ಶನಿವಾರ, ಡಿಸೆಂಬರ್ 26, 2009

ಪ್ರೇಮ ಪತ್ರಗಳು ತಂದ ಅವಾಂತರ.....


ನಮ್ಮ ಆಫೀಸಿನಲ್ಲಿ ಹೊಸ team leader ಬಂದಿದ್ದಾರೆ. ಅವರು ಸಕತ್ ತಮಾಷೆ ಮಾಡುತ್ತಿರುತ್ತಾರೆ. ಅವರಿಗೆ lovers ಅಂದರೆ ಏನೋ ವಿಶೇಷ ಆಸಕ್ತಿ ತೋರಿಸುತ್ತಾರೆ .ಅದು ಯಾಕೆ ಅಂತ ನನಗೆ ಇನ್ನೂ ಕಂಡು ಹಿಡಿಯೋಕೆ ಆಗಲೇ ಇಲ್ಲ ...:(

ನಮ್ಮ teamನಲ್ಲಿ ಯಾರಿಗಾದರು boyfriend / girlfriend ಇದ್ದರೆ ಅವರ ಹೆಸರನ್ನು team ಗೆ ಹೇಳಬೇಕು. ಹಾಗೇ ಹೇಳಿದಮೇಲೆ ನಾವು ಅವರ ಹೆಸರನ್ನು ಕರೆಯೋ ಹಾಗಿಲ್ಲ. ಬದಲಿಗೆ ಅವರ boyfriend/ girlfriend ಹೆಸರಿನಿಂದ ಅವರನ್ನು ಕರೀಬೇಕು. ನಮ್ಮ teamನಲ್ಲಿ ಸುಮಾರು ಜನರ ಹೆಸರೇ ಮರೆತು ಹೋಗಿದೆ ನನಗೆ ಏಕೆಂದರೆ ಅವರನ್ನು ಬೇರೆ ಹೆಸರಿನಿಂದ ಕರೆಯಲಾಗುತ್ತಿದೆ . ಉದಾ : ನಮ್ಮ teamನಲ್ಲಿ ಒಬ್ಬ ನೀಲಂ ಅಂತ ಇದಾನೆ . ಅವನ ಹುಡುಗಿಯ ಹೆಸರು ಲೀಲಾ. ಅದಕ್ಕೆ ನಾವೆಲ್ಲಾ ಅವನನ್ನು 'ಲೀಲಾ' ಎಂದೇ ಕರೆಯುತ್ತೇವೆ.

ಹೀಗಿದ್ದಾಗ ಮೊನ್ನೆ ನನ್ನ ಮೇಲೆ ಅವರ ವಕ್ರ(!) ದೃಷ್ಟಿ ಬಿತ್ತು. ದಿವ್ಯನಿಗೆ ಮಾತ್ರ ಇನ್ನೂ ದಿವ್ಯಾ ಅಂತಾನೆ ಕರಿತಾ ಇದೀವಿ. ಅವಳ boyfriend ಹೆಸರನ್ನು ಕೇಳಬೇಕು ಎಂದು ಹಿಂದೆ ಬಿದ್ದು ಬಿಟ್ಟರು. ಇದ್ಯಾವುದರ ನಿರೀಕ್ಷೆ ಇಲ್ಲದ ನನಗೆ ಒನ್ ತರಹ shock ಆಗೋಯ್ತು . ಇದೇನಪ್ಪ? ನಾನು ನನ್ನ ಪಾಡಿಗೆ ಆರಾಮಾಗಿ ಆಫೀಸಿನಲ್ಲಿ ಕಾಫಿ, ಟೀ, ಕುಡ್ಕೊಂಡು... ಜೊತೆಗೆ ಕೆಲಸದ ಮಧ್ಯೆ ಆಗೀಗ ಚಾಟಿಂಗ್, ಬ್ಲಾಗಿಂಗ್ ಮಾಡ್ತಿರಬೇಕಾದ್ರೆ ಇದೆಲ್ಲಿಂದ ಬಂತಪ್ಪ ತಲೆನೋವು ಅಂತ ಮನಸಲ್ಲೇ ಎಲ್ಲರನ್ನು ಬೈದು ಕೊಳ್ಳುತ್ತಿದ್ದೆ . ನನಗೆ ಯಾರೂ boyfriend ಇಲ್ಲ. ತುಂಬಾ ನಂಬಿಕಸ್ತ , ಒಳ್ಳೇ ಫ್ರೆಂಡ್ಸ್ ಇದಾರೆ ಅಂದರೆ ನಂಬಲು ತಯಾರೇ ಇಲ್ಲ ಆಸಾಮಿಗಳು. ನಾನು ಯಾರ ಹೆಸರು ಹೇಳುವುದಪ್ಪ, ಅಯ್ಯೋ ಅಂತ ಕೂತ್ಕೊಂಡಾಗ, ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಹಾಗೆ - " ಅಯ್ಯೋ ದಿವ್ಯಂಗೆ boyfriend ಇಲ್ಲ ಅಂದ್ರೆ ನಂಬೋಕೆ ಆಗೋಲ್ಲ. ಬ್ಲಾಗ್ನಲ್ಲಿ ಬರೀ ಪ್ರೇಮ ಪತ್ರಗಳನ್ನೇ ತುಂಬಿಸಿದ್ದಾಳೆ ಅನ್ನೋದೇ...:-(

