ಬುಧವಾರ, ಫೆಬ್ರವರಿ 17, 2010

ಗೆಳೆಯನ ತಂದೆಗೆ.....

"ಒಂದಿನ ಬಾರೆ ನಮ್ಮನೆಗೆ ...ಅಪ್ಪ ಅಮ್ಮನ ನಿಂಗೆ ಪರಚಯ ಮಾಡಸ್ತಿ . ಈಗ ಅಪ್ಪ-ಅಮ್ಮ ಬೆಂಗಳೂರಿಗೆ ಬೈಂದ. ಊಟ ಮಾಡ್ಕಂಡು ಹೋಗ್ಲಕ್ಕು "....ಎಂದು ಪ್ರತೀ ಭಾರಿಯೂ ನನ್ನ ನೆಚ್ಚಿನ ಗೆಳಯ ಹೇಳಿದಾಗಲೆಲ್ಲ ಸರಿ ಬಿಡು "ಇವತ್ ಬತ್ತ್ನಿಲ್ಲೇ..ಎಂದಾದರು ಒಂದು ದಿನ ಬತ್ತಿ "...ಎಂದು ಹೇಳಿಕೊಂಡು ನುನುಚಿಕೊಳ್ಳುತ್ತಿದ್ದೆ. ಗೆಳಯನೂ ಭಾರಿ ಒತ್ತಾಯ ಏನು ಮಾಡಿರಲಿಲ್ಲ. ಸುಮ್ಮನಾದೆ. ಸುಮಾರು ಸಾರಿ ಈ ತರಹ ಆಗಿದೆ.

ಭಾರಿ ಅಪರೂಪಕ್ಕೆ ಗೆಳೆಯ ಕರೆ ಮಾಡುತಿದ್ದ. ತಿಂಗಳಿಗೊಂದು ಸಾರಿ ಇರಬಹುದೇನೋ. ಈ ಸಾರಿ ಸುಮಾರು 6-7 ತಿಂಗಳಿರಬಹುದೇನೋ... ಗೆಳೆಯ ಕರೆ ಮಾಡಿರಲಿಲ್ಲ. ಒಂದು msg ಕೂಡ ಬಂದಿರಲಿಲ್ಲ. ಸರಿ ನಾನೇ ಮಾಡಿದರಾಯಿತು ಅಂತ ಫೋನಾಯಿಸಿದೆ. ನೋಡಿದರೆ ಫೋನ್ not reachable ಅಂದಿತು. ಎಲ್ಲೋ ಹೋಗಿರಬೇಕು ಅಂದುಕೊಂಡು ಸುಮ್ಮನಾದೆ.
ಈಗ ಒಂದು ವಾರದ
ಹಿಂದೆ ತಾತನ ಮನೆಗೆ ಫೋನ್ ಮಾಡಿದ್ದಾಗ , ಅಜ್ಜಿ ಹೇಳಿದರು-" ನಿನ್ನ ಗೆಳೆಯನ ತಂದೆ heart attack ಆಗಿ ಮೊನ್ನೆ ತೀರಿಕೊಂಡರು, ಅಮ್ಮ ಮಗ ಇಲ್ಲೇ ಊರಲ್ಲಿ ಇದ್ದಾರೆ " ಎಂದು. ನನ್ನ ಎದೆ ದಸಕ್ ಎಂದಿತು. ಬೇಡ ಬೇಡ ಎಂದರು ಕಣ್ಣಲ್ಲಿ ನೀರು ಒತ್ತರಿಸಿಕೊಂಡು ಬರುತಿತ್ತು. ಮಾತಾಡಕ್ಕೂ ಆಗಲಿಲ್ಲ. ಫೋನಿಟ್ಟು ಬಿಟ್ಟೆ. ಅವರಿಗಿನ್ನೂಸಾಯುವ ವಯಸ್ಸು ಆಗಿರಲಿಲ್ಲ. ಸುಮಾರು 53-54 ರರ ಆಸು ಪಾಸಿರಬೇಕು ಅಷ್ಟೇ.

