ಮಂಗಳವಾರ, ಮಾರ್ಚ್ 02, 2010

ಹೆಸರಿಲ್ಲದ ಮಿಡಿತಗಳು ....

ಮಾತಾಡುವ ಮನಸ್ಸು ಮೂಕವಾಗಿಬಿಟ್ಟರೆ? ಸದಾ ನಗುನಗುತ್ತಿರುವ ತುಟಿಗಳು ಬಿಗಿದು ಕೊಂಡರೆ? ಹಾಡುವ ಕೋಗಿಲೆ ಸುಮ್ಮನಾಗಿಬಿಟ್ಟರೆ? ಭೊರ್ಘರೆಯುವ ಸಮುದ್ರವು ನಿಸ್ಚಲವಾದ್ರೆ? ನವಿಲು ಕುಣಿಯುವುದನ್ನು ನಿಲ್ಲಿಸಿಬಿಟ್ಟರೆ? ವಸಂತನ ಆಗಮನವೆ ಆಗದಿದ್ದ್ರೆ? ಬದುಕಿನಲ್ಲಿ ಏನೂ ಸಮರಸವೇ ಇರಲಾರದು." ಪ್ರೀತಿ ಹರಿಯುವ ನದಿಯಂತೆ "ಇದನ್ನು ಎಲ್ಲೋ ಓದಿದ ನೆನಪು. ಬರಡಾದ ಭೂಮಿಯಲ್ಲಿ ಬೆಳೆ ಆಗಬೇಕೆಂದರೆ ಅಲ್ಲಿ ಮಳೆ ಆಗಮನ ಆಗಲೇ ಬೇಕು. ಬರಡಾದ ಹೃದಯದಲ್ಲಿ ಪ್ರೀತಿ ಚಿಗುರ ಬೇಕಾದರೆ ಅಲ್ಲಿ ಪ್ರೀತಿಯ ಮಳೆ ಆಗಲೇ ಬೇಕು. ಎಲ್ಲರ ಎದುರು ಕಣ್ಣು ,ಮೂಗು ಕೆಂಪು ಮಾಡಿಕೊಂಡು 'ಏನಾಯ್ತು'?? ಅಂತ ಕೇಳಿಸಿ ಕೊಂಡು ಬೇಸರವಾಗಿದೆ. ನಗುತ್ತಿರುವ ಮುಖದ ಹಿಂದಿನ ನೋವಿನ ಅರಿವು ನಿನಗಿಲ್ಲ. ಕೊಡುವ ಕೈಗಿಂತ ಬೇಡುವ ಕೈಗಳು ಯಾವಾಗಲು 'ಕೀಳೆ '!!!.ತಕರಾರಿಲ್ಲ ಈ ಮಾತಿಗೆ. ಕೊಟ್ಟವನು ಕೊಟ್ಟ ಕ್ಷಣಕ್ಕೆ ಮರೆತರೆ , ಅದನ್ನು ಕಾಡೀ ಬೇಡಿ ಪಡೆದುಕೊಂಡ ಜೀವ ಕೊನೇ ಉಸಿರಿರುವ ವರೆಗೂ , ಅದನ್ನು ಪಡೆದುಕೊಂಡ ಕ್ಷಣವನ್ನು ನೆನಪಿಸಿಕೊಂಡು 'ಜೀವನ ಧನ್ಯ' ಅಂತ ಖುಷಿ ಪಡುತ್ತದೆ. ಅದು ಸಿಗದೆ ಇದ್ದರೆ ,ಸಾಯುವ ಕಡೆ ಕ್ಷಣದ ವರೆಗೂ ಬೇಡಿಸಿಕೊಂಡ ಮುಖದ ದರ್ಶನಕ್ಕೆ ತವಕಿಸುತ್ತದೆ. ಬದುಕು ಅನಿವಾರ್ಯ ಆಗಬೇಕಾ? ಈ ಓಟ ಎಲ್ಲೀವರೆಗೆ ಸಾದ್ಯ ? ಇಂಥ ಒಂದು ಮನಸ್ಸಿರುವುದಕ್ಕೆ ಸಂತೋಷ. ಮಾತು ಕೇಳದ ಹೃದಯದ ಬಗ್ಗೆ ಸಿಟ್ಟು.ಸಮಯವನ್ನು ಕಳೆಯಲು ಯಾರೂ ಇಂಥ ದುಬಾರಿ ಮಾರ್ಗವನ್ನು ಹುಡುಕಿಕೊಳ್ಳುವ ಸಾಹಸ ಮಾಡಲಾರರು!!! ಆ ನೋವಿನ ನೋವು ಬಲ್ಲವರಿಗೆ ಗೊತ್ತು ....ಪಾರ್ಕಿನ ಮೂಲೆ ಬೆಂಚುಗಳು ಧನ್ಯ!! ಒಂದು ಸುಂದರ ಹುಡುಗಿ ಘಂಟೆಗಟ್ಟಲೇ ಕುಳಿತಿರು ತ್ತಾಳೆ . ಅದರ ಹಾಗೆ ಒಂಟಿಯಾಗಿ ....ಸುಮ್ಮನೇ ಇದ್ದು ಬಿಟ್ಟರೆ ಜೀವನ ಬೋರ್ ಆಗುತ್ತೆ. ಅದಕ್ಕೆ ನನಗೆ ನಾನು ಈ ತರ ಮಾಡಿಕೊಂಡು ಬಿಟ್ಟೇನ?? ....ಯಾಕೆ ಮನಸೇ ನನ್ನ ಮಾತೇ ಕೇಳುತ್ತಿಲ್ಲ ? ? ಆದರೂ ಮನಸೇ ನೀನು ತಪ್ಪು ಮಾಡಿಲ್ಲ !!