ನಾನು ಹೇಳಿಬಿಟ್ಟೆ ನೀವು ಆ ತರಹ assume ಮಾಡಿಕೊಂಡರೆ ನಾನೇನು ಮಾಡೋಕಾಗಲ್ಲ ಎಂದೆ . ನನ್ನ ಪರಿಸ್ಥಿತಿ ಯಾರಿಗೂ ಬೇಡ. ಇದೊಳ್ಳೆ ಗೋಳಾಯ್ತಲ್ಲ ..... ಅದೆಲ್ಲ ಬರೀ ಕಲ್ಪನೆ ...ನನಗೆ ಯಾರೂ boyfriend ಇಲ್ಲಾಆಆಆಆ.... plz ನನ್ನ ಬಿಟ್ಟು ಬಿಡಿ. boyfriend ಸಿಕ್ಕಿದ ಕೂಡಲೇ ನಿಮಗೆ ತಿಳಿಸುತ್ತೀನಿ . ಆಗ ಅವನ ಹೆಸರಿನಿಂದ ಕರೀರಿ "ಅಂದೆ.....ನೀನೂ ಈಗ ಹೇಳದೆ ಇದ್ರೆ ನಮಗೆ ಟ್ರೀಟ್ ಕೊಡಿಸಬೇಕು ಅಂದ್ರು... ಅಬ್ಬ!!! ಇವತ್ತು ಬೆಳಗ್ಗೆ ಬೆಳಗ್ಗೆ ಯಾರ್ ಮುಖ ನೋಡಿದ್ನಪ್ಪ ??? ಅಯ್ಯೋ ನನ್ನ ಪರ್ಸ್ಗೆ ಕತ್ತರಿ ಬೀಳುತ್ತಲ್ಲಪ್ಪ ಅನ್ಕೊತಾ ಇದ್ದೆ... ಇದ್ದರೆ ಹೇಳಬಹುದು...ಇಲ್ದೆ ಇದ್ರೆ ಹೇಗೆ ಹೇಳಲಿ? ನಾನು ಸುಮ್ನೆ ಕೂತಿದ್ದೆ.

ಆಮೇಲೆ ಅವರಿಗೆ ನನ್ನ ನೋಡಿ 'ಪಾಪ' ಅನಿಸ್ತು ಅನ್ಸುತ್ತೆ. ಸರಿ ನಿನ್ನ ಹುಡುಗ ಹೇಗಿರಬೇಕು ಅನ್ನೋದಾದರೂ ಹೇಳು ಅಂದ್ರು. ಒಂದಷ್ಟು ಅದು - ಇದು ಹೇಳಿ ಬದುಕಿದೆಯಾ ಬಡಜೀವವೇ ಎಂದು ಹೇಳಿ ಸಮಾಧಾನದ ನಿಟ್ಟುಸಿರು ಬಿಟ್ಟೆ!!! ಆ ಹುಡುಗ ಯಾವಾಗ ಸಿಗುತ್ತಾನೋ ... ನನಗೆ ಯಾವಾಗ ಅವರು ಆ ಹೆಸರಿನಿಂದ ಕರೆಯುತ್ತಾರೋ ???....ಎಂದು ಇಲ್ಲಿವರೆಗೂ ಇರದ ವಿಚಾರ ಮಾತ್ರ ಯಾಕೋ ಮನಸ್ಸಿನಲ್ಲಿ ಹಾದು ಹೋಯ್ತು...