ಆಗಲೇ ಅನಿಸಿದ್ದು ನಾ ಮಾಡಿದ್ದು ತಪ್ಪೆಂದು. ನನ್ನಲ್ಲಿ ಒಂದು ತರಹದ " guilt "ತಕ್ಷಣ ಮನೆ ಮಾಡಿಬಿಟ್ಟಿತ್ತು.ಗೆಳೆಯ ಅಷ್ಟು ಕರೆದಾಗ ನಾನು ಹೋಗಲಿಲ್ಲ. ಈಗ ಹೋಗುತ್ತೇನೆ ಅಂದರೂ ಅವರಿಲ್ಲ. ಈ ವಿಧಿ ಅದೆಷ್ಟು
ಕಠೋರ ಅನಿಸಿಬಿಡುತ್ತದೆ ಒಂದೊಂದು ಸಾರಿ.. ಅಷ್ಟು ಬೇಗನೆ ಕರೆಸಿಕೊಳ್ಳುವಂಥ ಅಂಥ ಅವಶ್ಯಕತೆ ಏನಿತ್ತು ಅಂತ ನನಗೂ ತಿಳಿಯಲಿಲ್ಲ. ಈ ವಿಧಿಗು ಬಹಳ ' urgentu ' ಅನಿಸಿಬಿಟ್ಟಿತು.ನಿಜ ಜೀವನದಲ್ಲಿ ಅದೆಷ್ಟೋ ಸಾರಿ ಹೀಗೆ ಆಗಿರುತ್ತದೆ ಅಲ್ಲವ? ನಾವು ತುಂಬಾ ಇಷ್ಟ ಪಡುವವರಿಗೆ, ತುಂಬಾ ಪ್ರೀತಿ ಪಾತ್ರರಿಗೆ ಎಷ್ಟೋ ಸಾರಿ ಕೆಟ್ಟದಾಗಿ ನಡೆದುಕೊಂಡಿರುತ್ತೇವೆ. ಇದ್ದಾಗ ನಮಗೆ ಅವರ ಬೆಲೆ ತಿಳಿಯುವುದೇ ಇಲ್ಲ. ಅವರು ಕಣ್ಮರೆಯಾದಾಗ ಬೇಸರ ಮಾಡಿಕೊಳ್ಳುತ್ತೇವೆ.

ಅದಕ್ಕೆ ನಾನು ನಿರ್ಧರಿಸಿಬಿಟ್ಟಿದ್ದೇನೆ. ಗೆಳೆಯನ ತಂದೆಯ ವಿಷಯದಲ್ಲಿ ಆದ ರೀತಿ ಇನ್ನು ಯಾವುದೇ ಸಂದರ್ಭದಲ್ಲಿ, ಯಾವ ವಿಷಯದಲ್ಲೂ ಆಗಗೊಡಬಾರದು. ಯಾಕೆಂದರೆ ನಮಗೆ ಆ ಕ್ಷಣದಲ್ಲಿ ಗೊತ್ತಾಗುವುದಿಲ್ಲ. ಆದರೆ ಇಂಥ ಒಂದು ಘಟನೆ ಸಂಭವಿಸಿದರೆ ಅದನ್ನು ಜೀವನ ಪೂರ್ತಿ ಮರೆಯಲು ಸಾಧ್ಯವಾಗುವುದಿಲ್ಲ. ಗೆಳೆಯನ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ . ಹಾಗೆ ನಾನು ಮನೆಗೆ ಬರದೆ ತಪ್ಪು ಮಾಡಿದ್ದಕ್ಕೆ ನನ್ನ ಒಂದು ಕ್ಷಮಾಪಣೆ ಕೂಡ.


15 ಕಾಮೆಂಟ್‌ಗಳು:

Vinay Hegde ಹೇಳಿದರು...

Hmmmm... Vidhi kattoora...!!! but my suggestion is live the life as if its ya last day of life n complete all ya works that day only which u planned to do...dont keep it pending for tomo...who knows there is actual tomo in our life or not... And try to keep ya loved once happy before u go to sleep. Coz u never know how much they expect from u. May be they might not reach ur expectations due to circumstances...but U never make it purposefully..!!! Take care.

ಚುಕ್ಕಿಚಿತ್ತಾರ ಹೇಳಿದರು...

kelavomme haagaagi bidutte...
manasige tagondre innoo kashta...
all the best...

ಸವಿಗನಸು ಹೇಳಿದರು...

ದಿವ್ಯ,
ನಿಮ್ಮ ಭಾವಪೂರ್ಣ ಬರವಣಿಗೆ ನಿಮ್ಮ ಸಂಕಟ ತೋರಿಸುತ್ತೆ....
ವಿಧಿ ಹಾಗೆ ಯಾರನ್ನು ಬಿಡುವುದಿಲ್ಲ....
ನಿಮ್ಮ ಗೆಳೆಯನ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ.....
ನಿಮ್ಮ ಗೆಳೆಯನ ಕುಟುಂಬಕ್ಕೆ ನೋವನ್ನು ಮರೆಯುವ ಶಕ್ತಿ ಆ ದೇವರು ಕೊಡಲಿ.....

ಸೀತಾರಾಮ. ಕೆ. ಹೇಳಿದರು...

aapta baraha mana kalakitu

ಮನಸು ಹೇಳಿದರು...

correct divya nimma maatu oLLe nirdarane maadideeri

Subrahmanya Bhat ಹೇಳಿದರು...

