ಗುರುವಾರ, ಫೆಬ್ರವರಿ 11, 2010

ನನ್ನ ಮೆಚ್ಚಿನ ಪುಸ್ತಕ...


ರೋಬಿನ್ ಶರ್ಮಾ ಒಬ್ಬ ಒಳ್ಳೇ ಲೇಖಕ. ಅವರು ಎಷ್ಟೋ ವ್ಯಕ್ತಿತ್ವ ವಿಕಸನ ಪುಸ್ತಕಗಳನ್ನು ಬರೆದಿದ್ದಾರೆ .ಓದುಗರನ್ನು ಬೆಳಕಿನತ್ತ ಕೊಂಡಯ್ಯುವ ಕೆಲಸದಲ್ಲಿ ಇವರು ಪರಿಣಿತರು.

ಹೀಗೆ ಇವರ ಒಂದು ಪುಸ್ತಕ " Who Will Cry ,When You Die?". ಇದನ್ನು ರೋಬಿನ್ ಶರ್ಮಾರವರು "ಬದುಕಿನ ಪಾಠಗಳು " ಅಂತ ಕರೆದಿದ್ದಾರೆ . ಇದು ನಿಜ ಕೂಡ. ಈ ಪುಸ್ತಕದಲ್ಲಿ ನೆಮ್ಮದಿಯ ಜೀವನಕ್ಕೆ ಬೇಕಾಗುವ ಅಥವಾ ನಾವು ಅಳವಡಿಸಿಕೊಳ್ಳಬಹುದಾದ 101 ಸೂತ್ರಗಳನ್ನು ಹೇಳುತ್ತಾರೆ. ಚಿಕ್ಕ ಚಿಕ್ಕ ವಿಷಯಗಳಿಗೆ ಬೇಸರ ಮಾಡಿಕೊಳ್ಳುವಂತವರು , ಜೀವನದಲ್ಲಿ ಬರೀ ನಕಾರಾತ್ಮಕವಾಗಿ ಯೋಚಿಸುವವರು, ಖಂಡಿತ ಈ ಪುಸ್ತಕವನ್ನು ಒಮ್ಮೆ ಓದಲೇ ಬೇಕು.

ನನಗೆ ಈ ಪುಸ್ತಕ ತುಂಬಾ ಇಷ್ಟವಾಯಿತು. ಎಷ್ಟೋ ಬ್ಲಾಗಿಗರು ಈ ಪುಸ್ತಕದ ಬಗ್ಗೆ ಬರೆದುಕೊಂಡಿದ್ದಾರೆ. ನನಗೂ ಬರೆಯಲೇ ಬೇಕು ಎನಿಸಿ ನನ್ನ ಬ್ಲಾಗಿನಲ್ಲಿ ಹಾಕಿಕೊಳ್ಳುತ್ತಿದ್ದೇನೆ . ಈ ಪುಸ್ತಕದ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಆದರೂ ಒಂದು ಪ್ರಯತ್ನ ಇದರೆಡೆಗೆ.
101 ಸೂತ್ರಗಳಲ್ಲಿ ಒಂದು ಹತ್ತನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

1. ನಿಮ್ಮದಿನವನ್ನು ಸರಿಯಾಗಿ ಆರಂಭಿಸಿ . ನೀವು ಎದ್ದಾಗ ನಿಮಗೆ ಜೀವನದಲ್ಲಿ ಇದುವರೆಗೂ ಸಿಕ್ಕ ಸಂತೋಷದ ಬಗ್ಗೆ ಯೋಚಿಸಬೇಕು . ಇಷ್ಟೆಲ್ಲಾ ನನಗೆ ದೊರಕಿದೆ ಅಂತ ಸಂತೋಷಿಸಬೇಕು .
2. ದೂರು ಹೇಳುವುದನ್ನ ಬಿಟ್ಟು ಬದುಕುವುದನ್ನು ಕಲಿಯಬೇಕು .
3. ಹಿಂದೆ ಆಗಿದ್ದರ ಬಗ್ಗೆ ಎಂದೂ ಯೋಚಿಸಬಾರದು . ಬದಲಿಗೆ ಮುಂದೆ ಬರಲಿರುವ ಅವಕಾಶಗಳ ಬಗ್ಗೆ ಯೋಚಿಸಬೇಕು .
4. ಇಷ್ಟವಿಲ್ಲದನ್ನಇಷ್ಟ ಇಲ್ಲಎಂದು ಹೇಳುವುದನ್ನ ಕಲಿಯಬೇಕು .
5. ಆದಷ್ಟು ನಗುನಗುತ್ತಿರಿ. .
6. ಜೀವನ ಬರೀ ಆಯ್ಕೆಗಳ ಸಂತೆ . ಸರಿಯಾದ ಆಯ್ಕೆ ಮಾಡಿಕೊಳ್ಳಿ .
7. ಮಾತನಾಡುವ ಎರಡರಷ್ಟು ಕೇಳಿಸಿಕೊಳ್ಳಿ .
8. ಶಾಂತಚಿತ್ತರಾಗಿರಿ . ಯಾರಾದರು ಸಿಟ್ಟಿಗೇಳಬಹುದು . ಆದರೆ ಶಾಂತವಾಗಿರುವುದು ಕಷ್ಟ .
9. ಪ್ರಶ್ನೆ ಮಾಡುವುದನ್ನು ಕಲಿಯಬೇಕು .
10. ಬದಲಾಯಿಸಲಾಗದ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ .

ಹೀಗೆ ಇನ್ನೂ ಸುಮಾರಷ್ಟು ವಿಷಯಗಳನ್ನು ತಿಳಿಸಿಕೊಡುತ್ತಾರೆ ರೋಬಿನ್ ಶರ್ಮಾರವರು. ಅದನ್ನು ಓದಿ ಒಂದು ನಾಲಕ್ಕಾದರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು , ಹಾಗು ಪುಸ್ತಕ ಓದಿದ್ದು ಎರಡೂ ಸಾರ್ಥಕ.

14 ಕಾಮೆಂಟ್‌ಗಳು:

ಸವಿಗನಸು ಹೇಳಿದರು...

ದಿವ್ಯ,
ರೋಬಿನ್ ಶರ್ಮಾರ ಕೆಲವು ಸೂತ್ರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು....
ಚೆನ್ನಾಗಿದೆ ಬರಹ....
ಉಪಯುಕ್ತ....

ಸುಮ ಹೇಳಿದರು...

ಒಳ್ಳೆಯ ಸೂತ್ರಗಳು ದಿವ್ಯ. ಚೆನ್ನಾಗಿದೆ.

ಮನಸು ಹೇಳಿದರು...

nice one divya olle pustakada parichaya madisiddeeri naanu oduva aaseyaagide

ಸಾಗರದಾಚೆಯ ಇಂಚರ ಹೇಳಿದರು...

ದಿವ್ಯಾ
ನಮ್ಮ ಲೈಬ್ರರಿ ಯಲ್ಲಿ ಇದನ್ನು ಹುಡುಕಿದೆ
ಆದರೆ ಸಿಗಲಿಲ್ಲ
ಕಂಡಿತ ಓದುತ್ತೇನೆ
ತಿಳಿಸಿದ್ದಕ್ಕೆ ಧನ್ಯವಾದಗಳು

ತೇಜಸ್ವಿನಿ ಹೆಗಡೆ- ಹೇಳಿದರು...

ಈ ಪುಸ್ತಕವನ್ನು ಓದಬೇಕಾಯಿತು. ಸೂತ್ರಗಳು ತುಂಬಾ ಚೆನ್ನಾಗಿದೆ. ಧನ್ಯವಾದಗಳು.

ವಿ.ಆರ್.ಭಟ್ ಹೇಳಿದರು...

good !

ಸೀತಾರಾಮ. ಕೆ. ಹೇಳಿದರು...

ಓದಲೇಬೇಕಾದ ಪುಸ್ತಕದ ಮಾಹಿತಿಗೆ ಧನ್ಯವಾದಗಳು.

ಏಕಾಂತ ಹೇಳಿದರು...

Namasthe...nanilli hosaba.
barahagalu apthavagive.
E Pustakada hesare karedu odisikolluvantide. Olleya baraha. Kandita kondu oduttene.
Matte bareyiri.

goutam ಹೇಳಿದರು...

hmmmmmmmmmmmmm:)

ಸುಧೇಶ್ ಶೆಟ್ಟಿ ಹೇಳಿದರು...

ತು೦ಬಾ ಚೆ೦ದದ ಸೂತ್ರಗಳು... ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ....

Ranjita ಹೇಳಿದರು...

ಒಳ್ಳೆಯ ಸೂತ್ರಗಳನ್ನ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ದಿವ್ಯ

ಶ್ರೀನಿಧಿ.ಡಿ.ಎಸ್ ಹೇಳಿದರು...

ಓದ್ಬೇಕಾಯ್ತು ಹಾಂಗಾರೆ:)

Raghavendra ಹೇಳಿದರು...

ನಿಮ್ಮ ಈ ಲೇಖನ ಈ ಪುಸ್ತಕದ ಕುರಿತು ಸಂಗ್ರಹವಾಗಿ ಹೇಳುತ್ತದೆ.. ಆ ಪುಸ್ತಕ ಓದಲಾಗಿಲ್ಲ. ಈ ಬರಹಕ್ಕೆ ವಂದನೆಗಳು..

Divya Hegde ಹೇಳಿದರು...

ಎಲ್ಲರಿಗೂ ನನ್ನ ಧನ್ಯವಾದಗಳು..
ಪುಸ್ತಕವನ್ನು ಓದಿ... ತುಂಬಾ ಚನ್ನಾಗಿದೆ..
ದಿವ್ಯ .. :-)