31 ಕಾಮೆಂಟ್‌ಗಳು:

ಸೀತಾರಾಮ. ಕೆ. ಹೇಳಿದರು...

olle phajitiri nimdu.
naanaagidre yavado kaalpanika hesaru heli parti kodade tappisikoltha idde.
sari bidi bega boyfriend sigali a0thaa haaraisutteve.

ಮೂರ್ತಿ ಹೊಸಬಾಳೆ. ಹೇಳಿದರು...

ಹಹಹ ನಿಮ್ಮ ಟೀಮ್ ಮೇಟ್ ಗಳ ಹೆಸರಿನ ಬದಲು ಅವರವರ ಬಾಯ್ ಫ್ರೆಂಡ್,ಗರ್ಲ್ ಫ್ರೆಂಡ್ ಗಳ ಹೆಸರಿನಲ್ಲಿ ಕರೆಯುವುದು ಚನ್ನಾಗಿದೆ.ಆದಷ್ಟು ಬೇಗ ನಿಮ್ಮ ಹೆಸರು ಬದಲಾಗಲಿ.
ನಿಮ್ಮ ಟೀಮ್ ನಲ್ಲಿ ವಿನೋದನ ಹೆಸರು ಪ್ರಶಾಂತ್ ಎಂದು ಸ್ಟೆಲ್ಲಾ ಳ ಹೆಸರು ಮೇರಿ ಎಂದು ಬದಲಾಗಿದೆಯಾ ಮತ್ತೆ?

Arun ಹೇಳಿದರು...

nijvaaglu boy frnd ilvenreee??? avru heltaare antalla..nim blog nodidre hangansattebidi.....................

Arun ಹೇಳಿದರು...

nijwaglu boyfrnd ilwenree!!!!! nim office navru heltaare antalla,nimblog nodre hangansatte bidi............. bega hudkoli boy frnd na..............

ಸುಧೇಶ್ ಶೆಟ್ಟಿ ಹೇಳಿದರು...

ಹೌದು... ಹೌದು... ನಿಮ್ಮ ಬ್ಲಾಗ್ ಓದಿದ ಯಾರಾದರೂ ದಿವ್ಯಾ ಪ್ರೀತಿಯಲ್ಲಿ ಬಿದ್ದಿರಬೇಕು ಅ೦ತ ಅ೦ದುಕೊಳ್ಳಲೇ ಬೇಕು :) ನಿಮ್ಮ ಆಫೀಸಿನವರದ್ದು ಏನೂ ತಪ್ಪಿಲ್ಲ ಬಿಡಿ....

ನಿಮ್ಮ ಟೀಮ್ ಲೀಡ್ ನ೦ತಹ ಒಬ್ಬ ಮ್ಯಾನೇಜರ್ ನಮಗೆ ಇದ್ದಿದ್ದರೆ... ಹ್ಮ್... ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ್ತೆ ನನ್ನ ಮನಸ್ಸು :)

ಗೌತಮ್ ಹೆಗಡೆ ಹೇಳಿದರು...

bega sikli:):)

sunaath ಹೇಳಿದರು...

ಮೂರ್ತಿ ಹೊಸಬಾಳೆಯವರ ಜೋಕ್ ಸಕತ್ತಾಗಿದೆ.
ನಿಮಗೂ ಬೇಗ ಹೊಸ ನಾಮಕರಣವಾಗಲಿ,good luck!

ಶಿವಪ್ರಕಾಶ್ ಹೇಳಿದರು...