18 ಕಾಮೆಂಟ್‌ಗಳು:

ಸವಿಗನಸು ಹೇಳಿದರು...

ದಿವ್ಯ,
ಭಾವ ತುಂಬಿದ ಬರಹ....
ಮನಸು ಮೂಕವಾಗಬಾರದು.....

Guru's world ಹೇಳಿದರು...

ದಿವ್ಯ,
ತುಂಬಾ ಅನುಭವದ ಮಾತು....ಹುಡುಕುತ್ತಿರುವ ಪ್ರೀತಿ ಸಿಗಲಾರದೆ, ಅಂದುಕೊಂಡಿದ್ದು ಸಾದ್ಯವಗಲಾರದೆ....ಪರಿತಪಿಸುತ್ತಾ ಇದ್ದೀರಾ...? ನಿಮ್ಮ ಜೀವನವನ್ನು ಪ್ರೀತಿಸಿ ಮುಂದುವರಿಯಿರಿ....ಖಂಡಿತ ನಿಮಗೆ ಬೇಕಾದದ್ದು ಸಿಗುತ್ತದೆ..... ಏನ್ ಮಾಡೋದು,, ಜೀವನ ಎಂದರೆ ಹೀಗೆ ತಾನೆ.....ಅಂದುಕೊಂಡಿದ್ದು,, ಬೇಕೆನಿಸಿದ್ದು,, ಸಿಗೋದೆ ಇಲ್ಲವಲ್ಲ :-)

ಸೀತಾರಾಮ. ಕೆ. ಹೇಳಿದರು...

ಮನಸ್ಸಿನ ಮಾತುಗಳು ಆಳಕ್ಕೀಳಿದು ಭಾವಪರವಶವಾಗಿಸುತ್ತವೆ. ಮನಸ್ಸು ಮೂಕವಾಗದಿರಲಿ. ಪಾರ್ಕಿನ ಕೊನೆಯ ಬೆ೦ಚಲ್ಲಿ ಯಾರೂ ಒ೦ಬ್ಬಟಿಗರಾಗಿ ಕೂರದಿರಲಿ. ಕೂತರು ಮನ ಮೂಕವಾಗದಿರಲಿ. ಇದು ನನ್ನ ಆಶಯ.

ಸುಬ್ರಹ್ಮಣ್ಯ ಹೆಗಡೆ ಹೇಳಿದರು...

nice one......

shetty ಹೇಳಿದರು...

nanna mansda maathanna idaralli heliddeera .....
nimagU heege anisutta ..

ಸಾಗರದಾಚೆಯ ಇಂಚರ ಹೇಳಿದರು...

ದಿವ್ಯಾ,
ಮನಸ್ಸು ಮೂಕವಾಗುವುದು ಕೆಲವೊಮ್ಮೆ ಒಳ್ಳೆಯದು ಆದರೆ ಕೆಲವೊಮ್ಮೆ
ಅದೇ ಬದುಕಿಗೆ ತೊಡಕಾಗುತ್ತದೆ
ಒಳ್ಳೆಯ ಬರಹ

Ranjita ಹೇಳಿದರು...