It happens...ಬೇಕೆಂದೇ ಈ ರೀತಿ ಮಾಡಿರುವುದಿಲ್ಲವಲ್ಲ..ಆದರೂ ನೋವು ಕಾಡುತ್ತದೆ. Be cool..all the best

sunaath ಹೇಳಿದರು...

ದಿವ್ಯಾ,
ಸರಳ ಹಾಗು ಕ್ಷಿಪ್ತ ರೀತಿಯಲ್ಲಿ ಮನದ ಬೇಗುದಿಯನ್ನು ವರ್ಣಿಸಿದ್ದೀರಿ. ಯಾವುದಕ್ಕೂ ಋಣಾನುಬಂಧ ಬೇಕಷ್ಟೆ!

ವಿ.ಆರ್.ಭಟ್ ಹೇಳಿದರು...

ಚೆನ್ನಾಗಿ ಮೂಡಿಬಂದಿದೆ ! thanks

ದಿನಕರ ಮೊಗೇರ.. ಹೇಳಿದರು...

ದಿವ್ಯ ಮೇಡಂ,
ನಿಮ್ಮ ನೋವು ಅರ್ಥ ಆಗತ್ತೆ.... ನಿಮ್ಮ ಬರಹ ಓದಿ, ತುಂಬಾ ನೋವಾಯಿತು... ..... ನಾವು ಏನನ್ನು ಯೋಚಿಸಿದರೂ, ನಿರ್ಧರಿಸಿದರೂ ಅದನ್ನು ನಡೆಯೋಕೆ ಬಿಡೋದು '' ವಿಧಿ'' ಆಲ್ವಾ.... ಅದರ ಮುಂದೆ ನಾವು ದೊಡ್ಡ ಜ್ಹಿರೋ ..... ಹಾಗಾಗಿ ನಿಮ್ಮ ಪಾತ್ರ ಇಸ್ಥೆ ಇತ್ತು, ಅಷ್ಟನ್ನೇ ಮಾಡಿದ್ದೀರಿ...... ನಿಮ್ಮ ಗೆಳೆಯನ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದುಪ್ರಾರ್ಥಿಸೋಣ....

Ranjita ಹೇಳಿದರು...

ನಿನ್ ಮಾತು ನಿಜ ದಿವ್ಯ .. ವಿಧಿ ಬರಹ ಬಲ್ಲವರಾರು ! ನಿನ್ನೀ ಈ ನಿರ್ಧಾರ ddhradhavagirli

ಗುರು-ದೆಸೆ !! ಹೇಳಿದರು...

'Divya hegdE' ಅವ್ರೆ..,

ಹೌದು.. ಯಾವುದಾದರೊಂದನ್ನು ಕಳೆದುಕೊಂಡಾಗಲೇ.....

ನನ್ನ 'ಮನಸಿನಮನೆ'ಗೆ ಬನ್ನಿ:http://manasinamane.blogspot.com/

jithendra hindumane ಹೇಳಿದರು...

ದಿವ್ಯಾ, ಯಾವುದನ್ನೆ ಆದರೂ ಮನಸಿಗೆ ಅನಿಸಿದ್ದು ತಕ್ಷಣ ಮಾಡಬೇಕು. ಯಾಕೆಂದರೆ ನಾಳೆ ನಮಗೆ ಆ ಬಗ್ಗೆ ಆಸಕ್ತಿ ಇರಲಾರದು, ಅಥವಾ ಪರಿಸ್ಥಿತಿಯೆ ಬದಲಾಗಬಹುದು...
ನಿಮ್ಮ ಅನುಬವ ಮನಕಲಕಿತು, ಆದಷ್ಟುಬೇಗ ಇದರಿಂದ ಹೊರಬನ್ನಿ, ಗೆಳೆಯನಿಗೆ ಒಂದು ಸಾಂತ್ವಾನ ಹೇಳಿ.

Sumana ಹೇಳಿದರು...

ಮನಮುಟ್ಟುವ ಬರಹ ದಿವ್ಯ. ನೀವೆಂದಂತೆ ಕೈ ಮೀರುವ ವರೆಗೆ ನಾವು postpone ಮಾಡುವುದು ಎಷ್ಟು ಹಾನಿಕರ ಅಲ್ವಾ?

ದಿವ್ಯಾ ಹೇಳಿದರು...

ಸ್ನೇಹಿತರೇ ,
ಎಲ್ಲರಿಗೂ ನನ್ನ ಧನ್ಯವಾದಗಳು..
ದಿವ್ಯಾ ... :-)

sudhesh ಹೇಳಿದರು...

:(:( hmm.. besaradha sangathi..


monne nimma blog open aagtha irlilla..blogger not found antha bartha ittu naanu ee article odhalu click maadidaaga....