Ha ha ha...
ಈಗಿನ ಕಾಲದಲ್ಲಿ ಬಾಯ್ ಫ್ರೆಂಡ್/ ಗರ್ಲ್ ಫ್ರೆಂಡ್ ಇಲ್ಲ ಅಂದ್ರೆ, ನಮ್ಮನ್ನು ವಿಚಿತ್ರವಾಗಿ ನೋಡ್ತಾರೆ.. ನಾವೇ ಸಮಾಧಾನ ಮಾಡ್ಕೊಂಡು ಹೋಗ್ಬೇಕು.
ಒಂದ್ಸಾರಿ ನಮ್ Client ge ಟ್ರಿಪ್ ಫೋಟೋಸ್ ತೋರಿಸಿದಾಗ, ಎಲ್ಲಿ ನಿನ್ನ ಗರ್ಲ್ ಫ್ರೆಂಡ್ ? ಅಂದ.
ನನಗೆ ಯಾರು ಗರ್ಲ್ ಫ್ರೆಂಡ್ ಇಲ್ಲ ಅಂದಿದ್ದಕ್ಕೆ...
"ಏನು..? ಗರ್ಲ್ ಫ್ರೆಂಡ್ ಇಲ್ವಾ..?.. why...?... waste shiva... first have one girlfriend..." ಅನ್ನೋದ..?
ಏನ್ ಗರ್ಲ್ ಫ್ರೆಂಡ್ ಅನ್ನೋದು, ಮಾರ್ಕೆಟ್ ನಲ್ಲಿ ಸಿಗೋ ತರಕಾರಿನಾ ?

ಸವಿಗನಸು ಹೇಳಿದರು...

ದಿವ್ಯ,
ನಿಮ್ಮ ಬ್ಲಾಗ್ ನೋಡಿದಾಗ ನನಗೂ ಹಾಗೆ ಅನ್ನಿಸಿತು....ಬಾಯ್ ಫ್ರೆಂಡ್ ಇರಬಹುದು ಅಂತ...
ಒಂದೆರಡು ಬಾರಿ ನಿಮ್ಮ ಜೊತೆ ಚಾಟ್ ಮಾಡಿದ ಮೇಲೆ ತಿಳಿಯಿತು ನೀನು ತುಂಬ ಸೌಮ್ಯ ಸ್ವಭಾವದ ಹುಡುಗಿ ಆ ರೀತಿಯ ಹುಡುಗಿ ಅಲ್ಲ ಅಂತ.....ಹಹ್ಹಾಹಹ
ಬೇಗ ನಿಮ್ಮ ಹೆಸರು ಬದಲಾಗಲಿ ಅಂತ ಹಾರೈಸುವೆ....

ದಿನಕರ ಮೊಗೇರ.. ಹೇಳಿದರು...

ದಿವ್ಯ ಮೇಡಂ,
ನಿಮ್ಮ ಹಿಂದಿನ ಪೋಸ್ಟ್ ನಲ್ಲಿ, 'ಚಿಂತೆ ಮಾಡಬೇಡಿ' ಎಂದು ಹೇಳಿದ್ದೀರಲ್ಲ..... ಅದನ್ನ ನೋಡಿ ಅವರಿಗೆ ಹೊಟ್ಟೆ ಕಿಚ್ಚಾಗಿರಬೇಕು ಆಲ್ವಾ..... ನಿಮ್ಮ ಪಾಡು ನೋಡಿದ್ರೆ ಬೇಜಾರಾಗತ್ತೆ...... ಬಾಯ್ ಫ್ರೆಂಡ್ ಇದಾನೆ ಅಂದ್ರೆ ಒಂದು ರೀತಿ ಕಷ್ಟ, ಇಲ್ಲಾಂದ್ರೆ ಇನ್ನೊಂದು ರೀತಿ ಕಷ್ಟ...... ಬೇಗ ಸಿಗಬಹುದು...... ಗಡಿಬಿಡಿ ಮಾಡಬೇಡಿ......'' ಚಿಂತ್ಯಾಕೆಮಾಡುತಿದ್ದಿ ಬಾಯ್ ಫ್ರೆಂಡ್ ಬಂದೆ ಬರುತ್ತಾನೆ ''

Ranjita ಹೇಳಿದರು...

boyfriend ಹೆಸರಲ್ಲಿ ಕರೆಯಿಸಿಕೊಳ್ಳೋ ಯೋಗ ಬೇಗ ಬರಲಿ :)

Vinay Hegde ಹೇಳಿದರು...