Divya ...
No commnts :)

ಶರಶ್ಚಂದ್ರ ಕಲ್ಮನೆ ಹೇಳಿದರು...

ಜೀವನವನ್ನು ಪ್ರೀತಿಸಿ ದಿವ್ಯ, ವ್ಯಕ್ತಿಗಳನ್ನಲ್ಲ... ಬೇಸರಿಕೆ ಮಾಯವಾಗುವುದು.

ದಿನಕರ ಮೊಗೇರ.. ಹೇಳಿದರು...

ದಿವ್ಯಾ,,
ಮನಸ್ಸಿಗೆ ಮಾಡಿಕೊಂಡ ಸಮಾಧಾನ ಚೆನ್ನಾಗಿದೆ..... ಲೈಫ್ has ಟು move ಆನ್ ಆಲ್ವಾ...... ಸುಂದರ ಕವನದ ಹಾಗೆ ಇದೆ ಬರಹ....

Sumana ಹೇಳಿದರು...

"ಆ ನೋವಿನ ನೋವು ಬಲ್ಲವರಿಗೆ ಗೊತ್ತು "...ಓಹ್, ಎಷ್ಟು ನೈಜ ಸಾಲು ದಿವ್ಯ.
ಬರಹ ತುಂಬಾ intense ಆಗಿದೆ....ನಿಮ್ಮ ಯಾವಾಗಿನ ಬರಹದಂತೆ!..ಚೆಂದಾದ ಅನುಭವಗಳು ನಿಮ್ಮ ಲೇಖನಿಗೆ ಸಿಕ್ಕಲಿ ಎಂಬ ಆಶಯ ನನ್ನದು!

ವಿ.ಆರ್.ಭಟ್ ಹೇಳಿದರು...

ಮನಸ್ಸೊಂದು ಮಿಡಿತೆ ಅದಕ್ಕೇ ಅದು ಭಾವನೆಗಳ ನಡುವೆ ಜಿಗಿಯುತ್ತಿರುತ್ತದೆ, ಗುಡ್ !

ವಿ.ಆರ್.ಭಟ್ ಹೇಳಿದರು...

ಮನಸ್ಸೊಂದು ಮಿಡಿತೆ ಅದಕ್ಕೇ ಅದು ಭಾವನೆಗಳ ನಡುವೆ ಜಿಗಿಯುತ್ತಿರುತ್ತದೆ, ಗುಡ್ !

vijayhavin ಹೇಳಿದರು...

superrrrrrb

good one

ಸುಧೇಶ್ ಶೆಟ್ಟಿ ಹೇಳಿದರು...

ಅಯೋಮಯವಾಗಿದೆ! ಆದ್ರೂ ಬರೆದ ರೀತಿ ಚೆನ್ನಾಗಿದೆ... :)

ಮೌನಿ ಹೇಳಿದರು...

ಮನದ ಮಿಡಿತಗಳ ಅಲೆಗಳಿಗೆ ತಡೆಯೊಡ್ಡದಿದ್ದಾಗ....
ಅಪರೂಪದ ಸಾಲುಗಳು ಮೂಡುವದು ಸಹಜ...
ಚೆನ್ನಾಗಿದೆ....

ಜಲನಯನ ಹೇಳಿದರು...

ದಿವ್ಯಾ...ನಿನ್ನ ಬ್ಲಾಗಿಗೆ ಬರೋದು ಅಪರೂಪ ಆಗೋಯ್ತು...ಯಾಕೆ..?
ಯಾಕಂದ್ರೆ ನೀನೂ ಜಲನಯನಾನ ಮರ್ತು ಬಿಟ್ಟೆ ಅದಕ್ಕೆ.....ಆದ್ರೂ ನಾನು ಬಂದೆ..ನೋಡು...
ಮನದಾಳದ ಮಾತಿನ ಗಹನತೆಗೆ ಕೊಂಡೊಯ್ತು ನಿನ್ನ ಲೇಖನ ಕಂ ಕವನ.....ಗುಡ್...

ಗೌತಮ್ ಹೆಗಡೆ ಹೇಳಿದರು...

hmmmmmmmmmmmmmm :)

ದಿವ್ಯಾ ಹೇಳಿದರು...

ಸ್ನೇಹಿತರೇ ,
ಎಲ್ಲರಿಗೂ ನನ್ನ ಧನ್ಯವಾದಗಳು ... :-)
ದಿವ್ಯಾ ...:-)