುಗರನ್ನು ಗಳಿಸುವುದು ಲೇಖಕನ ನೈಜ ಪ್ರತಿಭೆ,ಶೈಲಿ ಮತ್ತು ಜನಪ್ರಿಯತೆ.
ನಿಮ್ಮ ಬರಹ ತುಂಬಾ ಇಷ್ಟ ಆಯಿತು ಅನ್ನದೆ ಸುಮ್ಮನಿರಲು ನನ್ನಿಂದ ಸಾಧ್ಯವಾಗಲಿಲ್ಲ.
ಶಿವರಾಂ ಭಟ್