Hmmmy..boyfriend nijvaaglu siklilvaa???....

ವಿ.ರಾ.ಹೆ. ಹೇಳಿದರು...

ನಂಗ್ಯಾಕೋ ನಂಬಕ್ಕಾಗ್ತಾ ಇಲ್ಲ.! ಆದ್ರೂ ನಂಬ್ತೀನಿ ಸದ್ಯಕ್ಕೆ :)

Divya Hegde ಹೇಳಿದರು...

ಸೀತಾರಾಮ. ಕೆ. sir,
ಹಾಗೆಲ್ಲ ಹೇಳೋಕೆ ಆಗಲ್ಲ..ಯಾಕೆ ಗೊತ್ತಾ ? ಕಾಲ್ಪನಿಕ ಹೆಸರು ಹೇಳಿ ಬಿಡ ಬಹುದು ಆದರೆ ಮರು ಕ್ಷಣದಿಂದ ಅವರು ನನ್ನ ಅದೇ ಹೆಸರಿನಿಂದ ಕರೆಯುತ್ತಾರೆ ಅಲ್ವಾ...(ನನ್ನ ಜೀವದ ಗೆಳೆಯನಿಗೆ ಮೋಸ ಮಾಡಿದ guilt ಬಂದುಬಿಡುತ್ತೆ...;) )ಅದ್ಕೆ ಹೇಳಿಲ್ಲ...
ಹಾರೈಕೆಗೆ ಧನ್ಯವಾದಗಳು ಸರ್...

*****************
ಮೂರ್ತಿ ಹೊಸಬಾಳೆ,
ಹ ಹ ಹ... ಹೌದಲ್ಲ ನನಗೆ ಈ ವಿಚಾರ ಹೊಳೆದೇ ಇರಲಿಲ್ಲ...
ಇಲ್ಲ ...ಇನ್ನೂ ಆ ತರಹ ಯಾರನ್ನು ಕರೆದಿಲ್ಲ ...
ಹಾರೈಕೆಗೆ ಥ್ಯಾಂಕ್ಸ್...:)

******************
Arun,
ನಿಜವಾಗಲು boyfriend ಇಲ್ಲಾ ರೀ...
ನನ್ನ ಬ್ಲಾಗ್ ನೋಡಿ ಎಲ್ಲರಿಗೂ ಹಾಗೇ ಅನಿಸುತ್ತದೆ ಎಂದೂ ನನಗು ಗೊತ್ತಾಯ್ತು ಬಿಡಿ...:(
ಥ್ಯಾಂಕ್ಸ್...:)

******************
ಸುಧೇಶ್ ಶೆಟ್ಟಿ ,
ಹ ಹ ಹ... ಬ್ಲಾಗ್ ನೋಡಿದವರೆಲ್ಲ ಈಗ ಹೇಳ್ತಿದಿರ ಅಲ್ವಾ???
ಓಕೆ...ನನಗೆ ಸಿಕ್ಕಂತ TL ನಿಮಗೂ ಸಿಗಲಿ ಅಂತ ನಾನು wish ಮಾಡ್ತೀನಿ ...
ಥ್ಯಾಂಕ್ಸ್..:)

Divya Hegde ಹೇಳಿದರು...

ಗೌತಮ್ ಹೆಗಡೆ,
ತುಂಬಾ thanks..:)

***************
Sunaath ಸರ್,
ಧನ್ಯವಾದಗಳು ....:)

***************
ಹ ಹ ಹ...
ಶಿವೂ ನಿಮ್ಮ ಅನುಭವ ನಮ್ಮೊಂದಿಗೆ ಹಂಚಿಕೊಂದಿದಕ್ಕೆ ಧನ್ಯವಾದಗಳು ರೀ...
ಅದೇ ನಾನು ಹೇಳ್ತೀನಿ...boyfriend ಅನ್ನೋದು ಮಾರ್ಕೆಟ್ನಲ್ಲಿ ಸಿಗೋ ತರ್ಕಾರಿನ ಅಂತ...?
ಹಾಗಿದಿದ್ರೆ ನಾವು ಈಗಾಗ್ಲೇ tonsನಲ್ಲಿ ಕೊಂಡುಕೊಂಡುಬಿದುತ್ತಿದ್ವಿ ಅಲ್ವಾ?

**************
ಸವಿಗನಸು ಸರ್,
ಧನ್ಯವಾದಗಳು .....:-)

***************
ದಿನಕರ್ ಸರ್,
ನಿಮ್ಮ ಸಾಂತ್ವನಕ್ಕೆ ಧನ್ಯವಾದಗಳು...ಹೌದು ನೀವು ಹೇಳಿದ ಹಾಗೇ ನನ್ನ ಮೇಲೆ ಹೊಟ್ಟೆ ಉರಿ ಬಂದಿರಬಹುದು...
ಯಾಕೆ ಗೊತ್ತಾ ಅವರೆಲ್ಲ committed ಅನ್ನಿಸಿಕೊಂಡು ಗೋಳಾಡ್ತಾ ಇದಾರೆ ಅಲ್ವಾ? ನಾನು ಹಾಯಾಗಿದಿನಿ ಅಂತ...;)
ಹಾರೈಕೆ ಹೀಗೆ ಇರಲಿ ಸರ್...:)

**************
Ranjita,
Thanks soo much...:-)

************
Vinay,
Innu sikkilla kanri...:(

***************
ವಿ.ರ .ಹೆ....
ಅಬ್ಬ!!!! .....ನಂಬಿದ್ರಲ್ಲ ಸಾಕು ಬಿಡಿ...
ಇಲ್ದೆ ಇದ್ರೆ ಹೇಳೋಣ ಅಂದುಕೊಂಡೆ..."ಸತ್ಯವನ್ನೇ ಹೇಳುತ್ತೇನೆ , ಸತ್ಯವಲ್ಲದೇ ಬೇರೇನನ್ನು ಹೇಳುವುದಿಲ್ಲ,ನಾನು ಹೇಳುವುದೆಲ್ಲ ಸತ್ಯ"......;):)

thandacool ಹೇಳಿದರು...

ಏನೇ ಆಗಲಿ ನಿಮ್ಮ ಬಾಸ್ ಗಮ್ಮತ್ತಿದ್ದ!!!!!!!!!!!

vijayhavin ಹೇಳಿದರು...

good one!!!

ಬಾಲು ಸಾಯಿಮನೆ ಹೇಳಿದರು...

ಅಪ್ಪ ಅಮ್ಮಂಗೂ ಒಮ್ಮೆ ಬ್ಲಾಗ ಓದೋಕೆ ಹೇಳಿದ್ರೆ ಬೇಗ ಪರಿಹಾರ ಸಿಗಬಹುದೇನೋ!
ಹ ಹ..

ಮನಸು ಹೇಳಿದರು...

ದಿವ್ಯ ಹಹಹ ಚೆನ್ನಾಗಿದೆ ನಿಮ್ಮ ಪಜೀತಿ, ದೇವರು ಆದಷ್ಟು ಬೇಗ ನಿಮ್ಮ ಆಫೀಸಿನವರ ಆಸೆ ಪೂರೈಸಲಿ.

ಜಲನಯನ ಹೇಳಿದರು...

ದಿವ್ಯಾ...ಏನಿದು ನಿನ್ನ ಫಜೀತಿ....ಅಲ್ಲಾ ..ಈ ಮಧ್ಯೆ ಎಲ್ಲೂ ಕಾಣ್ತಿಲ್ಲ ಅಂದ್ಕೋಳ್ತಿದ್ದಹಾಗೆ..ಈ ಸಂಕಟದಲ್ಲಿದ್ದು ಎಲ್ಲಾದ್ರೂ ಹೇಗೆ ಸಿಗುತೀ ಹೇಳು...?
ಅಂತೂ ನನ್ನ ಶುಭಹಾರೈಕೆ ಏನು ಅಂತ ಕೇಳ್ತೀಯಾ...?? ನಿನ್ನ ಫ್ರೆಂಡ್ಸ್ ಆಸೆ ಪೂರೈಸೋ ಹಾಗೂ ಆಗ್ಬೇಕು...ನಿನ್ನ ಬಾಳ ಸಂಗಾತಿ ಸಿಗೋ ಹಾಗೂ ಆಗ್ಬೇಕು...ಒಂಥರಾ ಡಬ್ಬಲ್ ಪ್ರಮೋಷನ್....ಏನಂತೀಯಾ? .....ಒಳ್ಳೆ ಸರ್ಪ್ರೈಸ್ ಆಗುತ್ತೆ ನಿನ್ನ ಬಾಸ್ ಗೂ..!!

Raghu ಹೇಳಿದರು...

ದಿವ್ಯ ಅವರೇ,
ಹ್ಹ ಹ್ಹ ಹ್ಹ ಒಳ್ಳೆ ಸ್ಟೋರಿ ನಿಮ್ಮದು.. :) ಪಾಪ ಆಚೆ ಹೇಳೋಹಾನ್ಗಿಲ್ಲ ಒಳಗೆ ಇಟ್ಕೊಲ್ಲಿಕ್ಕೆ ಆಗ್ತಿಲ್ಲ... ಸುಮ್ಮನೆ ಹೇಳ್ದೆ... :) ಹಾಗಾದ್ರೆ ಸಕತ್ ಟೀಂ ರೀ ನಿಮ್ಮದು... ಯಾರನ್ನು ಬಿಡೋದಿಲ್ಲ ಅನ್ನಿ.. ಒಂದೇ ಹೇಳಿ ಇಲ್ಲ ಪಾರ್ಟಿ ಕೊಡಿ..!
ನಿಮ್ಮವ,
ರಾಘು.

ಕನಸು ಹೇಳಿದರು...

ದಿವ್ಯಾ ಮೇಡಂ
ನಿಮ್ಮ ಬರಹಗಳು
ಅಂದ ಚಂದದ ತುಂಟ
ಹುಡುಗಿಯರ ಹಾಗೆ
ಮುದ್ದು ಮುದ್ದಾಗಿವೆ
ಇಂತ ಬರಹಗಳು
ನಂಗೆ ತುಂಭಾ ಇಷ್ಟವಾಗುತ್ತವೆ

kenecoffee ಹೇಳಿದರು...

Hm.. aadru nangyaako doubtu ;-)

ಸುಧೀಂದ್ರ ಹೇಳಿದರು...

ನಿಮ್ಮ ಹೆಸರು ಬದಲಾದ ಮೇಲೆ ನಮಗೂ ಹೇಳಿ ;-)

ಶರಶ್ಚಂದ್ರ ಕಲ್ಮನೆ ಹೇಳಿದರು...

ಹ್ಹೆ ಹ್ಹೆ... ನಿಮ್ಮ ಪಚೀತಿ ನೋಡಿ ನಗು ಬಂತು... ಆದಷ್ಟು ಬೇಗ ನಿಮಗೂ ಇನ್ನೊಂದು ಹೆಸರು ಬರಲಿ :)

Uma Bhat ಹೇಳಿದರು...

ತುಂಬಾ ತುಂಬಾ ಸುಂದರವಾದ ಬರವಣಿಗೆ.

ಗಿರಿ ಹೇಳಿದರು...

nice!
ha hhha :)

Sri ಹೇಳಿದರು...

hehe... chennagide... :P

Sri ಹೇಳಿದರು...

visited your blog by chance... idu chennagittu... :)

hanu krishna ಹೇಳಿದರು...

krishna mandya

nimma hage nanagu kel ta eddru nanu namma athe magala hesharu helide adre ade nija agibitu gotha divya avare

hanu krishna ಹೇಳಿದರು...

krishna mandya

nimma hage nanagu kel ta eddru nanu namma athe magala hesharu helide adre ade nija agibitu gotha divya avare